ಯುಟರ್ನ್ ಹೊಡೆದ ಸರ್ಕಾರ; ಮತ್ತೆ ಭಗತ್ ಸಿಂಗ್ ಪಠ್ಯ ಸೇರಿಸಲು ಮುಂದಾದ ಶಿಕ್ಷಣ ಇಲಾಖೆ
ಪರಿಷ್ಕೃತ ಪಠ್ಯದಲ್ಲಿ ಭಗತ್ ಸಿಂಗ್ ಪಾಠದ ಬದಲಾಗಿ ಶಿವನಾಂದ ಕಳೆವೆಯವರ ಸ್ವದೇಶಿ ಸೂತ್ರದ ಸರಳಹಬ್ಬ ಪಾಠ ಸೇರ್ಪಡೆಗೆ ಶಿಕ್ಷಣ ಇಲಾಖೆ ಮುಂದಾಗಿತ್ತು. ತೀವ್ರ ವಿರೋಧ ಹಿನ್ನಲೆ ಮತ್ತೆ ಭಗತ್ ಸಿಂಗ್ ಪಾಠ ಸೇರಿಸಲು ಮುಂದಾಗಿದೆ.
ಬೆಂಗಳೂರು: ಭಗತ್ ಸಿಂಗ್ (Bhagat Singh) ಪಾಠ ಕೈಬಿಟ್ಟ ವಿಚಾರದಲ್ಲಿ ಸರ್ಕಾರ (Karnataka Government) ಇದೀಗ ಯುಟರ್ನ್ ಹೊಡೆದಿದೆ. 10ನೇ ತರಗತಿ ಕನ್ನಡ ವಿಷಯದಲ್ಲಿದ್ದ ಭಗತ್ ಸಿಂಗ್ ಪಾಠವನ್ನು ತೆಗೆದು ಶಿವನಾಂದ ಕಳೆವೆಯವರ ಪಾಠವನ್ನು ಸೇರಿಸಲಾಗಿತ್ತು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿತ್ತು. ಜೊತೆಗೆ ಭಾರೀ ವಿರೊಧ ವ್ಯಕ್ತವಾಗುತ್ತಿತ್ತು. ಈ ಬೆನ್ನಲ್ಲೆ ಶಿಕ್ಷಣ ಇಲಾಖೆ ಮತ್ತೆ ಭಗತ್ ಸಿಂಗ್ ಪಠ್ಯ ಸೇರಿಸಲು ನಿರ್ಧರಿಸಿದೆ. ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕ ಸರಬರಾಜು ಮಾಡಲಾಗುತ್ತಿದೆ. ಭಗತ್ ಸಿಂಗ್ ಪಾಠ ಕೈಬಿಟ್ಟ ವಿಚಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ 10ನೇ ತರಗತಿ ಕನ್ನಡ ಪುಸ್ತಕ ಸರಬರಾಜಿಗೆ ತಡೆ ಹಿಡಿಯಲಾಗಿದೆ.
ಪರಿಷ್ಕೃತ ಪಠ್ಯದಲ್ಲಿ ಭಗತ್ ಸಿಂಗ್ ಪಾಠದ ಬದಲಾಗಿ ಶಿವನಾಂದ ಕಳೆವೆಯವರ ಸ್ವದೇಶಿ ಸೂತ್ರದ ಸರಳಹಬ್ಬ ಪಾಠ ಸೇರ್ಪಡೆಗೆ ಶಿಕ್ಷಣ ಇಲಾಖೆ ಮುಂದಾಗಿತ್ತು. ತೀವ್ರ ವಿರೋಧ ಹಿನ್ನಲೆ ಮತ್ತೆ ಭಗತ್ ಸಿಂಗ್ ಪಾಠ ಸೇರಿಸಲು ಮುಂದಾಗಿದೆ. ಈ ಹಿಂದೆ ಶಿಕ್ಷಣ ಸಚಿವರು ಶೇ 60 ರಷ್ಟು ಪಠ್ಯ ಮುದ್ರಣವಾಗಿದೆ. ಶಾಲೆಗಳಿಗೆ ಈಗಾಗಲೇ ಪಠ್ಯ ಪುಸ್ತಕ ಸರಬರಾಜು ಮಾಡಲಾಗುತ್ತಿದೆ ಅಂತಾ ಹೇಳಿದ್ದರು.
ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ತನ್ನನ್ನು ಮದುವೆಯಾಗಿ, ಮೋಸ ಮಾಡಿದ್ದಾರೆ- ಶಿವಮೊಗ್ಗ ಮಹಿಳೆ ದೂರು
ಶಿಕ್ಷಣ ಸಚಿವರು ಹೇಳಿದ್ದೇನು? ಹೆಡ್ಗೆವಾರ್ ಪಾಠ ಸೇರ್ಪಡೆ ಬಗ್ಗೆ ಸಮರ್ಥಿಸಿಕೊಂಡ ಶಿಕ್ಷಣ ಸಚಿವ ನಾಗೇಶ್, ಹೆಡ್ಗೆವಾರ ಪ್ರಂಚದಲ್ಲಿಯೇ ದೊಡ್ಡ ಸಂಘಟನೆ ಕಟ್ಟಿದವರು. ವೈಯ್ಯಕ್ತಿಕ ಜೀವನ ಲೆಕ್ಕಿಸದೆ ದೇಶಕ್ಕೆ ಕೆಲಸ ಮಾಡಿದವರು. ಕೆಲವರು ಓದದೆ ಮಾಹಿತಿ ಇಲ್ಲದೆ ಮಾತನಾಡ್ತಾರೆ. ಹೆಡ್ಗೆವಾರ್ ವಿರೋಧಿಸಿದರೆ ಸಾಬ್ರು ಓಟ್ ಹಾಕುತ್ತಾರೆ. ಸಾಬ್ರು ಓಟ್ ಹಾಕುತ್ತಾರೆ ಅಂತಾ ಕೆಲವರು ವಿರೋಧ ಮಾಡ್ತಾರೆ. ಹೆಡ್ಗೆವಾರ್ ದೇಶದ್ರೋಹಿ ಅನ್ನೊವರು ಎಳಕು ಅಂತಾ ಹೇಳ್ತೀನಿ. ಮೆಚ್ಯೂರ್ ಮೈಂಡ್ ಇಲ್ಲದವರು ಹೀಗೆ ಹೇಳ್ತಾರೆ. ನಾರಯಣ್ ಗೂರು, ಬಸವಣ್ಣ. ಹಾಗೂ ಭಗತ್ ಸಿಂಗ್ ಯಾರ ಪಾಠವನ್ನೂ ಕೈ ಬಿಡಲಾಗಿಲ್ಲ. ಕಳೆದ ಎರಡು ದಿನದಿಂದ ಕೆಲವರು ಸುಳ್ಳು ಸುದ್ದಿ ಹೇಳ್ತಾ ಇದ್ದಾರೆ. ಪಠ್ಯ ಪುಸ್ತಕ ಬಂದ ನಂತರ ಸತ್ಯ ಎಲ್ಲಾ ಗೊತ್ತಾಗುತ್ತದೆ ಎಂದು ತಿಳಿಸಿದರು.
ಈ ಹಿಂದೆ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮಾತನಾಡಿ, 10 ನೇ ತರಗತಿ ಪಠ್ಯ ಪುಸ್ತಕದಲ್ಲಿ ಈಗ ಆರ್ಎಸ್ಎಸ್(RSS) ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಿದ್ದೇವೆ. ಆದರ್ಶ ಪುರಷ ಯಾರಾಗಬೇಕು? ಏನೆಲ್ಲ ಗುಣ ಇರಬೇಕು? ಇದನ್ನೆಲ್ಲ ಮಕ್ಕಳು ಕಲಿಯಬೇಕು ಹೀಗಾಗಿ ಈ ಗದ್ಯ ಸೇರ್ಪಡೆ ಮಾಡಿದ್ದೇವೆ ಎಂದು ತಿಳಿಸಿದ್ದರು.
ಹೆಡ್ಗೆವಾರ್ ಭಾಷಣದ ಸಾರವನ್ನ ಗದ್ಯರೂಪದಲ್ಲಿ ಅಳವಡಿಸಿದ್ದೇವೆ ಅನ್ನೋ ಉದ್ದೇಶದಿಂದ ಈ ಗದ್ಯ ಪಾಠ ಸೇರ್ಪಡೆ ಮಾಡಿದ್ದೇವೆ. ಭಗತ್ ಸಿಂಗ್ ಪಾಠ ಕೈಬಿಟ್ಟುದ್ದು ನಿಜಾ. ಭಗತ್ ಸಿಂಗ್ ಪಠ್ಯ ಹೊರತಾಗಿ ಇದನ್ನು ಸೇರಿಸಿಲ್ಲ. ಭಗತ್ ಸಿಂಗ್ ಪಠ್ಯ ಪೂರಕ ಪಠ್ಯದಲ್ಲಿತ್ತು. ಭಗತ್ ಸಿಂಗ್ ಪಾಠ ಮುಖ್ಯ ಭಾಗದಲ್ಲಿ ಇರಲಿಲ್ಲ. ಭಗತ್ ಸಿಂಗ್ ಪಾಠ ತುಂಬಾ ಸಣ್ಣ ಪಾಠವಾಗಿತ್ತು. ಭಗತ್ ಸಿಂಗ್ ಪಾಠದಲ್ಲಿ ಹೆಚ್ಚಾಗಿ ಮಾಹಿತಿ ಇರಲಿಲ್ಲ. ಹೀಗಾಗಿ ಪುನರಾವರ್ತನೆ ಬೇಡಾ ಅಂತಾ ತೆಗೆದು ಹಾಕಲಾಗಿದೆ ಎಂದು ರೋಹಿತ್ ಚಕ್ರತೀರ್ಥ ಸ್ಪಷ್ಟಪಡಿಸಿದ್ದರು.
ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 am, Thu, 19 May 22