ನೀವು ಹೊಸದಾಗಿ ಉದ್ಯಮ ಆರಂಭಿಸಬೇಕೆಂದಿದ್ದೀರಾ? ಹಾಗಿದ್ದರೆ ತಪ್ಪದೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ

ಯಾವುದೇ ಒಂದು ಸ್ವಂತ ಉದ್ಯಮ ಆರಂಭಿಸಬೇಕೆಂದರೆ ಅದಕ್ಕೆ ನಾವು ಮೊದಲೇ ಸಿದ್ಧರಾಗಿರಬೇಕು ಹಾಗೂ ಅನುಭವವನ್ನು ಹೊಂದಿರಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಬರಲು ಸಾಧ್ಯ.

ನೀವು ಹೊಸದಾಗಿ ಉದ್ಯಮ ಆರಂಭಿಸಬೇಕೆಂದಿದ್ದೀರಾ? ಹಾಗಿದ್ದರೆ ತಪ್ಪದೆ ಈ ಟಿಪ್ಸ್​ಗಳನ್ನು ಫಾಲೋ ಮಾಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:May 16, 2022 | 12:13 PM

ಇತ್ತೀಚಿನ ದಿನಗಳಲ್ಲಿ ಸ್ವಂತ ಉದ್ಯಮ(Business) ಆರಂಭಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೆ ಬೇಕಾದ ಒಂದಷ್ಟು ಪೂರ್ವತಯಾರಿ(pre-prepare)ಗಳನ್ನು ನಡೆಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಯಾವುದೇ ತಯಾರಿ(Preparation)ಗಳು ಇಲ್ಲದೆ ವ್ಯಾಪಾರ ಆರಂಭಿಸಿದರೆ ಕೈ ಸುಟ್ಟುಕೊಳ್ಳಬೇಕಾದಿತು. ನಾವು ನಿಮಗೆ ಈ ಸುದ್ದಿಯಲ್ಲಿ ನೀಡುವ ಒಂದಷ್ಟು ಸಲಹೆಗಳನ್ನು ನೀಡುತ್ತೇವೆ. ನೀವು ಆರಂಭಿಸುವ ಹೊಸ ಉದ್ಯಮಕ್ಕೆ ಇದು ಸಹಕಾರಿಯಾಗಬಹುದು. ಹೀಗಾಗಿ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಹೊಸದಾಗಿ ವ್ಯಾಪಾರವನ್ನು ಆರಂಭಿಸುವವರಿಗೆ ಈ ಕೆಳಗೆ ನೀಡಿದ ಒಂದಷ್ಟು ಸಲಹೆಗಳು ನಿಮಗೆ ಮಹತ್ವದ್ದಾಗಿರುತ್ತದೆ. ಇವುಗಳನ್ನು ಅನುಸರಿಸಿಕೊಂಡು ವ್ಯಾಪಾರವನ್ನು ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಮುನ್ನುಗ್ಗಿ.

  1. ತಾನು ಒಂದು ಉದ್ಯಮ ಆರಂಭಿಸಬೇಕು ಎಂದು ಅಂದೊಕೊಂಡರೆ ಸಾಲದು, ಯಾವ ಉದ್ಯಮ ಆರಂಭಿಸಿದರೆ ಲಾಭಗಳಿಸುವುದರ ಜೊತೆಗೆ ಆ ಉದ್ಯಮವನ್ನು ದೀರ್ಘಾವಧಿವರೆಗೆ ಕೊಂಡೊಯ್ಯಬಹುದು ಎಂಬುದನ್ನು ಆಲೋಚಿಸಬೇಕಾಗುತ್ತದೆ. ಇದಕ್ಕಾಗಿ ನಾವು ಒಂದಷ್ಟು ವ್ಯಾಪಾರದ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ನಂತರವೇ ನಾವು ಯಾವ ಉದ್ಯಮ ಬೆಸ್ಟ್ ಎಂದು ಆಯ್ಕೆ ಮಾಡಬೇಕು. ಮಾತ್ರವಲ್ಲದೆ ಆ ಉದ್ಯಮದ ಬಗ್ಗೆ ಸಂಪೂರ್ಣ ರಿಸರ್ಚ್ ಮಾಡಬೇಕು.
  2. ಯಾವ ಉದ್ಯಮ ಆರಂಭಿಸಬೇಕು ಎಂದು ಆಯ್ಕೆ ಮಾಡಿಕೊಂಡ ನಂತರ ಮಾಡಬೇಕಾಗಿರುವ ಕೆಲಸ ಏನೆಂದರೆ, ಹಣದ ಸಂಗ್ರಹ. ಹೌದು, ಸಂಪೂರ್ಣ ಸಾಲ ಮಾಡಿ ವ್ಯಾಪಾರ ಅರಂಭಿಸಿದರೆ ಪ್ರಯೋಜನವಿಲ್ಲ. ನೀವು ಮೊದಲು ಉದ್ಯೋಗಿಯಾಗಿರಬೇಕು. ಅಂದರೆ, ವ್ಯಾಪಾರ ಆರಂಭಿಸಲು ನಿಮ್ಮ ಕೈಯಲ್ಲಿ ಸ್ವಲ್ಪ ಹಣ ಇರಬೇಕು. ನೀವು ಆಯ್ಕೆ ಮಾಡಿಕೊಂಡ ವ್ಯಾಪಾರ ಆರಂಭಕ್ಕೆ ಬೇಕಾದಷ್ಟು ಹಣ ಇದ್ದರೆ ಸಮಸ್ಯೆ ಇಲ್ಲ. ಆರಂಭಿಸಬಹುದು. ಆದರೆ, ಸಂಪೂರ್ಣ ಸಾಲ ಮಾಡಿ ಆರಂಭಿಸುವ ಬದಲು ಒಂದಷ್ಟು ಹಣ ಸಂಪಾದಿಸಿ ನಂತರ ವ್ಯಾಪಾರಕ್ಕೆ ವಿನಿಯೋಗಿಸಿ.
  3. ಮುಖ್ಯವಾಗಿ ಮಾಡಬೇಕಾಗಿರುವುದು ಏನೆಂದರೆ, ನಿಮ್ಮ ವ್ಯಾಪಾರವನ್ನು ನೋಂದಾಯಿಸುವ ಅವಶ್ಯಕತೆ ಇದೆಯೇ? ತೆರಿಗೆ ಕಟ್ಟಬೇಕೇ? ಕಾರ್ಮಿಕರ ಪರಿಹಾರ ವಿಮೆ ಹೊಂದಿರಬೇಕೇ? ಮತ್ತು ಇಂಥ ವಿವಿಧ ಕಾನೂನು ಹಾಗೂ ತೆರಿಗೆ ಜವಾಬ್ದಾರಿಗಳು ಏನು ಎಂದು ತಿಳಿದುಕೊಳ್ಳಬೇಕು.
  4. ಆರಂಭದಲ್ಲಿ ಒಬ್ಬನೇ ಉದ್ಯಮ ಆರಂಭಿಸುತ್ತೇನೆ ಎಂದು ಏಕಾಏಕಿ ವ್ಯಾಪಾರಕ್ಕೆ ಇಳಿಯಬೇಡಿ. ನಿಮ್ಮ ಕುಟುಂಬದ ಸದಸ್ಯರ ಸಹಾಯ ಪಡೆಯಿರಿ. ಇಲ್ಲವೇ ನಿಮ್ಮ ಸ್ನೇಹಿತರನ್ನು ಅಥವಾ ಇನ್ಯಾರೋ ಆರ್ಥಿಕತೆಯ ಬುಡ ಗಟ್ಟಿ ಇರುವ ವ್ಯಕ್ತಿಯ ಪರಿಚಯವಿದ್ದಲ್ಲಿ ಅವರ ಸಹಾಯ ಕೇಳಿರಿ. ಯಾವುದೇ ಕಾರಣಕ್ಕು ಆರಂಭದಲ್ಲಿ ಏಕಾಂಗಿಯಾಗಿ ವ್ಯಾಪಾರಕ್ಕೆ ಇಳಿಯಬೇಡಿ.
  5. ವ್ಯಾಪಾರವನ್ನು ಆರಂಭಿಸುವಾಗ ಒಂದಷ್ಟು ಮಂದಿ ವ್ಯಾಪಾರದ ಯೋಜನೆಯನ್ನು ಹಾಕಿರುವುದಿಲ್ಲ. ಹೀಗಾಗಿ ಅರ್ಧದಲ್ಲೇ ಕೈ ಸುಟ್ಟುಕೊಳ್ಳುತ್ತಾರೆ. ಹೀಗಾಗಿ ಉದ್ಯಮ ಆರಂಭಿಸುವಾಗ ವ್ಯಾಪಾರದ ಯೋಜನೆಯನ್ನು ಹಾಕಬೇಕು.
  6. ನೀವು ವ್ಯಾಪಾರ ಆರಂಭಿಸದರೆ ಸಾಲದು, ಅದರ ಬಗ್ಗೆ ಪ್ರಚಾರ ನಡೆಸುವುದು ಅವಶ್ಯಕ. ವೃತ್ತಿಪರರಿಗೆ, ಸಾರ್ವಜನಿಕರಿಗೆ ವ್ಯಾಪಾರ ಆರಂಭಿಸಿದ ಬಗ್ಗೆ ಮಾಹಿತಿ ನೀಡಿ. ಇದರ ಜೊತೆಗೆ ತಮ್ಮ ಶಾಪ್​ಗಳಿಗೆ ಗ್ರಾಹಕರನ್ನು ಸೆಳಯಬೇಕಾಗುತ್ತದೆ. ಇದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ನಡೆಸಬೇಕು. ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ, ನಿಮ್ಮ ಉದ್ಯಮ ಏರುಮುಖವಾಗಿ ಸಾಗುವುದರಲ್ಲಿ ಅನುಮಾನವಿಲ್ಲ.

Published On - 12:13 pm, Mon, 16 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ