AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rich List: ಅಂಬಾನಿಯನ್ನೂ ಮೀರಿಸಿದ ಗೌತಮ್ ಅದಾನಿ ಈಗ ಏಷ್ಯಾದ ನಂಬರ್ ಒನ್ ಶ್ರೀಮಂತ; ಬ್ಲೂಮ್​ಬರ್ಗ್ ಪಟ್ಟಿಯಲ್ಲಿ ಹಲವು ಸ್ಥಾನ ಮೇಲೇರಿದ ಅದಾನಿ

Gautam Adani Asia's Richest: ಬ್ಲೂಮ್​ಬರ್ಗ್ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ 12ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಗೌತಮ್ ಅದಾನಿ ಈಗ ಭಾರತದ ಮಾತ್ರವಲ್ಲ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಈಗಲೂ ಏಷ್ಯಾದ ನಂಬರ್ ಒನ್ ಶ್ರೀಮಂತ. ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ.

Rich List: ಅಂಬಾನಿಯನ್ನೂ ಮೀರಿಸಿದ ಗೌತಮ್ ಅದಾನಿ ಈಗ ಏಷ್ಯಾದ ನಂಬರ್ ಒನ್ ಶ್ರೀಮಂತ; ಬ್ಲೂಮ್​ಬರ್ಗ್ ಪಟ್ಟಿಯಲ್ಲಿ ಹಲವು ಸ್ಥಾನ ಮೇಲೇರಿದ ಅದಾನಿ
ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 05, 2024 | 1:10 PM

Share

ನವದೆಹಲಿ, ಜನವರಿ 5: ವರ್ಷದ ಹಿಂದೆ ಹಿಂಡನ್ಬರ್ಗ್ ಶಾಕ್​ನಿಂದ ಹಿನ್ನಡೆ ಅನುಭವಿಸಿದ್ದ ಗೌತಮ್ ಅದಾನಿ (Gautam Adani) ಈಗ ಕಂಬ್ಯಾಕ್ ಮಾಡಿದ್ದಾರೆ. ಬ್ಲೂಮ್​ಬರ್ಗ್ ಪಟ್ಟಿ ಪ್ರಕಾರ, ಒಟ್ಟು ಸಂಪತ್ತಿನಲ್ಲಿ ಮುಕೇಶ್ ಅಂಬಾನಿಯನ್ನೂ ಅವರು ಮೀರಿಸಿದ್ದಾರೆ. ಈ ಮೂಲಕ ಭಾರತದ ಮಾತ್ರವಲ್ಲ, ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಬ್ಲೂಮ್​ಬರ್ಗ್ ಪಟ್ಟಿಯಲ್ಲಿ ಗೌತಮ್ ಅದಾನಿ 12ನೇ ಸ್ಥಾನಕ್ಕೆ ಏರಿದ್ದಾರೆ. ಮುಕೇಶ್ ಅಂಬಾನಿ 13ನೇ ಸ್ಥಾನದಲ್ಲಿದ್ದಾರೆ. ಅದಾನಿ ಆಸ್ತಿಮೌಲ್ಯ (Net Asset) 97.6 ಬಿಲಿಯನ್ ಡಾಲರ್ ಇದ್ದರೆ, ಅಂಬಾನಿಯದ್ದು 97 ಬಿಲಿಯನ್ ಡಾಲರ್ ಇದೆ.

ಮೊನ್ನೆಮೊನ್ನೆ ಸರ್ವೋಚ್ಚ ನ್ಯಾಯಾಲಯವು ಅದಾನಿ ಗ್ರೂಪ್ ವಿರುದ್ಧ ಪ್ರತ್ಯೇಕ ಎಸ್​ಐಟಿ ತನಿಖೆ ಅಗತ್ಯ ಇಲ್ಲ ಎಂದು ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್​ನ ಷೇರುಗಳು ಮತ್ತೆ ಲಯ ಕಂಡುಕೊಂಡಿವೆ. ಪರಿಣಾಮವಾಗಿ, ಗೌತಮ್ ಅದಾನಿ ಅವರ ವೈಯಕ್ತಿಕ ಷೇರು ಸಂಪತ್ತು ಗಣನೀಯವಾಗಿ ಏರುತ್ತಿದೆ. ಹೀಗಾಗಿ, ಅವರು ವಿಶ್ವ ಶ್ರೀಮಂತರ ಟಾಪ್ 10 ಪಟ್ಟಿಗೆ ಮತ್ತೊಮ್ಮೆ ಲಗ್ಗೆ ಇಡಲು ಸಮೀಪಿಸುತ್ತಿದ್ದಾರೆ.

ಹಾಗೆಯೇ, 2023ರಲ್ಲಿ ಅತಿಹೆಚ್ಚು ಷೇರುಸಂಪತ್ತು ಕಳೆದುಕೊಂಡಿದ್ದು, ಮತ್ತು ಅತಿಹೆಚ್ಚು ಷೇರುಸಂಪತ್ತು ಗಳಿಸಿಕೊಂಡಿದ್ದು ಎರಡೂ ದಾಖಲೆಗಳಿಗೆ ಅದಾನಿ ಬಾಜನರಾಗಿದ್ದಾರೆ. ಬ್ಲೂಮ್​ಬರ್ಗ್ ಶ್ರೀಮಂತರ ಪಟ್ಟಿಯಲ್ಲಿ ಇಲಾನ್ ಮಸ್ಕ್ 220 ಬಿಲಿಯನ್ ಡಾಲರ್​ನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಫ್ರಾನ್ಸ್​ನ ಬರ್ನಾರ್ಡ್ ಆರ್ನಾಲ್ಟ್ 168 ಬಿಲಿಯನ್ ಡಾಲರ್​ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅದು ಬಿಟ್ಟರೆ ಟಾಪ್ 10 ಪಟ್ಟಿಯಲ್ಲಿ ಎಲ್ಲರೂ ಕೂಡ ಅಮೆರಿಕನ್ನರೇ ಆಗಿದ್ದಾರೆ.

ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿ ಫ್ಯಾಮಿಲಿ ಹಿಂದಿಕ್ಕಿದ ಅದಾನಿ ಫ್ಯಾಮಿಲಿ; ಸಂಪತ್ತು ಹೆಚ್ಚಳಕ್ಕೆ ಸುಪ್ರೀಂ ತೀರ್ಪು ಪುಷ್ಟಿ

ಕುತೂಹಲ ಎಂದರೆ ಫೋರ್ಬ್ಸ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿದ್ದಾರೆ. ಅವರು 12ನೇ ಸ್ಥಾನದಲ್ಲಿದ್ದರೆ ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ. ಅವರಿಬ್ಬರ ನಡುವಿನ ಸಂಪತ್ತಿನ ಅಂತರ 22 ಬಿಲಿಯನ್ ಡಾಲರ್​ನಷ್ಟಿದೆ.

ಬ್ಲೂಮ್​ಬರ್ಗ್ ಶ್ರೀಮಂತರ ಪಟ್ಟಿ (2024 ಜನವರಿ 5)

  1. ಇಲಾನ್ ಮಸ್ಕ್: 220 ಬಿಲಿಯನ್ ಡಾಲರ್
  2. ಜೆಫ್ ಬೇಜೋಸ್: 169 ಬಿಲಿಯನ್ ಡಾಲರ್
  3. ಬರ್ನಾರ್ಡ್ ಆರ್ನಾಲ್ಟ್: 168 ಬಿಲಿಯನ್ ಡಾಲರ್
  4. ಬಿಲ್ ಗೇಟ್ಸ್: 138 ಬಿಲಿಯನ್ ಡಾಲರ್
  5. ಸ್ಟೀವ್ ಬಾಲ್ಮರ್: 128 ಬಿಲಿಯನ್ ಡಾಲರ್
  6. ಮಾರ್ಕ್ ಜುಕರ್ಬರ್ಗ್: 126 ಬಿಲಿಯನ್ ಡಾಲರ್
  7. ಲ್ಯಾರಿ ಪೇಜ್: 124 ಬಿಲಿಯನ್ ಡಾಲರ್
  8. ವಾರನ್ ಬಫೆಟ್: 122 ಬಿಲಿಯನ್ ಡಾಲರ್
  9. ಲ್ಯಾರಿ ಎಲಿಸನ್: 120 ಬಿಲಿಯನ್ ಡಾಲರ್
  10. ಸೆರ್ಗೇ ಬರ್ರಿನ್: 117 ಬಿಲಿಯನ್ ಡಾಲರ್
  11. ಕಾರ್ಲೊಸ್ ಸ್ಲಿಮ್: 102 ಬಿಲಿಯನ್ ಡಾಲರ್
  12. ಗೌತಮ್ ಅದಾನಿ: 97.6 ಬಿಲಿಯನ್ ಡಾಲರ್
  13. ಮುಕೇಶ್ ಅಂಬಾನಿ: 97.0 ಬಿಲಿಯನ್ ಡಾಲರ್

ಇದನ್ನೂ ಓದಿ: Adani: ಗೌತಮ್ ಅದಾನಿಗೆ ಇನ್ನಷ್ಟು ನಿರಾಳ; ಹಿಂಡನ್ಬರ್ಗ್ ಪ್ರಕರಣದ ತನಿಖೆ ಎಸ್​ಐಟಿಗೆ ವಹಿಸಲು ಸುಪ್ರೀಂಕೋರ್ಟ್ ನಕಾರ

ಫೋರ್ಬ್ಸ್ ಶ್ರೀಮಂತರ ಪಟ್ಟಿ

  1. ಇಲಾನ್ ಮಸ್ಕ್: 243.8 ಬಿಲಿಯನ್ ಡಾಲರ್
  2. ಬರ್ನಾರ್ಡ್ ಆರ್ನಾಲ್ಟ್ ಅಂಡ್ ಫ್ಯಾಮಿಲಿ: 188.7 ಬಿಲಿಯನ್ ಡಾಲರ್
  3. ಜೆಫ್ ಬೇಜೋಸ್: 166.9 ಬಿಲಿಯನ್ ಡಾಲರ್
  4. ಲ್ಯಾರಿ ಎಲಿಸನ್: 131.7 ಬಿಲಿಯನ್ ಡಾಲರ್
  5. ಮಾರ್ಕ್ ಜುಕರ್ಬರ್ಗ್: 122.9 ಬಿಲಿಯನ್ ಡಾಲರ್
  6. ವಾರನ್ ಬಫೆಟ್: 120.5 ಬಿಲಿಯನ್ ಡಾಲರ್
  7. ಬಿಲ್ ಗೇಟ್ಸ್: 118.1 ಬಿಲಿಯನ್ ಡಾಲರ್
  8. ಲ್ಯಾರಿ ಪೇಜ್: 114.8 ಬಿಲಿಯನ್ ಡಾಲರ್
  9. ಸ್ಟೀವ್ ಬಾಲ್ಮರ್: 110.2 ಬಿಲಿಯನ್ ಡಾಲರ್
  10. ಸೆರ್ಗೇ ಬ್ರಿನ್: 110.2 ಬಿಲಿಯನ್ ಡಾಲರ್
  11. ಕಾರ್ಲೊಸ್ ಸ್ಲಿಮ್ ಹೇಲು ಅಂಡ್ ಫ್ಯಾಮಿಲಿ: 102.1 ಬಿಲಿಯನ್ ಡಾಲರ್
  12. ಮುಕೇಶ್ ಅಂಬಾನಿ: 100.7 ಬಿಲಿಯನ್ ಡಾಲರ್
  13. ಅಮಾನ್ಷಿಯೋ ಆರ್ಟೆಗಾ: 97.6 ಬಿಲಿಯನ್ ಡಾಲರ್
  14. ಮಿಕಾಯಿಲ್ ಬ್ಲೂಮ್​ಬರ್ಗ್: 96.3 ಬಿಲಿಯನ್ ಡಾಲರ್
  15. ಫ್ರಾಂಕಾಯ್ಸ್ ಬೆಟೆನ್​ಕೋರ್ಟ್ ಮೆಯೆರ್ಸ್ ಅಂಡ್ ಫ್ಯಾಮಿಲಿ: 95 ಬಿಲಿಯನ್ ಡಾಲರ್
  16. ಗೌತಮ್ ಅದಾನಿ: 78.5 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More