Gold Price Today: ಚಿನ್ನದ ದರ ಮತ್ತೆ ಇಳಿಕೆ, ಬೆಳ್ಳಿ ಬೆಲೆ ತುಸು ಹೆಚ್ಚಳ; ಇಲ್ಲಿದೆ ವಿವರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ದರ ಮತ್ತೆ ಇಳಿಕೆ, ಬೆಳ್ಳಿ ಬೆಲೆ ತುಸು ಹೆಚ್ಚಳ; ಇಲ್ಲಿದೆ ವಿವರ
ಚಿನ್ನದ ದರ (ಸಾಂದರ್ಭಿಕ ಚಿತ್ರ)

Updated on: Feb 15, 2023 | 5:00 AM

Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ  ಚಿನ್ನದ ದರ ಇಂದೂ ಇಳಿಕೆಯಾಗಿದೆ. ಆದರೆ, ಬೆಳ್ಳಿಯ ದರ ಮಾತ್ರ ತುಸು ಹೆಚ್ಚಾಗಿದೆ. ಕಳೆದ ಕೆಲವು ವಹಿವಾಟಿನ ಅವಧಿಯಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯಾಗಿತ್ತು. ಕಳೆದ ವಾರ ಒಟ್ಟಾರೆಯಾಗಿ ಏರಿಳಿತದ ವಹಿವಾಟು ದಾಖಲಾಗಿತ್ತು. ಇಂದು 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 100 ರೂ. ಇಳಿಕೆಯಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 70 ರೂ. ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 400 ರೂ. ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 100 ರೂ. ಇಳಿಕೆಯಾಗಿ 52,400 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 70 ರೂ. ಇಳಿಕೆಯಾಗಿ 57,160 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಏರಿಕೆಯಾಗಿ 70,400 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,300 ರೂ.
  • ಮುಂಬೈ- 52,400 ರೂ.
  • ದೆಹಲಿ- 52,550 ರೂ.
  • ಕೊಲ್ಕತ್ತಾ- 52,400 ರೂ.
  • ಬೆಂಗಳೂರು- 52,450 ರೂ.
  • ಹೈದರಾಬಾದ್- 52,400 ರೂ.
  • ಕೇರಳ- 52,400 ರೂ.
  • ಪುಣೆ- 52,400 ರೂ.
  • ಮಂಗಳೂರು- 52,450 ರೂ.
  • ಮೈಸೂರು- 52,450 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 58,140 ರೂ.
  • ಮುಂಬೈ- 57,160 ರೂ.
  • ದೆಹಲಿ- 57,310 ರೂ.
  • ಕೊಲ್ಕತ್ತಾ- 57,240 ರೂ.
  • ಬೆಂಗಳೂರು- 57,210 ರೂ.
  • ಹೈದರಾಬಾದ್- 57,240 ರೂ.
  • ಕೇರಳ- 57,240 ರೂ.
  • ಪುಣೆ- 57,160 ರೂ.
  • ಮಂಗಳೂರು- 57,210 ರೂ.
  • ಮೈಸೂರು- 57,210 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 72,500 ರೂ.
  • ಮೈಸೂರು- 72,500 ರೂ.
  • ಮಂಗಳೂರು- 72,500 ರೂ.
  • ಮುಂಬೈ- 70,400 ರೂ.
  • ಚೆನ್ನೈ- 72,500 ರೂ.
  • ದೆಹಲಿ- 70,400 ರೂ.
  • ಹೈದರಾಬಾದ್- 72,500 ರೂ.
  • ಕೊಲ್ಕತ್ತಾ- 70,400 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us