SSLC Result 2022 Topper: ಅಮಿತ್ ಮಾದರ್ ಸೇರಿ 145 ವಿದ್ಯಾರ್ಥಿಗಳು 2022ರ ಎಸ್​ಎಸ್​ಎಲ್​ಸಿ ಟಾಪರ್ಸ್

SSLC Result 2022 Topper: ಅಮಿತ್ ಮಾದರ್ ಸೇರಿ 145 ವಿದ್ಯಾರ್ಥಿಗಳು 2022ರ ಎಸ್​ಎಸ್​ಎಲ್​ಸಿ ಟಾಪರ್ಸ್
ಸಾಂದರ್ಭಿಕ ಚಿತ್ರ
Image Credit source: sentinelassam.com

2021-22ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಅಮಿತ್ ಮಾದರ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

TV9kannada Web Team

| Edited By: Sushma Chakre

May 19, 2022 | 7:50 PM

2021-22ನೇ ಸಾಲಿನ SSLC ಪರೀಕ್ಷೆ ಫಲಿತಾಂಶ(Result) ಪ್ರಕಟಗೊಂಡಿದ್ದು,ಅಮಿತ್ ಮಾದರ್(Amith Madar) ಅವರು ರಾಜ್ಯಕ್ಕೆ ಪ್ರಥಮ ಸ್ಥಾನ(1st Rank) ಪಡೆದಿದ್ದಾರೆ. ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಆ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ಅಲ್ಲದೆ, ತಮಕೂರಿನ ಚಿಕ್ಕನಾಯಕನಹಳ್ಳಿಯ ಎಳನಾಡು ಪ್ರೌಢಶಾಲೆಯ ಬಿ.ಆರ್.ಭೂಮಿಕಾ(B.R.Bhumika) ಅವರು ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ.

ಈಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಅಮಿತ್ ಮಾದರ್ ಬಿ.ಆರ್.ಭೂಮಿಕಾ, ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಪ್ರವೀಣ್ ನೀರಲಗಿ, ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿನಿ ಸಹನಾ ರಾಯರ್ ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ ಐಶ್ವರ್ಯ ಕನಸೆ, ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿ ಎಸ್.ಎಸ್.ಆಕೃತಿ, ಹಾಸನ ಜಿಲ್ಲೆಯ ವಿದ್ಯಾರ್ಥಿ ಅರ್ಜುನ್ ನಾಯ್ಕ್, ಉತ್ತರ ಕನ್ನಡ ಜಿಲ್ಲೆಯ ಚಿರಾಗ್ ಮಹೇಶ್ ನಾಯ್ಕ್, ಉಡುಪಿ ಜಿಲ್ಲೆಯ ವಿದ್ಯಾರ್ಥಿನಿ ಗಾಯತ್ರಿ, ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯ ಅನಘಾ ಎಂ.ಮೂರ್ತಿ, ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಸಿ.ಎಸ್.ಕವನಾ 625 ಕ್ಕೆ 625ಕ್ಕೆ ಅಂಕಗಳನ್ನು ಪಡೆದಿದ್ದಾರೆ.

ಹಾವೇರಿಯ ಹಳೇ ಮಣ್ಣಗಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಪ್ರವೀಣ್ ನೀರಲಗಿ​, ಬೆಳಗಾವಿಯ ಸಹನಾ ಮಹಾಂತೇಶ್ ರಾಯರ್, ಸತ್ತಿಗೇರಿಯ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾ, ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕಮ್ಮರಡಿ ಸರ್ಕಾರಿ ಜೂನಿಯರ್ ಕಾಲೇಜಿನ S.S.ಆಕೃತಿ​, ಶಿರಸಿಯ ಸರ್ಕಾರಿ ಮಾರಿಕಾಂಬ ಪಿಯು ಕಾಲೇಜಿನ ಚಿರಾಗ್ ಮಹೇಶ್ ನಾಯ್ಕ್​, ಮೈಸೂರಿನ ಜಾಕಿ ಕ್ವಾರ್ಟರ್ಸ್​ನ ಆದರ್ಶ ವಿದ್ಯಾಲಯದ ಮೈಸೂರಿನ ಎಂ.ಜಿ.ಏಕತಾ, ಉಡುಪಿ ಜಿಲ್ಲೆ ಕುಂದಾಪುರದ ಕಲವರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ನಿಶಾ, ಹಾಸನದ ಚನ್ನರಾಯಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಹೆಚ್.ಎನ್.ಪ್ರಗತಿ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಮಂಡ್ಯದ ಮೊಗರಹಳ್ಳಿಯ ಶ್ರೀಮಹಾಲಕ್ಷ್ಮೀ ಹೈಸ್ಕೂಲ್​ನ ಹೆಚ್.ಎಸ್.ಅಪೂರ್ವ, ಶೀವಮೊಗ್ಗದ ಅಶೋಕನಗರದ ಅನನ್ಯಾ ಇಂಗ್ಲಿಷ್ ಹೈಸ್ಕೂಲ್​ನ ಹೆಚ್.ಎನ್.ಅನನ್ಯಾ, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಹನುಮಂತಪುರ ಗೇಟ್​ನ BGS​ ಪಬ್ಲಿಕ್ ಶಾಲೆಯ ಜಿ.ಹರ್ಷಿತಾ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಹೈಸ್ಕೂಲ್​ನ ಆತ್ಮೀಯ ಎಂ.ಕಶ್ಯಪ್, ಮೈಸೂರಿನ ನಂಜನಗೂಡಿನ ಕಾರ್ಮೆಲ್ ಹೈಸ್ಕೂಲ್​ನ ಜಿ.ದೇವಿಕಾ, ಮೈಸೂರಿನ ಟಿ.ನರಸೀಪುರದ ಬನ್ನೂರಿನ ಶ್ರೀಆದಿಚುಂಚನಗಿರಿ ಇಂಗ್ಲಿಷ್ ಹೈಸ್ಕೂಲ್​ನ ಬಿ.ಎಂ.ದಿಶಾ, ಬೆಂಗಳೂರಿನ ಕೊಟ್ಟಿಗೆಪಾಳ್ಯದ ಎಸ್.ವಿ.ಪಬ್ಲಿಕ್ ಶಾಲೆಯ ಗಾನಾ ಸಿ.ಶೇಖರ್ 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ.

ಇತ್ತೀಚೆಗಷ್ಟೇ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಗೆ 8,20,900 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 8,07,206 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಅಲ್ಲದೆ, ಶೇಕಡಾ 85.63ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada