ಬಿಜೆಪಿ ಶಾಸಕರೊಬ್ಬರ ಗೂಂಡಾವರ್ತನೆ: ಚೀಫ್ ಇಂಜಿನಿಯರ್​​ಗೆ ಕೆಟ್ಟ ಪದ ಬಳಸಿ ಬೈದಿರೊ ಆಡಿಯೋ ವೈರಲ್..?

ಶಿವುಕುಮಾರ್, ಕೃಷ್ಣ ಭಾಗ್ಯ ಜಲ ನಿಗಮದ ಚೀಫ್ ಇಂಜಿನಿಯರ್ ಆಗಿದ್ದಾಗಿನ ಸಂಭಾಷಣೆಯಾಗಿದೆ. ಚಪ್ಪಲಿಯಿಂದ ಹೊಡಿತಿನಿ ಮಗನೇ, ರೆಕಾರ್ಡ್ ಮಾಡ್ಕೊಂಡು ಯಾರಿಗೆ ಕೊಡ್ತಿಯಾ ಕೊಡು, ಮಗನೇ ಅನ್ನೊ ಕೀಳು ಮಟ್ಟದ ಪದ ಬಳಕೆ ಮಾಡಲಾಗಿದೆ.

ಬಿಜೆಪಿ ಶಾಸಕರೊಬ್ಬರ ಗೂಂಡಾವರ್ತನೆ: ಚೀಫ್ ಇಂಜಿನಿಯರ್​​ಗೆ ಕೆಟ್ಟ ಪದ ಬಳಸಿ ಬೈದಿರೊ ಆಡಿಯೋ ವೈರಲ್..?
ಬಿಜೆಪಿ ಶಾಸಕ ಶಿವನಗೌಡ ನಾಯಕ್, ಚೀಫ್ ಇಂಜಿನಿಯರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 17, 2022 | 8:10 AM

ರಾಯಚೂರು: ಚೀಫ್ ಇಂಜಿನಿಯರ್​ವೊಬ್ಬರಿಗೆ ಅತೀ ಕೆಟ್ಟ ಪದ ಬಳಸಿ ಬೈದಿರೊ ಬಿಜೆಪಿ ಶಾಸಕರೊಬ್ಬರ ಗೂಂಡಾವರ್ತನೆ ಆಡಿಯೋ ವೈರಲ್​..? ಆಗಿದೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಆಕಾಂಕ್ಷಿಗಳ ಕಾಲೆಳೆಯೋ ತಂತ್ರಗಾರಿಕೆ ಎನ್ನಲಾಗುತ್ತಿದೆ. ಪ್ರತಿಸ್ಪರ್ಧಿಗಳ ಸಚಿವ ಸ್ಥಾನ ತಪ್ಪಿಸಲು ಮೆಗಾ ಪ್ಲಾನ್ ಶುರುವಾಗಿದೆ. ಕೆಬಿಜೆಎನ್​ಎಲ್​ನ ಕಾಮಗಾರಿ ಸಂಬಂಧಿಸಿದಂತೆ ರಾಯಚೂರು ಜಿಲ್ಲೆ ದೇವದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಬೈದಿರೋದು ಎನ್ನಲಾದ ಆಡಿಯೋ, ಕಾಲುವೆ ನವೀಕರಣ ಕಾಮಗಾರಿ ಬಿಲ್ ಕ್ಲಿಯರ್ ವಿಚಾರವಾಗಿ ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡದೇ‌ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಚೀಫ್ ಇಂಜಿನಿಯರ್ ಜೊತೆ ವಾಗ್ವಾದ ನಡೀತಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಗುತ್ತಿಗೆದಾರ ಕಂಪೆನಿಗೆ 200 ಕೋಟಿ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಶಾಸಕ ಆಕ್ರೋಶಗೊಂಡಿದ್ದು, ಚೀಫ್ ಇಂಜಿನಿಯರ್ ಶಿವುಕುಮಾರ್ ಅನ್ನೋರಿಗೆ ಆಡಿಯೋದಲ್ಲಿ ಬೈಯಲಾಗಿದೆ ಎನ್ನಲಾಗುತ್ತಿದೆ. ಸುಮಾರು 2 ತಿಂಗಳ ಹಳೆಯ ಆಡಿಯೋ ಸದ್ಯ ವೈರಲ್ ಆಗಿದೆ.

ಶಿವುಕುಮಾರ್, ಕೃಷ್ಣ ಭಾಗ್ಯ ಜಲ ನಿಗಮದ ಚೀಫ್ ಇಂಜಿನಿಯರ್ ಆಗಿದ್ದಾಗಿನ ಸಂಭಾಷಣೆಯಾಗಿದೆ. ಚಪ್ಪಲಿಯಿಂದ ಹೊಡಿತಿನಿ ಮಗನೇ, ರೆಕಾರ್ಡ್ ಮಾಡ್ಕೊಂಡು ಯಾರಿಗೆ ಕೊಡ್ತಿಯಾ ಕೊಡು, ಮಗನೇ ಅನ್ನೊ ಕೀಳು ಮಟ್ಟದ ಪದ ಬಳಕೆ ಮಾಡಲಾಗಿದೆ. 5 ನಿಮಿಷಗಳ ಆಡಿಯೋದಲ್ಲಿ ಬರೀ ಕೀಳು ಮಟ್ಡದ ಪದಗಳಿಂದ ವಾಗ್ವಾದ ನಡೆಸಲಾಗಿದೆ. 1 ರಿಂದ 18 ನೇ ಡಿಸ್ಟ್ರಿಬ್ಯುಷನ್ ಕಾಲುವೆಗಳ ನವೀಕರಣ ಸುಮಾರು 1446 ಕೋಟಿ ರೂ. ಮೊತ್ತದ ಕಾಮಗಾರಿಯಾಗಿದೆ. ಬಿಜೆಪಿ ಮಾಜಿ ಶಾಸಕ‌ ಮಾನಪ್ಪ ವಜ್ಜಲ್ ಸಹೋದರ ನಾಗಪ್ಪ ವಜ್ಜಲ್ ಈ ಕಾಮಗಾರಿಯ ಗುತ್ತಿಗೆದಾರ. ಇವರ ಮಾಲೀಕತ್ವದ ಖಾಸಗಿ ಕಂಪೆನಿ ಮೂಲಕ ನವೀಕರಣ ಕಾಮಗಾರಿ ನಡೆಯುತ್ತಿದೆ. ಚೀಫ್ ಇಂಜಿನಿಯರ್ ಶಿವಕುಮಾರ್, ಒಟ್ಟು 200 ಕೋಟಿ ಬಿಲ್ ಕ್ಲಿಯರ್ ಮಾಡಿರೊ ಬಗ್ಗೆ ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕಾಮಗಾರಿಯೇ ಆಗಿಲ್ಲ ಹೇಗೆ ಬಿಲ್ ಕ್ಲಿಯರ್ ಮಾಡಿರುವೆ..? ಬೋಗಸ್ ಬಿಲ್ ಮಾಡ್ತಿಯಾ..? ಅಂತ ಶಾಸಕ ತರಾಟೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತಿಳಿಸಿದೇ ಬಿಲ್ ಕ್ಲಿಯರ್ ಮಾಡಿದ್ದಕ್ಕೆ ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷ್ಣ ಭಾಗ್ಯ ಜಲ ನಿಗಮದ ಅಂದಿನ ಚೀಫ್ ಇಂಜಿನಿಯರ್ ಶಿವುಕುಮಾರ್​ಗೆ ಬೈದದ್ದು ಎನ್ನಲಾದ ಆಡಿಯೋ ಒಟ್ಟು 5 ನಿಮಿಷ 19 ಸೆಕೆಂಡಿದೆ. (ಶಾಸಕ ಶಿವನಗೌಡ ನಾಯಕ್ ಹಾಗೂ ಚೀಫ್ ಇಂಜಿನಿಯರ್ ಶಿವಕುಮಾರ್ ನಡುವಿನ ಸಂಭಾಷಣೆ) ಶಾಸಕ: ಏನೋ ರಿಪೋರ್ಟ್ ಹಾಕ್ತಿದಿನಿ ಅಂತಿದಿಯಂತಲ್ಲಾ.. ಸಿಇ; ಮಗನೇ ಅಂದ್ರಲ್ಲಾ ಸರ್.. ಅದನ್ನ ಎಂಡಿ, ಗವರ್ನ್‌ಮೆಂಟ್​ಗೆ ಕೊಡ್ತಿನಿ ಸರ್ ಶಾಸಕ: ಹುಚ್ಚ ಮಗನೇ ಇನ್ನು ಹೇಗೆ ಹೇಳಬೇಕು ನಿನಗೆ.. ಚೀಫ್ ಇಂಜಿನಿಯರ್ ಆಗಿ ಜಾಯಿನ್ ಆಗಿದಿಯಾ..ಕರ್ಟಸಿಗಾದ್ರೂ ಒಂದಿನಾ ಕೇಳಿದಿಯಾ..? ಸಿಇ; ನಾನೂ ಬಂದು ಒಂದು ತಿಂಗಳಾಗಿದೆ..? ಶಾಸಕ: ೧೪೦೦ ಕೋಟಿ ಬಿಲ್ ಬರಿಯೋಕೆ ಹಗಲು ರಾತ್ರಿ ಸ್ಟೇನ್ ತಗೋದಿಯಾ ನೀನು.. ಸಿಇ; ಸರ್ ಕೆಲಸ ಮಾಡಿದಾರೆ..ಎಕ್ಸಕ್ಯುಟಿವ್,ಎಸಿ ಕಳ್ಸಿದಾರೆ,ನಾನು ಫಾರ್ವಡರ್ಡ್ ಮಾಡಿದಿನಿ ಶಾಸಕ; ಏನ್ ಕೆಲಸ ಮಾಡಿದಾರೆ.. ಸಿಇ: ಅಲ್ಲೆ ಸೈಟ್​ಗೆ ಹೋಗಿ ಪ್ರಶ್ನೆ ಮಾಡಿ ಸರ್ ಶಾಸಕ : ಲಫಂಗ ಮಗನೇ ಏನು ರಿಪೋರ್ಟ್ ಹಾಕ್ತಿಯಾ ನೀನು.. ನಿನ್ನಮ್ಮನ್ ಕಳ್ಳ, ಬಾರಲೇ ಮಗನೇ ಒದಿತಿನಿ ನಿನ್ನ.. ಲೇ ಮಗನೇ ಸರ್ಕಾರದ ದುಡ್ಡು ಅಂದ್ರೆ ನಿಮ್ಮಪ್ಪನ ಮನೆಯದ್ದು ಅಂತ ತಿಳ್ಕೋಂಡಿದಿಯಾ..? ಸಿಇ : ಸಮಾಧಾನ ಆಗೋ ವರ್ಗು ಮಾತಾಡಿ..ಎನ್ಕ್ವಾಯರಿ ಮಾಡ್ಸಿ.. ಶಾಸಕ : ಕಾಂಟ್ರಾಕ್ಟರ್ ಮನೆಗೆ ಜೀತ ಇದ್ದಿಯೇನು..? 1400 ಬೋಗಸ್ ಬಿಲ್ ಬರೆಯೋಕೆ ಬಂದಿದಿಯೇನು ಬೆಂಗಳೂರಿನಿಂದ.. ಸಿಇ : ಎಲ್ಲಾ ಅಧಿಕಾರಿಗಳು ಇದ್ದಾರೆ ಕೇಳಿ ಅವರನ್ನು ಶಾಸಕ : ನಾನೂ ಪೂಜೆ ಮಾಡದೇ ಹೇಗೆ ಬಿಲ್ ಕೊಟ್ಟೆ ಹೇಳು.. ಸಿಇ: ನಾನೂ ಬರೋದಕ್ಕಿಂತ ಮುಂಚೆ ಶುರುವಾಗಿರೊ ವರ್ಕ್ ಅದು ಶಾಸಕ : ನಾನೇನು ಮೀಟಿಂಗ್ ಮಾಡಿದ್ದೆ ಗೊತ್ತಿದೆಯಾ ನಿನಗೆ.. ನನ್ನ ಕೇಳಲಾರದೇ ಬಿಲ್ ಕೊಟ್ಟ ಬಿಡ್ತಿಯಾ ಬಿಲ್.. ಎಲ್ಲ ಅಧಿಕಾರಿಗಳನ್ನ ಕರೆದು ಮಾತನಾಡಿದ್ದೇನೆ.. 6 ಸಾರಿ ಕರೆದಿದ್ದಿವಿ ನಿನ್ನ, ಸಲುವಾಗಿ ವೈಟ್ ಮಾಡ್ಲಾ ಬೇಕುಫ ನಾನು.. ಲೇ ಲೋಫರ್​ ಮಗನೆ, 6 ಸಾರಿ ಕರೆದ್ರು ಬರ್ಲಿಲ್ಲಾಂದ್ರೆ ಹೆಂಗ್ ಹೇಳಬ್ಬೇಕು ನಿಂಗೆ, ಸಿಇ: ಇಷ್ಟೆಲ್ಲಾ ಮಾತನಾಡಿದ ಮೇಲೆ ನಾನೂ ಇನ್ನೇನು ಉತ್ತರ ಕೊಡ್ಲಿ ಶಾಸಕ : ಲೋಫರ್ ಮಗನೆ ಒಯ್ದು..ಇಲ್ಲಿ ಬಂದು, ಹಿಸ್ಟರಿ ತಿಳಿದುಕೊಳ್ಳಲ್ಲ. ಏನಿಲ್ಲ, ಏಕಾಏಕಿ ಬಿಲ್ ಕೊಟ್ ಬಿಡ್ತಿಯಾ ನೀನು.. ಯಾರಿಗೆ ರಿಪೋರ್ಟ್ ಮಾಡ್ತಿಯಾ ಮಾಡು.. ರೆಕಾರ್ಡ್ ಮಾಡ್ಕೊಂಡು ಕೊಡಲೇ ಮಗನೆ, ಕೊಡು ಯಾರಿಗೆ ಕೊಡ್ತಿಯಾ.. ಶಾಸಕ : ೨೦೦,೨೦೦ ಕೋಟಿ ಬೋಗಸ್ ಬಿಲ್ ಕೊಡ್ತಿಯಾ..ಆದ್ರೆ ನಮಗೆ ರಿಪೋರ್ಟ್ ಮಾಡ್ತಿನಿ ಅಂತಿಯಾ.. ಸಿಇ: ಶಾಸಕರಾಗಿದ್ದಿರಿ ದಯವಿಟ್ಟು, ಶಾಸಕ : 6 ಸಾರಿ ಎಲ್ಲಿ ಹೋಗಿತ್ತು ಮರ್ಯಾದೆ.. 6 ಸಾರಿ ಕಾಲ್ ಮಾಡಿದರೇ ಬರಲ್ಲ,ನಾನೂ ಬರಬೇಕಾ ನಿನ್ನ ಭೇಟಿಯಾಗೋಕೆ.. ಸಿಇ : ನಿಮ್ಮ ಪಿಎಗೆ ಹೇಳಿದಿನಿ‌ ಕೇಳಿ ಶಾಸಕ : ಪ್ರೊಸಡಿಂಗ್ಸ್ ಆಗಿದೆ,ನೋಡೊಕೆ ಬರಲ್ವ ನಿಂಗ, ಸಿಇ : ನನಗೆ ಗೊತ್ತಿಲ್ಲ ಸರ್ ಶಾಸಕ : ಎಂಎಲ್ ಎ ಏನು‌ ಹೇಳಿದ್ದಾರೆ ಅಂತ ಕೇಳು,ಮಂಜುನಾಥ್ ಅನ್ನ, ಸಿಇ : ಆಯ್ತು ವಿಚಾರಿಸ್ತಿನಿ ತಗೋಳಿ.. ಶಾಸಕ : ಕಾನ್ವೆಕೇಶನ್ ಕ್ಲಿಯರ್ ಮಾಡಿದಿನಿ,ಕೆಲಸ ಮಾಡು ಅಂತ ಹೇಳಿದಿನಾ ಎಂದಾದ್ರು.. ಸಿಇ : ನಾನಿದ್ದಾಗ ಆಗಿದ್ರೆ ಖಂಡಿತ ಪೂಜೆ ಮಾಡೇ ಮಾಡಿಸ್ತಿದ್ದೆ.. ಬಟ್ ನಾನೂ ಬರೋದಕ್ಕಿಂತ ಮುಂಚೆ ಶುರು ವಾಗಿದೆ.. ಶಾಸಕ : ಲೇ ಲೋಫರ್ ಮಗನೆ ಚಪ್ಪಲಿ ತಗೋಂಡ್ ಹೊಡಿತಿನಿ ಮಗನೆ.. ಸಿಇ : ಅವೆಲ್ಲಾ ಬೇಡ ಸ್ವಾಮಿ, ಓಬ್ಬ ಶಾಸಕ‌ನಾಗಿ ಏನು ಹುಚ್ಚುಚ್ಚಾಗಿ ಮಾತನಾಡ್ತಿರಲ್ಲ.. ದೊಡ್ಡೋರಿಗೆ ಮಾತಾಡೋದು ತಪ್ಪಾಗತ್ತೆ.. ಶಾಸಕ: ಹಂಗಲ್ಲಪ್ಪ,6 ಸಾರಿ ಕರೆದ್ನಲ್ಲ,ಎಲ್ಲೊಗಿದ್ದೆ ಆವಾಗ ಸಿಇ : ಎಂಡಿ ಹತ್ರ ಬರ್ತಿನಿ ಅಂದ್ರಲ್ಲಾ, ಅಲ್ಲೆ ಮಾತನಾಡಿ..

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು