ನವದೆಹಲಿ, ಜನವರಿ 5: ವರ್ಷದ ಹಿಂದೆ ಹಿಂಡನ್ಬರ್ಗ್ ಶಾಕ್ನಿಂದ ಹಿನ್ನಡೆ ಅನುಭವಿಸಿದ್ದ ಗೌತಮ್ ಅದಾನಿ (Gautam Adani) ಈಗ ಕಂಬ್ಯಾಕ್ ಮಾಡಿದ್ದಾರೆ. ಬ್ಲೂಮ್ಬರ್ಗ್ ಪಟ್ಟಿ ಪ್ರಕಾರ, ಒಟ್ಟು ಸಂಪತ್ತಿನಲ್ಲಿ ಮುಕೇಶ್ ಅಂಬಾನಿಯನ್ನೂ ಅವರು ಮೀರಿಸಿದ್ದಾರೆ. ಈ ಮೂಲಕ ಭಾರತದ ಮಾತ್ರವಲ್ಲ, ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಬ್ಲೂಮ್ಬರ್ಗ್ ಪಟ್ಟಿಯಲ್ಲಿ ಗೌತಮ್ ಅದಾನಿ 12ನೇ ಸ್ಥಾನಕ್ಕೆ ಏರಿದ್ದಾರೆ. ಮುಕೇಶ್ ಅಂಬಾನಿ 13ನೇ ಸ್ಥಾನದಲ್ಲಿದ್ದಾರೆ. ಅದಾನಿ ಆಸ್ತಿಮೌಲ್ಯ (Net Asset) 97.6 ಬಿಲಿಯನ್ ಡಾಲರ್ ಇದ್ದರೆ, ಅಂಬಾನಿಯದ್ದು 97 ಬಿಲಿಯನ್ ಡಾಲರ್ ಇದೆ.
ಮೊನ್ನೆಮೊನ್ನೆ ಸರ್ವೋಚ್ಚ ನ್ಯಾಯಾಲಯವು ಅದಾನಿ ಗ್ರೂಪ್ ವಿರುದ್ಧ ಪ್ರತ್ಯೇಕ ಎಸ್ಐಟಿ ತನಿಖೆ ಅಗತ್ಯ ಇಲ್ಲ ಎಂದು ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ನ ಷೇರುಗಳು ಮತ್ತೆ ಲಯ ಕಂಡುಕೊಂಡಿವೆ. ಪರಿಣಾಮವಾಗಿ, ಗೌತಮ್ ಅದಾನಿ ಅವರ ವೈಯಕ್ತಿಕ ಷೇರು ಸಂಪತ್ತು ಗಣನೀಯವಾಗಿ ಏರುತ್ತಿದೆ. ಹೀಗಾಗಿ, ಅವರು ವಿಶ್ವ ಶ್ರೀಮಂತರ ಟಾಪ್ 10 ಪಟ್ಟಿಗೆ ಮತ್ತೊಮ್ಮೆ ಲಗ್ಗೆ ಇಡಲು ಸಮೀಪಿಸುತ್ತಿದ್ದಾರೆ.
ಹಾಗೆಯೇ, 2023ರಲ್ಲಿ ಅತಿಹೆಚ್ಚು ಷೇರುಸಂಪತ್ತು ಕಳೆದುಕೊಂಡಿದ್ದು, ಮತ್ತು ಅತಿಹೆಚ್ಚು ಷೇರುಸಂಪತ್ತು ಗಳಿಸಿಕೊಂಡಿದ್ದು ಎರಡೂ ದಾಖಲೆಗಳಿಗೆ ಅದಾನಿ ಬಾಜನರಾಗಿದ್ದಾರೆ. ಬ್ಲೂಮ್ಬರ್ಗ್ ಶ್ರೀಮಂತರ ಪಟ್ಟಿಯಲ್ಲಿ ಇಲಾನ್ ಮಸ್ಕ್ 220 ಬಿಲಿಯನ್ ಡಾಲರ್ನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಫ್ರಾನ್ಸ್ನ ಬರ್ನಾರ್ಡ್ ಆರ್ನಾಲ್ಟ್ 168 ಬಿಲಿಯನ್ ಡಾಲರ್ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅದು ಬಿಟ್ಟರೆ ಟಾಪ್ 10 ಪಟ್ಟಿಯಲ್ಲಿ ಎಲ್ಲರೂ ಕೂಡ ಅಮೆರಿಕನ್ನರೇ ಆಗಿದ್ದಾರೆ.
ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ
ಕುತೂಹಲ ಎಂದರೆ ಫೋರ್ಬ್ಸ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿದ್ದಾರೆ. ಅವರು 12ನೇ ಸ್ಥಾನದಲ್ಲಿದ್ದರೆ ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ. ಅವರಿಬ್ಬರ ನಡುವಿನ ಸಂಪತ್ತಿನ ಅಂತರ 22 ಬಿಲಿಯನ್ ಡಾಲರ್ನಷ್ಟಿದೆ.
ಇದನ್ನೂ ಓದಿ: Adani: ಗೌತಮ್ ಅದಾನಿಗೆ ಇನ್ನಷ್ಟು ನಿರಾಳ; ಹಿಂಡನ್ಬರ್ಗ್ ಪ್ರಕರಣದ ತನಿಖೆ ಎಸ್ಐಟಿಗೆ ವಹಿಸಲು ಸುಪ್ರೀಂಕೋರ್ಟ್ ನಕಾರ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ