AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕ ಶಿವನಗೌಡ ನಾಯಕ್‌ ಸರ್ಕಾರಿ ಅಧಿಕಾರಿಗೆ ನಿಂದಿಸಿರೊ ಪ್ರಕರಣ: ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಕರ್ನಾಟಕ ಇಂಜಿನಿಯರ್​ಗಳ ಸಂಘ ಆಕ್ರೋಶ

ಕೆಟ್ಟ ಪದಗಳ ಮೂಲಕ ಪರಿಶಿಷ್ಟ ಜಾತಿಯ ಒಬ್ಬ ಅಧಿಕಾರಿಯನ್ನ ನಿಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. 

ಶಾಸಕ ಶಿವನಗೌಡ ನಾಯಕ್‌ ಸರ್ಕಾರಿ ಅಧಿಕಾರಿಗೆ ನಿಂದಿಸಿರೊ ಪ್ರಕರಣ: ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಕರ್ನಾಟಕ ಇಂಜಿನಿಯರ್​ಗಳ ಸಂಘ ಆಕ್ರೋಶ
ಬಿಜೆಪಿ ಶಾಸಕ ಶಿವನಗೌಡ ನಾಯಕ್, ಚೀಫ್ ಇಂಜಿನಿಯರ್
TV9 Web
| Edited By: |

Updated on:May 19, 2022 | 9:49 AM

Share

ರಾಯಚೂರು: ಜಿಲ್ಲೆಯ ದೇವದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ್‌ ಸರ್ಕಾರಿ ಅಧಿಕಾರಿಗೆ ನಿಂದಿಸಿರೊ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿರುದ್ಧ ಕರ್ನಾಟಕ ಇಂಜಿನಿಯರ್​ಗಳ ಸಂಘ ಆಕ್ರೋಶಗೊಂಡಿದ್ದು, ಶಿವನಗೌಡ ನಾಯಕ್ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದಿದ್ದಾರೆ. ರಾಜ್ಯ ಸರ್ಕಾರ, ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ಇಂಜಿನಿಯರ್​ಗಳ ಸಂಘ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ರಾಜ್ಯಮಟ್ಟದ ಅಧಿಕಾರಿಗೆ ಈ ರೀತಿ ಬೈದಿದ್ದಾರೆ ಅಂದ್ರೆ, ಸಾಮಾನ್ಯ ನೌಕರನ ಗತಿ ಏನು ಎಂದು ಪ್ರಶ್ನಿಸಿದ್ದು, ನಾನು ಹೇಳುವವರೆಗೆ ಬಿಲ್‌ ಮಾಡುವಂತಿಲ್ಲ ಎಂದಿದ್ದಾರೆ. ಈ ರೀತಿ ಶಾಸಕ, ಮಂತ್ರಿ ಹೇಳೊವರೆಗೆ ಕೈಗೊಂಡ ಕಾಮಗಾರಿಗೆ ಬಿಲ್ ಪಾವತಿ ಮಾಡಬಾರದೇ, ಶಾಸಕರು ಪೂಜೆ ಕೈಗೊಳ್ಳದೇ ಕಾಮಗಾರಿ ನಡೆಸಬಾರದು ಎಂದು, ಸರ್ಕಾರ ಆದೇಶ ಕೊಟ್ಟರೆ ಪಾಲಿಸಲು ಸಿದ್ಧ ಎಂದು ಇಂಜಿನಿಯರ್​ಗಳ ಸಂಘ ಹೇಳಿದೆ. ಕೆಟ್ಟ ಪದಗಳ ಮೂಲಕ ಪರಿಶಿಷ್ಟ ಜಾತಿಯ ಒಬ್ಬ ಅಧಿಕಾರಿಯನ್ನ ನಿಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕ ಶಿವನಗೌಡ ನಾಯಕ್​ನಿಂದ ಚೀಫ್ ಇಂಜಿನಿಯರ್​ಗೆ ನಿಂದನೆ

ಕೆಬಿಜೆಎನ್​ಎಲ್​ನ ಕಾಮಗಾರಿ ಸಂಬಂಧಿಸಿದಂತೆ ಶಾಸಕ ಶಿವನಗೌಡ ನಾಯಕ್ ಬೈದಿರೋದು ಎನ್ನಲಾದ ಆಡಿಯೋ, ಕಾಲುವೆ ನವೀಕರಣ ಕಾಮಗಾರಿ ಬಿಲ್ ಕ್ಲಿಯರ್ ವಿಚಾರವಾಗಿ ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡದೇ‌ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಚೀಫ್ ಇಂಜಿನಿಯರ್ ಜೊತೆ ವಾಗ್ವಾದ ನಡೀತಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಗುತ್ತಿಗೆದಾರ ಕಂಪೆನಿಗೆ 200 ಕೋಟಿ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಶಾಸಕ ಆಕ್ರೋಶಗೊಂಡಿದ್ದು, ಚೀಫ್ ಇಂಜಿನಿಯರ್ ಶಿವುಕುಮಾರ್ ಅನ್ನೋರಿಗೆ ಆಡಿಯೋದಲ್ಲಿ ಬೈಯಲಾಗಿದೆ ಎನ್ನಲಾಗುತ್ತಿದೆ. ಸುಮಾರು 2 ತಿಂಗಳ ಹಳೆಯ ಆಡಿಯೋ ಸದ್ಯ ವೈರಲ್ ಆಗಿದೆ.

ಇದನ್ನೂ ಓದಿ
Image
Fact Check ಥೀಮ್ ಏನು? ಏನು ಹೇಳ್ಬೇಕು? ಎಂದು ರಾಹುಲ್ ಗಾಂಧಿ ಕೇಳುತ್ತಿರುವ ವಿಡಿಯೊ ಚಿಂತನ್ ಶಿವಿರ್​​ದ್ದು ಅಲ್ಲ
Image
ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಪ್ರಕರಣ; ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾ ಬಂಧನ
Image
ಬಿಜೆಪಿ ಶಾಸಕರೊಬ್ಬರ ಗೂಂಡಾವರ್ತನೆ: ಚೀಫ್ ಇಂಜಿನಿಯರ್​​ಗೆ ಕೆಟ್ಟ ಪದ ಬಳಸಿ ಬೈದಿರೊ ಆಡಿಯೋ ವೈರಲ್..?
Image
ಶಾಸಕರ ಕಚೇರಿಯಾಗಿ ಬದಲಾವಣೆಯಾದ ಬಯಲು ರಂಗಮಂದಿರ: ಶಾಸಕ ಎನ್​.ಎ.ಹ್ಯಾರಿಸ್ ವಿರುದ್ಧ ಆರೋಪ

ಇದನ್ನೂ ಓದಿ: ಪತ್ನಿಗೆ ಕಿರುಕುಳ ಆರೋಪ; ರವಿ ಡಿ.ಚನ್ನಣ್ಣನವರ್ ಸೋದರನ ವಿರುದ್ಧ ಎಫ್ಐಆರ್ ದಾಖಲು

ಶಿವುಕುಮಾರ್, ಕೃಷ್ಣ ಭಾಗ್ಯ ಜಲ ನಿಗಮದ ಚೀಫ್ ಇಂಜಿನಿಯರ್ ಆಗಿದ್ದಾಗಿನ ಸಂಭಾಷಣೆಯಾಗಿದೆ. ಚಪ್ಪಲಿಯಿಂದ ಹೊಡಿತಿನಿ ಮಗನೇ, ರೆಕಾರ್ಡ್ ಮಾಡ್ಕೊಂಡು ಯಾರಿಗೆ ಕೊಡ್ತಿಯಾ ಕೊಡು, ಮಗನೇ ಅನ್ನೊ ಕೀಳು ಮಟ್ಟದ ಪದ ಬಳಕೆ ಮಾಡಲಾಗಿದೆ. 5 ನಿಮಿಷಗಳ ಆಡಿಯೋದಲ್ಲಿ ಬರೀ ಕೀಳು ಮಟ್ಡದ ಪದಗಳಿಂದ ವಾಗ್ವಾದ ನಡೆಸಲಾಗಿದೆ. 1 ರಿಂದ 18 ನೇ ಡಿಸ್ಟ್ರಿಬ್ಯುಷನ್ ಕಾಲುವೆಗಳ ನವೀಕರಣ ಸುಮಾರು 1446 ಕೋಟಿ ರೂ. ಮೊತ್ತದ ಕಾಮಗಾರಿಯಾಗಿದೆ. ಬಿಜೆಪಿ ಮಾಜಿ ಶಾಸಕ‌ ಮಾನಪ್ಪ ವಜ್ಜಲ್ ಸಹೋದರ ನಾಗಪ್ಪ ವಜ್ಜಲ್ ಈ ಕಾಮಗಾರಿಯ ಗುತ್ತಿಗೆದಾರ. ಇವರ ಮಾಲೀಕತ್ವದ ಖಾಸಗಿ ಕಂಪೆನಿ ಮೂಲಕ ನವೀಕರಣ ಕಾಮಗಾರಿ ನಡೆಯುತ್ತಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಒಟ್ಟು 200 ಕೋಟಿ ಬಿಲ್ ಕ್ಲಿಯರ್ ಮಾಡಿರೊ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕಾಮಗಾರಿಯೇ ಆಗಿಲ್ಲ ಹೇಗೆ ಬಿಲ್ ಕ್ಲಿಯರ್ ಮಾಡಿರುವೆ..? ಬೋಗಸ್ ಬಿಲ್ ಮಾಡ್ತಿಯಾ..? ಅಂತ ಶಾಸಕ ತರಾಟೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತಿಳಿಸಿದೇ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:59 am, Thu, 19 May 22

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್