AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಥೀಮ್ ಏನು? ಏನು ಹೇಳ್ಬೇಕು? ಎಂದು ರಾಹುಲ್ ಗಾಂಧಿ ಕೇಳುತ್ತಿರುವ ವಿಡಿಯೊ ಚಿಂತನ್ ಶಿವಿರ್​​ದ್ದು ಅಲ್ಲ

Rahul Gandhi ಕಾಂಗ್ರೆಸ್ ನಾಯಕ ರಾಹುಲ್ ಮೇ 6 ರಂದು ತೆಲಂಗಾಣಕ್ಕೆ ಭೇಟಿ ನೀಡಿದ್ದರು ಮತ್ತು ವಾರಂಗಲ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ರ್ಯಾಲಿಗೂ ಮುನ್ನ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ.

Fact Check ಥೀಮ್ ಏನು? ಏನು ಹೇಳ್ಬೇಕು? ಎಂದು ರಾಹುಲ್ ಗಾಂಧಿ ಕೇಳುತ್ತಿರುವ ವಿಡಿಯೊ ಚಿಂತನ್ ಶಿವಿರ್​​ದ್ದು ಅಲ್ಲ
ರಾಹುಲ್ ಗಾಂಧಿ ವೈರಲ್ ವಿಡಿಯೊ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: May 19, 2022 | 8:30 AM

Share

ಥೀಮ್ ಏನು? ನಿಖರವಾಗಿ ಏನು ಹೇಳಬೇಕಾಗಿರುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ರಾಜಸ್ಥಾನದ ಉದಯಪುರದಲ್ಲಿ (Udaipur) ಇತ್ತೀಚೆಗೆ ಮುಕ್ತಾಯಗೊಂಡ ಕಾಂಗ್ರೆಸ್ ಚಿಂತನ್ ಶಿವಿರ್ (Chintan Shivir)  (ಚಿಂತನಾ ಶಿಬಿರ)ದ್ದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ಜನರ ಗುಂಪಿನೊಂದಿಗೆ ಮಾತನಾಡುತ್ತಿರುವ ವಿಡಿಯೊ ಇದಾಗಿದೆ. ಇದರಲ್ಲಿ ಅವರು “ಇಂದಿನ ಮುಖ್ಯ ವಿಷಯ ಯಾವುದು? ಥೀಮ್ ಏನು? ನಿಖರವಾಗಿ ಏನು ಹೇಳಬೇಕು? ಎಂದು ಕೇಳುತ್ತಿದ್ದಾರೆ. 17 ಸೆಕೆಂಡ್ ಅವಧಿಯ ವಿಡಿಯೊ ಕ್ಲಿಪ್ ಅನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆ ಶೀರ್ಷಿಕೆ ಹೀಗಿದೆ: ‘ಚಿಂತನ್ ಶಿವಿರ್‌ನಲ್ಲಿ, ರಾಜಕುಮಾರನಿಗೆ ಮೊದಲು ವಿಷಯದ ಬಗ್ಗೆ ತಿಳಿಸಲಾಗಿದೆ. ಯಾವಾಗ ಮತ್ತು ಎಲ್ಲಿ ಹೇಳಬೇಕೆಂದು ವಿವರಿಸಲಾಗಿದೆ. ಅವರು ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಹಲವಾರು ನೆಟ್ಟಿಗರು ಫೇಸ್​​ಬುಕ್ ಮತ್ತು ಟ್ವಿಟರ್​​ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಮೇ 13 ಮತ್ತು ಮೇ 15 ರ ನಡುವೆ ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಚಿಂತನ್ ಶಿವಿರ್​​ನ್ನು ನಡೆಸಿತು. ಮಾಧ್ಯಮ ವರದಿಗಳ ಪ್ರಕಾರ, ಹಲವಾರು ಕಾಂಗ್ರೆಸ್ ನಾಯಕರ ಉಪಸ್ಥಿತಿಯನ್ನು ಕಂಡ ಸಮಾರಂಭದಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಫ್ಯಾಕ್ಟ್ ಚೆಕ್ ಈ ವೈರಲ್ ವಿಡಿಯೊವನ್ನು ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ಈ ವಿಡಿಯೊ ಇತ್ತೀಚೆಗೆ ನಡೆಸಲಾದ ಉದಯಪುರ ಚಿಂತನ್ ಶಿವಿರ್‌ನದ್ದಲ್ಲ. ಮೇ ತಿಂಗಳಲ್ಲಿ ರಾಹುಲ್ ಗಾಂಧಿಯವರ ತೆಲಂಗಾಣ ಭೇಟಿಯದ್ದು ಎಂದು ಪತ್ತೆ ಹಚ್ಚಿದೆ. ಕಾಂಗ್ರೆಸ್ ನಾಯಕ ರಾಹುಲ್ ಮೇ 6 ರಂದು ತೆಲಂಗಾಣಕ್ಕೆ ಭೇಟಿ ನೀಡಿದ್ದರು ಮತ್ತು ವಾರಂಗಲ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ರ್ಯಾಲಿಗೂ ಮುನ್ನ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಮೇ 7, 2022 ರಿಂದ ಅದೇ ವಿಡಿಯೊವನ್ನು ಹೊಂದಿರುವ ಇಂಡಿಯಾ ಟುಡೇ  ವರದಿಯೂ ಫ್ಯಾಕ್ಟ್ ಚೆಕ್ ವೇಳೆ ಸಿಕ್ಕಿದೆ. ವಿಡಿಯೊದ ಶೀರ್ಷಿಕೆ ” Kya Bolna Hai’: Rahul Gandhi Once Again In Spotlight Over Candid Video, BJP Attacks Congress MP ಎಂದಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಗಾಂಧಿ ತಮ್ಮ ರ್ಯಾಲಿಗೆ ಮುನ್ನ ತೆಲಂಗಾಣ ಕಾಂಗ್ರೆಸ್ ನಾಯಕರೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೊ ಇದಾಗಿದೆ.ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕರ ರ್ಯಾಲಿಗೂ ಮುನ್ನ ಪರಿಶೀಲಿಸದ ವಿಡಿಯೊವನ್ನು ಟ್ವೀಟ್ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ರೆಕಾರ್ಡಿಂಗ್ ನಿಲ್ಲಿಸುವಂತೆ ಜನರನ್ನು ಕೇಳುವ ಮೊದಲು, ವಾಟ್ ಈಸ್ ದ ಮೈನ್ ಥೀಮ್ ಟುಡೇ, ಕ್ಯಾ ಥೀಮ್ ಕ್ಯಾ ಹೈ, ಎಕ್ಸ್ಯಾಟ್ಲೀ ಕ್ಯಾ ಬೋಲ್ನಾ ಹೈ ಎಂದು ರಾಹುಲ್ ಗಾಂಧಿ ಹೇಳುವುದನ್ನು ಕೇಳಬಹುದಾಗಿದೆ. ವಿಡಿಯೊವನ್ನು ನಿಜವಾಗಿ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಲು ಬೂಮ್​​ಗೆ ಸಾಧ್ಯವಾಗಲಿಲ್ಲ .ಆದರೆ ವೈರಲ್ ವೀಡಿಯೊ ಕಾಂಗ್ರೆಸ್ ಚಿಂತನ್ ಶಿವಿರ್​​ದ್ದಲ್ಲ ಎಂಬುದು ಖಚಿತ.

ಹೆಚ್ಚಿನ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
Image
Fact Check ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ಫೋಟೊ ವಿಯೆಟ್ನಾಂನದ್ದು
Image
ಮಸೀದಿ ಮುಂದೆ ಹನುಮಾನ್ ಚಾಲೀಸಾ ನುಡಿಸಿದ ಹಿಂದೂಗಳನ್ನು ಓಡಿಸಿದ ಮುಸ್ಲಿಮರು ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ವಿಡಿಯೊ ಭಾರತದ್ದಲ್ಲ, ಬಾಂಗ್ಲಾದೇಶದ್ದು
Image
Fact Check ಮುಸ್ಲಿಮೇತರ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದಕ್ಕಾಗಿ ಅಮೆರಿಕದಲ್ಲಿ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ; ತಪ್ಪಾದ ಮಾಹಿತಿಯೊಂದಿಗೆ ಹರಿದಾಡುತ್ತಿರುವ ವಿಡಿಯೊ ಅಮೆರಿಕದ್ದಲ್ಲ
Image
Fact Check ಅಸನಿ ಚಂಡಮಾರುತದ ನಡುವೆ ಆಂಧ್ರ ಕರಾವಳಿಗೆ ತೇಲಿ ಬಂದಿದ್ದು ಚಿನ್ನದ ರಥವೇ?; ಬಣ್ಣ ಮಾತ್ರ ಬಂಗಾರದ್ದು, ತೇರು ಸ್ಟೀಲಿನದ್ದು
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ