Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia Ukraine War: ಪುಟಿನ್ ಅಧಿಕಾರ ಚ್ಯುತಿಗೆ ರಷ್ಯಾದಲ್ಲಿ ತೀವ್ರ ಪ್ರಯತ್ನ, ಮಿಲಿಟರಿ ಕ್ರಾಂತಿ ಸಾಧ್ಯತೆ; ಉಕ್ರೇನ್

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ಆರಂಭವಾಗಿವೆ, ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಉಕ್ರೇನ್​ನ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

Russia Ukraine War: ಪುಟಿನ್ ಅಧಿಕಾರ ಚ್ಯುತಿಗೆ ರಷ್ಯಾದಲ್ಲಿ ತೀವ್ರ ಪ್ರಯತ್ನ, ಮಿಲಿಟರಿ ಕ್ರಾಂತಿ ಸಾಧ್ಯತೆ; ಉಕ್ರೇನ್
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 15, 2022 | 1:13 PM

ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಮೂರು ತಿಂಗಳು ಸಮೀಪಿಸುತ್ತಿದೆ. ಈವರೆಗೆ ನಿರ್ಣಾಯಕ ಜಯ ಗಳಿಸುವಲ್ಲಿ ಅಥವಾ ಯಾವುದೇ ಮುಖ್ಯ ನಗರಗಳನ್ನು ವಶಪಡಿಸಿಕೊಳ್ಳುವಲ್ಲಿ ರಷ್ಯಾಕ್ಕೆ ಸಾಧ್ಯವಾಗಿಲ್ಲ. ಆದರೆ ದಿನದಿಂದ ದಿನಕ್ಕೆ ರಷ್ಯಾಕ್ಕೆ ಉಕ್ರೇನ್​ನಲ್ಲಿ (Russia Ukraine Crisis) ಹಿನ್ನಡೆಯಾಗುತ್ತಿದ್ದು, ಖಾರ್ಕಿವ್ ಸೇರಿದಂತೆ ಹಲವು ನಗರಗಳಿಂದ ರಷ್ಯಾ ಸೇನೆ ಈಗಾಗಲೇ ಹಿಮ್ಮೆಟ್ಟಿದೆ. ಈ ನಡುವೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳು ಆರಂಭವಾಗಿವೆ, ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಉಕ್ರೇನ್​ನ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ಕೈ ನ್ಯೂಸ್ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಉಕ್ರೇನ್ ಸೇನೆಯ ಮೇಜರ್ ಜನರಲ್ ಕಿರ್​ಯ್ಲೊ ಬುಡಾನೊವ್, ‘ಆಗಸ್ಟ್​ ವೇಳೆಗೆ ಯುದ್ಧವು ಒಂದು ಮಹತ್ವದ ತಿರುವು ಪಡೆಯಲಿದೆ. ಈ ವರ್ಷಾಂತ್ಯಕ್ಕೆ ಯುದ್ಧವು ಮುಕ್ತಾಯವಾಗಲಿದೆ. ಒಂದು ವೇಳೆ ರಷ್ಯಾ ಯುದ್ಧದಲ್ಲಿ ಸೋತರೆ ಪುಟಿನ್ ಅಧಿಕಾರ ಕಳೆದುಕೊಳ್ಳುವುದಷ್ಟೇ ಅಲ್ಲ, ರಷ್ಯಾ ಕುಸಿಯಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.

‘ಯುದ್ಧದ ಸೋಲನ್ನು ಅಂದಾಜಿಸಿರುವ ರಷ್ಯಾದ ಉನ್ನತ ನಾಯಕತ್ವ ಈಗಾಗಲೇ ನಾಯಕತ್ವ ಬದಲಾವಣೆ ಬಗ್ಗೆ ಚಿಂತನೆ ನಡೆಸಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅವರು ಅತ್ತ ಮುನ್ನಡೆಯುತ್ತಿದ್ದಾರೆ. ಮಿಲಿಟರಿ ಕ್ಷಿಪ್ರಕ್ರಾಂತಿ ಆಗಬಹುದು ಎಂದು ಊಹಿಸುವಿರಾ ಎಂದು ಕೇಳಿದ್ದಕ್ಕೆ, ‘ಅಲ್ಲಿ ಅಂಥ ಪ್ರಯತ್ನಗಳು ನಡೆಯುತ್ತಿವೆ. ಅದನ್ನು ತಡೆಯಲು ಆಗುವುದಿಲ್ಲ’ ಎಂದು ಹೇಳಿದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿವೆ. ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಳಾಗಿದೆ. ನಾನೇನೂ ರಷ್ಯಾ ವಿರುದ್ಧ ಅಪಪ್ರಚಾರ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

‘ಇದು ನನ್ನ ಕೆಲಸ, ನನ್ನನ್ನು ಬಿಟ್ಟರೆ ಬೇರೆ ಯಾರಿಗೆ ತಾನೆ ಇಂಥ ವಿಷಯ ತಿಳಿದಿರಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು. ರಷ್ಯಾ-ಉಕ್ರೇನ್​ ಸಂಘರ್ಷ ತಾರಕಕ್ಕೇರಿಸುವಂತೆಯೇ ಪುಟಿನ್ ಆರೋಗ್ಯ ಪರಿಸ್ಥಿತಿ ಬಗ್ಗೆ ಊಹಾಪೋಹಗಳು ವರದಿಯಾಗಿವೆ. ಬೇಲರೂಸ್​ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಅವರನ್ನು ಭೇಟಿಯಾಗುವ ಪುಟಿನ್ ಕೈಗಳು ನಡುತ್ತಿದ್ದ ಬಗ್ಗೆ ಹಲವು ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಪುಟಿನ್​ಗೆ ಪಾರ್ಕಿನ್​ಸನ್ ಕಾಯಿಲೆ ಇರಬಹುದು ಎಂದು ಹಲವು ಹೇಳಿದ್ದರು.

ಪುಟಿನ್ ಆರೋಗ್ಯ ಕುರಿತು ರಷ್ಯಾ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ರಷ್ಯಾದ ಉನ್ನತ ನಾಯಕತ್ವವು ಪುಟಿನ್​ ಸಾರ್ವಜನಿಕವಾಗಿ ಹೇಗೆ ಕಾಣಿಸಿಕೊಳ್ಳಬೇಕು, ವಿದೇಶಗಳ ನಾಯಕರೊಂದಿಗೆ ಎಷ್ಟು ಹೊತ್ತು ಸಭೆಗಳನ್ನು ನಡೆಸಬೇಕು ಎಂಬುದನ್ನು ಬಿಗಿಯಾಗಿ ನಿಯಂತ್ರಿಸುತ್ತಿದೆ. ವಿಕ್ಟರಿ ಡೇ ಪೆರೇಡ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪುಟಿನ್ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ ಎಂಬುದನ್ನು ಪಾಶ್ಚಿಮಾತ್ಯ ದೇಶಗಳು ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲಿಸುತ್ತಿವೆ.

ಯೂರೋಪ್ ದೇಶಗಳನ್ನು ರಷ್ಯಾವನ್ನು ದೊಡ್ಡ ಆತಂಕ, ದೊಡ್ಡ ಮಿಲಿಟರಿ ಶಕ್ತಿ ಎಂದು ಭಾವಿಸುತ್ತವೆ. ಆದರೆ ರಷ್ಯಾಕ್ಕೆ ಅಷ್ಟು ಶಕ್ತಿ ಇಲ್ಲ. ರಷ್ಯಾ ಕೇವಲ ಕಾಗದದ ಹುಲಿ. ಒಂದಿಷ್ಟು ಆಯುಧಗಳನ್ನು ಹಿಡಿದಿರುವ ಜನರ ಗುಂಪು ಅಷ್ಟೇ. ಉಕ್ರೇನ್​ನ ಹಲವೆಡೆ ರಷ್ಯಾ ಈಗಾಗಲೇ ಹಿಮ್ಮೆಟ್ಟಿದೆ. ಖಾರ್ಕಿವ್ ನಗರದಲ್ಲಿ ರಷ್ಯಾ ಪಡೆಗಳಿಗೆ ಸೋಲಾಗಿದೆ. ರಷ್ಯಾದ ಸಾಕಷ್ಟು ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಕಳೆದುಕೊಂಡಿದೆ ಎಂದು ಉಕ್ರೇನ್ ಹೇಳಿದೆ.

Published On - 1:12 pm, Sun, 15 May 22

ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್