ಕಾರು ಖರೀದಿಸುವ ವಿಚಾರದಲ್ಲಿ ಗೊಂದಲವೇ? ಖರೀದಿಗೂ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ

ಪ್ರಸ್ತುತ ಬಹು ಆಯ್ಕೆಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಕಾರು ಖರೀದಿಗೂ ಮುನ್ನ ಒಂದಷ್ಟು ಅಂಶಗಳನ್ನು ನಾವು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.

ಕಾರು ಖರೀದಿಸುವ ವಿಚಾರದಲ್ಲಿ ಗೊಂದಲವೇ? ಖರೀದಿಗೂ ಮುನ್ನ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
| Updated By: Rakesh Nayak Manchi

Updated on: May 16, 2022 | 1:14 PM

ಹೊಸತನ್ನು ಖರೀದಿಸುವುದು ಎಲ್ಲ ಆಶಯವಾಗಿರುತ್ತದೆ. ಅದರಲ್ಲಿ ಕಾರು(Car) ಖರೀದಿ ಕೂಡ ಒಂದು. ಪ್ರಸ್ತುತ ಜಗತ್ತಿನಲ್ಲಿ ನಾನಾ ರೀತಿಯ ಕಾರುಗಳು ಮಾರುಕಟ್ಟೆ(Market)ಗೆ ಲಗ್ಗೆ ಇಟ್ಟಿವೆ. ಖರೀದಿಸುವಾಗ ನಮ್ಮ ಕಣ್ಣ ಮುಂದೆ ಹಲವಾರು ಆಪ್ಶನ್(Option)​ಗಳು ಹರಿದುಹೋಗುತ್ತದೆ. ಈ ವೇಳೆ ಯಾವ ಕಾರು ಖರೀದಿಸಿದರೆ ಉತ್ತಮ ಎಂದು ನಮ್ಮನ್ನು ಗೊಂದಲಕ್ಕೀಡು ಮಾಡುವುದು ಸಹಜ. ಹಾಗಂತ ನೇರವಾಗಿ ಖರೀದಿ ಮಾಡಿದರೂ ಗೊಂದಲ ಏರ್ಪಡುತ್ತದೆ. ಹೀಗಿದ್ದಾಗ ನಾವು ಕಾರು ಖರೀದಿಗೂ ಮುನ್ನ ಒಂದಷ್ಟು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.

ಕಾರು ಖರೀದಿಸುವ ಮುನ್ನ ಫಾಲೋ ಮಾಡಬೇಕಿರುವ ಕೆಲವೊಂದು ಅಂಶಗಳು ಏನು ಎಂದು ಈ ಸುದ್ದಿಯಲ್ಲಿ ನೀಡಲಾಗಿದೆ. ಸಂಪೂರ್ಣವಾಗಿ ಓದಿ.

  • ಕಾರನ್ನು ಖರೀದಿಸುವ ಮುನ್ನ ನಾವು ಅದರ ಅವಶ್ಯಕತೆಗಳ ಬಗ್ಗೆ ತಿಳಿದುಕೊಳ್ಳಬೇಕು. ಅದರಂತೆ, ನಮ್ಮ ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂಬುದನ್ನು ನೋಡಬೇಕು. ಐದಾರು ಮಂದಿ ಇದ್ದರೆ ಅಷ್ಟು ಜನರು ಏಕಕಾಲದಲ್ಲಿ ಆರಾಮವಾಗಿ ಕುಳಿತುಕೊಂಡು ಹೋಗುವಷ್ಟು ಸೀಟುಗಳ ಕಾರು ಅವಶ್ಯಕತೆ ಇರುತ್ತದೆ. ಇದರ ಜೊತೆಗೆ ಈ ಕಾರು ನಿಮ್ಮ ಬಜೆಟ್​ಗೆ ಸೂಕ್ತವಾಗಿದೆಯಾ ಎಂದು ನೋಡಿಕೊಳ್ಳಬೇಕು. ಮನೆಯಲ್ಲಿ ಮೂವರಿದ್ದರೆ ಏಳೆಂಟು ಸೀಟಿನ ಕಾರನ್ನು ಖರೀದಿಸಬೇಡಿ. ಆಟೋ ಮೊಬೈಲ್ ತಜ್ಞ ಟುಟೂ ಧವನ್ ಹೇಳುವಂತೆ, ಬಜೆಟ್ ಮತ್ತು ನಿಮ್ಮ ಅವಶ್ಯಕತೆ ಎಂದಿಗೂ ಗಮನದಲ್ಲಿಸಿಕೊಳ್ಳಬೇಕು.
  • ಕಾರು ಖರೀದಿಸುವ ಮುನ್ನ ಸೂಕ್ತವಾದ ಬಜೆಟ್​ನೊಂದಿಗೆ ಮತ್ತೊಂದು ಮುಖ್ಯವಾದ ಅಂಶವನ್ನು ಗಮನಿಸಬೇಕು. ಏನೆಂದರೆ, ಕಾರು ನಿಲ್ಲಿಸಲು ಸೂಕ್ತವಾದ ಸ್ಥಳವಿದೆಯಾ? ಎಂದು. ಹಳ್ಳಿಯಲ್ಲಾದರೆ ಸಮಸ್ಯೆ ಇಲ್ಲ. ಸಿಟಿ ಜೀವನ ನಡೆಸುವವರಿಗೆ ಈ ಸಮಸ್ಯೆ ಇರುತ್ತದೆ. ಹೀಗಾಗಿ ವಾಸಿಸುವ ಸ್ಥಳ ಕಿರಿದಾಗಿದೆಯೇ, ಇಲ್ಲವೇ ಎಂಬುದನ್ನು ನೋಡಿಕೊಳ್ಳಬೇಕು.
  • ನೀವು ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತೀರಿ ಎಂದಾದರೆ ಮೈಲೇಜ್ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವುದು ಉತ್ತಮ. ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದ ಹಿನ್ನೆಲೆ ಈ ಅಂಶ ಅತೀ ಮುಖ್ಯವಾಗಿದೆ. ದೂರದ ಊರುಗಳಿಗೆ ಹೋಗುವುದಾದರೆ, ಎಸ್ ಯುವಿ ಕಾರು ಖರೀದಿಸುವ ಬಗ್ಗೆ ಯೋಚಿಸಬಹುದು.
  • ಸಾಲ ಮಾಡಿ ಕಾರು ಖರೀದಿಸುತ್ತೀರಿ ಎಂದಾದರೆ, ಇಎಂಐ ನಿಮ್ಮ ಸಾಲದ ಶೇ.10 ರಿಂದ 15ಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ. ಇದರ ಜೊತೆಗೆ ಆಫ್ಪರ್ ಸೇಲ್ ಸರ್ವಿಸ್, ಸ್ಪೇರ್ ಪಾರ್ಟ್ಸ್ ಲಭ್ಯತೆ ಮುಂತಾದ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ, ಕೊಂಡ ಕಾರನ್ನು ಭವಿಷ್ಯದಲ್ಲಿ ಮಾರುವುದಾದರೆ, ಯಾವ ಬೆಲೆಗೆ ಮಾರಾಟ ಮಾಡಬಹುದು ಎಂಬುದನ್ನು ಗಮನದಲ್ಲಿಡಬೇಕು.
  • ಇದರ ಹೊರತಾಗಿ, ಕಾರಿನ ಸೇಫ್ಟಿ ಫೀಚರ್ಸ್ ಕೂಡ ಮುಖ್ಯವಾಗಿರುತ್ತದೆ. ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಆಟೋ ಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮುಂತಾದ ಫೀಚರ್ಸ್ ಇದೆಯಾ ಎಂದು ತಿಳಿದುಕೊಳ್ಳಿ. ನಿಮಗೆ ಅಗತ್ಯವಿರುವ ಫೀಚರ್ಸ್ ಇದೆಯಾ ಎಂದು ನೋಡಿ. ಟ್ರಾಫಿಕ್ ಹಾಗೂ ಹೈವೆಯಲ್ಲಿ ಕಾರು ಹೇಗೆ ಚಲಿಸುತ್ತದೆ ಎಂದು ಟೆಸ್ಟ್ ಡ್ರೈವ್ ಮಾಡಿಕೊಳ್ಳಿ. ಕೊಂಡ ಕಾರಿಗೆ ಸಂಬಂಧಿಸಿದ ಗ್ಯಾರೇಜ್ ನಿಮ್ಮ ಊರಿನ ಅಕ್ಕಪಕ್ಕದಲ್ಲಿದೆಯಾ ನೋಡಿಕೊಳ್ಳಿ.