Shreyas Iyer: ಟೂರ್ನಿಯಿಂದ ಹೊರಬಿದ್ದ ನೋವಲ್ಲಿ ಶ್ರೇಯಸ್ ಅಯ್ಯರ್ ಆಡಿದ ಮಾತುಗಳೇನು ಕೇಳಿ

KKR vs LSG: ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಈ ಸೋಲಿನಿಂದ ನಮಗೆ ಯಾವುದೇ ಬೆಸರವಾಗಿಲ್ಲ ಎಂದು ನೇರವಾಗಿ ನುಡಿದಿದ್ದಾರೆ.

Shreyas Iyer: ಟೂರ್ನಿಯಿಂದ ಹೊರಬಿದ್ದ ನೋವಲ್ಲಿ ಶ್ರೇಯಸ್ ಅಯ್ಯರ್ ಆಡಿದ ಮಾತುಗಳೇನು ಕೇಳಿ
Shreyas Iyer post match presentation
Follow us
TV9 Web
| Updated By: Vinay Bhat

Updated on:May 19, 2022 | 12:33 PM

ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಸೋಲುವ ಮೂಲಕ ಕೆಕೆಆರ್ (KKR vs LSG) ಪ್ಲೇ ಆಫ್ ರೇಸ್​ನಿಂದ ಹೊರಬಿತ್ತು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಸೋಲುಂಡಿತಾದರೂ ಎದುರಾಳಿಗೆ ನೀಡಿದ ಕಠಿಣ ಪೈಪೋಟಿಗೆ ಮೆಚ್ಚುಗೆ ಕೇಳಿಬರುತ್ತಿದೆ. 200+ ರನ್​ಗಳ ಬೆಟ್ಟದಂತಹ ಟಾರ್ಗೆಟ್ ಇದ್ದರೂ ಗೆಲುವಿನ ಹತ್ತಿರ ಬಂದು ಮೂರು ರನ್​ಗಳಿಂದ ಸೋಲು ಕಂಡಿತು. ನಾಯಕ ಶ್ರೇಯಸ್, ರಿಂಕು ಸಿಂಗ್ (Rinku Singh), ನಿತೀಶ್ ರಾಣ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಇದೇ ಕಾರಣಕ್ಕೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer), ಈ ಸೋಲಿನಿಂದ ನಮಗೆ ಯಾವುದೇ ಬೆಸರವಾಗಿಲ್ಲ ಎಂದು ನೇರವಾಗಿ ನುಡಿದಿದ್ದಾರೆ. ತಾವು ಆಡಿದ ಅತ್ಯುತ್ತಮ ಪಂದ್ಯಗಳಲ್ಲಿ ಇದು ಒಂದಾಗಿದೆ. ಹಾಗಾಗಿ ಈ ಸೋಲಿನಿಂದ ತಮಗೆ ಯಾವುದೇ ಬೆಸರವಿಲ್ಲ ಎಂದು ಹೇಳಿದರು.

“ನಿಜವಾಗಿ ಹೇಳಬೇಕೆಂದರೆ ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಆಡಿದ ಅತ್ಯುತ್ತಮ ಪಂದ್ಯಗಳಲ್ಲಿ ಇದು ಕೂಡ ಒಂದು. ಈ ಕಾರಣಕ್ಕೆ ಈ ಪಂದ್ಯದಲ್ಲಿ ಸೋಲು ಕಂಡಿದ್ದು ನನಗೆ ಯಾವುದೇ ಬೇಸರವಿಲ್ಲ. ತಂಡದ ಪ್ರದರ್ಶನ, ಪಂದ್ಯದಲ್ಲಿನ ನಮ್ಮ ಪಾತ್ರ ಹಾಗೂ ವರ್ತನೆ ಎಲ್ಲವೂ ಅದ್ಭುತವಾಗಿತ್ತು. ಅಂತಿಮ ಹಂತದಲ್ಲಿ ರಿಂಕು ಸಿಂಗ್ ತಂಡವನ್ನು ಕೊಡೊಯ್ದ ಹಾದಿಯನ್ನು ನಾನು ಇಷ್ಟಪಟ್ಟಿದ್ದೇನೆ. ಆದರೆ, ಇನ್ನೂ ಎರಡು ಎಸೆತಗಳು ಬಾಕಿ ಇರುವಾಗ ಸಮಯ ನಮ್ಮದಾಗಿರಲಿಲ್ಲ. ಅವರು ಪಂದ್ಯವನ್ನು ಮುಗಿಸಲಿದ್ದಾರೆಂದು ನಮಗೆ ನಿರೀಕ್ಷೆ ಇತ್ತು. ಆ ಮೂಲಕ ಅವರು ನಮ್ಮ ಹೀರೋ ಆಗಬಹುದಾಗಿತ್ತು. ಇಷ್ಟು ಸನಿಹ ಬಂದು ಸೋತಿದ್ದರಿಂದ ಅವರು ತುಂಬಾ ಬೇಸರದಲ್ಲಿದ್ದಾರೆ. ಆದರೆ, ಅವರ ಆಟ ಅತ್ಯುತ್ತಮವಾಗಿತ್ತು, ಅವರ ಆಟದಿಂದ ನನಗೆ ಸಂತಸವಾಗಿದೆ,” ಎಂದು ಹೇಳಿದ್ದಾರೆ.

Rinku Singh: ಇಡೀ ಪಂದ್ಯದ ಗತಿಯನ್ನೇ ಬದಲಿಸಿತು ಎವಿನ್ ಲೆವಿಸ್ ಹಿಡಿದ ಆ ಒಂದು ಕ್ಯಾಚ್: ವಿಡಿಯೋ

ಇದನ್ನೂ ಓದಿ
Image
RCB vs GT: ಆರ್​ಸಿಬಿಗೆ ಗೆದ್ದರಷ್ಟೆ ಉಳಿಗಾಲ: ಆ ಆಟಗಾರ ಇಂದು ಕಣಕ್ಕಿಳಿಯುವುದು ಬಹುತೇಕ ಖಚಿತ
Image
Quinton de Kock: KKR vs LSG ಪಂದ್ಯದಲ್ಲಿ ಸಿಡಿಯಿತು ಬರೋಬ್ಬರಿ 27 ಸಿಕ್ಸರ್: ರೋಚಕ ಪಂದ್ಯದ ವಿಡಿಯೋ ಇಲ್ಲಿದೆ
Image
KKR vs LSG Highlights, IPL 2022: ರೋಚಕ ಪಂದ್ಯದಲ್ಲಿ ಸೋತ ಕೆಕೆಆರ್; ಪ್ಲೇ ಆಫ್​ಗೆ ಲಕ್ನೋ ಎಂಟ್ರಿ
Image
IPL 2022: RCB ಗೆ ಪ್ಲೇಆಫ್​ ಪ್ರವೇಶಿಸಲು ಇರುವುದು ಮೂರೇ ದಾರಿ..!

ಇನ್ನು ಗೆದ್ದ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ, “ಗೆಲುವಿನ ತಂಡವಾಗಿರುವುದಕ್ಕೆ ಖುಷಿಯಾಗುತ್ತಿದೆ. ಈರೀತಿಯ ಪಂದ್ಯಗಳನ್ನು ನಾವು ಹೆಚ್ಚಾಗಿ ಆಡಬೇಕು. ಪ್ರಸಕ್ತ ಆವೃತ್ತಿಯಲ್ಲಿ ಇಂಥಾ ಪಂದ್ಯಗಳನ್ನು ನಾವು ತುಂಬಾ ಮಿಸ್‌ ಮಾಡಿಕೊಂಡಿದ್ದೇವೆ. ಚೇಸಿಂಗ್ ಮಾಡುವಾಗ 20 ಓವರ್ ವರೆಗೆ ಯಾವುದೇ ಪಂದ್ಯಗಳು ಹೆಚ್ಚಾಗಿ ಹೋಗುವುದಿಲ್ಲ. ಸುಲಭವಾಗಿ ಸೋಲುವ ತಂಡವಾಗಬಹುದು ಹಾಗೂ ಮನೆಗೆ ಮರಳಿ ಕಳಪೆ ಕ್ರಿಕೆಟ್ ಆಡಿದ ಬಗ್ಗೆ ಯೋಚನೆ ಮಾಡಬಹುದು. ಟೂರ್ನಿಯ ಕೊನೆಯ ಲೀಗ್‌ ಪಂದ್ಯವನ್ನು ಅತ್ಯುತ್ತಮವಾಗಿ ಮುಗಿಸಿರುವುದಕ್ಕೆ ತುಂಬಾ ಖುಷಿಯಾಗುತ್ತದೆ. ಇಂಥಾ ಅದ್ಭುತ ಪಂದ್ಯವಾಡಿದ ಶ್ರೇಯ ಎರಡೂ ತಂಡಗಳಿಗೆ ಸಲ್ಲಬೇಕು. ಈ ಆವೃತ್ತಿಯುದ್ದಕ್ಕೂ ಕ್ವಿಂಟನ್‌ ಡಿ ಕಾಕ್‌ ಅದ್ಭುತವಾಗಿ ಬ್ಯಾಟ್‌ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಅವರ ತೋರಿದ ಬ್ಯಾಟಿಂಗ್ ಪ್ರದರ್ಶನ ಅತ್ಯುತ್ತಮವಾಗಿತ್ತು,” ಎಂಬುದು ರಾಹುಲ್ ಮಾತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಯಾವುದೇ ವಿಕೆಟ್ ಕಳೆದುಕೊಳ್ಳದೇ 20 ಓವರ್‌ಗಳಲ್ಲಿ ಬರೋಬ್ಬರಿ 210 ರನ್ ಬಾರಿಸಿತು. ಇದು ಐಪಿಎಲ್​ನಲ್ಲಿ ನೂತನ ದಾಖಲೆ ಕೂಡ ಆಯಿತು. ಡಿ ಕಾಕ್ ಕೇವಲ 70 ಎಸೆತಗಳಲ್ಲಿ ಅಜೇಯ 140 ರನ್ ಬಾರಿಸಿದರೆ, ಕೆಎಲ್ ರಾಹುಲ್ 51 ಎಸೆತಗಳಲ್ಲಿ 68 ರನ್ ಕಲೆಹಾಕಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೂತನ ಇತಿಹಾಸ ಬರೆದರು. ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 9 ರನ್ ಗಳಿಸುವುದರೆಡೆಗೆ ಆರಂಭಿಕರಾದ ವೆಂಕಟೇಶ್ ಅಯ್ಯರ್ (0) ಹಾಗೂ ಅಭಿಜಿತ್ ತೋಮರ್ (4) ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ (50) ಹಾಗೂ ನಿತೀಶ್ ರಾಣಾ (42) ಆಕ್ರಮಣಕಾರಿ ಆಟವಾಡುವ ಮೂಲಕ ತಿರುಗೇಟು ನೀಡಿದರು. ಕೊನೆಯ ಹಂತದಲ್ಲಿ ರಿಂಕು ಸಿಂಗ್ (15 ಬಾಲ್, 40 ರನ್) ಹಾಗೂ ಸುನಿಲ್ ನಾರಾಯಣ್ (ಅಜೇಯ 21) ಗಳಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:33 pm, Thu, 19 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ