ಯುಪಿಐ ಆ್ಯಪ್ನಲ್ಲಿ ಪದೇಪದೇ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವಿರಾ? ಮಿತಿಮೀರುವಂತಿಲ್ಲ; ಆ. 1ರಿಂದ ಹೊಸ ನಿಯಮ
UPI rules changes from 2025 August: ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಯುಪಿಐನಲ್ಲಿ ಆಗಸ್ಟ್ 1ರಿಂದ ಒಂದಷ್ಟು ನಿಯಮ ಬದಲಾವಣೆ ತರುತ್ತಿದೆ. ಯುಪಿಐ ಬಳಕೆದಾರರು ಬ್ಯಾಂಕ್ ಬ್ಯಾಲನ್ಸ್ ಅನ್ನು ಮಿತಿಗಿಂತ ಹೆಚ್ಚು ಬಾರಿ ಬಳಸಲು ಆಗುವುದಿಲ್ಲ. ಮೊಬೈಲ್ ನಂಬರ್ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್ಗಳ ವಿವರವನ್ನು ಪರಿಶೀಲಿಸಲು ನಿರ್ಬಂಧ ಇದೆ.

ನವದೆಹಲಿ, ಜುಲೈ 27: ಯುಪಿಐ ಪೇಮೆಂಟ್ ಸಿಸ್ಟಂನಲ್ಲಿ (UPI) ಆಗಸ್ಟ್ 1ರಿಂದ ಒಂದಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಬ್ಯಾಲನ್ಸ್ ಪರಿಶೀಲನೆ, ಆಟೊಪೇಯಂತಹ ಫೀಚರ್ಗಳಿಂದ ಹಿಡಿದು ಎಪಿಐ ಬಳಕೆ ಸಂಬಂಧ ಪರಿಷ್ಕೃತ ಮಾರ್ಗಸೂಚಿಯವರೆಗೆ ಕ್ರಮ ಬದಲಾವಣೆ ಮಾಡಲಾಗುತ್ತಿದೆ. ಯುಪಿಐ ಸೇವೆಗಳನ್ನು ಹೆಚ್ಚು ಸಮರ್ಪಕವಾಗಿಸಲು ಮತ್ತು ಸುಸ್ಥಿರಗೊಳಿಸಲು ಈ ಬದಲಾವಣೆ ಆಗುತ್ತಿದೆ.
ಬ್ಯಾಲನ್ಸ್ ಪರಿಶೀಲನೆಗೆ ಮಿತಿ
ಗೂಗಲ್ ಪೇ, ಪೇಟಿಎಂ, ಫೋನ್ಪೇ ಇತ್ಯಾದಿ ಯುಪಿಐ ಬಳಕೆದಾರರು ಗಮನಿಸಬೇಕಾದ ಬೆಳವಣಿಗೆ ಇದು. ನೀವು ಒಂದು ಯುಪಿಐ ಆ್ಯಪ್ನಲ್ಲಿ ಒಂದು ದಿನದಲ್ಲಿ 50 ಬಾರಿ ಮಾತ್ರ ಯಾವುದೇ ಬ್ಯಾಂಕ್ ಅಕೌಂಟ್ನ ಬ್ಯಾಲನ್ಸ್ ಪರಿಶೀಲಿಸಬಹುದು. ಅದಕ್ಕಿಂತ ಹೆಚ್ಚು ಬಾರಿ ಬ್ಯಾಲನ್ಸ್ ಚೆಕ್ ಮಾಡಲು ಆಗುವುದಿಲ್ಲ.
ಇದನ್ನೂ ಓದಿ: ಆಗಸ್ಟ್ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ
ಮೊಬೈಲ್ ನಂಬರ್ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್ಗಳ ಮಾಹಿತಿ
ನಿಮ್ಮ ಮೊಬೈಲ್ ನಂಬರ್ಗೆ ಲಿಂಕ್ ಆದ ಬ್ಯಾಂಕ್ ಅಕೌಂಟ್ಗಳ ಬಗ್ಗೆ ಒಂದು ದಿನದಲ್ಲಿ 25 ಬಾರಿ ಮಾತ್ರ ಮಾಹಿತಿ ಪಡೆಯಬಹುದು.
ಆಟೊಡೆಬಿಟ್ಗೆ ನಿರ್ಬಂಧ
ಒಟಿಟಿ ಪ್ಲಾಟ್ಫಾರ್ಮ್ಗಳು, ಮ್ಯುಚುವಲ್ ಫಂಡ್ ಎಸ್ಐಪಿ ಇತ್ಯಾದಿಗೆ ನಿಯಮಿತವಾಗಿ ಹಣ ಪಾವತಿಸುತ್ತೇವೆ. ತನ್ನಂತಾನೇ ಇವು ಕಡಿತಗೊಳ್ಳಲು ಅಟೊಡೆಬಿಟ್ ಆಯ್ಕೆ ಇದೆ. ಕಡಿಮೆ ಟ್ರಾಫಿಕ್ ಇರುವ ಬೆಳಗಿನ 10 ಗಂಟೆಯೊಳಗಿನ ಅವಧಿ, ಮಧ್ಯಾಹ್ನ 1 ಗಂಟೆಯಿಂದ 5 ಗಂಟೆಯವರೆಗಿನ ಅವಧಿ, ಹಾಗೂ ರಾತ್ರಿ 9:30ರ ನಂತರದ ಅವಧಿಯಲ್ಲಿ ಆಟೊಡೆಬಿಟ್ ಆಗುವಂತೆ ನಿರ್ಬಂಧಿಸಲಾಗಿದೆ.
90 ಸೆಕೆಂಡ್ ಗ್ಯಾಪ್
ನೀವು ಮಾಡಿದ ಟ್ರಾನ್ಸಾಕ್ಷನ್ ಇನ್ನೂ ಬಾಕಿ ಇದ್ದು, ಅದರ ಸ್ಟೇಟಸ್ ಪರಿಶೀಲಿಸಲು ನಿರ್ಬಂಧ ಹಾಕಲಾಗುತ್ತಿದೆ. ಮೂರು ಬಾರಿ ಮಾತ್ರ ಸ್ಟೇಟಸ್ ಪರಿಶೀಲಿಸಬಹುದು. ಪ್ರತೀ ಪರಿಶೀಲನೆ ನಡೆಯುವೆ ಕನಿಷ್ಠ 90 ಸೆಕೆಂಡ್ ಗ್ಯಾಪ್ ಇರಬೇಕು.
ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್ಲೈನ್ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ
ಈ ಯುಪಿಐ ನಿಯಮ ಬದಲಾವಣೆ ಯಾಕೆ?
ಯುಪಿಐ ಬಳಕೆ ಈಗ ಬಹಳಷ್ಟು ಆಗುತ್ತಿದೆ. ಒಂದು ತಿಂಗಳಲ್ಲಿ 1,600 ಕೋಟಿಯಷ್ಟು ಟ್ರಾನ್ಸಾಕ್ಷನ್ಗಳು ಆಗುತ್ತವೆ. ಹೀಗಾಗಿ, ಯುಪಿಐ ನೆಟ್ವರ್ಕ್ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಇದನ್ನು ತಪ್ಪಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಈ ಕ್ರಮ ತೆಗೆದುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Sun, 27 July 25




