Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್​ನಲ್ಲಿ ಇಸ್ಕಾನ್ ತಿಂಡಿ, ಊಟ; ಗುತ್ತಿಗೆ ಬದಲಾವಣೆಗೆ ಸಧ್ಯದಲ್ಲೇ ಬಿಬಿಎಂಪಿ ಪ್ರಸ್ತಾಪ

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್ಗಳನ್ನ ರಿವಾಡ್ರ್ಸ್ ಹಾಗೂ ಭಾರತೀಯ ಮಾನವ ಕಲ್ಯಾಣ ಪರಿಷತ್ತು ಕಂಪನಿ ಗುತ್ತಿಗೆ ಪಡೆದಿದೆ. ಸರ್ಕಾರ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಗೆ ಅಂತಾ ಒಟ್ಟು 1400 ಪ್ಲೇಟ್ ಊಟ, ತಿಂಡಿಗೆ ಗುತ್ತಿಗೆ ನೀಡಿದೆ.

ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್​ನಲ್ಲಿ ಇಸ್ಕಾನ್ ತಿಂಡಿ, ಊಟ; ಗುತ್ತಿಗೆ ಬದಲಾವಣೆಗೆ ಸಧ್ಯದಲ್ಲೇ ಬಿಬಿಎಂಪಿ ಪ್ರಸ್ತಾಪ
ಇಂದಿರಾ ಕ್ಯಾಂಟೀನ್
Follow us
TV9 Web
| Updated By: sandhya thejappa

Updated on:May 17, 2022 | 8:16 AM

ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್​ನಲ್ಲಿ (Indira Canteen) ಇಸ್ಕಾನ್ ತಿಂಡಿ, ಊಟ ನೀಡಲು ಗುತ್ತಿಗೆ ಬದಲಾವಣೆಗೆ ಬೆಂಗಳೂರು ಮಹಾನಗರ ಪಾಲಿಕೆ (BBMP) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತದೆ. ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಂದ ಕಳ್ಳ ಲೆಕ್ಕ, ಗ್ರಾಹಕರ ಸಂಖ್ಯೆಯಲ್ಲಿ ಗೋಲ್​ಮಾಲ್​, ಕಳಪೆ ಆಹಾರ ಪೂರೈಕೆಯಾಗುತ್ತಿರುವ ಹಿನ್ನೆಲೆ ಕ್ಯಾಂಟೀನ್​ಗಳ ಗುತ್ತಿಗೆ ಇಸ್ಕಾನ್​ಗೆ ನೀಡುವುದಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಬಡವರಿಗೆ, ನಿರ್ಗತಿಕರಿಗೆ ನೆರವಾಗಲೆಂದು ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿತ್ತು. ಆದರೆ ಇಲ್ಲೂ ಕೂಡಾ ಕೋಟಿ ಕೋಟಿ ಭ್ರಷ್ಟಚಾರ ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದವು.

ಆರಂಭವಾದ ಮೊದಲು ಕಡಿಮೆ ಬೆಲೆಗೆ ಒಳ್ಳೆಯ ಆಹಾರ ಅಂತ ಜನರು ಕ್ಯಾಂಟೀನ್​ಗೆ ಹೋಗುತ್ತಿದ್ದರು. 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ದೊರೆಯುತ್ತದೆ. ಕೊರೊನಾ ಸಂದರ್ಭದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ ಕ್ಯಾಂಟೀನ್ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ತದನಂತರದಲ್ಲಿ ಕ್ಯಾಂಟೀನ್​ಗೆ ಹೋಗುವವರ ಸಂಖ್ಯೆ ಕಡಿಮೆಯಾಯಿತು. ಇದಕ್ಕೆ ಮುಖ್ಯ ಕಾರಣ. ಆಹಾರದಲ್ಲು ಗುಣಮಟ್ಟದ ಕೊರತೆ. ಈ ಹಿಂದೆ ಇಂದಿರಾ ಕ್ಯಾಂಟಿನ್​ನಲ್ಲಿ ಕೋಟಿ ಕೋಟಿ ಲೂಟಿ ಆಗಿದೆ ಎಂದು ಮೇಯರ್ ಮತ್ತು ಸಚಿವರ ಹೆಸರು ಕೇಳಿಬಂದಿದ್ದವು.

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್​ಗಳನ್ನ ರಿವಾಡ್ರ್ಸ್ ಹಾಗೂ ಭಾರತೀಯ ಮಾನವ ಕಲ್ಯಾಣ ಪರಿಷತ್ತು ಕಂಪನಿ ಗುತ್ತಿಗೆ ಪಡೆದಿದೆ. ಸರ್ಕಾರ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಗೆ ಅಂತಾ ಒಟ್ಟು 1400 ಪ್ಲೇಟ್ ಊಟ, ತಿಂಡಿಗೆ ಗುತ್ತಿಗೆ ನೀಡಿದೆ.

ಇದನ್ನೂ ಓದಿ
Image
Chetana Raj Death: ಫ್ಯಾಟ್ ಸರ್ಜರಿ ವೇಳೆ ಕಿರುತೆರೆ ನಟಿ ಚೇತನಾ ರಾಜ್ ಅನುಮಾನಾಸ್ಪದ ಸಾವು
Image
Gold Price Today: ಮುಂಬೈ, ಬೆಂಗಳೂರು ಸೇರಿ ಹಲವೆಡೆ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಹೀಗಿದೆ
Image
Horoscope Today- ದಿನ ಭವಿಷ್ಯ; ಈ ರಾಶಿಯ ಯುವಕರು ತಮ್ಮ ವೃತ್ತಿಯಲ್ಲಿ ಮುನ್ನಡೆಯುತ್ತಾರೆ
Image
Karnataka Rain: ಇನ್ನೂ 4 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಮೇ 18ಕ್ಕೆ ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್​ ಘೋಷಣೆ

ಬೆಳಗ್ಗೆ 7.30 ರಿಂದ 10.30 ವರೆಗೆ ತಿಂಡಿ, ಮಧ್ಯಾಹ್ನ 12.30ರಿಂದ 2.30ರವರೆಗೆ ಮಧ್ಯಾಹ್ನದ ಊಟ, ರಾತ್ರಿ 7.30 ರಿಂದ 8.30ರವರೆಗೆ ಊಟ ಲಭ್ಯವಿರುತ್ತದೆ.

ಅಡ್ಡ ದಾರಿ ಹಿಡಿದ ಸಿಬ್ಬಂದಿ: ಇಂದಿರಾ ಸದ್ಯ ಕ್ಯಾಂಟೀನ್ ಕಡೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕ್ಯಾಂಟೀನ್ ಸಿಬ್ಬಂದಿ ಅಡ್ಡ ದಾರ ಹಿಡಿದಂತೆ ಕಾಣುತ್ತಿದೆ. ಆಹಾರ ಮಾರಾಟವಾಗದ ಹಿನ್ನೆಲೆ ಖಾಸಗಿ ಹೋಟೆಲ್​ಗಳಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:07 am, Tue, 17 May 22

ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಫಸ್ಟ್: ಪರೀಕ್ಷೆ ತಯಾರಿ ಹೇಗಿತ್ತು?
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ಮೂರನೇ ಪರೀಕ್ಷೆ ಫಲಿತಾಂಶ ನಂತರವೇ ಪಾಸ್/ ಫೇಲ್ ಮಾರ್ಕ್ಸ್ ಕಾರ್ಡ್: ಸಚಿವ
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ವಾಟರ್ ಬಾಟಲ್ ಆರೋಗ್ಯಕ್ಕೆ ಮಾರಕ: ಆರೋಗ್ಯ ಸಚಿವರ ಸುದ್ದಿಗೋಷ್ಠಿ ಲೈವ್​
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
IPL 2025: ಗೆಲುವಿನ ಬಳಿಕ RCB ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
IPL 2025: ಗೆಲುವಿನ ಬಳಿಕ RCB ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
ಅಂಗಡಿಗಳಲ್ಲಿ ನೀರಿನ ಬಾಟಲ್​​​​ ಖರೀದಿಸುವ ಮುನ್ನ ಎಚ್ಚರ...!
ಅಂಗಡಿಗಳಲ್ಲಿ ನೀರಿನ ಬಾಟಲ್​​​​ ಖರೀದಿಸುವ ಮುನ್ನ ಎಚ್ಚರ...!
Live: ದ್ವಿತೀಯ ಪಿಯುಸಿ ಫಲಿತಾಂಶ 2025 ಲೈವ್​ ವಿಡಿಯೋ
Live: ದ್ವಿತೀಯ ಪಿಯುಸಿ ಫಲಿತಾಂಶ 2025 ಲೈವ್​ ವಿಡಿಯೋ
ಸಿಲಿಂಡರ್ ಬೆಲೆ ಹೆಚ್ಚಾಗಿರುವುದನ್ನು ಸರ್ಕಾರ ಗುರಾಣಿಯಾಗಿ ಬಳಸಬಾರದು: ರವಿ
ಸಿಲಿಂಡರ್ ಬೆಲೆ ಹೆಚ್ಚಾಗಿರುವುದನ್ನು ಸರ್ಕಾರ ಗುರಾಣಿಯಾಗಿ ಬಳಸಬಾರದು: ರವಿ
ಕೋರ್ಟ್ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪವಿತ್ರಾ ಗೌಡ
ಕೋರ್ಟ್ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪವಿತ್ರಾ ಗೌಡ