AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BUSINESS: ವ್ಯಾಪಾರೋದ್ಯಮ ಸದೃಢವಾಗಿ ನೆಲೆಯೂರಲು ಸಹಾಯಕವಾಗುವ ಟಿಪ್ಸ್ ಇಲ್ಲಿದೆ ನೋಡಿ

ಲಾಭದಾಯಕ ವಾಣಿಜ್ಯೋದ್ಯಮಿಗಳು ಯಶಸ್ವಿ ವ್ಯವಹಾರಗಳ ಬಗ್ಗೆ ಮತ್ತು ಅದನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಾಗೂ ಅದರಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡುತ್ತಾರೆ. ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ವ್ಯಾಪಾರದ ಯೋಜನೆಯನ್ನು ರಚಿಸುವುದು ಅವಶ್ಯಕ.

BUSINESS: ವ್ಯಾಪಾರೋದ್ಯಮ ಸದೃಢವಾಗಿ ನೆಲೆಯೂರಲು ಸಹಾಯಕವಾಗುವ ಟಿಪ್ಸ್ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
TV9 Web
| Edited By: Rakesh Nayak Manchi|

Updated on: May 21, 2022 | 12:16 PM

Share

ವ್ಯಾಪಾರ (Business), ವಾಣಿಜ್ಯೋದ್ಯಮ (Entrepreneurship) ಸದೃಢವಾಗಿ ದೀರ್ಘಾವಧಿವರೆಗೆ ನೆಲೆಯೂರಬೇಕಾದರೆ ಒಂದಷ್ಟು ಯೋಜನಾ (Planning) ಕಾರ್ಯಗನ್ನು ಮಾಡಬೇಕಾಗುತ್ತದೆ. ಲಾಭದಾಯಕ ವಾಣಿಜ್ಯೋದ್ಯಮಿಗಳು ಯಶಸ್ವಿ ವ್ಯವಹಾರಗಳ ಬಗ್ಗೆ ಮತ್ತು ಅದನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಾಗೂ ಅದರಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡುತ್ತಾರೆ. ನೀವು ಆರಂಭಿಸುವ ವ್ಯಾಪಾರ ಉದ್ಯಮವು ಭವಿಷ್ಯದಲ್ಲೂ ನೆಲೆಯೂರಬೇಕೆಂದರೆ, ಕೆಲವೊಂದು ಸಿಂಪಲ್ ಟಿಪ್ಸ್ (Tips)​ಗಳನ್ನು ಫಾಲೋ ಮಾಡಬೇಕಾಗುತ್ತದೆ. ಅವುಗಳು ಈ ಕೆಳಗಿನಂತಿವೆ.

  1. ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ವ್ಯಾಪಾರದ ಯೋಜನೆಯನ್ನು ರಚಿಸಬೇಕು. ಸಂಶೋಧನೆಯ ಪ್ರಕಾರ, ಕಾರ್ಯತಂತ್ರದ ಯೋಜನೆ ಪ್ರಕ್ರಿಯೆಯು ದೀರ್ಘಾವಧಿಯ ವ್ಯಾಪಾರಕ್ಕೆ ಫಲ ನೀಡುತ್ತದೆ. ಇಕ್ವಿಟಿ ಷೇರುದಾರರು ಕಂಪನಿಯ ಯೋಜನೆಯನ್ನು ಮಾಡುತ್ತಾರೆ ಮತ್ತು ಇತರೆ ನ್ಯೂನತೆಗಳನ್ನು ಹುಡುಕುತ್ತಾರೆ.
  2. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಲೆಕ್ಕಾಚಾರದ ಅಪಾಯಗಳನ್ನು ತೆಗೆದುಕೊಳ್ಳುವುದು. ವ್ಯಾಪಾರದಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಪ್ರತಿಯೊಂದು ಸಂಸ್ಥೆಯು ವೈಫಲ್ಯದ ಅಪಾಯವನ್ನು ಎದುರಿಸುತ್ತಿದೆ. ವ್ಯಾಪಾರವನ್ನು ಸ್ಥಾಪಿಸುವ ಮತ್ತು ಪ್ರಾರಂಭಿಸುವ ಪ್ರಯತ್ನದಲ್ಲಿ ಅನೇಕ ಉದ್ಯಮಿಗಳು ಎಡವುತ್ತಾರೆ. ಯಾವುದೇ ಖಾತರಿಯ ಫಲಿತಾಂಶವಿಲ್ಲದ ಹಣವು ಈ ಅಪಾಯಕ್ಕೆ ತಳ್ಳಬಹುದು. ಸೋಲು ಸೋಲನ್ನು ಸೂಚಿಸುವುದಿಲ್ಲ. ಅದು ತಿದ್ದಿಕೊಳ್ಳಬೇಕಾದದ್ದನ್ನು ತೋರಿಸಿಕೊಡುತ್ತದೆ. ಹೊಂದಾಣಿಕೆಗಳನ್ನು ಮಾಡುವುದು ಮತ್ತು ತಪ್ಪುಗಳಿಂದ ಕಲಿಯುವುದು ಮುಂದಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಾವಧಿಯ ಸಾಧನೆಗೆ ಕಾರಣವಾಗಬಹುದು.
  3. ಒಬ್ಬ ಉದ್ಯಮಿಗೆ ಹಣಕಾಸಿನ ವಿವೇಕ ಇರಬೇಕು. ಅದನ್ನು ಹೇಗೆ ಕಾಪಾಡಬೇಕು ಎಂದು ತಿಳಿದಿರಬೇಕು. ಇಲ್ಲದಿದ್ದರೆ ಹಣಕಾಸಿನ ಅಭಾವ ಎದುರಾಗಿ ಸಂಪನ್ಮೂಲಗಳ ಕೊರತೆ ಉಂಟಾಗಿ ವ್ಯಾಪಾರವು ನೆಲಕಚ್ಚಬಹುದು.  ತಮ್ಮ ಕಂಪನಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇರಿಸಿಕೊಳ್ಳಲು ಹಣಕಾಸಿನ ವಿವೇಕವು ಅನುವು ಮಾಡಿಕೊಡುತ್ತದೆ. ಅಲ್ಲದೆ, ಅನಿರೀಕ್ಷಿತ ಅವಕಾಶಗಳು ಅಥವಾ ವಿಪತ್ತುಗಳಿಗೆ ಹಣವನ್ನು ಉಳಿತಾಯ ಮಾಡಲು ಸಹಕಾರಿಯಾಗಲಿದೆ.
  4. ಒಬ್ಬ ವಾಣಿಜ್ಯ ಉದ್ಯಮಿಗೆ ಮಾರ್ಗದರ್ಶನ ಅವಶ್ಯಕವಾಗಿದೆ. ಫೋರ್ಬ್ಸ್ ಅಧ್ಯಯನದ ಪ್ರಕಾರ, ಪೋಲ್ ಮಾಡಿದ 90% ಕ್ಕಿಂತ ಹೆಚ್ಚು ಸಣ್ಣ ವ್ಯಾಪಾರ ಮಾಲೀಕರು ತಮ್ಮ ಕಂಪನಿಯ ಬೆಳವಣಿಗೆ ಮತ್ತು ಬದುಕುಳಿಯುವಿಕೆಯ ಮೇಲೆ ಮಾರ್ಗದರ್ಶಕರು ಗಂಭೀರ ಪ್ರಭಾವವನ್ನು ಹೊಂದಿದ್ದಾರೆ. ಅವರು ತಮ್ಮ ಅನುಭವಗಳ ಆಧಾರದ ಮೇಲೆ ವಸ್ತುನಿಷ್ಠ ಹೊರಗಿನ ಒಳನೋಟಗಳನ್ನು ನೀಡಬಹುದು. ಮಾರ್ಗದರ್ಶಕರನ್ನು ಹುಡುಕಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದು ದೀರ್ಘಾವಧಿಯಲ್ಲಿ ಲಾಭಾಂಶವನ್ನು ನೀಡಬಹದು.

ಇದನ್ನೂ ಓದಿ: ವಾಣಿಜ್ಯ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ

ಇದನ್ನೂ ಓದಿ: ಯುಟರ್ನ್ ಹೊಡೆದ ಸರ್ಕಾರ; ಮತ್ತೆ ಭಗತ್ ಸಿಂಗ್ ಪಠ್ಯ ಸೇರಿಸಲು ಮುಂದಾದ ಶಿಕ್ಷಣ ಇಲಾಖೆ

ಇದನ್ನೂ ಓದಿ:ನೀವು ಹೊಸದಾಗಿ ಉದ್ಯಮ ಆರಂಭಿಸಬೇಕೆಂದಿದ್ದೀರಾ? ಹಾಗಿದ್ದರೆ ತಪ್ಪದೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

ಇದನ್ನೂ ಓದಿ: Savings Money: ಏರುಮುಖವಾಗಿ ಸಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ: ಹಣದುಬ್ಬರದ ಪರಿಸ್ಥಿತಿಯಲ್ಲಿ ಉಳಿತಾಯ ಮಾಡಲು ಇಲ್ಲಿದೆ ಟಿಪ್ಸ್​

ಮತ್ತಷ್ಟು ಸಿದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ