Amrit Kalash Deposit Scheme: ಎಸ್​ಬಿಐ ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್; ಇನ್ನೊಂದು ವಾರ ಮಾತ್ರ ಅವಕಾಶ

SBI's 400 Days Special Deposit Scheme: ಎಸ್​ಬಿಐ ಗ್ರಾಹಕರಿಗೆಂದು ರೂಪಿಸಲಾದ 400 ದಿನಗಳ ಅಮೃತ್ ಕಲಶ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ನಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿ ಕೊಡಲಾಗುತ್ತದೆ.

Amrit Kalash Deposit Scheme: ಎಸ್​ಬಿಐ ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್; ಇನ್ನೊಂದು ವಾರ ಮಾತ್ರ ಅವಕಾಶ
ಎಸ್​ಬಿಐ ಅಮೃತ್ ಕಲಶ್ ಎಫ್​ಡಿ ಸ್ಕೀಮ್
Follow us
|

Updated on: Jun 22, 2023 | 10:43 AM

ಜನರ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ನೆಚ್ಚಿನದ್ದು ನಿಶ್ಚಿತ ಠೇವಣಿಗಳೇ. ಶೇ. 9ರವರೆಗೂ ಬಡ್ಡಿ ಕೊಡುವ ನಿಶ್ಚಿತ ಠೇವಣಿಗಳಿವೆ. ಎಸ್​ಬಿಐ ಗ್ರಾಹಕರ ನೆಚ್ಚಿನ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಅದರ ಅಮೃತ್ ಕಳಶ್ (SBI Amrit Kalash Deposit) ಸ್ಕೀಮ್ ಒಂದು. ಇದೂ ಕೂಡ ಒಂದು ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಆಗಿದ್ದು, ಶೇ. 7.6ರವರೆಗೂ ಬಡ್ಡಿ ಆಫರ್ ಕೊಡುತ್ತದೆ. ಅಮೃತ್ ಕಲಶ್ ಸ್ಕೀಮ್ ಮಾರ್ಚ್ 31ರವರೆಗೂ ಮಾತ್ರ ಇತ್ತು. ಆಗ ಬೇಡಿಕೆ ಬಂದ ಹಿನ್ನೆಲೆಯಲ್ಲಿ 3 ತಿಂಗಳು ಅವಧಿ ವಿಸ್ತರಿಸಲಾಗಿತ್ತು. ಜೂನ್ 30ರವೆಗೂ ಕಾಲಾವಕಾಶ ಇದೆ. ಅಂದರೆ, ಇನ್ನು ಏಳೆಂಟು ದಿನಗಳವರೆಗೂ ಎಸ್​ಬಿಐ ಗ್ರಾಹಕರು ಅಮೃತ್ ಕಳಶ್ ಎಫ್​ಡಿ ಸ್ಕೀಮ್​ನಲ್ಲಿ ಹೂಡಿಕೆ ಮಾಡಬಹುದು.

ಏನಿದು ಅಮೃತ್ ಕಲಶ್ ಡೆಪಾಸಿಟ್ ಸ್ಕೀಮ್?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಸ್ಕೀಮ್ ಒಂದು ನಿಶ್ಚಿತ ಠೇವಣಿ ಸ್ಕೀಮ್. ಹಲವು ಅವಧಿಯ ಫಿಕ್ಸೆಡ್ ಡೆಪಾಸಿಟ್​ಗಳಲ್ಲಿ ಅಮೃತ್ ಕಲಶ್ ಕೂಡ ಒಂದು. ಇದು 400 ದಿನಗಳ ಅವಧಿಯ ಡೆಪಾಸಿಟ್ ಸ್ಕೀಮ್. ಎಸ್​ಬಿಐನಲ್ಲಿ ಈ ಅವಧಿಯ ಫಿಕ್ಸೆಡ್​ಗೆ ಅತಿಹೆಚ್ಚು ಬಡ್ಡಿ ಇದೆ. ಎಸ್​ಬಿಐನ ವೆಬ್​ಸೈಟ್​ನಲ್ಲಿ ಇರುವ ಮಾಹಿತಿ ಪ್ರಕಾರ 400 ದಿನಗಳ ನಿಶ್ಚಿತ ಠೇವಣಿ ಸ್ಕೀಮ್​ನಲ್ಲಿ ಶೇ. 7.1ರಷ್ಟು ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿ ಇದೆ. 400 ದಿನ ಎಂದರೆ ಹೆಚ್ಚೂಕಡಿಮೆ 13 ತಿಂಗಳು ಅಥವಾ 1 ವರ್ಷ ಒಂದು ತಿಂಗಳ ಅವಧಿಯದ್ದಾಗಿದೆ.

ಇದನ್ನೂ ಓದಿEPF Claim: ಉದ್ಯೋಗಿ ಸತ್ತಾಗ ಅವರ ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡುವುದು ಹೇಗೆ?

ಎಸ್​ಬಿಐ ಅಮೃತ್ ಕಲಶ್ ಠೇವಣಿಯ ಬಡ್ಡಿಗೆ ತೆರಿಗೆ ಎಷ್ಟು?

ಎಲ್ಲಾ ಎಫ್​ಡಿ ಸ್ಕೀಮ್​ನಲ್ಲಿರುವಂತೆ ಎಸ್​ಬಿಐ ಅಮೃತ್ ಕಲಶ್ ಸ್ಕೀಮ್​ನಲ್ಲಿರುವ ಹೂಡಿಕೆಗಳಿಗೂ ತೆರಿಗೆ ಅನ್ವಯ ಆಗುತ್ತದೆ. ಅಂದರೆ ಇದರಿಂದ ಸಿಗುವ ಬಡ್ಡಿ ಹಣದ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ತೆರಿಗೆ ಎಷ್ಟು ಎಂಬುದು ಠೇವಣಿದಾರರ ಆದಾಯ ಗುಂಪಿನ ಮೇಲೆ ಅವಲಂಬಿತವಾಗಿರುತ್ತದೆ. ವಾರ್ಷಿಕ ಆದಾಯ 15 ಲಕ್ಷ ರೂ ಮೇಲ್ಪಟ್ಟು ಇದ್ದರೆ ಅಂಥವರ ನಿಶ್ಚಿತ ಠೇವಣಿಯ ಬಡ್ಡಿಯಿಂದ ಬರುವ ಆದಾಯಕ್ಕೆ ಶೇ. 30ರಷ್ಟು ಟಿಡಿಎಸ್ ಕಡಿತವಾಗುತ್ತದೆ.

ಉದಾಹರಣೆಗೆ, 10 ಲಕ್ಷ ರೂ ಎಫ್​ಡಿ ಇಟ್ಟರೆ ಅದರಿಂದ ಒಂದು ವರ್ಷದಲ್ಲಿ 7,291 ರೂನಷ್ಟು ಬಡ್ಡಿ ಸಿಗುತ್ತದೆ. ಈ ಬಡ್ಡಿ ಹಣಕ್ಕೆ ಶೇ. 30ರಷ್ಟು, ಅಂದರೆ 2,187 ರೂನಷ್ಟು ಟಿಡಿಎಸ್ ಕಡಿತ ಆಗುತ್ತದೆ. ಆದರೆ, ನೀವು ಐಟಿ ರಿಟರ್ನ್ ಫೈಲ್ ಮಾಡುವಾಗ ಈ ಟಿಡಿಎಸ್ ಹಣವನ್ನು ಮರಳಿ ಕ್ಲೈಮ್ ಮಾಡಲು ಸಾಧ್ಯ ಇದೆ.

ಇದನ್ನೂ ಓದಿCredit Card: ಕ್ರೆಡಿಟ್ ಕಾರ್ಡ್​ನಲ್ಲಿ ನಾವು ನೀವು ಹೆಚ್ಚು ಗಮನಿಸದ ಶುಲ್ಕಗಳು ಹಲವಿವೆ; ಮುಂದಿನ ಬಾರಿ ಬಿಲ್ ನೋಡುವಾಗ ಜೋಪಾನ

ಅಮೃತ್ ಕಲಶ್ ಎಫ್​ಡಿ ಸ್ಕೀಮ್​ನ ಇತರ ಅಂಶಗಳು

ಎಸ್​ಬಿಐ ಅಮೃತ್ ಕಲಶ್ ಸಾಮಾನ್ಯ ಎಫ್​ಡಿ ಸ್ಕೀಮ್​ನಲ್ಲಿ ಬಡ್ಡಿಯನ್ನು ಮಾಸಿಕವಾಗಿ, ಅಥವಾ ತ್ರೈಮಾಸಿಕವಾಗಿ ಅಥವಾ ಅರ್ಧವರ್ಷದ ಆಧಾರದಲ್ಲಿ ಗಣಿಸಲಾಗುತ್ತದೆ. ಸ್ಪೆಷಲ್ ಡೆಪಾಸಿಟ್ ಆದರೆ 400 ದಿನಗಳಲ್ಲಿ ಮೆಚ್ಯೂರ್ ಆಗುವಾಗ ಬಡ್ಡಿ ಜಮೆ ಆಗುತ್ತದೆ. ಟಿಡಿಎಸ್ ಕಡಿತದ ಬಳಿಕ ಉಳಿದ ಬಡ್ಡಿ ಹಣವು ಖಾತೆಗೆ ವರ್ಗವಾಗುತ್ತದೆ.

ಈ ಅಮೃತ್ ಕಲಶ್ ಎಫ್​ಡಿ ಸ್ಕೀಮ್ ಅನ್ನು ಯಾವುದೇ ಎಸ್​ಬಿಐ ಬ್ಯಾಂಕ್ ಕಚೇರಿಗೆ ಹೋಗಿ ಪಡೆಯಬಹುದು. ಅಥವಾ ನಿಮ್ಮಲ್ಲಿ ಎಸ್​ಬಿಐ ಆ್ಯಪ್ ಇದ್ದರೆ ಅದರಲ್ಲೂ ಎಫ್​ಡಿ ತೆರೆಯಬಹುದು. ಹಾಗೆಯೇ, ಈ ಸ್ಕೀಮ್​ನಲ್ಲಿ ನೀವು ಇಡುವ ಎಫ್​ಡಿ ಮೇಲೆ ಸಾಲ ಕೂಡ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ