Gold Price Today: ಇಂದು ಮತ್ತೆ ಚಿನ್ನದ ಬೆಲೆ ಕೊಂಚ ಏರಿಕೆ; ಬೆಳ್ಳಿ ದರ 700 ರೂ. ಹೆಚ್ಚಳ

Silver Price Today: ಭಾರತದಲ್ಲಿ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 51,330 ರೂ. ಇದ್ದುದು 51,430 ರೂ. ಆಗಿದೆ. ಇಂದು ಬೆಳ್ಳಿ ದರ 700 ರೂ. ಏರಿಕೆಯಾಗಿದೆ.

Gold Price Today: ಇಂದು ಮತ್ತೆ ಚಿನ್ನದ ಬೆಲೆ ಕೊಂಚ ಏರಿಕೆ; ಬೆಳ್ಳಿ ದರ 700 ರೂ. ಹೆಚ್ಚಳ
ಚಿನ್ನದ ಬೆಲೆ
Edited By:

Updated on: May 24, 2022 | 5:44 AM

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ (Gold Rate)ಯಲ್ಲಿ ದಿನವೂ ಕೊಂಚ ಏರಿಕೆಯಾಗುತ್ತಿದೆ. ಇಂದು ಚಿನ್ನದ ಬೆಲೆ 10 ಗ್ರಾಂಗೆ 100 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಕೂಡ ಕೊಂಚ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 700 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,050 ರೂ. ಇದ್ದುದು 47,150 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,330 ರೂ. ಇದ್ದುದು 51,430 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,370 ರೂ. ಮುಂಬೈ- 47,150 ರೂ, ದೆಹಲಿ- 47,150 ರೂ, ಕೊಲ್ಕತ್ತಾ- 47,150 ರೂ, ಬೆಂಗಳೂರು- 47,150 ರೂ, ಹೈದರಾಬಾದ್- 47,150 ರೂ, ಕೇರಳ- 47,150 ರೂ, ಪುಣೆ- 47,250 ರೂ, ಮಂಗಳೂರು- 47,150 ರೂ, ಮೈಸೂರು- 47,150 ರೂ. ಇದೆ. (Source)

ಇದನ್ನೂ ಓದಿ: Tax On Gold: ಅಟ್ಟ ಏರಿ ಕುಳಿತಿದ್ದ ಚಿನ್ನದ ಬೆಲೆಯಲ್ಲಿ ಒಂದಿಷ್ಟು ಇಳಿಕೆ; ಮನೆಯಲ್ಲಿರುವ ಚಿನ್ನಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,760 ರೂ, ಮುಂಬೈ- 51,430 ರೂ, ದೆಹಲಿ- 51,430 ರೂ, ಕೊಲ್ಕತ್ತಾ- 51,430 ರೂ, ಬೆಂಗಳೂರು- 51,430 ರೂ, ಹೈದರಾಬಾದ್- 51,430 ರೂ, ಕೇರಳ- 51,430 ರೂ, ಪುಣೆ- 51,480 ರೂ, ಮಂಗಳೂರು- 51,430 ರೂ, ಮೈಸೂರು- 51,430 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆ ಇಂದು ಮತ್ತೆ ಏರಿಕೆ ಕಂಡಿದೆ. ಇಂದು ಬೆಳ್ಳಿ ದರ 700 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 61,400 ರೂ. ಇದ್ದುದು ಇಂದು 62,100 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,500 ರೂ, ಮೈಸೂರು- 66,500 ರೂ., ಮಂಗಳೂರು- 66,500 ರೂ., ಮುಂಬೈ- 62,100 ರೂ, ಚೆನ್ನೈ- 66,500 ರೂ, ದೆಹಲಿ- 62,100 ರೂ, ಹೈದರಾಬಾದ್- 66,500 ರೂ, ಕೊಲ್ಕತ್ತಾ- 62,100 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us