Tax On Gold: ಅಟ್ಟ ಏರಿ ಕುಳಿತಿದ್ದ ಚಿನ್ನದ ಬೆಲೆಯಲ್ಲಿ ಒಂದಿಷ್ಟು ಇಳಿಕೆ; ಮನೆಯಲ್ಲಿರುವ ಚಿನ್ನಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?

ಭಾರತದಲ್ಲಿ ಮನೆಗಳಲ್ಲಿ ಚಿನ್ನವನ್ನು ಎಷ್ಟು ಇಟ್ಟುಕೊಳ್ಳಬಹುದು? ಇಲ್ಲಿದೆ ಆ ಬಗೆಗಿನ ತೆರಿಗೆ ಲೆಕ್ಕಾಚಾರ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ.

Tax On Gold: ಅಟ್ಟ ಏರಿ ಕುಳಿತಿದ್ದ ಚಿನ್ನದ ಬೆಲೆಯಲ್ಲಿ ಒಂದಿಷ್ಟು ಇಳಿಕೆ; ಮನೆಯಲ್ಲಿರುವ ಚಿನ್ನಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 21, 2022 | 2:48 PM

2022ರ ಮಾರ್ಚ್​ನಲ್ಲಿ 19 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ ನಂತರ, ಚಿನ್ನದ ಬೆಲೆಗಳು ಇಳಿಕೆ ಕಂಡಿವೆ. ಅದಕ್ಕೆ ಕಾರಣ ಆಗಿದ್ದು ಏನು ಅಂತ ನೋಡಿದರೆ, ಅಮೆರಿಕ ಡಾಲರ್ (USD) 20 ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿ, ಭಾರತೀಯ ಕರೆನ್ಸಿ ರೂಪಾಯಿ (INR) ತನ್ನ ಜೀವಮಾನದ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಕಾಣುತ್ತದೆ. ಆದ್ದರಿಂದ ಚಿನ್ನದ ಬೆಲೆಗಳು ಕುಸಿದಿವೆ. ಇತ್ತೀಚಿಗೆ ಚಿನ್ನದ ಬೆಲೆ ಕುಸಿತವು ದೇಶೀಯ ಮಾರುಕಟ್ಟೆಯಲ್ಲಿ ಮತ್ತು ವಿದೇಶಗಳಲ್ಲಿ ಚಿನ್ನದ ಖರೀದಿಗೆ “ಗೂಳಿಗಳಲ್ಲಿ” (Bull) ಆಸಕ್ತಿಯನ್ನು ಸೃಷ್ಟಿಸಿದೆ. ಆದರೆ ದೇಶೀಯ ಮಾರುಕಟ್ಟೆ ಹೂಡಿಕೆದಾರರು, ಚಿನ್ನದ ಖರೀದಿದಾರರು ಅನುಸರಿಸಬೇಕಾದ ಕೇಂದ್ರೀಯ ನೇರ ತೆರಿಗೆಗಳ (CBDT) ಕೆಲವು ಮಾರ್ಗಸೂಚಿಗಳಿವೆ, ಅದನ್ನು ಅನುಸರಿಸಬೇಕು ಮತ್ತು ಆದಾಯ ತೆರಿಗೆ ನೋಟಿಸ್ ಬರುವುದನ್ನು ತಪ್ಪಿಸಬೇಕು.

ತೆರಿಗೆ ಮತ್ತು ಹೂಡಿಕೆ ತಜ್ಞರ ಪ್ರಕಾರ, ಭಾರತದಲ್ಲಿ ಒಬ್ಬರು ಹೊಂದಬಹುದಾದ ಚಿನ್ನಾಭರಣ ಅಥವಾ ಒಡವೆಗಳ ಪ್ರಮಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಏಕರೂಪವನ್ನು ಖಚಿತಪಡಿಸಿಕೊಳ್ಳಲು ಹಾಗೂ ವ್ಯಾಜ್ಯಗಳನ್ನು ತಪ್ಪಿಸಲು ನಿಗದಿತ ಪ್ರಮಾಣದ ಚಿನ್ನದ ಆಭರಣಗಳು ಮತ್ತು ಒಡವೆಗಳು ಇದ್ದಲ್ಲಿ ಅದನ್ನು ವಶಪಡಿಸಿಕೊಳ್ಳುವಂತೆ ಸಿಬಿಡಿಟಿ ತನ್ನ ನಿರ್ದೇಶನವನ್ನು ನೀಡಿದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ, ವಿವಾಹಿತ ಮಹಿಳೆಯು ಇನ್​ವಾಯ್ಸ್ ಇಲ್ಲದೆ 500 ಗ್ರಾಂ ಚಿನ್ನವನ್ನು ಹೊಂದಬಹುದು. ಆದರೆ ಅವಿವಾಹಿತ ಮಹಿಳೆ ಮತ್ತು ಪುರುಷರಿಗೆ ಈ ಮಿತಿಯು ಕ್ರಮವಾಗಿ 250 ಗ್ರಾಂ ಮತ್ತು 100 ಗ್ರಾಂ ಆಗಿರುತ್ತದೆ.

ಪುರುಷರು ಮತ್ತು ಮಹಿಳೆಯರಿಗೆ ಸಿಬಿಡಿಟಿ ನಿಗದಿತ ಮಿತಿಯ ಕುರಿತು ಮಾತನಾಡಿರುವ ತಜ್ಞರು, “ನಿರ್ದಿಷ್ಟ ಮಿತಿಗಳು ವಿವಾಹಿತ ಮಹಿಳೆಗೆ 500 ಗ್ರಾಂ ಚಿನ್ನಾಭರಣ/ಒಡವೆಗಳು ಮತ್ತು ಅವಿವಾಹಿತ ಮಹಿಳೆಯರಿಗೆ 250 ಗ್ರಾಂ. ಸಿಬಿಡಿಟಿ ನಿಯಮಗಳ ಪ್ರಕಾರ, ವಿವಾಹಿತ ಮತ್ತು ಅವಿವಾಹಿತ ಪುರುಷರು ಗರಿಷ್ಠ 100 ಗ್ರಾಂ ಚಿನ್ನಾಭರಣ ಹೊಂದಬಹುದು. ಅಲ್ಲದೆ, ಐಟಿ ಅಧಿಕಾರಿಗಳು ನಿಗದಿತ ಮಿತಿಯವರೆಗೆ ಚಿನ್ನಾಭರಣ ಮತ್ತು ಒಡವೆಗಳನ್ನು ವಶಪಡಿಸಿಕೊಳ್ಳುವಂತಿಲ್ಲ. ಒಂದು ಕುಟುಂಬದ ಆದಾಯ ಅಥವಾ ಸಮಾಜದಲ್ಲಿನ ಸ್ಥಾನಮಾನವು ಅಷ್ಟು ಚಿನ್ನಾಭರಣಗಳನ್ನು ಹೊಂದಲು ಸಮರ್ಥಿಸದಿದ್ದರೂ ಸಹ ಸಿಬಿಡಿಟಿ ಸೂಚನೆಯು ಒಂದು ಕುಟುಂಬದ ಒಡೆತನದ ಚಿನ್ನಾಭರಣಗಳ ಬಗೆಗಿನದನ್ನು ಒಳಗೊಂಡಿದೆ. ಐಟಿ ಅಧಿಕಾರಿಗಳು ಚಿನ್ನಾಭರಣಗಳನ್ನು ಪ್ರಮಾಣವನ್ನು ಲೆಕ್ಕಿಸದೆ ಕುಟುಂಬದ ಸದಸ್ಯರಲ್ಲದವರದನ್ನು ವಶಪಡಿಸಿಕೊಳ್ಳಬಹುದು.

ನಿಗದಿತ ಮಿತಿಗಿಂತ ಹೆಚ್ಚಿನ ಚಿನ್ನಾಭರಣವನ್ನು ಹೊಂದಿರುವವರು ಹೆಚ್ಚುವರಿ ಪ್ರಮಾಣದ ಖರೀದಿಯ ಮೂಲವನ್ನು ರುಜುವಾತುಪಡಿಸಿದರೆ ತೆರಿಗೆ ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ನೀವು ಚಿನ್ನದ ಆಭರಣಗಳನ್ನು ಆನುವಂಶಿಕವಾಗಿ ಪಡೆದಿದ್ದರೆ, ಮೃತ ವ್ಯಕ್ತಿಯ ಐಟಿಆರ್ ಮೂಲಕ ಬೆಂಬಲಿತವಾದ ವಿಲ್ ಮೂಲಕ ಪ್ರದರ್ಶಿಸಲಾದ ದಾಖಲಾತಿಯ ಸಾಕ್ಷ್ಯವನ್ನು ನೀವು ತೋರಿಸಬೇಕು. ”ಐಟಿ ಅಧಿಕಾರಿಗಳು ನಿಗದಿತ ಮಿತಿಯಲ್ಲಿ ಇರುವ ಒಬ್ಬರ ಚಿನ್ನಾಭರಣವನ್ನು ವಶಪಡಿಸಿಕೊಳ್ಳದಿದ್ದರೂ ಅವರು ಚಿನ್ನಾಭರಣದ ಪ್ರಮಾಣವನ್ನು ದಾಖಲಿಸುತ್ತಾರೆ. ಒಬ್ಬರು ಚಿನ್ನಾಭರಣದ ಖರೀದಿ ಮೂಲವನ್ನು ಬಹಿರಂಗಪಡಿಸಬೇಕು. ನೀವು ತೆರಿಗೆ ಪಾವತಿಸಿದ ಹಣದಲ್ಲಿ ಚಿನ್ನಾಭರಣವನ್ನು ಖರೀದಿಸಿದ್ದರೆ ಹಾಗೆ ಪಾವತಿಸಿದ ನಂತರ ನೀವು ಆಭರಣವನ್ನು ಖರೀದಿಸಿದ್ದೀರಿ ಎಂದು ಸಾಬೀತುಪಡಿಸಬೇಕು” ಎಂಬುದಾಗಿ ಸಲಹೆ ನೀಡಲಾಗುತ್ತದೆ.

ಚಿನ್ನ ಖರೀದಿದಾರರಿಗೆ ಇನ್‌ವಾಯ್ಸ್ ಇರಿಸಿಕೊಳ್ಳಲು ಸೂಚಿಸುವ ಎಸ್‌ಎಜಿ ಇನ್ಫೋಟೆಕ್‌ನ ಎಂಡಿ ಅಮಿತ್ ಗುಪ್ತಾ, “ಇನ್‌ವಾಯ್ಸ್ ಇಲ್ಲದ ಚಿನ್ನವನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132ರ ಅಡಿಯಲ್ಲಿ ಪ್ರಶ್ನಿಸಲು ಕೆಲವು ಮಿತಿಗಳಿವೆ. ಒಂದು ವೇಳೆ ಆ ಮಿತಿಯನ್ನು ಮೀರಿ ನೀವು ಚಿನ್ನವನ್ನು ಖರೀದಿಸಿದಲ್ಲಿ ಆದಾಯ ತೆರಿಗೆ ಇಲಾಖೆಯು ಸಹ ಪ್ರಶ್ನೆ ಮಾಡುತ್ತದೆ. ಆ ವರ್ಷಕ್ಕೆ ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವಾಗ ಆಸ್ತಿ ವಿವರಗಳಲ್ಲಿ ಅದರ ಬಗ್ಗೆ ನಮೂದಿಸಬೇಕು,” ಎನ್ನುತ್ತಾರೆ. ಸೆಬಿ ನೋಂದಾಯಿತ ತೆರಿಗೆ ಸಲ್ಯೂಷನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೇಳುವಂತೆ, ಇನ್‌ವಾಯ್ಸ್ ಇಲ್ಲದೆ ಅನಿಯಮಿತ ಪ್ರಮಾಣದ ಚಿನ್ನವನ್ನು ಹೊಂದಬಹುದು ಎಂಬ ನಂಬಿಕೆಯು ಭಾರತೀಯರಲ್ಲಿ ಇದ್ದುದರಿಂದಲೇ ಡಿಸೆಂಬರ್ 2016ರಲ್ಲಿ ಕಾನೂನನ್ನು ಮಾಡಲಾಗಿದೆ ಎಂದು ಸೇರಿಸಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಚಿನ್ನ ಎಂದರೆ ಚಿನ್ನದ ಆಭರಣಗಳು, ಚಿನ್ನದ ನಾಣ್ಯಗಳು, ಬಾರ್‌ಗಳು ಇತ್ಯಾದಿಗಳನ್ನು ಒಳಗೊಂಡಿರುವ ಎಲ್ಲ ರೀತಿಯ ಭೌತಿಕ ಚಿನ್ನ ಎಂದು ಅವರು ಹೇಳಿದ್ದಾರೆ.

ನೀಡಿರುವ ಮಿತಿಯನ್ನು ಮೀರಿ ಯಾರಾದರೂ ಇನ್‌ವಾಯ್ಸ್ ಇಲ್ಲದೆ ಚಿನ್ನವನ್ನು ಹೊಂದಿದ್ದರೆ ಆದಾಯ ತೆರಿಗೆ ಇಲಾಖೆಯಿಂದ ಪ್ರಶ್ನೆ ಮಾಡುವುದನ್ನು ಹೇಗೆ ತಪ್ಪಿಸುವುದು ಎಂಬುದರ ಕುರಿತು ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞ ಜಿತೇಂದ್ರ ಸೋಲಂಕಿ, “ಭಾರತದಲ್ಲಿ ಒಬ್ಬರು ಇನ್‌ವಾಯ್ಸ್ ಇಲ್ಲದೆ ಪೂರ್ವಜರಿಂದ ಚಿನ್ನವನ್ನು ಪಡೆಯುತ್ತಾರೆ. ಆದ್ದರಿಂದ ಎಷ್ಟು ಎಂದು ತಿಳಿಯುವುದು ನಿಮಗೆ ಮುಖ್ಯವಾಗಿದೆ. ಇನ್​ವಾಯ್ಸ್ ಇಲ್ಲದ ಚಿನ್ನವನ್ನು ಮನೆಯವರು ಹೊಂದಬಹುದು. ಮಿತಿ ತಿಳಿದಿರುವುದರಿಂದ ಪೂರ್ವಜರಿಂದ ಅಥವಾ ಯಾವುದೇ ಸಂಬಂಧಿಕರಿಂದ ಭೌತಿಕ ಚಿನ್ನವನ್ನು ಹೆಚ್ಚುವರಿಯಾಗಿ ಸೇರಿಸಿದ್ದರೆ ಐಟಿಆರ್ ಫೈಲಿಂಗ್ ಸಮಯದಲ್ಲಿ ನಿಮ್ಮ ಆಸ್ತಿ ವಿವರಗಳಲ್ಲಿ ಅದರ ಬಗ್ಗೆ ನಮೂದಿಸುವುದು ಸೂಕ್ತವಾಗಿದೆ,” ಎನ್ನುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Gold Loan: ಈ ಬ್ಯಾಂಕ್​ಗಳಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿ; ಸಾಲಕ್ಕೆ ಅಗತ್ಯ ದಾಖಲೆಗಳು ಮತ್ತಿತರ ವಿವರ ಇಲ್ಲಿದೆ

Published On - 2:47 pm, Sat, 21 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ