Gold Price Today: ಚಿನ್ನದ ಬೆಲೆಯಲ್ಲಿ ಇಂದು ಗಣನೀಯ ಹೆಚ್ಚಳ; ಬೆಳ್ಳಿ ಬೆಲೆ 1,000 ರೂ. ಏರಿಕೆ

Silver Price Hike: ಬೆಳ್ಳಿ ಬೆಲೆಯಲ್ಲಿ ಇಂದು 1,000 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 61,000 ರೂ. ಇದ್ದುದು ಇಂದು 62,000 ರೂ. ಆಗಿದೆ. ಚಿನ್ನದ ದರ 650 ರೂ. ಏರಿಕೆಯಾಗಿದೆ.

Gold Price Today: ಚಿನ್ನದ ಬೆಲೆಯಲ್ಲಿ ಇಂದು ಗಣನೀಯ ಹೆಚ್ಚಳ; ಬೆಳ್ಳಿ ಬೆಲೆ 1,000 ರೂ. ಏರಿಕೆ
ಚಿನ್ನದ ಬೆಲೆ
Image Credit source: Business Standard
Edited By:

Updated on: Jun 12, 2022 | 5:49 AM

ಬೆಂಗಳೂರು: ಭಾರತದಲ್ಲಿ ನಿನ್ನೆ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. ಇಂದು ಮತ್ತೆ ಚಿನ್ನದ ದರ 650 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 1,000 ರೂ. ಏರಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇದ್ದುದು 48,350 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,100 ರೂ. ಇದ್ದುದು 52,750 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,420 ರೂ. ಮುಂಬೈ- 48,350 ರೂ, ದೆಹಲಿ- 48,350 ರೂ, ಕೊಲ್ಕತ್ತಾ- 48,350 ರೂ, ಬೆಂಗಳೂರು- 48,350 ರೂ, ಹೈದರಾಬಾದ್- 48,350 ರೂ, ಕೇರಳ- 48,350 ರೂ, ಪುಣೆ- 48,400 ರೂ, ಮಂಗಳೂರು- 48,350 ರೂ, ಮೈಸೂರು- 48,350 ರೂ. ಇದೆ. (Source)

ಇದನ್ನೂ ಓದಿ: Gold Price Today: ಬೆಂಗಳೂರು, ಮುಂಬೈ ಸೇರಿ ಹಲವೆಡೆ ಚಿನ್ನದ ಬೆಲೆ 110 ರೂ. ಏರಿಕೆ; ಬೆಳ್ಳಿ ದರವೂ ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,820 ರೂ, ಮುಂಬೈ- 52,750 ರೂ, ದೆಹಲಿ- 52,750 ರೂ, ಕೊಲ್ಕತ್ತಾ- 52,750 ರೂ, ಬೆಂಗಳೂರು- 52,750 ರೂ, ಹೈದರಾಬಾದ್- 52,750 ರೂ, ಕೇರಳ- 52,750 ರೂ, ಪುಣೆ- 52,800 ರೂ, ಮಂಗಳೂರು- 52,750 ರೂ, ಮೈಸೂರು- 52,750 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ಇಂದು 1,000 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 61,000 ರೂ. ಇದ್ದುದು ಇಂದು 62,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,000 ರೂ, ಮೈಸೂರು- 67,000 ರೂ., ಮಂಗಳೂರು- 67,000 ರೂ., ಮುಂಬೈ- 62,000 ರೂ, ಚೆನ್ನೈ- 67,000 ರೂ, ದೆಹಲಿ- 62,000 ರೂ, ಹೈದರಾಬಾದ್- 67,000 ರೂ, ಕೊಲ್ಕತ್ತಾ- 62,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us