Bengaluru Metro: ಏರ್​ಪೋರ್ಟ್ ಆಯ್ತು, ಬೆಂಗಳೂರು ಮೆಟ್ರೋ ಕಂಡು ಚಕಿತಗೊಂಡ ವಿಶ್ವಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್

Mark Mobius on Namma Metro: ಬೆಂಗಳೂರು ಏರ್ಪೋರ್ಟ್ ಅನ್ನು ಹೊಗಳಿದ್ದ ಅಮೆರಿಕದ ಹೂಡಿಕೆದಾರ ಮಾರ್ಕ್ ಮೋಬಿಯಸ್ ಈಗ ಬೆಂಗಳೂರು ಮೆಟ್ರೋದ ಅಭಿಮಾನಿಯಾಗಿದ್ದಾರೆ. ಬೆಂಗಳೂರು ಮೆಟ್ರೋದ ಸಬ್​ವೇ ಕಂಡು ನ್ಯೂ ಯಾರ್ಕ್ ಜನರೂ ಅಚ್ಚರಿಗೊಳ್ಳುತ್ತಾರೆ ಎಂದು ಮೋಬಿಯಸ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಮೋಬಿಯಸ್ ಕ್ಯಾಪಿಟಲ್ ಪಾರ್ಟ್ನರ್ಸ್ ಎಂಬ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಸ್ಥಾಪಕರಾದ ಮಾರ್ಕ್ ಮೋಬಿಯಸ್ ಭಾರತದ ಆರ್ಥಿಕತೆ ಬಗ್ಗೆ ಬಹಳ ವಿಶ್ವಾಸ ಹೊಂದಿದ್ದಾರೆ.

Bengaluru Metro: ಏರ್​ಪೋರ್ಟ್ ಆಯ್ತು, ಬೆಂಗಳೂರು ಮೆಟ್ರೋ ಕಂಡು ಚಕಿತಗೊಂಡ ವಿಶ್ವಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್
ಮಾರ್ಕ್ ಮೋಬಿಯಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 05, 2024 | 11:48 AM

ಬೆಂಗಳೂರು, ಜನವರಿ 5: ಸಿಲಿಕಾನ್ ನಗರಿಯ ಕೆಂಪೇಗೌಡ ಏರ್ಪೋರ್ಟ್ ಅನ್ನು ವಿಶ್ವದ ಅತ್ಯುತ್ತಮ ಹಾಗೂ ಅತಿಸುಂದರ ವಿಮಾನ ನಿಲ್ದಾಣ ಎಂದು ಬಣ್ಣಿಸಿದ್ದ ಹೂಡಿಕೆದಾರ ಮಾರ್ಕ್ ಮೋಬಿಯಸ್ (Mark Mobius) ಈಗ ಬೆಂಗಳೂರಿನ ಮೆಟ್ರೋ ರೈಲಿನ ಅಭಿಮಾನಿಯಾಗಿದ್ದಾರೆ. ಒಟ್ಟಾರೆ ಭಾರತದ ಆರ್ಥಿಕತೆಯ ಬಗ್ಗೆ ಅಚಲ ವಿಶ್ವಾಸ ಇರಿಸಿರುವ ಮೋಬಿಯಸ್ ತಮ್ಮ ಒಂದು ತಿಂಗಳ ಭಾರತ ಪ್ರವಾಸದಲ್ಲಿ ಬೆಂಗಳೂರು, ಹೈದರಾಬಾದ್ ಸೇರಿದಂತೆ ಒಂಬತ್ತು ನಗರಗಳನ್ನು ಭೇಟಿ ನೀಡಿದ್ದಾರೆ. ಈ ವೇಳೆ ಅವರು ಬೆಂಗಳೂರು ಏರ್ಪೋರ್ಟ್ ಮತ್ತು ಮೆಟ್ರೋ (Bengaluru Metro) ಬಗ್ಗೆ ತನ್ನ ಅಭಿಮಾನಗಳನ್ನು ತೋರ್ಪಡಿಸಿದ್ದಾರೆ.

ಬೆಂಗಳೂರಿನ ಸಬ್​ವೇ ನೋಡಿ ನ್ಯೂಯಾರ್ಕ್ ಜನರು ಅಚ್ಚರಿಗೊಳ್ಳುತ್ತಾರೆ…

ಮಾರ್ಕ್ ಮೋಬಿಯಸ್ ಅವರು ತನ್ನ ಬ್ಲಾಗ್ ಪೋಸ್ಟ್​ವೊಂದರಲ್ಲಿ ಬರೆದಿದ್ದು, ಮೆಟ್ರೋ ಪ್ಲಾಟ್​ಫಾರ್ಮ್​ವೊಂದರಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನು ಬ್ಲಾಗ್​ಪೋಸ್ಟ್​ನಲ್ಲಿ ಹಾಕಿ ಹೀಗೆ ಬರೆದಿದ್ದಾರೆ:

‘ಬೆಂಗಳೂರಿನ ಸಬ್​ವೇ ಇಷ್ಟು ಸ್ವಚ್ಛವಾಗಿರುವನ್ನು ಕಂಡು ನ್ಯೂಯಾರ್ಕ್ ಜನರು ಅಚ್ಚರಿಗೊಳ್ಳಬೇಕು,’ ಎಂದಿದ್ದಾರೆ.

ಇದನ್ನೂ ಓದಿ: ಚೆನ್ನೈ: ತನ್ನ 50 ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಐಟಿ ಕಂಪನಿ

ನ್ಯೂಯಾರ್ಕ್​ನ ಸಬ್​ವೇ ವಿಶ್ವದ ಅತಿ ಹಳೆಯ ಮತ್ತು ಅತಿ ಉದ್ದದ ಮೆಟ್ರೋ ರೈಲು ನೆಟ್ವರ್ಕ್ ಆಗಿದೆ. ಸ್ವಚ್ಛತೆಗೂ ಇದು ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಕ್ ಮೋಬಿಯಸ್ ಅವರು ಬೆಂಗಳೂರಿನ ಮೆಟ್ರೋ ರೈಲಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು ಗಮನಾರ್ಹ.

‘ಮುಖ್ಯ ರೈಲು ನಿಲ್ದಾಣಕ್ಕೆ ಹೋಗಲು ನಾವು ಆಧುನಿಕ ಸಬ್​ವೇ ದಾರಿಯಲ್ಲಿ ಸಾಗಿದೆವು. ಖ್ಯಾತ ಸ್ಥಳಗಳ ಚಿತ್ರಗಳನ್ನು ಈ ಸಬ್​ವೆನಲ್ಲಿ ಕಾಣಬಹುದು,’ ಎಂದು ಮೋಬಿಯಸ್ ಬರೆದಿದ್ದಾರೆ. ಕಲಾತ್ಮಕ ಸ್ಪರ್ಶ ಕೊಡುವ ಭಾರತೀಯ ಗುಣವನ್ನು ಇದೇ ವೇಳೆ ಮೋಬಿಸ್ ಪ್ರಸ್ತಾಪಿಸಿ ಮೆಚ್ಚಿಕೊಂಡಿದ್ದಾರೆ.

ಬೆಂಗಳೂರಿನ ಹೊಸ ಏರ್​ಪೋರ್ಟ್ ಟರ್ಮಿನಲ್ ಬಗ್ಗೆ ಅವರು ಬಹಳ ಮೆಚ್ಚುಗೆಯ ಮಾತನಾಡಿದ್ದಾರೆ: ‘ಬೆಂಗಳೂರಿನಿಂದ ನಿರ್ಗಮಿಸುವಾಗ ವಿಶ್ವದ ಸುಂದರ ವಿಮಾನ ನಿಲ್ದಾಣ ನನ್ನ ಗಮನ ಸೆಳೆಯಿತು. ಬೆಂಗಳೂರು ಏರ್​ಪೋರ್ಟ್ ಅನ್ನು ಬಹಳ ರುಚಿಕಟ್ಟಾಗಿ ನಿರ್ಮಿಸಲಾಗಿದೆ,’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Infosys Story: ಎಲ್ಲಾ ಅರ್ಹತೆ ಇದ್ದ ಪತ್ನಿಯನ್ನು ಇನ್ಫೋಸಿಸ್​ನಿಂದ ದೂರ ಇಟ್ಟು ತಪ್ಪು ಮಾಡಿದೆ: ಪರಿತಪಿಸಿದ ನಾರಾಯಣಮೂರ್ತಿ

ಮಾರ್ಕ್ ಮೋಬಿಯಸ್ ಅವರು ಮೋಬಿಯಸ್ ಕ್ಯಾಪಿಟಲ್ ಪಾರ್ಟ್ನರ್ಸ್ ಎಂಬ ಫಂಡಿಂಗ್ ಕಂಪನಿಯ ಸ್ಥಾಪಕರು. ಭಾರತದ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಅವರು, ಮುಂದಿನ ಐದು ವರ್ಷದಲ್ಲಿ ಭಾರತದ ಸೆನ್ಸೆಕ್ಸ್ 1 ಲಕ್ಷ ಅಂಕಗಳ ಮಟ್ಟ ದಾಟುತ್ತದೆ ಎಂದು ವರ್ಷದ ಹಿಂದೆ ಭವಿಷ್ಯ ನುಡಿದಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ