Kannada News World Fact Check Muslim woman in United States was beaten up for dating a non-Muslim man
Fact Check ಮುಸ್ಲಿಮೇತರ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದಕ್ಕಾಗಿ ಅಮೆರಿಕದಲ್ಲಿ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ; ತಪ್ಪಾದ ಮಾಹಿತಿಯೊಂದಿಗೆ ಹರಿದಾಡುತ್ತಿರುವ ವಿಡಿಯೊ ಅಮೆರಿಕದ್ದಲ್ಲ
ಜುಲೈ 2021 ರಲ್ಲಿ ರಷ್ಯಾದ ಕ್ರಾಸ್ನೋಡರ್‌ನಲ್ಲಿ ಮಹಿಳೆ ತನ್ನ ಗೆಳೆಯನೊಂದಿಗೆ ಓಡಿಹೋಗಲು ಪ್ರಯತ್ನಿಸಿದ ನಂತರ ಆಕೆಯ ಮೇಲೆ ಹಲ್ಲೆ ನಡೆಸಲಾಯಿತು. ಆಕೆ ಓಡಿಹೋಗಲು ತೀರ್ಮಾನಿಸಿದ ಹುಡುಗನ ಕುಟುಂಬ ಮತ್ತು ಆಕೆ ಕುಟುಂಬ ಉತ್ತಮ ಸಂಬಂಧದಲ್ಲಿಲ್ಲ
ಮುಸ್ಲಿಮೇತರ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದಕ್ಕಾಗಿ ಅಮೆರಿಕದಲ್ಲಿ(US) ಮುಸ್ಲಿಂ ಮಹಿಳೆಯ (Muslim Woman) ಮೇಲೆ ಹಲ್ಲೆ ಎಂಬ ಒಕ್ಕಣೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿದೆ. ತನ್ನ ಪ್ರಿಯಕರನೊಂದಿಗೆ ಓಡಿಹೋಗಲು ಪ್ರಯತ್ನಿಸಿದ್ದಕ್ಕಾಗಿ ರಷ್ಯಾದಲ್ಲಿ(Russia) ಮುಸ್ಲಿಂ ಮಹಿಳೆಯೊಬ್ಬರ ಮೇಲೆ ಆಕೆಯ ಕುಟುಂಬಸ್ಥರು ಹಲ್ಲೆ ಮಾಡುತ್ತಿರುವ ವಿಡಿಯೊ ಇದಾಗಿದೆ. ಈ ವೈರಲ್ ವಿಡಿಯೊ ರಷ್ಯಾದ ಕ್ರಾಸ್ನೋಡರ್‌ನಲ್ಲಿ ಜುಲೈ 2021 ರಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗೆಳೆಯನೊಂದಿಗೆ ಓಡಿಹೋಗಲು ಪ್ರಯತ್ನಿಸಿದ್ದಕ್ಕಾಗಿ ಆಕೆಯ ಕುಟುಂಬ ಸದಸ್ಯರಿಂದ ಹಲ್ಲೆಗೊಳಾಗುತ್ತಿರುವ ವಿಡಿಯೊ ಎಂದು ಬೂಮ್ ಲೈವ್ ಕಂಡುಹಿಡಿದಿದೆ. ವೈರಲ್ ವಿಡಿಯೊದಲ್ಲಿರುವ ಹುಡುಗಿಯ ಆಪ್ತ ಸ್ನೇಹಿತೆ, ಅವಳು ಓಡಿಹೋಗಲು ಪ್ರಯತ್ನಿಸುತ್ತಿರುವ ವ್ಯಕ್ತಿಯೂ ಮುಸ್ಲಿಂ ಎಂದು ಬೂಮ್ ಗೆ ದೃಢಪಡಿಸಿದ್ದಾರೆ. ವಿಡಿಯೊ ರಷ್ಯಾದ್ದಾಗಿದ್ದು ಆಕೆಯೇ ಈ ವಿಡಿಯೊವನ್ನು ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಅಪ್ಲೋಡ್ ಮಾಡಿದ್ದಾಳೆ.
ಫ್ಯಾಕ್ಟ್ ಚೆಕ್
ವೈರಲ್ ವಿಡಿಯೊದಲ್ಲಿರುವ ಮಹಿಳೆ – ಆಕೆಯ ಕುಟುಂಬ ಮತ್ತು ಆಕೆಯ ಗೆಳೆಯ ಎಲ್ಲರೂ ಮುಸ್ಲಿಮರು ಎಂದು ಬೂಮ್ ಕಂಡುಕೊಂಡಿದೆ. ಜುಲೈ 2021 ರಲ್ಲಿ ರಷ್ಯಾದ ಕ್ರಾಸ್ನೋಡರ್‌ನಲ್ಲಿ ಮಹಿಳೆ ತನ್ನ ಗೆಳೆಯನೊಂದಿಗೆ ಓಡಿಹೋಗಲು ಪ್ರಯತ್ನಿಸಿದ ನಂತರ ಆಕೆಯ ಮೇಲೆ ಹಲ್ಲೆ ನಡೆಸಲಾಯಿತು. ಆಕೆ ಓಡಿಹೋಗಲು ತೀರ್ಮಾನಿಸಿದ ಹುಡುಗನ ಕುಟುಂಬ ಮತ್ತು ಆಕೆ ಕುಟುಂಬ ಉತ್ತಮ ಸಂಬಂಧದಲ್ಲಿಲ್ಲ. ಈ ವಿಡಿಯೊದ ಸತ್ಯಾಸತ್ಯತೆ ಅರಿಯಲು ಬೂಮ್ ಈ ವಿಡಿಯೊವನ್ನು ಕೀಫ್ರೇಮ್‌ಗಳಾಗಿ ವಿಭಜಿಸಿ ಅವುಗಳನ್ನು ರಷ್ಯಾದ ಸರ್ಚ್ ಇಂಜಿನ್ ಯಾಂಡೆಕ್ಸ್ ಮೂಲಕ ಹುಡುಕಾಡಿದೆ. ಈ ವಿಡಿಯೊವನ್ನು ರಷ್ಯಾದ ಹಲವು ವೆಬ್ ಸೈಟ್ಗಳು ಪ್ರಕಟಿಸಿವೆ. Life.ru ಪ್ರಕಾರ, ವೈರಲ್ ವಿಡಿಯೊದಲ್ಲಿ ಕಂಡುಬರುವ ಮಹಿಳೆ ತನ್ನ ಗೆಳೆಯನೊಂದಿಗೆ ಓಡಿಹೋಗಲು ಪ್ರಯತ್ನಿಸಿದ ನಂತರ ರಷ್ಯಾದ ಕ್ರಾಸ್ನೋಡರ್‌ನಲ್ಲಿ ಆಕೆಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಅವಳು ಉಕ್ರೇನ್‌ನ ಹುಡುಗನನ್ನು ಪ್ರೀತಿಸುತ್ತಿದ್ದು, ಅವನೊಂದಿಗೆ ಓಡಿ ಹೋಗಿ ಮದುವೆಯಾಗಲು ಬಯಸಿದ್ದಳು.ಆದರೆ ಅವಳ ಪ್ರಯತ್ನ ವಿಫಲವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ (@insta.diva.shop) ಎಂಬವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಲೇಖನದ ಸ್ಕ್ರೀನ್‌ಶಾಟ್ ಅನ್ನು ಹೊಂದಿದ್ದು, ವೈರಲ್ ವಿಡಿಯೊದಲ್ಲಿ ಕಂಡುಬರುವ ಹುಡುಗಿ ತನ್ನ ಸಹೋದರಿಯಂತೆ. ಆಕೆ ಆಪ್ತ ಸ್ನೇಹಿತೆ ಎಂದು ಖಾತೆದಾರರು ಹೇಳಿದ್ದಾರೆ. ಬೂಮ್ ಏಂಜಲೀನಾ ಜತೆ ಮಾತನಾಡಿದ್ದು ಆಕೆ ಸಂತ್ರಸ್ತೆಯ ಆಪ್ತ ಸ್ನೇಹಿತೆ ಎಂದಿದ್ದು, ವಿಡಿಯೊದಲ್ಲಿರುವ ಮಹಿಳೆ ಮತ್ತು ಅವರ ಗೆಳೆಯ ಒಂದೇ ಧರ್ಮದವರು. ಇವರು ಇಬ್ಬರೂ ಮುಸ್ಲಿಂ ಜಿಪ್ಸಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
ಅವಳು ಓಡಿಹೋದ ನಂತರ ಆಕೆಯ ತಂದೆ ಪೊಲೀಸ್ ದೂರು ದಾಖಲಿಸಿದರು ಮತ್ತು ಪೊಲೀಸರು ಅವಳನ್ನು ಪತ್ತೆ ಹಚ್ಚಿ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ಶತ್ರು ಕುಟುಂಬದ ಹುಡುಗನೊಂದಿಗೆ ಓಡಿಹೋಗಲು ಬಯಸಿದ್ದಕ್ಕಾಗಿ ಸಹೋದರ ಅವಳನ್ನು ಹೊಡೆದಿದ್ದಾನೆ ಎಂದು ಏಂಜಲೀನಾ ಹೇಳಿದ್ದಾರೆ. ವಿಡಿಯೊದಲ್ಲಿರುವ ಹುಡುಗಿಯ ಗೆಳೆಯ ಉಕ್ರೇನ್‌ನಲ್ಲಿದ್ದ. ಆದರೆ ಈಗ ಅವನು ಜರ್ಮನಿಯಲ್ಲಿದ್ದಾನೆ ಮತ್ತು ಅವಳು ಈಗ ರಷ್ಯಾದ ಸಾರಾಟೊವ್‌ನಲ್ಲಿದ್ದಾಳೆ ಎಂದು ಏಂಜಲೀನಾ ಹೇಳಿದ್ದಾರೆ.
ಹೆಚ್ಚಿನ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ