AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ನಲ್ಲಿ ಯಶ್ ಪಾತ್ರದ ಹೆಸರು ಟಿಕೆಟ್; ಮಾಸ್ಟರ್ ಪ್ಲ್ಯಾನ್ ಮಾಡಿದ ರಾಕಿಂಗ್ ಸ್ಟಾರ್

'ಟಾಕ್ಸಿಕ್' ಟೀಸರ್ ಯಶ್ ದ್ವಿಪಾತ್ರದಿಂದ ಗಮನ ಸೆಳೆದಿದೆ. ನಯನತಾರ, ಕಿಯಾರಾ ಅಡ್ವಾಣಿ ಸೇರಿ ನಾಯಕಿಯರು ಟೀಸರ್‌ನಲ್ಲಿ ಕಾಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಯಶ್ ಅವರೇ ಕುತೂಹಲ ಹೆಚ್ಚಿಸಲು ರೂಪಿಸಿದ ಮಾಸ್ಟರ್ ಪ್ಲಾನ್ ಎನ್ನಲಾಗಿದೆ. ಬೋಲ್ಡ್ ದೃಶ್ಯಗಳಿಗಾಗಿ ಮೊದಲಿನಿಂದಲೂ ಟೀಕೆ ಎದುರಿಸುತ್ತಿರುವ ಈ ಸಿನಿಮಾ, ನಾಯಕಿಯರ ಅದೃಶ್ಯತೆಯ ಮೂಲಕ ಇನ್ನಷ್ಟು ಚರ್ಚೆ ಹುಟ್ಟುಹಾಕಿದೆ.

‘ಟಾಕ್ಸಿಕ್’ನಲ್ಲಿ ಯಶ್ ಪಾತ್ರದ ಹೆಸರು ಟಿಕೆಟ್; ಮಾಸ್ಟರ್ ಪ್ಲ್ಯಾನ್ ಮಾಡಿದ ರಾಕಿಂಗ್ ಸ್ಟಾರ್
ಯಶ್
ರಾಜೇಶ್ ದುಗ್ಗುಮನೆ
|

Updated on:Feb 26, 2026 | 9:23 AM

Share

‘ಟಾಕ್ಸಿಕ್’ ಟೀಸರ್ (Toxic Teaser) ಸದ್ಯ ಹಲ್​ಚಲ್ ಸೃಷ್ಟಿ ಮಾಡುತ್ತಿದೆ. ಈ ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿದ್ದಾರೆ. ಯಶ್ ಅವರ ದ್ವಿಪಾತ್ರ ಸಾಕಷ್ಟು ಗಮನ ಸೆಳೆದಿದೆ. ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿಕೊಂಡಿದ್ದು ಏಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಯನಾತಾರ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅಂಥವರು ನಟಿಸಿದ್ದಾರೆ. ಆದರೆ, ಇವರನ್ನು ಟೀಸರ್​ ಅಲ್ಲಿ ತೋರಿಸಿಯೇ ಇಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಆದರೆ, ಇದರ ಹಿಂದೆ ಮಾಸ್ಟರ್​ ಪ್ಲ್ಯಾನ್ ಇದೆ ಎಂದು ವರದಿ ಆಗಿದೆ.

ಯಶ್ ಜನ್ಮದಿನಕ್ಕೆ ರಿಲೀಸ್ ಆದ ‘ಟಾಕ್ಸಿಕ್’ ಟೀಸರ್​ ಅಲ್ಲಿ ಬೋಲ್ಡ್ ದೃಶ್ಯಗಳು ಇದ್ದವು. ಈ ಕಾರಣಕ್ಕೆ ಅವರು ಟೀಕೆ ಎದುರಿಸಿದರು. ರಿಲೀಸ್ ಆದ ಎರಡನೇ ಟೀಸರ್​ ಅಲ್ಲಿಯೂ ಬೋಲ್ಡ್ ದೃಶ್ಯಗಳು ಇವೆ. ಈ ವಿಷಯದಲ್ಲಿ ಟೀಕೆ ಎದುರಿಸುತ್ತಿದ್ದಾರೆ. ಎಲ್ಲಕಿಂತ ಮುಖ್ಯವಾಗಿ ಟೀಸರ್​​ನಲ್ಲಿ ಯಶ್​ಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಪಾತ್ರದ ಹೆಸರು ರಾಯ ಆದರೆ, ಮತ್ತೊಂದು ಪಾತ್ರದ ಹೆಸರು ಟಿಕೆಟ್. ಈ ಪಾತ್ರ ರಿಲೀಸ್ ಆಗಿ ಗಮನ ಸೆಳೆದಿದೆ. ಹೀರೋಯಿಗಳನ್ನು ಟೀಸರ್ ಅಲ್ಲಿ ತೋರಿಸದೇ ಇರಲು ಕೆಲವರು ಬೇರೆ ರೀತಿಯಲ್ಲಿ ಹೇಳುತ್ತಿದ್ದಾರೆ. .

ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದಾಗ ಟೀಸರ್ ಹಾಗೂ ಸಿನಿಮಾದಲ್ಲಿ ಬಹುತೇಕ ಎಲ್ಲ ವಿಷಯಗಳನ್ನು ತೋರಿಸಲಾಗುತ್ತದೆ. ಸಿನಿಮಾದಲ್ಲಿ ಯಾವ ಕಲಾವಿದರ ಪಾತ್ರ ಯಾವ ರೀತಿ ಇದೆ? ಸಿನಿಮಾ ಎಳೆ ಏನು ಎಂಬುದನ್ನು ತಿಳಿಸಲಾಗುತ್ತದೆ. ಆದರೆ, ‘ಟಾಕ್ಸಿಕ್’ ಟೀಸರ್​ನಲ್ಲಿ ಪ್ರಮುಖವಾಗಿ ತೋರಿಸಿದ್ದು, ಯಶ್ ದ್ವಿಪಾತ್ರದ ಕಥೆ ಮಾತ್ರ. ಇದಕ್ಕೆ ಯಶ್ ಅವರ ಪ್ಲ್ಯಾನ್ ಕಾರಣವಂತೆ.

ಇದನ್ನೂ ಓದಿ: ಮುಂಬೈ ಬೀದಿಗಳಲ್ಲಿ ಯಶ್ ಮುಖ ಮುಚ್ಚಿಕೊಂಡು ಓಡಾಡಿದ್ದಕ್ಕೆ ‘ಟಾಕ್ಸಿಕ್ ಟೀಸರ್​​ನಲ್ಲಿ ಸಿಕ್ತು ಉತ್ತರ

ಎಲ್ಲಾ ಸಿನಿಮಾಗಳ ರೀತಿಯಲ್ಲಿ ಟೀಸರ್ ಇರಬಾರದು ಎಂದು ಯಶ್ ನಿರ್ಧರಿಸಿದ್ದರು. ನಯನತಾರಾ, ಕಿಯಾರಾ ಅಡ್ವಾಣಿ ಮಾಡಿರೋ ಪಾತ್ರಗಳ ಬಗ್ಗೆ ಕುತೂಹಲ ಇದೆ. ಟ್ರೇಲರ್​ವರೆಗೂ ಈ ಕುತೂಹಲ ಸಾಗಬೇಕು ಎಂಬುದು ಯಶ್ ಪ್ಲ್ಯಾನ್ ಹೀಗಾಗಿ, ಟ್ರೇಲರ್ ರಿಲೀಸ್ ಆಗುವವರೆಗೂ ಕಾಯಬೇಕಾದ ಅನಿವಾರ್ಯತೆ ಅಭಿಮಾನಿಗಳಿಗೆ ಇದೆ. ಈಗಿನ ಯುಗದಲ್ಲಿ ನೆಗೆಟಿವೋ ಅಥವಾ ಪಾಸಿಟಿವೋ ಚರ್ಚೆ ಆದರೆ ಸಾಕು ಎಂದು ಅನೇಕರು ಭಾವಿಸುತ್ತಾರೆ. ಯಶ್ ಕೂಡ ಇದೇ ರೀತಿಯ ಪ್ಲ್ಯಾನ್ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ. ‘ಟಾಕ್ಸಿಕ್’ ಮೊದಲ ಟೀಸರ್​ ಅಲ್ಲಿ ಬೋಲ್ಡ್ ದೃಶ್ಯದ ಕಾರಣಕ್ಕೆ ಚರ್ಚೆ ಆಯಿತು. ಈ ಬಾರಿ ಹೀರೋಯಿನ್​​ಗಳ ಪರಿಚಯಿಸಿಲ್ಲ ಎಂಬ ಕಾರಣಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿನಿಮಾ ಬಗ್ಗೆ ಚರ್ಚೆಯಂತೂ ಇದ್ದೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:29 pm, Sat, 21 February 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ