Sheikh Khalifa bin Zayed ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ವಿಧಿವಶ

UAE President Passes Away ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದ ಬಗ್ಗೆ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಯುಎಇ, ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರ ಮತ್ತು ಪ್ರಪಂಚದ ಜನರಿಗೆ ಸಂತಾಪ ವ್ಯಕ್ತಪಡಿಸುತ್ತದೆ...

Sheikh Khalifa bin Zayed ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ವಿಧಿವಶ
ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ Image Credit source: AFP
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 13, 2022 | 6:35 PM

ಯುಎಇ (UAE) ಅಧ್ಯಕ್ಷ ಮತ್ತು ಅಬುಧಾಬಿಯ (Abu Dhabi) ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Khalifa bin Zayed Al Nahyan) ಶುಕ್ರವಾರ ನಿಧನರಾದರು ಎಂದು ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದ ಬಗ್ಗೆ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಯುಎಇ, ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರ ಮತ್ತು ಪ್ರಪಂಚದ ಜನರಿಗೆ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಡಬ್ಲ್ಯುಎಎಂ ಸುದ್ದಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಶೇಖ್ ಖಲೀಫಾ ಅವರು ಯುಎಇ ಅಧ್ಯಕ್ಷ, ಅಬುಧಾಬಿಯ ಆಡಳಿತಗಾರರಾಗಿ ನವೆಂಬರ್ 3, 2004 ರಿಂದ ಸೇವೆ ಸಲ್ಲಿಸುತ್ತಿದ್ದರು. ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕಾಗಿ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಧ್ವಜಗಳನ್ನು ಅರ್ಧಕ್ಕೆ ಹಾರಿಸಲಾಗುತ್ತದz. ಸಚಿವಾಲಯಗಳು, ಇಲಾಖೆಗಳು, ಫೆಡರಲ್ ಮತ್ತು ಸ್ಥಳೀಯ ಸಂಸ್ಥೆಗಳು ಶುಕ್ರವಾರದಿಂದ ಕೆಲಸವನ್ನು ಸ್ಥಗಿತಗೊಳಿಸುತ್ತವೆ ಎಂದು ವರದಿಯಲ್ಲಿ ಹೇಳಿದೆ.  ನಹ್ಯಾನ್ ತಮ್ಮ ತಂದೆ ದಿವಂಗತ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು 1971 ರಲ್ಲಿ ಒಕ್ಕೂಟದಿಂದ ಯುಎಇಯ ಮೊದಲ ಅಧ್ಯಕ್ಷರಾಗಿ ನವೆಂಬರ್ 2, 2004 ರಂದು ನಿಧನರಾಗುವವರೆಗೆ ಸೇವೆ ಸಲ್ಲಿಸಿದರು.

1948 ರಲ್ಲಿ ಜನಿಸಿದ ಶೇಖ್ ಖಲೀಫಾ ಯುಎಇಯ ಎರಡನೇ ಅಧ್ಯಕ್ಷ ಮತ್ತು ಅಬುಧಾಬಿ ಎಮಿರೇಟ್‌ನ 16 ನೇ ಆಡಳಿತಗಾರರಾಗಿದ್ದರು. ಅವರು ಶೇಖ್ ಜಾಯೆದ್ ಅವರ ಹಿರಿಮಗ. ಯುಎಇ ಅಧ್ಯಕ್ಷರಾದಾಗಿನಿಂದ ಶೇಖ್ ಖಲೀಫಾ ಅವರು ಫೆಡರಲ್ ಸರ್ಕಾರ ಮತ್ತು ಅಬುಧಾಬಿ ಸರ್ಕಾರದ ಪ್ರಮುಖ ಪುನರ್ರಚನೆಯ ಮುಂದಾಳತ್ವ ವಹಿಸಿದ್ದಾರೆ. ಅವರ ಆಳ್ವಿಕೆಯಲ್ಲಿ, ಯುಎಇ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿಗೆ ಸಾಕ್ಷಿಯಾಯಿತು.

ಇದನ್ನೂ ಓದಿ
Image
ಮುಂಬೈ ಸರಣಿ ಸ್ಫೋಟದ ಆರೋಪಿ, ದಾವೂದ್ ಇಬ್ರಾಹಿಂ ಆಪ್ತ ಅಬು ಬಕರ್​ ಯುಎಇಯಲ್ಲಿ ಬಂಧನ; ಶೀಘ್ರವೇ ಭಾರತಕ್ಕೆ ಕರೆತಂದು ವಿಚಾರಣೆ
Image
ಭಾರತ ಸೇರಿ ಹಲವು ದೇಶಗಳಿಗೆ UAE ಹೇರಿದ್ದ ನಿಷೇಧ ತೆರವು; ಆ. 5ರಿಂದ ವಿಮಾನ ಹಾರಾಟಕ್ಕೆ ಅನುಮತಿ

ಸಂತಾಪ ಸೂಚಿಸಿದ ಗಣ್ಯರು

ಶೇಖ್ ಖಲೀಫಾ ಬಿನ್ ಜಾಯೆದ್ ಅವರ ನಿಧನದ ಬಗ್ಗೆ ತಿಳಿದು ನನಗೆ ಅತೀವ ದುಃಖವಾಗಿದೆ. ಅವರು ಒಬ್ಬ ಮಹಾನ್ ರಾಜನೀತಿಜ್ಞ ಮತ್ತು ದಾರ್ಶನಿಕ ನಾಯಕರಾಗಿದ್ದರು, ಅವರ ನೇತೃತ್ವದಡಿಯಲ್ಲಿ ಭಾರತ-ಯುಎಇ ಸಂಬಂಧಗಳು ಸಮೃದ್ಧವಾಗಿವೆ. ಭಾರತದ ಜನರ ಹೃತ್ಪೂರ್ವಕ ಸಂತಾಪಗಳು ಯುಎಇ ಜನರೊಂದಿಗೆ ಇವೆ. ಆತ್ಮಕ್ಕೆ ಶಾಂತಿ ಸಿಗಲಿ-ಪ್ರಧಾನಿ ನರೇಂದ್ರ ಮೋದಿ

ಕೇರಳದೊಂದಿಗೆ ಸದಾ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಂಡಿರುವ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಎಮಿರೇಟ್ಸ್ ಅನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ದೂರದೃಷ್ಟಿಯ ನಾಯಕರಾಗಿದ್ದರು. ಅವರ ಕೊಡುಗೆಗಳು ಎಂದೆಂದಿಗೂ ಸ್ಮರಣೀಯ- ಕೇರಳದ ಮುಖ್ಯಮಂತ್ರಿ ಪಿಣರಾಯಿ  ವಿಜಯನ್

ಶೇಖ್ ಖಲೀಫಾ ಬಿನ್ ಜಾಯೆದ್ ಅಲ್-ನಹ್ಯಾನ್ ಅವರ ಕುಟುಂಬಕ್ಕೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜನರಿಗೆ ನನ್ನ ಹೃದಯದಿಂದ ಸಂತಾಪಗಳು. ಯುಎಇಗೆ ತ್ವರಿತ ಅಭಿವೃದ್ಧಿಯನ್ನು ತಂದ ದೂರದೃಷ್ಟಿಯ ನಾಯಕ ಎಂದು ಅವರನ್ನು ಪ್ರೀತಿಯಿಂದ ಸ್ಮರಿಸಲಾಗುವುದು- ರಾಹುಲ್ ಗಾಂಧಿ

ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನದ ಬಗ್ಗೆ ತಿಳಿದು ನಿಜವಾಗಿಯೂ ದುಃಖವಾಗಿದೆ. ಅವರು ಪಾಕಿಸ್ತಾನದ ಉತ್ತಮ ಸ್ನೇಹಿತ ಮತ್ತು ಅವರ ಜನರ ದೂರದೃಷ್ಟಿಯ ನಾಯಕರಾಗಿದ್ದರು. ನನ್ನ ಹೃತ್ಪೂರ್ವಕ ಸಂತಾಪಗಳು ಮತ್ತು ಪ್ರಾರ್ಥನೆಗಳು- ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಯುಎಇ ಅಧ್ಯಕ್ಷರಾದ ಹೆಚ್ ಎಚ್ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್-ನಹ್ಯಾನ್ ಅವರ ನಿಧನದ ಬಗ್ಗೆ ಕೇಳಿ ತೀವ್ರ ದುಃಖವಾಯಿತು. ಯುಎಇ ದೂರದೃಷ್ಟಿಯ ನಾಯಕನನ್ನು ಕಳೆದುಕೊಂಡಿದೆ ಮತ್ತು ಪಾಕಿಸ್ತಾನ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದೆ. ನಾವು ಯುಎಇ ಸರ್ಕಾರ ಮತ್ತು ಜನರಿಗೆ ನಮ್ಮ ಹೃತ್ಪೂರ್ವಕ ಸಂತಾಪ ಮತ್ತು ಸಹಾನುಭೂತಿಗಳನ್ನು ಕಳುಹಿಸುತ್ತೇವೆ. ಅಲ್ಲಾಹು ಅವರ ಆತ್ಮಕ್ಕೆ ಶಾಂತಿ ನೀಡಲಿ- ಪಾಕ್  ಪ್ರಧಾನಿ ಶಹಬಾಜ್  ಶರೀಫ್ 

ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:26 pm, Fri, 13 May 22

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?