AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI: ಆಗಸ್ಟ್​ನಲ್ಲಿ ನಿತ್ಯದ ಸರಾಸರಿ ಯುಪಿಐ ಟ್ರಾನ್ಸಾಕ್ಷನ್ ಮೌಲ್ಯ 90,000 ಕೋಟಿ ರೂ

UPI transactions in 2025 August: ಯುಪಿಐ ಟ್ರಾನ್ಸಾಕ್ಷನ್​ಗಳ ಸರಾಸರಿ ದೈನಂದಿನ ಮೌಲ್ಯ ಆಗಸ್ಟ್ ತಿಂಗಳಲ್ಲಿ 90,000 ಕೋಟಿ ರೂ ದಾಖಲಾಗಿದೆ. ಜನವರಿಯಲ್ಲಿ ಇದು 75,743 ಕೋಟಿ ರೂ, ಜುಲೈನಲ್ಲಿ 80,919 ಕೋಟಿ ರೂ ಇತ್ತು. ಆಗಸ್ಟ್​ನಲ್ಲಿ ದಿನವೂ ಸರಾಸರಿ 90,446 ಕೋಟಿ ರೂ ಮೌಲ್ಯದ ಯುಪಿಐ ವಹಿವಾಟುಗಳು ಆಗಿವೆ.

UPI: ಆಗಸ್ಟ್​ನಲ್ಲಿ ನಿತ್ಯದ ಸರಾಸರಿ ಯುಪಿಐ ಟ್ರಾನ್ಸಾಕ್ಷನ್ ಮೌಲ್ಯ 90,000 ಕೋಟಿ ರೂ
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2025 | 4:49 PM

Share

ನವದೆಹಲಿ, ಆಗಸ್ಟ್ 18: ಯುಪಿಐ ಪಾವತಿ (UPI) ದಿನೇ ದಿನೇ ಹೆಚ್ಚುತ್ತಿದೆ. ರಿಯಲ್ ಟೈಮ್ ಪೇಮೆಂಟ್ ಸಿಸ್ಟಂಗಳ ಪೈಕಿ ಯುಪಿಐ ವಿಶ್ವದ ನಂಬರ್ ಒನ್ ಎನಿಸಿದೆ. ಈ ಆಗಸ್ಟ್ ತಿಂಗಳಲ್ಲಿ ಒಂದು ದಿನದಲ್ಲಿ ಸರಾಸರಿಯಾಗಿ 90,446 ಕೋಟಿ ರೂ ಮೌಲ್ಯದಷ್ಟು ಯುಪಿಐ ವಹಿವಾಟುಗಳು ನಡೆದಿವೆ. ಸರಾಸರಿ ನಿತ್ಯದ ಯುಪಿಐ ವಹಿವಾಟು ಜನವರಿ ತಿಂಗಳಲ್ಲಿ 75,743 ಕೋಟಿ ರೂ ಇತ್ತು. ಜುಲೈನಲ್ಲಿ ಅದು 80,919 ಕೋಟಿ ರೂಗೆ ಏರಿದೆ. ಈಗ ಆಗಸ್ಟ್​ನಲ್ಲಿ 90,000 ಕೋಟಿ ರೂ ಗಡಿ ದಾಟಿರುವುದು ಗಮನಾರ್ಹ.

ಒಂದು ದಿನದ ಸರಾಸರಿ ಯುಪಿಐ ಟ್ರಾನ್ಸಾಕ್ಷನ್ ಸಂಖ್ಯೆ 12.7 ಕೋಟಿ ಇತ್ತು. ಆಗಸ್ಟ್​ನಲ್ಲಿ ಇದು 67.5 ಕೋಟಿಗೆ ಏರಿದೆ. ಯುಪಿಐ ಟ್ರಾನ್ಸಾಕ್ಷನ್ ಮೌಲ್ಯ ಮತ್ತು ಸಂಖ್ಯೆ ಎರಡೂ ಹೆಚ್ಚಿರುವುದು ಯುಪಿಐ ಬಳಕೆ ಮತ್ತು ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದರ ಕುರುಹಾಗಿದೆ.

ಇದನ್ನೂ ಓದಿ: ಒಂದು ವರ್ಷ, 3,000 ರೂ, 200 ಟ್ರಿಪ್; ಬಂದಿದೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್; ಪಡೆಯುವ ಕ್ರಮ ತಿಳಿದಿರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್​ಗಳಿಂದ 520 ಕೋಟಿ ಯುಪಿಐ ಟ್ರಾನ್ಸಾಕ್ಷನ್​ಗಳು ಆಗಿವೆ. ಅಂದರೆ, ಈ ಅಕೌಂಟ್​ಗಳಿಂದ ಹಣವನ್ನು ಯುಪಿಐ ಮೂಲಕ ಕಳುಹಿಸಲಾಗಿದೆ. ಯುಪಿಐ ಮೂಲಕ ಅತಿಹೆಚ್ಚು ಬಾರಿ ಹಣ ಸ್ವೀಕರಿಸಿರುವುದು ಯೆಸ್ ಬ್ಯಾಂಕ್ ಅಕೌಂಟ್​ಗಳು. 800 ಕೋಟಿ ಟ್ರಾನ್ಸಾಕ್ಷನ್​ಗಳಲ್ಲಿ ಯೆಸ್ ಬ್ಯಾಂಕ್ ಅಕೌಂಟ್​ಗಳಿಗೆ ಹಣ ಬಂದಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಸರ್ಕಾರಿ ಬ್ಯಾಂಕುಗಳು ಹೆಚ್ಚು ರಿಮಿಟರ್​ಗಳೆನಿಸಿದರೆ (ಪಾವತಿದಾರರು), ಖಾಸಗಿ ಬ್ಯಾಂಕುಗಳು ಪೇಮೆಂಟ್ ಸ್ವೀಕೃತರೆನಿಸಿವೆ.

ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಳದ ಬಳಿಕ ಎಸ್​ಬಿಐ ಸೇರಿದಂತೆ 10 ಬ್ಯಾಂಕುಗಳ ರೇಟಿಂಗ್ ಅಪ್​ಗ್ರೇಡ್ ಮಾಡಿದ ಎಸ್ ಅಂಡ್ ಪಿ

ಯುಪಿಐ ಬಳಕೆಯಲ್ಲಿ ಕರ್ನಾಟಕ ನಂ. 2

ಅತಿಹೆಚ್ಚು ಯುಪಿಐ ಬಳಸುವ ಟಾಪ್-3 ರಾಜ್ಯಗಳಲ್ಲಿ ಕರ್ನಾಟಕ ಇದೆ. ಒಟ್ಟಾರೆ ಯುಪಿಐ ಬಳಕೆಯಲ್ಲಿ ಶೇ. 9.8ರಷ್ಟು ಪಾಲು ಮಹಾರಾಷ್ಟ್ರದ್ದು. ಇದು ಜುಲೈನಲ್ಲಿನ ಅಂಕಿ ಅಂಶ. ಕರ್ನಾಟಕದ ಪಾಲು ಶೇ. 5.5, ಉತ್ತರಪ್ರದೇಶದ ಪಾಲು ಶೇ. 5.3 ಇದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ