Karnataka SSLC Result 2022: A ಗ್ರೇಡ್ನಲ್ಲಿ 32, B ಗ್ರೇಡ್ನಲ್ಲಿ ಎರಡು ಜಿಲ್ಲೆಗಳು; 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
District Wise SSLC Result 2022: ಸುದ್ದಿಗೋಷ್ಟಿ ನಡೆಸಿ ವಿವರ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ರಾಜ್ಯದಲ್ಲಿ ಈ ಬಾರಿ ಸುಮಾರು 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಬೆಂಗಳೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ (SSLC Result) ಇಂದು (ಮೇ 19) ಪ್ರಕಟವಾಗಿದೆ. ಸುದ್ದಿಗೋಷ್ಟಿ ನಡೆಸಿ ವಿವರ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh), ರಾಜ್ಯದಲ್ಲಿ ಈ ಬಾರಿ ಸುಮಾರು 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಒಟ್ಟು 8,07,206 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7,30,881 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ. ಇದರಲ್ಲಿ ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಗಳ ನಡುವೆ ನಂಬರ್ 1, 2 ಕಾಂಪಿಟೇಷನ್ ಇಲ್ಲ. ಶಿಕ್ಷಣ ಇಲಾಖೆ ಗ್ರೇಡ್ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
A ಗ್ರೇಡ್ನಲ್ಲಿ 32 ಜಿಲ್ಲೆಗಳು , B ಗ್ರೇಡ್ನಲ್ಲಿ ಎರಡು ಜಿಲ್ಲೆಗಳಿವೆ. ಒಟ್ಟು 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಜೊತೆಗೆ ಈ ಬಾರಿ ಸುಮಾರು 145 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನ ಪಡೆದಿದ್ದಾರೆ. 309 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದಾರೆ. 623 ಅಂಕ 472 ಮಕ್ಕಳು, 622 ಅಂಕ 615 ಮಕ್ಕಳು, 621 ಅಂಕ 706 ಮಕ್ಕಳು, 620 ಅಂಕ 773 ಮಕ್ಕಳು ಪಡೆದಿದ್ದಾರೆ.
ಇದನ್ನೂ ಓದಿ: SSLC Result 2022 Topper: ಅಮಿತ್ ಮಾದರ್ ಸೇರಿ 145 ವಿದ್ಯಾರ್ಥಿಗಳು 2022ರ ಎಸ್ಎಸ್ಎಲ್ಸಿ ಟಾಪರ್ಸ್
4,41,099 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 3,58,602 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. 4,12,334 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 3,72,279 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ.
ಮೇ 27ರಿಂದ ಪೂರಕ ಪರೀಕ್ಷೆ: ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮೇ 27ರಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಯುತ್ತದೆ. ಮೇ 27ರಿಂದ ಜೂನ್ 4ರವರೆಗೆ ನಡೆಯುತ್ತದೆ. ಮೇ 20ರಿಂದ 30ರವರೆಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಇರುತ್ತದೆ.
ಇದನ್ನೂ ಓದಿ: Karnataka SSLC Result 2022: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: Karresults.nic.in ವೆಬ್ಸೈಟ್ನಲ್ಲಿ ಲಭ್ಯ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:12 pm, Thu, 19 May 22