Infosys Story: ಎಲ್ಲಾ ಅರ್ಹತೆ ಇದ್ದ ಪತ್ನಿಯನ್ನು ಇನ್ಫೋಸಿಸ್​ನಿಂದ ದೂರ ಇಟ್ಟು ತಪ್ಪು ಮಾಡಿದೆ: ಪರಿತಪಿಸಿದ ನಾರಾಯಣಮೂರ್ತಿ

NR Narayana Murthy Speaks His Heart: ಕಾರ್ಪೊರೇಟ್ ಆಡಳಿತದಲ್ಲಿ ಕುಟುಂಬ ಸದಸ್ಯರ ಪಾತ್ರ ಇರಬಾರದು ಎಂಬ ಆದರ್ಶಕ್ಕೆ ಸಿಕ್ಕು ಪತ್ನಿಯನ್ನು ಇನ್ಫೋಸಿಸ್​ನಿಂದ ದೂರ ಇಟ್ಟಿದ್ದರು ನಾರಾಯಣಮೂರ್ತಿ. ಇನ್ಪೋಸಿಸ್​ನ ಸಹ-ಸಂಸ್ಥಾಪಕರಿಗಿಂತ ಸುಧಾ ಮೂರ್ತಿ ಹೆಚ್ಚು ಅರ್ಹತೆ ಹೊಂದಿದ್ದರೂ ಅವರನ್ನು ಸಂಸ್ಥೆಗೆ ಜೋಡಿಸಿಕೊಳ್ಳದೇ ತಪ್ಪು ಮಾಡಿದೆ ಎನ್ನುತ್ತಾರೆ ಮೂರ್ತಿ. 1981ರಲ್ಲಿ ಇನ್ಫೋಸಿಸ್ ಸ್ಥಾಪಿಸುವಾಗ ನಾರಾಯಣಮೂರ್ತಿ ಅವರಿಗೆ ಪತ್ನಿ ಸುಧಾಮೂರ್ತಿ 10,000 ರೂ ಹಣ ಸಹಾಯ ನೀಡಿದ್ದರು.

Infosys Story: ಎಲ್ಲಾ ಅರ್ಹತೆ ಇದ್ದ ಪತ್ನಿಯನ್ನು ಇನ್ಫೋಸಿಸ್​ನಿಂದ ದೂರ ಇಟ್ಟು ತಪ್ಪು ಮಾಡಿದೆ: ಪರಿತಪಿಸಿದ ನಾರಾಯಣಮೂರ್ತಿ
ಎನ್ ಆರ್ ನಾರಾಯಣಮೂರ್ತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 05, 2024 | 10:47 AM

ಯುವ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇತ್ತೀಚೆಗೆ ಹೇಳಿ ಸಾಕಷ್ಟು ಚರ್ಚೆ ಹುಟ್ಟುಹಾಕಲು ಕಾರಣರಾಗಿದ್ದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಇದೀಗ ತಮ್ಮ ಪತ್ನಿ ಸುಧಾ ಮೂರ್ತಿ ಬಗ್ಗೆ ಕುತೂಹಲಕಾರಿ ವಿಚಾರ ಹಂಚಿಕೊಂಡಿದ್ದಾರೆ. ಸಿಎನ್​ಎನ್ ನ್ಯೂಸ್18 ವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ನಾರಾಯಣಮೂರ್ತಿ, ತನ್ನ ತಪ್ಪು ಆದರ್ಶದಿಂದಾಗಿ (Wrongly Idealistic) ಪತ್ನಿಯನ್ನು ಇನ್ಫೋಸಿಸ್​ಗೆ ಸೇರದಂತೆ ದೂರ ಇಟ್ಟುಬಿಟ್ಟೆ ಎಂದು ಹೇಳಿದ್ದಾರೆ.

ನಾರಾಯಣಮೂರ್ತಿ, ನಂದನ್ ನಿಲೇಕಣಿ ಮತ್ತಿತರ ಕೆಲ ಜನರು ಸೇರಿ 1981ರಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆಗಿನ ಕಾಲಕ್ಕೆ ಕಂಪನಿ ಸ್ಥಾಪಿಸಲು ಸುಧಾ ಮೂರ್ತಿ ಅವರೇ 10,000 ರೂ ಸಾಲವಾಗಿ ನೀಡಿದ್ದರು. ಸುಧಾ ಮೂರ್ತಿ ಗೃಹಿಣಿ ಮಾತ್ರವೇ ಆಗಿರಲಿಲ್ಲ. ಎಂಜಿನಿಯರಿಂಗ್​ನ ಎಲ್ಲಾ ಸಬ್ಜೆಕ್ಟ್​ನಲ್ಲೂ ಮೊದಲ ರ್ಯಾಂಕ್ ಪಡೆದು, ಇನ್ಸ್​ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಸ್ಥೆಯಿಂದ ಚಿನ್ನದ ಪದಕ ಗಿಟ್ಟಿಸಿದ್ದವರು. ಇನ್ಫೋಸಿಸ್​ನಲ್ಲಿ ಕೆಲಸ ಮಾಡುವ ಎಲ್ಲಾ ಅರ್ಹತೆ ಇವರಿಗಿತ್ತು. ಇನ್ಫೋಸಿಸ್​ನ ಸಹ-ಸಂಸ್ಥಾಪಕರಿಗಿಂತ ಸುಧಾ ಮೂರ್ತಿ ಹೆಚ್ಚು ಅರ್ಹತೆ ಹೊಂದಿದ್ದರು. ಇದು ನಾರಾಯಣಮೂರ್ತಿಗೂ ಅರಿವಿತ್ತಂತೆ. ಆದರೆ, ಯಾವುದೋ ಆದರ್ಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪತ್ನಿಯನ್ನು ಇನ್ಫೋಸಿಸ್​ನತ್ತ ಸುಳಿಯಲು ಬಿಡಲಿಲ್ಲ. ಈಗ ತಾನು ತಪ್ಪು ಮಾಡಿದೆ ಎಂದು ಮೂರ್ತಿ ಪರಿತಪಿಸಿದ್ದಾರೆ.

‘ಒಳ್ಳೆಯ ಕಾರ್ಪೊರೇಟ್ ಆಡಳಿದಲ್ಲಿ (good corporate governance) ಕುಟುಂಬದ ಸದಸ್ಯರು ಬರಬಾರದು ಎಂಬುದು ಆಗ ನನಗೆ ಇದ್ದ ಭಾವನೆ. ಯಾಕೆಂದರೆ ಆ ದಿನಗಳಲ್ಲಿ ಕುಟುಂಬ ಆಡಳಿತದ ಕಂಪನಿಗಳೇ ಹೆಚ್ಚಾಗಿದ್ದವು. ಮಕ್ಕಳು ಮರಿಗಳೆಲ್ಲಾ ಬಂದು ಕಂಪನಿ ನಡೆಸುತ್ತಿದ್ದರು. ಕಾರ್ಪೊರೇಟ್ ಕಾನೂನು, ಶಿಸ್ತುಗಳನ್ನು ಗಾಳಿಗೆ ತೂರುತ್ತಿದ್ದರು,’ ಎಂದು ನಾರಾಯಣಮೂರ್ತಿ ತನ್ನ ಕುಟುಂಬ ಸದಸ್ಯರನ್ನು ಇನ್ಫೋಸಿಸ್​ಗೆ ಸೇರಿಸಿಕೊಳ್ಳದಿರಲು ತನಗೆ ಇದ್ದ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಆದರೆ, ತನ್ನದು ತಪ್ಪು ಆದರ್ಶವಾಗಿತ್ತು ಎಂಬುದು ಇತ್ತೀಚೆಗೆ ಅರಿವಾಯಿತು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ವಾರದಲ್ಲಿ 70 ಗಂಟೆ ಕೆಲಸ ಹೇಳಿಕೆಗೆ ಬದ್ಧ, 40 ವರ್ಷ ನಾನೂ ಮಾಡಿದ್ದೇನೆ: ನಾರಾಯಣ ಮೂರ್ತಿ

ವಿಶ್ವದ ಎರಡು ಅತಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕೆಲ ಫಿಲಾಸಫಿ ಪ್ರೊಫೆಸರುಗಳೊಂದಿಗೆ ನಾರಾಯಣಮೂರ್ತಿ ಮಾತನಾಡುವಾಗ ಸುಧಾ ಮೂರ್ತಿ ವಿಚಾರವೂ ಚರ್ಚೆ ಬಂದಂತೆ. ಮೂರ್ತಿ ಮಾಡಿದ್ದು ತಪ್ಪು ಎಂದು ಅವರು ತಿಳಿಹೇಳಿದರಂತೆ.

‘ಮಿಸ್ಟರ್ ಮೂರ್ತಿ, ನಿಮ್ಮದೇ ತಪ್ಪು. ನಿಮ್ಮ ಪತ್ನಿಯೇ ಆಗಲಿ, ಮಗನೇ ಆಗಲೀ, ಅಥವಅ ಮಗಳೇ ಆಗಲೀ ಅವರಿಗೆ ಅರ್ಹತೆ ಇದ್ದು, ಸಹಜ ಮಾರ್ಗದಲ್ಲಿ ಬರುತ್ತಿದ್ದರೆ ಅವರನ್ನು ತಡೆಯುವ ಯಾವ ಹಕ್ಕೂ ನಿಮಗೆ ಇಲ್ಲ ಎಂದು ಅವರು ನನಗೆ ಹೇಳಿದರು’ ಎಂದು ನ್ಯೂಸ್18 ಸಂದರ್ಶನದಲ್ಲಿ ನಾರಾಯಣಮೂರ್ತಿ ತಿಳಿಸಿದ್ದಾರೆ.

ನಾರಾಯಣಮೂರ್ತಿ ಮಗ ರೋಹನ್ ಇನ್ಫೋಸಿಸ್​ನಲ್ಲಿ ಇಲ್ಲವೇ?

ಸುಧಾ ಮತ್ತು ನಾರಾಯಣ ಮೂರ್ತಿ ಅವರಿಗೆ ಇಬ್ಬರು ಮಕ್ಕಳು. ರೋಹನ್ ಮೂರ್ತಿ, ಅಕ್ಷತಾ ಮೂರ್ತಿ. ಮಗಳು ಬ್ರಿಟನ್ ಪ್ರಧಾನಿ ರಿಷಿ ಸುನಕ್​ನ ಪತ್ನಿ. ಮೂರ್ತಿ ಅವರ ಇಬ್ಬರೂ ಮಕ್ಕಳು ಇನ್ಫೋಸಿಸ್​ನ ಷೇರುದಾರರು ಮಾತ್ರವೇ ಹೊರತು ಅದರಲ್ಲಿ ಯಾವ ಹುದ್ದೆಯನ್ನೂ ಹೊಂದಿಲ್ಲವಂತೆ. 2011ರಲ್ಲಿ ಇನ್ಫೋಸಿಸ್​ನ ಛೇರ್ಮನ್ ಸ್ಥಾನದಿಂದ ಕೆಳಗಿಳಿದ ಬಳಿಕ ಸ್ವತಃ ನಾರಾಯಣಮೂರ್ತಿ ಕೂಡ ಯಾವುದೇ ಎಕ್ಸಿಕ್ಯೂಟಿವ್ ಹುದ್ದೆ ಹೊಂದಿಲ್ಲ.

ಇದನ್ನೂ ಓದಿ: ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು; ಸಬ್ಸಿಡಿ ಪಡೆಯುವವರಿಗೂ ಹೊಣೆಗಾರಿಕೆ ಬೇಕು: ನಾರಾಯಣಮೂರ್ತಿ

2017ರಲ್ಲಿ ನಂದನ್ ನಿಲೇಕಣಿ ಇನ್ಫೋಸಿಸ್ ಛೇರ್ಮನ್ ಆದ ಬಳಿಕ ಸಂಸ್ಥೆಯ ಯಾವ ನಿರ್ಧಾರದಲ್ಲೂ ನಾರಾಯಣಮೂರ್ತಿ ಶಾಮೀಲಾಗಿಲ್ಲ. ಈ ವಿಚಾರವನ್ನು ಮೂರ್ತಿಗಳು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ