
ಬೆಂಗಳೂರು, ಆಗಸ್ಟ್ 18: ಫಾಕ್ಸ್ಕಾನ್ ಸಂಸ್ಥೆಯ (Foxconn India) ಬೆಂಗಳೂರಿನ ಘಟಕದಲ್ಲಿ ಐಫೋನ್ 17 ಸ್ಮಾರ್ಟ್ಫೋನ್ ತಯಾರಿಕೆ ಆರಂಭಗೊಂಡಿದೆ ಎನ್ನುವಂತಹ ಸುದ್ದಿ ಕೇಳಿಬಂದಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯು ತನ್ನ ಮೂಲಗಳಿಂದ ಪಡೆದಿದೆ ಎನ್ನಲಾದ ಮಾಹಿತಿ ಪ್ರಕಾರ, ಇತ್ತೀಚೆಗೆ ಕಂಪನಿಯ ಬೆಂಗಳೂರು ಘಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಐಫೋನ್-17 ಉತ್ಪಾದನೆ (iphone manufacturing) ಶುರುವಾಗಿದೆ. ಆದರೆ, ಈ ಬಗ್ಗೆ ಫಾಕ್ಸ್ಕಾನ್ನಿಂದಾಗಲೀ, ಆ್ಯಪಲ್ ಸಂಸ್ಥೆಯಿಂದಾಗಲೀ ಅಧಿಕೃತವಾಗಿ ಹೇಳಿಕೆ ಬಂದಿಲ್ಲ.
ಚೆನ್ನೈನಲ್ಲಿರುವ ಫಾಕ್ಸ್ಕಾನ್ನ ಇನ್ನೊಂದು ಘಟಕದಲ್ಲಿ ಐಫೋನ್ 17 ತಯಾರಿಕೆ ನಡೆಯುತ್ತಿದೆ. ಈಗ ಬೆಂಗಳೂರಿನಲ್ಲೂ ಇದು ನಡೆಯುತ್ತಿರುವುದು ಗಮನಾರ್ಹ. ಆ್ಯಪಲ್ ಕಂಪನಿಯು ತನ್ನ ಐಫೋನ್ ಮತ್ತಿತರ ಉತ್ಪನ್ನಗಳನ್ನು ತಯಾರಿಸಲು ಬೇರೆ ಬೇರೆ ಕಂಪನಿಗಳಿಗೆ ಗುತ್ತಿಗೆ ಕೊಡುತ್ತದೆ. ಫಾಕ್ಸ್ಕಾನ್ ಅತಿಹೆಚ್ಚು ಐಫೋನ್ ತಯಾರಿಸುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಕ್ವಿಕ್ ಡೆಲಿವರಿ 10 ನಿಮಿಷ, ಅಮೆರಿಕದಲ್ಲಿ 24 ಗಂಟೆ; ಡೆಲಿವರಿ ಚಾರ್ಜ್ 1,000 ರೂ?
ಬೆಂಗಳೂರಿನಲ್ಲಿ ಇತ್ತೀಚೆಗೆ ಅದರ ಹೊಸ ಘಟಕ ಸ್ಥಾಪನೆ ಆರಂಭವಾಗಿದೆ. ದೇವನಹಳ್ಳಿ ಬಳಿ ಇರುವ ಈ ಘಟಕವು ಚೀನಾದ ಹೊರಗೆ ಅದರ ಎರಡನೇ ಅತಿದೊಡ್ಡ ಘಟಕ ಎನಿಸಿದೆ.
ಫಾಕ್ಸ್ಕಾನ್ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಚೀನೀ ತಂತ್ರಜ್ಞರು ಇತ್ತೀಚೆಗೆ ತಮ್ಮ ದೇಶಕ್ಕೆ ಮರಳಿದ್ದರು. ಇದರಿಂದ ಐಫೋನ್17 ಉತ್ಪಾದನೆ ಕುಂಠಿತಗೊಳ್ಳುವ ಅಪಾಯ ಇತ್ತು. ಆದರೆ, ಫಾಕ್ಸ್ಕಾನ್ ಪರ್ಯಾಯ ವ್ಯವಸ್ಥೆ ಮಾಡಲು ಯಶಸ್ವಿಯಾಗಿದೆ. ಚೀನೀ ತಂತ್ರಜ್ಞರ ಬದಲಾಗಿ ತೈವಾನ್ ಮತ್ತಿತರ ಮೂಲಗಳಿಂದ ತಂತ್ರಜ್ಞರನ್ನು ಕೆಲಸಕ್ಕೆ ಸೇರಿಸಿಕೊಂಡಿದೆ. ಇದರಿಂದ ಐಫೋನ್ ತಯಾರಿಕೆಯಲ್ಲಿ ಇದ್ದ ತೊಂದರೆಯೊಂದು ನಿವಾರಣೆ ಆದಂತಾಗಿದೆ.
ಇದನ್ನೂ ಓದಿ: ಜಿಎಸ್ಟಿಯಿಂದ ಹಿಡಿದು ರುಪಾಯಿವರೆಗೆ ಷೇರು ಮಾರುಕಟ್ಟೆಗೆ ಉತ್ಸಾಹ ಹೆಚ್ಚಿಸಿದ ಅಂಶಗಳು
ಆ್ಯಪಲ್ ಕಂಪನಿ ಅಮೆರಿಕದ ಟ್ಯಾರಿಫ್ ಕ್ರಮಗಳಿಗೆ ಹೆದರಿದಂತಿಲ್ಲ. ಭಾರತದಲ್ಲಿ ಐಫೋನ್ ತಯಾರಿಸುವ ತನ್ನ ಯೋಜನೆಯನ್ನು ಮುಂದುವರಿಸುತ್ತಿದೆ. ಅಷ್ಟೇ ಅಲ್ಲ, ತಯಾರಿಕೆಯ ಪ್ರಮಾಣವನ್ನು ಮತ್ತಷ್ಟು ಏರಿಸುತ್ತಿದೆ. 2024-25ರಲ್ಲಿ 35-40 ಮಿಲಿಯನ್ ಯುನಿಟ್ ಐಫೋನ್ಗಳನ್ನು ಅದು ತಯಾರಿಸಿತ್ತು. ಇದನ್ನು 60 ಮಿಲಿಯನ್ ಯುನಿಟ್ಗಳಿಗೆ ಏರಿಸಲು ಆ್ಯಪಲ್ ನಿರ್ಧರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ