AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಫಾಕ್ಸ್​ಕಾನ್ ಘಟಕದಲ್ಲಿ ಐಫೋನ್17 ಸ್ಮಾರ್ಟ್​ಫೋನ್​ಗಳ ತಯಾರಿಕೆ ಆರಂಭ: ವರದಿ

iPhone 17 manufacturing at Foxconn's Bengaluru unit: ಆ್ಯಪಲ್ ಕಂಪನಿಯ ಅತಿದೊಡ್ಡ ಗುತ್ತಿಗೆದಾರ ತಯಾರಿಕಾ ಸಂಸ್ಥೆಯಾದ ಫಾಕ್ಸ್​ಕಾನ್ ತನ್ನ ಬೆಂಗಳೂರಿನ ಘಟಕದಲ್ಲಿ ಐಫೋನ್17 ತಯಾರಿಸುತ್ತಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಈ ವರದಿ ಬಂದಿದೆ. ಚೆನ್ನೈನ ಅದರ ಘಟಕದಲ್ಲಿ ಈಗಾಗಲೇ ಐಫೋನ್17 ತಯಾರಿಕೆ ನಡೆಯುತ್ತಿದೆ. ಟ್ರಂಪ್ ಟ್ಯಾರಿಫ್ ಮತ್ತು ಒತ್ತಡಗಳ ಮಧ್ಯೆ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ಹೂಡಿಕೆ ಮುಂದುವರಿಸುತ್ತಿದೆ.

ಬೆಂಗಳೂರಿನ ಫಾಕ್ಸ್​ಕಾನ್ ಘಟಕದಲ್ಲಿ ಐಫೋನ್17 ಸ್ಮಾರ್ಟ್​ಫೋನ್​ಗಳ ತಯಾರಿಕೆ ಆರಂಭ: ವರದಿ
ಐಫೋನ್ ತಯಾರಿಕೆಯ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2025 | 12:53 PM

Share

ಬೆಂಗಳೂರು, ಆಗಸ್ಟ್ 18: ಫಾಕ್ಸ್​ಕಾನ್ ಸಂಸ್ಥೆಯ (Foxconn India) ಬೆಂಗಳೂರಿನ ಘಟಕದಲ್ಲಿ ಐಫೋನ್ 17 ಸ್ಮಾರ್ಟ್​ಫೋನ್ ತಯಾರಿಕೆ ಆರಂಭಗೊಂಡಿದೆ ಎನ್ನುವಂತಹ ಸುದ್ದಿ ಕೇಳಿಬಂದಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯು ತನ್ನ ಮೂಲಗಳಿಂದ ಪಡೆದಿದೆ ಎನ್ನಲಾದ ಮಾಹಿತಿ ಪ್ರಕಾರ, ಇತ್ತೀಚೆಗೆ ಕಂಪನಿಯ ಬೆಂಗಳೂರು ಘಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಐಫೋನ್-17 ಉತ್ಪಾದನೆ (iphone manufacturing) ಶುರುವಾಗಿದೆ. ಆದರೆ, ಈ ಬಗ್ಗೆ ಫಾಕ್ಸ್​ಕಾನ್​ನಿಂದಾಗಲೀ, ಆ್ಯಪಲ್ ಸಂಸ್ಥೆಯಿಂದಾಗಲೀ ಅಧಿಕೃತವಾಗಿ ಹೇಳಿಕೆ ಬಂದಿಲ್ಲ.

ಚೆನ್ನೈನಲ್ಲಿರುವ ಫಾಕ್ಸ್​ಕಾನ್​ನ ಇನ್ನೊಂದು ಘಟಕದಲ್ಲಿ ಐಫೋನ್ 17 ತಯಾರಿಕೆ ನಡೆಯುತ್ತಿದೆ. ಈಗ ಬೆಂಗಳೂರಿನಲ್ಲೂ ಇದು ನಡೆಯುತ್ತಿರುವುದು ಗಮನಾರ್ಹ. ಆ್ಯಪಲ್ ಕಂಪನಿಯು ತನ್ನ ಐಫೋನ್ ಮತ್ತಿತರ ಉತ್ಪನ್ನಗಳನ್ನು ತಯಾರಿಸಲು ಬೇರೆ ಬೇರೆ ಕಂಪನಿಗಳಿಗೆ ಗುತ್ತಿಗೆ ಕೊಡುತ್ತದೆ. ಫಾಕ್ಸ್​ಕಾನ್ ಅತಿಹೆಚ್ಚು ಐಫೋನ್ ತಯಾರಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಕ್ವಿಕ್ ಡೆಲಿವರಿ 10 ನಿಮಿಷ, ಅಮೆರಿಕದಲ್ಲಿ 24 ಗಂಟೆ; ಡೆಲಿವರಿ ಚಾರ್ಜ್ 1,000 ರೂ?

ಬೆಂಗಳೂರಿನಲ್ಲಿ ಇತ್ತೀಚೆಗೆ ಅದರ ಹೊಸ ಘಟಕ ಸ್ಥಾಪನೆ ಆರಂಭವಾಗಿದೆ. ದೇವನಹಳ್ಳಿ ಬಳಿ ಇರುವ ಈ ಘಟಕವು ಚೀನಾದ ಹೊರಗೆ ಅದರ ಎರಡನೇ ಅತಿದೊಡ್ಡ ಘಟಕ ಎನಿಸಿದೆ.

ಚೀನೀ ತಂತ್ರಜ್ಞರ ಬದಲು ಇತರ ತಜ್ಞರು..

ಫಾಕ್ಸ್​ಕಾನ್ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಚೀನೀ ತಂತ್ರಜ್ಞರು ಇತ್ತೀಚೆಗೆ ತಮ್ಮ ದೇಶಕ್ಕೆ ಮರಳಿದ್ದರು. ಇದರಿಂದ ಐಫೋನ್17 ಉತ್ಪಾದನೆ ಕುಂಠಿತಗೊಳ್ಳುವ ಅಪಾಯ ಇತ್ತು. ಆದರೆ, ಫಾಕ್ಸ್​ಕಾನ್ ಪರ್ಯಾಯ ವ್ಯವಸ್ಥೆ ಮಾಡಲು ಯಶಸ್ವಿಯಾಗಿದೆ. ಚೀನೀ ತಂತ್ರಜ್ಞರ ಬದಲಾಗಿ ತೈವಾನ್ ಮತ್ತಿತರ ಮೂಲಗಳಿಂದ ತಂತ್ರಜ್ಞರನ್ನು ಕೆಲಸಕ್ಕೆ ಸೇರಿಸಿಕೊಂಡಿದೆ. ಇದರಿಂದ ಐಫೋನ್ ತಯಾರಿಕೆಯಲ್ಲಿ ಇದ್ದ ತೊಂದರೆಯೊಂದು ನಿವಾರಣೆ ಆದಂತಾಗಿದೆ.

ಇದನ್ನೂ ಓದಿ: ಜಿಎಸ್​ಟಿಯಿಂದ ಹಿಡಿದು ರುಪಾಯಿವರೆಗೆ ಷೇರು ಮಾರುಕಟ್ಟೆಗೆ ಉತ್ಸಾಹ ಹೆಚ್ಚಿಸಿದ ಅಂಶಗಳು

ಟ್ರಂಪ್ ಟ್ಯಾರಿಫ್ ನಡುವೆ ಭಾರತದಲ್ಲಿ ತಯಾರಿಕೆ ಹೆಚ್ಚಿಸಲಿರುವ ಆ್ಯಪಲ್

ಆ್ಯಪಲ್ ಕಂಪನಿ ಅಮೆರಿಕದ ಟ್ಯಾರಿಫ್ ಕ್ರಮಗಳಿಗೆ ಹೆದರಿದಂತಿಲ್ಲ. ಭಾರತದಲ್ಲಿ ಐಫೋನ್ ತಯಾರಿಸುವ ತನ್ನ ಯೋಜನೆಯನ್ನು ಮುಂದುವರಿಸುತ್ತಿದೆ. ಅಷ್ಟೇ ಅಲ್ಲ, ತಯಾರಿಕೆಯ ಪ್ರಮಾಣವನ್ನು ಮತ್ತಷ್ಟು ಏರಿಸುತ್ತಿದೆ. 2024-25ರಲ್ಲಿ 35-40 ಮಿಲಿಯನ್ ಯುನಿಟ್ ಐಫೋನ್​ಗಳನ್ನು ಅದು ತಯಾರಿಸಿತ್ತು. ಇದನ್ನು 60 ಮಿಲಿಯನ್ ಯುನಿಟ್​ಗಳಿಗೆ ಏರಿಸಲು ಆ್ಯಪಲ್ ನಿರ್ಧರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ