ಪತ್ನಿಗೆ ಕಿರುಕುಳ ಆರೋಪ; ರವಿ ಡಿ.ಚನ್ನಣ್ಣನವರ್ ಸೋದರನ ವಿರುದ್ಧ ಎಫ್ಐಆರ್ ದಾಖಲು
ವಿವಾಹವಾದ ಒಂದೇ ವರ್ಷದಲ್ಲಿ ರೋಜಾರನ್ನು ಬಿಟ್ಟು, ಮೊದಲು ಮದುವೆಯಾಗಿದ್ದ ಮಹಿಳೆ ಜೊತೆ ಸಂಸಾರ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಹೀಗೆ ಮಾಡುತ್ತಾನೆ, ಎಲ್ಲಾ ಸರಿಹೋಗುತ್ತೆ.
ಬೆಂಗಳೂರು: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ (Ravi D Channannavar ) ಸೋದರನ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯಲ್ಲಿ ರಾಘವೇಂದ್ರ ಡಿ.ಚೆನ್ನಣ್ಣನವರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. 2015ರಲ್ಲಿ ರೋಜಾ ಮತ್ತು ರಾಘವೇಂದ್ರ ಡಿ.ಚೆನ್ನಣ್ಣನವರ್ ಮದುವೆಯಾಗಿತ್ತು. ರವಿ ಡಿ.ಚನ್ನಣ್ಣನವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆ ಜತೆ ಮದುವೆಯಾಗಿದ್ದನ್ನು ಬಚ್ಚಿಟ್ಟಿದ್ದ ಆರೋಪ ಕೇಳಿಬಂದಿದೆ.
ವಿವಾಹವಾದ ಒಂದೇ ವರ್ಷದಲ್ಲಿ ರೋಜಾರನ್ನು ಬಿಟ್ಟು, ಮೊದಲು ಮದುವೆಯಾಗಿದ್ದ ಮಹಿಳೆ ಜೊತೆ ಸಂಸಾರ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಆರಂಭದಲ್ಲಿ ಹೀಗೆ ಮಾಡುತ್ತಾನೆ, ಎಲ್ಲಾ ಸರಿಹೋಗುತ್ತೆ. ನೀನು ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಅಂತ ಹೇಳಿದ್ದರಂತೆ. ಸದ್ಯ ಇಬ್ಬರ ಜೊತೆಗೂ ಸಂಸಾರ ಮಾಡುವುದಾಗಿ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ ನ್ಯಾಯ ಬೇಕೆಂದು ರೋಜಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Fact Check ಥೀಮ್ ಏನು? ಏನು ಹೇಳ್ಬೇಕು? ಎಂದು ರಾಹುಲ್ ಗಾಂಧಿ ಕೇಳುತ್ತಿರುವ ವಿಡಿಯೊ ಚಿಂತನ್ ಶಿವಿರ್ದ್ದು ಅಲ್ಲ
ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಹಲವಾರು ಬಾರಿ ತಂದೆ ಬಳಿ ಹಣ ಪಡೆದಿದ್ದಾರೆ. ಈ ಮಧ್ಯೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ವಿಷಯವನ್ನು ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣವರ್ ಅವರ ಗಮನಕ್ಕೂ ತಂದಿರುವೆ. ಆದರೆ ಅವರೂ ಹೊಸ ಹೆಂಡತಿಯ ಜೊತೆ ಹೊಂದಿಕೊಂಡು ಹೋಗು ಎಂದು ತನಗೆ ಹೇಳಿದ್ದಾಗಿ ರೋಜಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:36 am, Thu, 19 May 22