RCB vs GT: ಆರ್​ಸಿಬಿಗೆ ಗೆದ್ದರಷ್ಟೆ ಉಳಿಗಾಲ: ಆ ಆಟಗಾರ ಇಂದು ಕಣಕ್ಕಿಳಿಯುವುದು ಬಹುತೇಕ ಖಚಿತ

RCB Probable XI vs GT: ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿರುವ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ ಇಂದಿನ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI ಹೇಗಿರಲಿದೆ ಎಂಬುದನ್ನು ನೋಡೋಣ.

RCB vs GT: ಆರ್​ಸಿಬಿಗೆ ಗೆದ್ದರಷ್ಟೆ ಉಳಿಗಾಲ: ಆ ಆಟಗಾರ ಇಂದು ಕಣಕ್ಕಿಳಿಯುವುದು ಬಹುತೇಕ ಖಚಿತ
RCB Playing XI vs GT IPL 2022Image Credit source: RCB Twitter
Follow us
TV9 Web
| Updated By: Vinay Bhat

Updated on: May 19, 2022 | 9:26 AM

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು ಮಹತ್ವದ ಪಂದ್ಯವೊಂದು ನಡೆಯಲಿದೆ. ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿರುವ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ ಈಗಾಗಲೇ ಕ್ವಾಲಿಫೈಯರ್ ಆಗಿರುವ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ (RCB vs GT) ತಂಡವನ್ನು ಎದುರಿಸಲಿದೆ. ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ. ಆರ್‌ಸಿಬಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ ಏಳನ್ನು ಗೆದ್ದು 5ನೇ ಸ್ಥಾನದಲ್ಲಿದೆ. ಒಂದು ಮೆಟ್ಟಿಲು ಮೇಲೇರಿದರೆ ಪ್ಲೇ ಆಫ್ ಅವಕಾಶ ತೆರೆಯಲಿದೆ. ಇಂದಿನ ಪಂದ್ಯವನ್ನು ಫಾಫ್ (Faf Duplessis) ಪಡೆ ಭಾರೀ ಅಂತರದಿಂದ ಗೆದ್ದು, ಉಳಿದ ಒಂದೆರಡು ತಂಡಗಳು ಸೋತರಷ್ಟೇ ಪ್ಲೇ ಆಫ್ ಅವಕಾಶ ಎದುರಾಗಲಿದೆ. ಸೋತರೆ ನೇರವಾಗಿ ಮನೆಗೆ. ಹೀಗಾಗಿ ಆರ್​​ಸಿಬಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.

ಹಿಂದಿನ ಸೀಸನ್​ಗಳಂತೆಯೆ ಆರ್​ಸಿಬಿಗೆ ಈ ಬಾರಿ ಕೂಡ ಎದುರಾಗಿರುವುದು ಒಂದೇ ಸಮಸ್ಯೆ. ಬ್ಯಾಟರ್​​​ಗಳು ದೊಡ್ಡ ರನ್ ಕಲೆಹಾಕಿದರೆ ಬೌಲರ್​ಗಳು ಕೂಡ ಸರಾಗವಾಗಿ ರನ್ ಹರಿ ಬಿಡುತ್ತಿದ್ದಾರೆ. ಇದರ ನಡುವೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿರುವುದು ರನ್‌ರೇಟ್‌. ಇದು ಮೈನಸ್‌ನಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿನ ಸಾಮಾನ್ಯ ಗೆಲುವು ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಇದರ ಜೊತೆಗೆ ಮೇ. 21ಕ್ಕೆ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಕಂಡಿದ್ದರೂ ನಂತರದ ಕೆಲ ಪಂದ್ಯಗಳಲ್ಲಿ ಮಾಡಿಕೊಂಡ ಎಡವಟ್ಟುಗಳಿಂದಾಗಿ ಆರ್‌ಸಿಬಿ ಇದೀಗ ಅಂತಿಮ ನಾಲ್ಕರ ಘಟ್ಟಕ್ಕೇರಲು ಪರದಾಡುವಂತಾಗಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ.

ಆರ್​​ಸಿಬಿ ಪರ ನಾಯಕ ಫಾಫ್​​ ಡು ಪ್ಲೆಸಿಸ್​​, ವಿರಾಟ್​​ ಕೊಹ್ಲಿ ಮತ್ತು ಗ್ಲೆನ್​​ ಮ್ಯಾಕ್ಸ್​ವೆಲ್​​​ ಪೈಕಿ ಯಾರಾದರೂ ಒಬ್ಬರು ದೊಡ್ಡ ಇನ್ನಿಂಗ್ಸ್​ ಕಟ್ಟಿದರೆ ಮಾತ್ರ ಪಂದ್ಯ ಗೆಲ್ಲಬಹುದು. ಈ ಮೂವರಲ್ಲಿ ಯಾರಾದರೂ ಒಬ್ಬರು ಕೊನೆ ಹಂತದ ವರೆಗೆ ಕ್ರೀಸ್​ನಲ್ಲಿ ನಿಲ್ಲಬೇಕು. ಇವರ ಜೊತೆ ದಿನೇಶ್​​ ಕಾರ್ತಿಕ್​​, ಮಹಿಪಾಲ್​​ ಲೊಮ್ರೊರ್​​, ರಜತ್​​ ಪಾಟಿದಾರ್​​ ಮತ್ತು ಶಹಬಾಜ್​ ಅಹ್ಮದ್​​ ಕೂಡ ಬ್ಯಾಟ್​​ ಬೀಸಬೇಕಿದೆ. ಬೌಲಿಂಗ್​​ನಲ್ಲಿ ಜೋಶ್​​ ಹ್ಯಾಜಲ್​​ವುಡ್​ ಪಂಜಾಬ್​​ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ದುಬಾರಿಯಾಗಿದ್ದರು. ಇದನ್ನು ಮರೆತು ಲಯಕ್ಕೆ ಮರಳಬೇಕಿದೆ.

ಇದನ್ನೂ ಓದಿ
Image
KKR vs LSG Highlights, IPL 2022: ರೋಚಕ ಪಂದ್ಯದಲ್ಲಿ ಸೋತ ಕೆಕೆಆರ್; ಪ್ಲೇ ಆಫ್​ಗೆ ಲಕ್ನೋ ಎಂಟ್ರಿ
Image
IBA Womens World Boxing Championships: ಬ್ರೆಜಿಲ್ ಬಾಕ್ಸರ್ ಮಣಿಸಿ ಫೈನಲ್‌ ಪ್ರವೇಶಿಸಿದ ನಿಖತ್ ಜರೀನ್..!
Image
IPL 2022: RCB ಗೆ ಪ್ಲೇಆಫ್​ ಪ್ರವೇಶಿಸಲು ಇರುವುದು ಮೂರೇ ದಾರಿ..!
Image
IPL 2022: ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ..!

ತಂಡಕ್ಕೆ ದೊಡ್ಡ ತಲೆನೋವಾಗಿರುವುದೇ ಮೊಹಮ್ಮದ್​​ ಸಿರಾಜ್. ಇವರನ್ನು ರಿಟೈನ್ ಮಾಡಿಕೊಂಡಿದ್ದ ಆರ್​​ಸಿಬಿಗೆ ಕಿಂಚಿತ್ತು ಪ್ರಯೋಜನವಾಗಿಲ್ಲ. ರನ್ ಮಳೆಯನ್ನೇ ನೀಡುತ್ತಿದ್ದಾರೆ. ಹೀಗಾಗಿ ಇವರನ್ನು ಇಂದಿನ ಪಂದ್ಯದಿಂದ ಕೈಬಿಡುವುದು ಬಹುತೇಕ ಖಚಿತ. ಇವರ ಜಾಗದಲ್ಲಿ ಸಿದ್ಧಾರ್ಥ್​ ಕೌಲ್ ಅವರನ್ನು​​​​ ಆಡಿಸುವು ಸಾಧ್ಯತೆ ಹೆಚ್ಚಿದೆ. ಅಲ್ಲದೆ ಇಂದು ಕೌಲ್ ಅವರ ಹುಟ್ಟುಹಬ್ಬ ಕೂಡ ಆಗಿದೆ. ಹರ್ಷಲ್​​ ಪಟೇಲ್​​ ಮತ್ತು ವನಿಂದು ಹಸರಂಗ ಮಿಂಚಿದರೆ ಮ್ಯಾಚ್​​ ಗೆಲ್ಲಬಹುದು. ಮ್ಯಾಕ್ಸ್​​ವೆಲ್​​, ಲೊಮ್ರೊರ್​​ ಮತ್ತು ಶಹಬಾಸ್ ಅಹ್ಮದ್​​ 5ನೇ ಬೌಲರ್​​ ಪಾತ್ರ ನಿಭಾಯಿಸಬೇಕಿದೆ.

Quinton de Kock: KKR vs LSG ಪಂದ್ಯದಲ್ಲಿ ಸಿಡಿಯಿತು ಬರೋಬ್ಬರಿ 27 ಸಿಕ್ಸರ್: ರೋಚಕ ಪಂದ್ಯದ ವಿಡಿಯೋ ಇಲ್ಲಿದೆ

ಇತ್ತ ಗುಜರಾತ್​ ಒಂದು ವೇಳೆ ಇಂದಿನ ಪಂದ್ಯ ಸೋತರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯಂ ಆಗಿದೆ. ಹೀಗಾಗಿ ಹೊಸಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಇದರ ಉಪಯೋಗವನ್ನು ಆರ್​ಸಿಬಿ ಹೇಗೆ ಪಡೆದುಕೊಳ್ಳುತ್ತೆ ಎಂಬುದು ನೋಡಬೇಕಿದೆ. ಓಪನರ್​ಗಳಾದ ವೃದ್ಧಿಮಾನ್​​ ಸಾಹಾ ಮತ್ತು ಶುಭ್ಮನ್​​ ಗಿಲ್​​ ಅವರನ್ನು ಆರಂಭದಲ್ಲಿ ಕಟ್ಟಿ ಹಾಕಬೇಕಿದೆ. ಡೆತ್ ಸ್ಪೆಷಲಿಸ್ಟ್​ಗಳ ದಂಡೇ ಜಿಟಿ ತಂಡದಲ್ಲಿದ್ದು ಡೆತ್ ಓವರ್​ನಲ್ಲಿ ಎಚ್ಚರಿಕೆಯಿಂದ ಬೌಲಿಂಗ್ ಮಾಡಬೇಕಿದೆ.

ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮೊರ್ಡ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್​ ಕೌಲ್.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್