Imran Khan: “ಪಾಕಿಸ್ತಾನದ ಮೇಲೆ ಅಣು ಬಾಂಬ್ ಹಾಕುವುದು ಉತ್ತಮ” ಎಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಅಪರಾಧಿಗಳು ಅಧಿಕಾರದಲ್ಲಿ ಇರುವ ಬದಲಿಗೆ ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕುವುದು ಉತ್ತಮ ಎಂದು ಪಾಕ್​ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಖಾರವಾಗಿ ಮಾತನಾಡಿದ್ದಾರೆ.

Imran Khan: ಪಾಕಿಸ್ತಾನದ ಮೇಲೆ ಅಣು ಬಾಂಬ್ ಹಾಕುವುದು ಉತ್ತಮ ಎಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಖಾನ್ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on: May 14, 2022 | 8:32 PM

ಸರ್ಕಾರದಲ್ಲಿ ಅಪರಾಧಿಗಳು ಇರುವ ಬದಲಿಗೆ ಪಾಕಿಸ್ತಾನದ ಮೇಲೆ ಅಣು ಬಾಂಬ್ ಹಾಕುವುದು ಉತ್ತಮ ಎಂದು ಎಂದು ಪಾಕ್​ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಹೇಳಿದ್ದಾರೆ. ಈಚೆಗಷ್ಟೇ ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಅಧಿಕಾರ ಕಳೆದುಕೊಂಡ ಮೊದಲ ಪಾಕ್ ಪ್ರಧಾನಿ ಎನಿಸಿಕೊಂಡ ಖಾನ್ ಮಾತನಾಡಿ, ಎಸ್ಟಾಬ್ಲಿಷ್​ಮೆಂಟ್ ನನಗೆ ಕರೆ ಮಾಡುತ್ತಿದೆ. ಆದರೆ ನಾನು ಅವರ ನಂಬರ್ ಬ್ಲಾಕ್ ಮಾಡಿದ್ದೇನೆ. ಚುನಾವಣೆ ದಿನಾಂಕ ಘೋಷಣೆ ಆಗುವ ತನಕ ಯಾರೊಂದಿಗೂ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಡಾನ್ ಪತ್ರಿಕೆ ವರದಿ ಮಾಡಿದೆ. ತನ್ನ ಸರ್ಕಾರ ಉರುಳುವುದಕ್ಕೆ ಅಮೆರಿಕವು ಆಗಿನ ವಿಪಕ್ಷದ ಜತೆಗೆ ಸೇರಿ ಮಾಡಿದ “ಪಿತೂರಿ”ಯೇ ಕಾರಣ ಎಂದು ಪದೇಪದೇ ಹೇಳಿದ್ದಾರೆ. ಪಿತೂರಿಗೆ ಬೆಂಬಲ ನೀಡಿದವರು ಪಾಕಿಸ್ತಾನದ ಭವಿಷ್ಯದ ಬಗ್ಗೆ ಯೋಚಿಸಿದರೋ ಇಲ್ಲವೋ ಎಂದು ಖಾನ್ ಕೇಳಿರುವುದಾಗಿ ಜಿಯೋ ಸುದ್ದಿ ವಾಹಿನಿ ವರದಿ ಮಾಡಿದೆ.

“ಈ ಅಪರಾಧಿಗಳು ಅಧಿಕಾರದಲ್ಲಿ ಇರುವ ಬದಲಿಗೆ ಪಾಕಿಸ್ತಾನದ ಮೇಲೆ ಅಣು ಬಾಂಬ್ ಹಾಕುವುದು ಉತ್ತಮ,” ಎಂದು ಇಮ್ರಾನ್ ಖಾನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಅಧ್ಯಕ್ಷರಾಗಿರುವ ಇಮ್ರಾನ್ ಖಾನ್, ಕಳೆದ ಜೂನ್​ನಲ್ಲಿ ನನಗೆ ಈ ಪಿತೂರಿ ಬಗ್ಗೆ ಗೊತ್ತಾಯಿತು. ಆದರೆ ದುರದೃಷ್ಟ ಏನೆಂದರೆ, “ಎಲ್ಲ ನಿರ್ಧಾರಗಳನ್ನು” ಸರ್ಕಾರ ದುರ್ಬಲಗೊಳಿಸಲು ತೆಗೆದುಕೊಳ್ಳಲಾಯಿತು ಮತ್ತು ಆ ನಂತರ ಮುಕ್ತಾಯಗೊಂಡಿತು ಎಂದಿದ್ದಾರೆ.

ಎಸ್ಟಾಬ್ಲಿಷ್​ಮೆಂಟ್​ (ಸೇನೆ) ಜತೆಗಿನ ಸಂಬಂಧ ನನ್ನ ಸರ್ಕಾರದ ಕೊನೆ ದಿನದ ತನಕ ಚೆನ್ನಾಗಿತ್ತು. ಆದರೆ ಆದರೆ ಎರಡು ಸಮಸ್ಯೆಗಳಿದ್ದವು. ಅವುಗಳ ಬಗ್ಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ. “ಪ್ರಬಲ ಕೇಂದ್ರಕ್ಕೆ” ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬಜ್ದಾರ್ ತೆಗೆಯಬೇಕಿತ್ತು. ಆದರೆ ಅವರು ಹೇಳಬೇಕಿತ್ತು, “ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚು ಭ್ರಷ್ಟಾಚಾರ ಹಾಗೂ ಆಡಳಿತ ಸಮಸ್ಯೆ ಇತ್ತು,” ಎಂದಿದ್ದಾರೆ ಇಮ್ರಾನ್. ಇನ್ನೂ ಮುಂದುವರಿದು, ದೇಶದ ಸ್ಪೈ ಮಾಸ್ಟರ್ (ಗೂಢಚಾರಿ) ಲೆ. ಜನರಲ್ ಫೈಜ್ ಹಮೀದ್ ವಿಚಾರದಲ್ಲಿ ಎಸ್ಟಾಬ್ಲಿಷ್​ಮೆಂಟ್, ಅಂದರೆ ಸೇನೆ ಜತೆಗೆ ಭಿನ್ನಾಭಿಪ್ರಾಯ ಇತ್ತು ಎಂದಿದ್ದಾರೆ.

ಈ “ಆಮದು ಸರ್ಕಾರ” ಏನನ್ನೂ ಮಾಡುತ್ತಿಲ್ಲ. ದೇಶದಲ್ಲಿ ಇವರು ಕೆಲಸ ಮಾಡಲಿ ಎಂಬ ನಿರೀಕ್ಷೆ ಇದೆ.

ಇನ್ನಷ್ಟು ವಿದೇಶ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕತ್ತೆ ಮೇಲೆ ಗೆರೆ ಎಳೆದರೆ ಅದು ಝೀಬ್ರಾ ಆಗಲ್ಲ, ಕತ್ತೆ ಯಾವತ್ತೂ ಕತ್ತೆಯೇ: ಇಮ್ರಾನ್ ಖಾನ್ ಹೇಳಿಕೆ ವೈರಲ್

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ