AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದಿಂದ ಬಿಟ್ಟಿ ಸಂಬಳ; ಕೆಲಸ ಹೇಳೋರಿಲ್ಲ; ಹೆಚ್​ಆರ್​ಗೆ ಹೋದ್ರೆ ಕೆಲಸ ಹೋಗುತ್ತೆ, ಏನು ಮಾಡ್ಲಿ? ಉದ್ಯೋಗಿಯೊಬ್ಬನ ಸಂದಿಗ್ಧತೆ

ದೊಡ್ಡ ಕಂಪನಿಯೊಂದರಲ್ಲಿ ವರ್ಷದ ಹಿಂದೆ ಕೆಲಸಕ್ಕೆ ಸೇರಿದ ಯುವಕನೊಬ್ಬ ತನಗೆ ಬಿಟ್ಟಿ ಸಂಬಳ ಬರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾನೆ. ಕೆಲಸ ಸೇರಿದ ಹೊಸದರಲ್ಲೇ ಮ್ಯಾನೇಜರ್ ಕೆಲಸ ಕಳೆದುಕೊಂಡರು. ಮತ್ಯಾವ ಮ್ಯಾನೇಜರ್ ಅಸೈನ್ ಆಗಿಲ್ಲ. ಆಫೀಸಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಎಚ್​ಆರ್​ಗೆ ತಿಳಿಸಿದ್ರೆ ಕೆಲಸ ಹೋಗುತ್ತೆ ಅನ್ನೋ ಭಯ. ಏನು ಮಾಡ್ಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಈತ ಕೇಳುತ್ತಿದ್ದಾನೆ.

ವರ್ಷದಿಂದ ಬಿಟ್ಟಿ ಸಂಬಳ; ಕೆಲಸ ಹೇಳೋರಿಲ್ಲ; ಹೆಚ್​ಆರ್​ಗೆ ಹೋದ್ರೆ ಕೆಲಸ ಹೋಗುತ್ತೆ, ಏನು ಮಾಡ್ಲಿ? ಉದ್ಯೋಗಿಯೊಬ್ಬನ ಸಂದಿಗ್ಧತೆ
ಸಾಂದರ್ಭಿಕ ಚಿತ್ರImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 18, 2026 | 7:49 PM

Share

ಐಟಿ ಕಂಪನಿಗಳಲ್ಲಿ ಬೆಂಚ್ ಸಿಟ್ಟರ್ಸ್ ಇರ್ತಾರೆ, ಇವರಿಗೆ ಯಾವ ಪ್ರಾಜೆಕ್ಟ್ ಕೂಡ ಅಸೈನ್ ಆಗಿರೋದಿಲ್ಲ. ಅವರು ವೇಟಿಂಗ್ ಲಿಸ್ಟ್​ನಂತೆ ಕಾಯುತ್ತಿರಬೇಕಾಗುತ್ತದೆ. ಅವರು ಬೆಂಚ್ ಸಿಟ್ಟರ್ಸ್ ಎಂಬುದು ಮ್ಯಾನೇಜರ್​ನಿಂದ ಹಿಡಿದು ಎಚ್​ಆರ್​ವರೆಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಉದ್ಯೋಗಿಯೊಬ್ಬರು ವಿಚಿತ್ರ ಅನುಭವ ಹಂಚಿಕೊಂಡಿದ್ದಾರೆ. ಇವರು ಕೆಲಸಕ್ಕೆ ಸೇರಿ ಒಂದು ವರ್ಷ ಆಗಿದೆ. ಆದರೆ, ಕೆಲಸ ಹೇಳೋರಿಲ್ಲ, ಕೇಳೋರಿಲ್ಲ. ಸಂಬಳ ಮಾತ್ರ ತಪ್ಪಿಲ್ಲ. ಮುಂದೇನು ಮಾಡ್ಲಿ ಅನ್ನೋ ವ್ಯಥೆ ಈತನದು.

ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಮ್ಯಾನೇಜರ್ ಔಟ್

ರೆಡ್ಡಿಟ್​ನಲ್ಲಿ ಈ ವ್ಯಕ್ತಿ ಹಾಕಿದ ಪೋಸ್ಟ್​ನ ಹೆಡ್​ಲೈನ್ ಹೀಗಿದೆ: ‘ನನ್ನನ್ನೇ ಮರೆತುಬಿಟ್ಟ ಕಂಪನಿ’. ಈತ ದೊಡ್ಡ ಕಂಪನಿಯೊಂದರಲ್ಲಿ ಸರ್ವಿಸ್​ನೌ ಡೆವಲಪರ್ ಆಗಿ ವರ್ಷದ ಹಿಂದೆ ಕೆಲಸಕ್ಕೆ ಸೇರಿರುತ್ತಾನೆ. ನಿಗದಿತ ತರಬೇತಿ ಪಡೆಯುವಂತೆ ಆತನ ಮ್ಯಾನೇಜರ್ ತಿಳಿಸಿರುತ್ತಾರೆ. ಬೇರೆ ಟೀಮ್ ಸದಸ್ಯರಿಗೂ ಪರಿಚಯಿಸಿರುವುದಿಲ್ಲ. ಇದಾಗಿ ಒಂದೆರಡು ವಾರದಲ್ಲಿ ಮ್ಯಾನೇಜರ್ ಕೆಲಸ ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ: ಶ್ರೀಮಂತ ದೇಶಗಳ ವಿಪರೀತ ಸಾಲ, ಬಡ ರಾಷ್ಟ್ರಗಳ ಕುತ್ತಿಗೆ ಬಿಗಿ; ಬಡ್ಡಿ ಕಟ್ಟಲೇ ಹೆಚ್ಚಿನ ಹಣ ವ್ಯಯಿಸುತ್ತಿರುವ ಅಭಿವೃದ್ಧಿಶೀಲ ದೇಶಗಳು

ತನಗೆ ಬೇರೆ ಮ್ಯಾನೇಜರ್ ನಿಗದಿ ಮಾಡಬಹುದು ಎಂದು ಈ ಉದ್ಯೋಗಿ ಸುಮ್ಮನಾಗಿದ್ದಾನೆ. ಎಷ್ಟು ದಿನಗಳಾದರೂ ಯಾರೂ ಹೇಳೋರಿಲ್ಲ, ಕೇಳೋರಿಲ್ಲ. ಆಫೀಸ್​ಗೆ ಬರುವುದು, ಕಂಪ್ಯೂಟರ್ ಓಪನ್ ಮಾಡಿ ಬ್ರೌಸಿಂಗ್ ಮಾಡುತ್ತಾ ಕಾಲ ವ್ಯಯ ಮಾಡುವುದು, ಇದೇ ಈತನ ನಿತ್ಯದ ಕರ್ಮವಾಗಿತ್ತು.

ಕೊನೆಗೆ, ತನ್ನ ಹಿಂದಿನ ಮ್ಯಾನೇಜರ್​ನ ಡೈರೆಕ್ಟರ್ ಅನ್ನು ಈತ ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದ್ದಾನೆ. ಈತನಿಗೆ ಕೆಲಸ ಹೇಳುವಂತೆ ಒಬ್ಬರನ್ನು ಅಸೈನ್ ಮಾಡುತ್ತೀನಿ ಎಂದು ಆ ನಿರ್ದೇಶಕಿ ಹೇಳಿ ತಿಂಗಳುಗಳಾದರ ಯಾರೂ ಈತನ ಬಳಿ ಬಂದು ಮಾತಾಡಲಿಲ್ಲ.

ಎಚ್​ಆರ್​ಗೆ ತಿಳಿಸಿದರೆ ಕೆಲಸ ಹೋದೀತೆಂಬ…

ಈ ವಿಷಯವನ್ನು ಎಚ್​ಆರ್ ವಿಭಾಗಕ್ಕೆ ತಿಳಿಸಿದರೆ ಕೆಲಸ ಹೋಗುತ್ತದೆ ಎನ್ನುವ ಭಯ ಈ ಉದ್ಯೋಗಿಯದ್ದು. ಆದರೂ ಕೂಡ ಕೆಲಸವನ್ನೇ ಮಾಡದೆ ಬಿಟ್ಟಿಯಾಗಿ ಸಂಬಳ ಬರುತ್ತಿದೆ. ಆದರೆ, ನೈಜ ಕೆಲಸದ ಅನುಭವವೇ ಸಿಗುತ್ತಿಲ್ಲ. ಎಚ್​ಆರ್​ಗೆ ತಿಳಿಸಿದರೆ ಕೆಲಸ ಹೋಗುತ್ತದೆ. ತಾನೇ ಕೆಲಸ ಬಿಟ್ಟರೆ ಇಷ್ಟು ದಿನ ಕೆಲಸ ಮಾಡಿದ್ದಕ್ಕೆ ನೈಜ ಅನುಭವ ಇಲ್ಲವಾಗುತ್ತದೆ, ಅಥವಾ ಯಾರ ರೆಫರೆನ್ಸ್ ಕೂಡ ಇಲ್ಲದಂತಾಗುತ್ತದೆ.

ಇದನ್ನೂ ಓದಿ: ಎನ್​ವಿಡಿಯಾ ನನ್ನ ಜೀವಮಾನದ ಕಾರ್ಯ; ನಾನು ತಪ್ಪು ಮಾಡಿಬಿಟ್ಟೆ ಎಂದ ಜೆನ್ಸೆನ್ ಹುವಾಂಗ್; ವಾಪಸ್ ಕರೆಸಿಕೊಳ್ಳಲು ಕಂಪನಿ ಹಿಂದೇಟು

ಈ ಸಂದಿಗ್ಧತೆಯಲ್ಲಿರುವ ಉದ್ಯೋಗಿ, ಮುಂದೇನು ಮಾಡಲಿ ಎಂದು ರೆಡ್ಡಿಟ್ ಸಮುದಾಯದವರನ್ನು ಕೇಳಿದ್ದಾನೆ. ಬಹಳ ಜನರು, ಕಂಪನಿಯವರೇ ಕೆಲಸದಿಂದ ತೆಗೆದುಹಾಕುವ ಮೊದಲು ರಾಜೀನಾಮೆ ಕೊಟ್ಟು ಹೊರಬರುವಂತೆ ಸಲಹೆ ನೀಡಿದ್ದಾರೆ. ಇನ್ನೂ ಕೆಲವರು, ಅಲ್ಲಿದ್ದಷ್ಟು ದಿನ ಅಗತ್ಯ ಆನ್​ಲೈನ್ ಕೋರ್ಸ್​ಗಗಳ ಮೂಲಕ ಹೊಸ ಹೊಸ ಸ್ಕಿಲ್ಸ್ ಕಲಿತುಕೊಳ್ಳುವಂತೆ ಕಿವಿಮಾತು ತಿಳಿಸಿದ್ದಾರೆ. ಮತ್ತಷ್ಟು ಜನರು, ಬಿಟ್ಟಿ ಸಂಬಳ ಬರುವವರೆಗೂ ಮಾಡುತ್ತಾ ಇರಿ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
ಆಸಿಯಾ ಮೇಲೆ ಹಲ್ಲೆಗೆ ರೆಡಿಯಾದ ಸೌಂದರ್ಯಾ: ವಿಡಿಯೋ
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
‘ಆಯುಷ್’ ಸಿನಿಮಾ ವಿವಾದ, ಸಂಧಾನ ಸಭೆ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ಬಾಳಾಸಾಹೇಬ್ ಠಾಕ್ರೆ ಫೋಟೋ ಹರಿದ ಶಿವಸೇನೆ ನಾಯಕಿ; ಭುಗಿಲೆದ್ದ ವಿವಾದ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ದೇವರನ್ನು ಪೂಜಿಸಲ್ಲ,ಹಾಗಂತ ದೇವರಿಲ್ಲ ಅಂತಾ ಹೇಳಲ್ಲ ಎಂದ ಸಿದ್ದರಾಮಯ್ಯ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ತಾವೇ ಖುದ್ದಾಗಿ ತೆರಳಿ ಟ್ರಂಪ್​ಗೆ ಅದ್ದೂರಿ ಸ್ವಾಗತ ಕೋರಿದ ಚೀನಾ ಅಧ್ಯಕ್ಷ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಜಕ್ಕೂರು-ಯಲಹಂಕ ಜನರ ಕನಸು ನನಸು: ಜಕ್ಕೂರು ಫ್ಲೈಓವರ್ ಉದ್ಘಾಟಿಸಿದ ಸಿಎಂ
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಸಕ್ಕರೆ ಕಾರ್ಖಾನೆಗಳ ಜಿದ್ದಾಜಿದ್ದಿಯಲ್ಲಿ ಕಬ್ಬು ಬೆಳೆಗಾರರಿಗೆ ಬಂಪರ್
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ, ಭದ್ರತಾ ಪಡೆಗಳ ಶೌರ್ಯ ಕೊಂಡಾಡಿದ ಶಾ
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು