ಒಂದು ಉದ್ದಿಮೆ ಸ್ಥಾಪಿಸಲು ಕೇವಲ ಬಂಡವಾಳ ಬಲವೊಂದಿದ್ದರೆ ಸಾಲದು. ಹಣ ಇಲ್ಲದಿದ್ದರೂ ಬದ್ಧತೆ, ಶಿಸ್ತು, ಜ್ಞಾನ, ಸಂಯಮ ಇತ್ಯಾದಿ ಗುಣಗಳೆಲ್ಲವೂ ಅಗತ್ಯ. ಬಲವಂತ್ ಪರೇಖ್ 1.39 ಲಕ್ಷಕೋಟಿ ರೂ ಮೌಲ್ಯದ ಪಿಡಿಲೈಟ್ ಇಂಡಸ್ಟ್ರೀಸ್ (Pidilite industries) ಉದ್ಯಮ ಸ್ಥಾಪಿಸುವ ಮುನ್ನ ಅನುಭವಿಸಿದ ಕಷ್ಟ, ಹಿನ್ನಡೆ ಗಮನಾರ್ಹ ಎನಿಸುತ್ತವೆ. ಆಫೀಸ್ ಜವಾನನಾಗಿ ಕೆಲಸ ಮಾಡಿದರೂ ಆತ್ಮವಿಶ್ವಾಸ, ಸಂಯಮ ಕಳೆದುಕೊಳ್ಳದೇ ಅವರು ಉದ್ದಿಮೆ ಸ್ಥಾಪಿಸಿ ಯಶಸ್ವಿ ಪಡೆದ ಕಥೆ ನಿಜಕ್ಕೂ ಸ್ಫೂರ್ತಿ (Inspiring Story) ಮೂಡಿಸುವಂಥದ್ದು.
ಗುಜರಾತ್ನ ಮಹುವಾದವರಾದ ಬಲವಂತ್ ಪರೇಖ್ ಸ್ವಾತಂತ್ರ್ಯ ಹೋರಾಟಗಾರಾಗಿದ್ದವರು. ಕಾನೂನು ಓದಿದರೂ ಬಿಸಿನೆಸ್ ಮಾಡಬೇಕೆಂಬ ಹಂಬಲಕ್ಕಾಗಿ ಸಾಕಷ್ಟು ವೈಯಕ್ತಿಕ ಲಾಭಗಳನ್ನು ತ್ಯಾಗ ಮಾಡಿ ಬೆಳೆದವರು.
ಬಲವಂತರಾಯ್ ಕಲ್ಯಾಣ್ಜಿ ಪರೇಖ್ ಯುವಕರಾಗಿದ್ದಾಗ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಇಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಅವರು ಕಾನೂನು ಪದವಿ ಮಾಡಿದರು. ಆದರೆ ಬಿಸಿನೆಸ್ಮ್ಯಾನ್ ಆಗಬೇಕೆಂಬುದು ಅವರ ಹಂಬಲವಾಗಿತ್ತು.
ಮನದಾಸೆ ಈಡೇರಿಸಲು ಅವರು ಫ್ಯಾಕ್ಟರಿಯೊಂದರಲ್ಲಿ ಜವಾನನಾಗಿ ಕೆಲಸ ಕೂಡ ಮಾಡಿದರು. ಫ್ಯಾಕ್ಟರಿ ಬೇಸ್ಮೆಂಟ್ನಲ್ಲೇ ಅವರದ್ದು ಸಂಸಾರ. ಸಾಕಷ್ಟು ಕಷ್ಟಗಳನ್ನು ಅವರು ಎದುರಿಸಿದರು.
ವರ್ಷಗಳ ಬಳಿಕ ಅವರಿಗೆ ಜರ್ಮನಿಗೆ ಹೋಗುವ ಒಂದು ಅವಕಾಶ ಸಿಕ್ಕಿತು. ಇಲ್ಲಿಯೇ ಅವರಿಗೆ ವ್ಯವಹಾರದ ಗುಟ್ಟುಗಳು ಸಿಕ್ಕವು. ಮುಂಬೈಗೆ ಬಂದ ಬಳಿಕ ಅವರು ತನ್ನ ಸಹೋದರನ ಜೊತೆ ಸೇರಿ ಪರೇಖ್ ಡೈಕೆಮ್ ಇಂಡಸ್ಟ್ರೀಸ್ ಹೆಸರಿನಲ್ಲಿ ಸಣ್ಣ ಅಂಗಡಿ ಸ್ಥಾಪಿಸಿದರು. ಫೆವಿಕಾಲ್ ಬ್ರ್ಯಾಂಡ್ನ ಒಂದು ಅಂಟು ಉತ್ಪನ್ನವನ್ನು ತಯಾರಿಸಿದರು. 1959ರಲ್ಲಿ ಫೆವಿಕಾಲ್ ಮಾರುಕಟ್ಟೆಗೆ ಬಂದಿತು. ಅದೇ ವರ್ಷ ಪರೇಖ್ ಡೈಕೆಮ್ ಇಂಡಸ್ಟ್ರೀನ್ ಹೆಸರು ಪಿಡಿಲೈಟ್ ಇಂಡಸ್ಟ್ರೀಸ್ ಎಂದು ಬದಲಾಯಿತು.
ಫೆವಿಕಾಲ್ ಬಹಳ ಜನಪ್ರಿಯ ಬ್ರ್ಯಾಂಡ್ ಆಗಿ ಬೆಳೆಯಿತು. ಕಾರ್ಪೆಂಟರುಗಳಿಗೆ ಫೆವಿಕಾಲ್ ನೆಚ್ಚಿನ ಅಂಟಾಯಿತು. ಪಿಡಿಲೈಟ್ ಇಂಡಸ್ಟ್ರೀಸ್ ದೊಡ್ಡ ಉದ್ದಿಮೆಯಾಗಿ ಬೆಳೆದಿದೆ. ಇವತ್ತು ಅದರ ಮಾರ್ಕೆಟ್ ಕ್ಯಾಪ್ ಇವತ್ತು 1,39,000 ಕೋಟಿ ರೂನಷ್ಟಾಗಿದೆ.
ಇದನ್ನೂ ಓದಿ: Money Management: ಎಷ್ಟೇ ದುಡಿದರೂ ಹಣ ನಿಲ್ಲುತ್ತಿಲ್ಲವಾ? ಬಾಲ್ಯದ ಅನುಭವ, ಅರಿವಿನ ಕೊರತೆ ಇವೆಲ್ಲವೂ ಕಾರಣ ಇರಬಹುದು
ಪರೇಖ್ ಬ್ರದರ್ಸ್ ಕೇವಲ ಬಿಸಿನೆಸ್ ಮಾತ್ರವೇ ಮಾಡಲಿಲ್ಲ, ಸಾಮಾಜಿಕ ಕಾರ್ಯಗಳಲ್ಲೂ ಎತ್ತಿದ ಕೈ ಎನಿಸಿದ್ದಾರೆ. ಗುಜರಾತ್ನಲ್ಲಿ ಎರಡು ಶಾಲೆ, ಒಂದು ಕಾಲೇಜು ಮತ್ತು ಒಂದು ಆಸ್ಪತ್ರೆಯನ್ನು ಅವರು ಸ್ಥಾಪಿಸಿ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಧ್ಯಮ ಮತ್ತು ಬಡವರ್ಗದ ಜನರಿಗೆ ಸುಲಭ ಶಿಕ್ಷಣ ಮತ್ತು ಚಿಕಿತ್ಸಾ ವ್ಯವಸ್ಥೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Sun, 14 January 24