AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿ ಮುಂದೆ ಹನುಮಾನ್ ಚಾಲೀಸಾ ನುಡಿಸಿದ ಹಿಂದೂಗಳನ್ನು ಓಡಿಸಿದ ಮುಸ್ಲಿಮರು ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ವಿಡಿಯೊ ಭಾರತದ್ದಲ್ಲ, ಬಾಂಗ್ಲಾದೇಶದ್ದು

Fact Check ಮಸೀದಿಯ ಮುಂದೆ ಹನುಮಾನ್ ಚಾಲೀಸಾ ನುಡಿಸಲು ಯತ್ನಿಸಿದಾಗ ಐವರು ಮುಸ್ಲಿಮರು ನೂರು ಹಿಂದೂಗಳಿಗೆ ಪಾಠ ಕಲಿಸಿದರು ಎಂಬ ಶೀರ್ಷಿಕೆಯೊಂದಿಗೆಯೂ ಈ ವಿಡಿಯೊ ಹರಿದಾಡಿದೆ.

ಮಸೀದಿ ಮುಂದೆ ಹನುಮಾನ್ ಚಾಲೀಸಾ ನುಡಿಸಿದ ಹಿಂದೂಗಳನ್ನು ಓಡಿಸಿದ ಮುಸ್ಲಿಮರು ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ವಿಡಿಯೊ ಭಾರತದ್ದಲ್ಲ, ಬಾಂಗ್ಲಾದೇಶದ್ದು
ವೈರಲ್ ಆಗಿರುವ ವಿಡಿಯೊ
TV9 Web
| Edited By: |

Updated on: May 17, 2022 | 8:30 AM

Share

ಮುಸ್ಲಿಂ ಪುರುಷರ ಗುಂಪೊಂದು ಪಿಕಪ್ ಟ್ರಕ್ ಮೇಲೆ ನಿಂತಿರುವ ಜನರನ್ನು ಥಳಿಸುತ್ತಿರುವ ವಿಡಿಯೊವೊಂದ ತೋರಿಸುವ ವಿಡಿಯೊ ಇಂಟರ್ನೆಟ್‌ನಲ್ಲಿ ವೈರಲ್ (Viral Video) ಆಗಿದೆ. ಮಸೀದಿ ಮುಂದೆ ಹನುಮಾನ್ ಚಾಲೀಸಾ (Hanuman Chalisa) ನುಡಿಸಿದ್ದಕ್ಕಾಗಿ ಹಿಂದೂ ಸಮುದಾಯದ ಜನರ ಮೇಲೆ ಮುಸ್ಲಿಂ ಸಮುದಾಯದ ಜನರು ಹಲ್ಲೆ ಮಾಡುತ್ತಿರುವುದು ಎಂಬ ಒಕ್ಕಣೆಯೂ ಈ ವಿಡಿಯೊ ಜತೆಗಿದೆ. ಆದರೆ, ವೈರಲ್ ವಿಡಿಯೊ ಭಾರತದ್ದು ಅಲ್ಲ . ಇದು ಬಾಂಗ್ಲಾದೇಶದ್ದು (Bangladesh) ಎಂದು ದಿ ಕ್ವಿಂಟ್ ಫ್ಯಾಕ್ಟ್ ಚೆಕ್ ಮೂಲಕ ಕಂಡುಕೊಂಡಿದೆ. ಮೇ 5 ರಂದು ಈದ್ ಆಚರಣೆಯ ಸಂದರ್ಭದಲ್ಲಿ ಬಾಂಗ್ಲಾದೇಶಿ ಇಸ್ಮಾಲಿಸ್ಟ್ ಗುಂಪಿನ ತೌಡಿಡಿ ಜನತಾ ಸದಸ್ಯರು ಸ್ಪೀಕರ್‌ಗಳಲ್ಲಿ ಜೋರಾಗಿ ಸಂಗೀತ ನುಡಿಸಿದ್ದಕ್ಕಾಗಿ ಯುವಕರನ್ನು ಥಳಿಸುತ್ತಿರುವ ವಿಡಿಯೊ ಇದಾಗಿಗೆ.

ವೈರಲ್ ವಿಡಿಯೊ ಮಸೀದಿಯ ಮುಂದೆ ಹನುಮಾನ್ ಚಾಲೀಸಾ ನುಡಿಸಲು ಯತ್ನಿಸಿದಾಗ ಐವರು ಮುಸ್ಲಿಮರು ನೂರು ಹಿಂದೂಗಳಿಗೆ ಪಾಠ ಕಲಿಸಿದರು ಎಂಬ ಶೀರ್ಷಿಕೆಯೊಂದಿಗೆಯೂ ಈ ವಿಡಿಯೊ ಹರಿದಾಡಿದೆ. ಫ್ಯಾಕ್ಟ್ ಚೆಕ್ ಗೂಗಲ್ ಕ್ರೋಮ್ ನಲ್ಲಿ ಲಭ್ಯವಿರುವ Google Lens ಬಳಸಿಕೊಂಡು ದಿ ಕ್ವಿಂಟ್ ಟೀಂ ವೈರಲ್ ವಿಡಿಯೊದ ಕೆಲವು ಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಹೀಗೆ ಸರ್ಚ್ ಮಾಡಿದಾಗ ಯುಟ್ಯೂಬ್​​ನಲ್ಲಿ ವೈರಲ್ ಕ್ಲಿಪ್ ಹೊಂದಿರುವ ಹಲವಾರು ವಿಡಿಯೊಗಳು ಸಿಕ್ಕಿವೆ. “ವಾಯ್ಸ್ ಆಫ್ ಸಜೆದುಲ್” ಎಂಬ ಚಾನೆಲ್‌ನಲ್ಲಿ ಪ್ರಕಟವಾದ ವಿಡಿಯೊಗಳಲ್ಲಿ ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆಯಾಗಿದೆ ಎಂದು ಹೇಳಿದೆ. ಬೆಂಗಾಲಿ ಭಾಷೆಯಲ್ಲಿ ಬರೆಯಲಾದ ಸೈನ್‌ಬೋರ್ಡ್‌ಗಳು ಮತ್ತು ಅಂಗಡಿ ಫಲಕಗಳನ್ನು ಸಹ ನಾವು ಇದರಲ್ಲಿ ಕಾಣಬಹುದು.

ಇದನ್ನೂ ಓದಿ
Image
Fact Check ಮುಸ್ಲಿಮೇತರ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದಕ್ಕಾಗಿ ಅಮೆರಿಕದಲ್ಲಿ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ; ತಪ್ಪಾದ ಮಾಹಿತಿಯೊಂದಿಗೆ ಹರಿದಾಡುತ್ತಿರುವ ವಿಡಿಯೊ ಅಮೆರಿಕದ್ದಲ್ಲ
Image
Fact Check: ‘ಕೆಜಿಎಫ್​ 3’ ಟ್ರೇಲರ್​ ಬಿಡುಗಡೆ ಆಗಿದ್ಯಾ? ವೈರಲ್ ಆಗಿರುವ ವಿಡಿಯೋದ ಅಸಲಿಯತ್ತು ಇಲ್ಲಿದೆ
Image
Fact Check ಅಸನಿ ಚಂಡಮಾರುತದ ನಡುವೆ ಆಂಧ್ರ ಕರಾವಳಿಗೆ ತೇಲಿ ಬಂದಿದ್ದು ಚಿನ್ನದ ರಥವೇ?; ಬಣ್ಣ ಮಾತ್ರ ಬಂಗಾರದ್ದು, ತೇರು ಸ್ಟೀಲಿನದ್ದು
Image
Fact Check ವಂಚನೆ ಆರೋಪದಡಿಯಲ್ಲಿ ಫೈಜರ್ ಉಪಾಧ್ಯಕ್ಷ ರಾಡಿ ಜಾನ್ಸನ್ ಬಂಧನ ಸುದ್ದಿ ನಿಜವೇ?

ಗೂಗಲ್ ಅನುವಾದವನ್ನು ಬಳಸಿಕೊಂಡು ಬಂಗಾಳಿಯಿಂದ ಇಂಗ್ಲಿಷ್‌ಗೆ ಅನುವಾದಿಸಿದಾಗ “136 ಯುವಕರನ್ನು ಲಕ್ಷ್ಮಿಪುರದ ಕಮಲನಗರ ಮತ್ತು ರಾಮಗಂಜ್ ಉಪಜಿಲಾಗಳಲ್ಲಿ ಧ್ವನಿಪೆಟ್ಟಿಗೆಯಲ್ಲಿ ಜೋರಾಗಿ ಸಂಗೀತ ನುಡಿಸಿದ್ದಕ್ಕಾಗಿ ಬಂಧಿಸಲಾಗಿದೆ” ಎಂದು ಇದರಲ್ಲಿ ಹೇಳಿದೆ.  ಇದನ್ನು ಬಳಸಿಕೊಂಡು ಬೆಂಗಾಲಿಯಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ವೈರಲ್ ವಿಡಿಯೊವನ್ನು ಇರುವ ಸುದ್ದಿಯ ವಿಡಿಯೊ ಸಿಕ್ಕಿದೆ.

ಯುವಕರನ್ನು ಥಳಿಸಿದ ವ್ಯಕ್ತಿಗಳು ‘ತೌಹಿದಿ ಜನತಾ ಇಸ್ಲಾಮಿಸ್ಟ್ ಗುಂಪಿನ ಬೆಂಬಲಿಗರು’ ಎಂದೂ ಅದು ಹೇಳಿದೆ. ಬಾಂಗ್ಲಾದೇಶದ ದೈನಿಕ ದಿ ಡೈಲಿ ಮನೋಬ್ಕಾಂತದಲ್ಲಿ ವರದಿಯ ಪ್ರಕಾರ, ಈದ್ ಸಂದರ್ಭದಲ್ಲಿ ಯುವಕರ ಗುಂಪು ಪಿಕಪ್ ವ್ಯಾನ್‌ಗಳಲ್ಲಿ ಜೋರಾಗಿ ಹಾಡುಗಳನ್ನು ನುಡಿಸುತ್ತಿದ್ದರು, ಅಶ್ಲೀಲ ಸನ್ನೆಗಳನ್ನು ಪ್ರದರ್ಶಿಸಿದರು. ಕಮಲನಗರದ ಉಪಜಿಲಾ ಮೂಲಕ ಹೋಗುವಾಗ ಪಾದಚಾರಿಗಳ ಮೇಲೆ ನೀರು ಚಿಮುಕಿಸಿದ್ದಾರೆ . ಸ್ಥಳೀಯ ಪೊಲೀಸರು ವ್ಯಾನ್‌ಗಳು ಮತ್ತು ಯುವಕರನ್ನು ವಶಕ್ಕೆ ತೆಗೆದುಕೊಂಡರು ಮತ್ತು ವ್ಯಾನ್‌ಗಳ ಚಾಲಕರಿಗೆ 21,500 ಬಾಂಗ್ಲಾದೇಶ ಟಾಕಾ ದಂಡ ವಿಧಿಸಿದರು.

ರಿವರ್ಸ್ ಇಮೇಜ್ ಸರ್ಚ್ ನಡೆಸುತ್ತಿರುವಾಗ,  ಕರ್ನಾಟಕ ರಾಜ್ಯ ಪೊಲೀಸರ ಫ್ಯಾಕ್ಟ್-ಚೆಕ್ ತಂಡದ ಟ್ವೀಟ್ ಕೂಡಾ ಸಿಕ್ಕಿದೆ. ಅಲ್ಲಿ ಅವರು ಫ್ಯಾಕ್ಟ್ ಚೆಕ್ ಮಾಡಿದ ವಿಡಿಯೊದಲ್ಲಿ ವೈರಲ್ ವಿಡಿಯೊ ಹುಬ್ಬಳ್ಳಿಯದ್ದು ಅಲ್ಲ , ಬಾಂಗ್ಲಾದೇಶದ್ದು ಎಂದು ಹೇಳಿದ್ದಾರೆ.

ಹೆಚ್ಚಿನ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ  ಕ್ಲಿಕ್ ಮಾಡಿ