AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ವಂಚನೆ ಆರೋಪದಡಿಯಲ್ಲಿ ಫೈಜರ್ ಉಪಾಧ್ಯಕ್ಷ ರಾಡಿ ಜಾನ್ಸನ್ ಬಂಧನ ಸುದ್ದಿ ನಿಜವೇ?

ಫ್ಯಾಕ್ಟ್  ಚೆಕ್  ವರದಿ ಪ್ರಕಾರ ಈ ಲೇಖನವನ್ನು 6  2022 ರಂದು 'ವ್ಯಾಂಕೋವರ್ ಟೈಮ್ಸ್' ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಾಯೋಗಿಕ ಲಸಿಕೆಯ ನಿಖರವಾದ ಅಪಾಯಗಳನ್ನು ಬಹಿರಂಗಪಡಿಸುವ ಸಾವಿರಾರು...

Fact Check ವಂಚನೆ ಆರೋಪದಡಿಯಲ್ಲಿ ಫೈಜರ್ ಉಪಾಧ್ಯಕ್ಷ ರಾಡಿ ಜಾನ್ಸನ್ ಬಂಧನ ಸುದ್ದಿ ನಿಜವೇ?
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳುಸುದ್ದಿ
TV9 Web
| Edited By: |

Updated on: May 10, 2022 | 6:41 PM

Share

ಕೊವಿಡ್-19 ಲಸಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ ಫಾರ್ಮಾಸ್ಯುಟಿಕಲ್ ಕಂಪನಿ ಫೈಜರ್‌ನ (Pfizer) ಉಪಾಧ್ಯಕ್ಷ ರಾಡಿ ಜಾನ್ಸನ್ (Rady Johnson) ಅವರನ್ನು ಬಂಧಿಸಲಾಗಿದೆ ಎಂಬ ಲೇಖನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ವ್ಯಾಂಕೋವರ್ ಟೈಮ್ಸ್’ ನಲ್ಲಿ (Vancouver Times)  ಪ್ರಕಟವಾದ ಲೇಖನ ಇದಾಗಿದ್ದು ‘ವ್ಯಾಂಕೋವರ್ ಟೈಮ್ಸ್’ ಎಂಬುದು ಅಣಕು ವೆಬ್ ಸೈಟ್ ಆಗಿದೆ. ಕೊವಿಡ್ ಸಾಂಕ್ರಾಮಿಕ ರೋಗದ ಆರಂಭದಿಂದಲೂ ಮತ್ತು ವ್ಯಾಕ್ಸಿನೇಷನ್ ಡ್ರೈವ್‌ನ ಆರಂಭದಿಂದಲೂ ಫೈಜರ್ ಬಗ್ಗೆ ಹಲವಾರು ತಪ್ಪು ಮಾಹಿತಿಗಳು ಹರಿದಾಡುತ್ತಲೇ ಇವೆ. ಅದರ ಸಿಇಒ ಆಲ್ಬರ್ಟ್ ಬೌರ್ಲಾ ಅವರನ್ನು ವಂಚನೆಯ ಆರೋಪದ ಮೇಲೆ ಬಂಧಿಸಲಾಗಿದೆ.  ಅವರು ಸ್ವತಃ ಕೊವಿಡ್ ಲಸಿಕೆ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಈ ಹಿಂದೆ ಕೇಳಿ ಬಂದಿತ್ತು. ಫೈಜರ್ ದಾಖಲೆಗೆಳು ಬಿಡುಗಡೆ ಆದ ನಂತರ ಫೈಜರ್ ವಿಪಿಯನ್ನು ಬಂಧಿಸಲಾಗಿದೆ ಎಂಬ ಶೀರ್ಷಿಕೆಯ ಲೇಖನದ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಲವಾರು ಮಂದಿ ಹಂಚಿಕೊಂಡಿದ್ದಾರೆ. “ಆಘಾತಕಾರಿ ವಿಚಾರಣೆಯ ಡೇಟಾ” ತೋರಿಸುವ ದಾಖಲೆಗಳ ಬಿಡುಗಡೆಯ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೋಸ್ಟ್‌ಗಳು ಉಲ್ಲೇಖಿಸಿವೆ.

ಫ್ಯಾಕ್ಟ್  ಚೆಕ್

ಈ ವೈರಲ್ ಟ್ವೀಟ್​​ನ್ನು ದಿ ಕ್ವಿಂಟ್  ಫ್ಯಾಕ್ಟ್  ಚೆಕ್ ಮಾಡಿದೆ. ಫ್ಯಾಕ್ಟ್  ಚೆಕ್  ವರದಿ ಪ್ರಕಾರ ಈ ಲೇಖನವನ್ನು 6  2022 ರಂದು ‘ವ್ಯಾಂಕೋವರ್ ಟೈಮ್ಸ್’ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಾಯೋಗಿಕ ಲಸಿಕೆಯ ನಿಖರವಾದ ಅಪಾಯಗಳನ್ನು ಬಹಿರಂಗಪಡಿಸುವ ಸಾವಿರಾರು ಗೌಪ್ಯ ದಾಖಲೆಗಳನ್ನು ಫೈಜರ್ ಬಹಿರಂಗಪಡಿಸಿದ ನಂತರ ಫೆಡರಲ್ ಅಧಿಕಾರಿಗಳು ಫೈಜರ್​​ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಡಿ ಜಾನ್ಸನ್ ಅವರನ್ನು ಅವರ ಮನೆಯಲ್ಲಿ ಬಂಧಿಸಿದರು. ಅನೇಕ ವಂಚನೆಯ ಆರೋಪಗಳನ್ನು ಹೊರಿಸಿದರು ಎಂದು ಸುದ್ದಿ ಹೇಳುತ್ತದೆ. ಆದಾಗ್ಯೂ, ಇದು ನಿಜವಾದ ಸುದ್ದಿಯಲ್ಲ. ರಾಡಿ ಜಾನ್ಸನ್ ಅವರನ್ನು ಯಾವುದೇ ಕ್ರಿಮಿನಲ್ ಅಪರಾಧಕ್ಕಾಗಿ ಬಂಧಿಸಲಾಗಿಲ್ಲ ಅಥವಾ ಆರೋಪ ಮಾಡಲಾಗಿಲ್ಲ. ಇಂತಹ ಘಟನೆಯನ್ನು ಯಾವುದೇ ವಿಶ್ವಾಸಾರ್ಹ ಸುದ್ದಿವಾಹಿನಿ ವರದಿ ಮಾಡಿಲ್ಲ.

ಇದನ್ನೂ ಓದಿ
Image
Fact Check 18-40 ವರ್ಷ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ₹1,800 ನೀಡುತ್ತಿದೆಯೇ?

ವ್ಯಾಂಕೋವರ್ ಟೈಮ್ಸ್‌ನ “ಅಬೌಟ್ ಅಸ್” ವಿಭಾಗವು “ವಿಡಂಬನಾತ್ಮಕ ಉದ್ದೇಶಕ್ಕಾಗಿ” ಮಾತ್ರ ವಿಷಯವನ್ನು ಪ್ರಕಟಿಸುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ವೆಬ್‌ಸೈಟ್ ಇದಕ್ಕೆ ಡಿಸ್ಕ್ಲೈಮರ್ ಕೂಡಾ ಹಾಕಿದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ