Nathuram Godse: ನಾಥೂರಾಮ್ ವಿನಾಯಕ ಗೋಡ್ಸೆ ಜನ್ಮದಿನ: ನಿಮಗೆ ತಿಳಿಯದ ಕೆಲವು ಸಂಗತಿಗಳು

ನಾಥೂರಾಮ್ ವಿನಾಯಕ ಗೋಡ್ಸೆ ಭಾರತೀಯರ ಪಾಲಿಕೆ ಇತಿಹಾಸ ಪುಟದಲ್ಲಿ ಒಬ್ಬ ಖಳನಾಯಕನಾಗಿದ್ದಾರೆ. ಕಾರಣ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದರೆಂದು.

Nathuram Godse: ನಾಥೂರಾಮ್ ವಿನಾಯಕ ಗೋಡ್ಸೆ ಜನ್ಮದಿನ: ನಿಮಗೆ ತಿಳಿಯದ ಕೆಲವು ಸಂಗತಿಗಳು
ನಾಥೂರಾಮ್ ಗೋಡ್ಸೆ
Follow us
TV9 Web
| Updated By: ವಿವೇಕ ಬಿರಾದಾರ

Updated on: May 19, 2022 | 8:00 AM

ನಾಥೂರಾಮ್ ವಿನಾಯಕ ಗೋಡ್ಸೆ (Nathuram Godse) ಭಾರತೀಯರ ಪಾಲಿಕೆ ಇತಿಹಾಸ ಪುಟದಲ್ಲಿ ಒಬ್ಬ ಖಳನಾಯಕನಾಗಿದ್ದಾರೆ. ಕಾರಣ ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma Gandhi) ಅವರನ್ನು ಹತ್ಯೆ ಮಾಡಿದರೆಂದು. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಸದಾ ಚರ್ಚೆಗೆ ಗ್ರಾಸವಾಗಿರುವ ನಾಥೂರಾಮ್ ಗೋಡ್ಸೆ ಗಾಂಧಿ ಹಂತಕ ಎಂದು ಇವರನ್ನು ವಿರೋಧಿಸುವರು ಅಸಂಖ್ಯ ಜನರಿದ್ದರೇ, ಇವರ ಪರ ವಕಾಲತ್ತು ವಹಿಸುವವರು ಕೆಲವು ಜನರು. ಈ ಹಗ್ಗ ಜಗ್ಗಾಟದ ಮಾತಿನ ಚಕಮಕಿಯಲ್ಲಿ ನಾಥುರಾಮ ಬಗ್ಗೆ ತಿಳಿಯದ ಸಾಕಷ್ಟು ವಿಷಯಗಳು ಇವೆ.

ನಾಥೂರಾಮ್ ವಿನಾಯಕ ಗೋಡ್ಸೆ ಹುಟ್ಟಿದ್ದು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ. ನಾಥೂರಾಮ್ ಗೋಡ್ಸೆ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದ ತಂದೆ ವಿನಾಯಕ ವಾಮನರಾವ್‌ ಗೋಡ್ಸೆ ಮತ್ತು ತಾಯಿ ಲಕ್ಷ್ಮೀ (ಜನ್ಮನಾಮ ಗೋದಾವರಿ)ನಾಥೂರಾಮ್​ರ ಜನ್ಮನಾಮ ರಾಮಚಂದ್ರ. ಬಾಲಕ ರಾಮಚಂದ್ರನಿಗೆ ನಾಥುರಾಮ ಎಂದು ಹೆಸರು ಬರಲು ಒಂದು ಕಾರಣ ಇದೆ. ಅದು ಬಾಲಕ ರಾಮಚಂದ್ರನಿಗಿಂತ ಮೊದಲು ಹುಟ್ಟಿದ ಮೂರು ಗಂಡು ಮಕ್ಕಳೂ ಕಿರಿವಯಸ್ಸಿನಲ್ಲಿಯೇ ತೀರಿಹೋದರು. ಬದುಕಿದ್ದು ಒಬ್ಬ ಸೋದರಿ ಮಾತ್ರ. ಹೀಗಾಗಿ ತಮ್ಮ ಕುಟುಂಬದ ಗಂಡು ಮಕ್ಕಳ ಮೇಲೆ ಯಾವುದೋ ಶಾಪವಿದೆ ಎಂದುಕೊಂಡು , ಬಾಲಕ ರಾಮಚಂದ್ರನನ್ನು ಬಾಲ್ಯದಲ್ಲಿ ಮೂಗು ಚುಚ್ಚಿಸುವುದು, ಮೂಗುತಿ ಹಾಕುವುದು ಸೇರಿದಂತೆ, ಹುಡುಗಿಯ ರೀತಿಯಲ್ಲಿ ಬೆಳೆಸಲಾಯಿತು. ಹೀಗಾಗಿ ಅವರಿಗೆ ನಾಥೂರಾಮ್ ಎಂಬ ಹೆಸರು ಬಂತು.

ನಾಥೂರಾಮ್‌ ಗೋಡ್ಸೆ ಐದನೆಯ ತರಗತಿಯವರೆಗೆ ಬಾರಾಮತಿಯಲ್ಲಿ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ನಂತರ ಆಂಗ್ಲ-ಭಾಷಿಕ ಶಾಲೆಯಲ್ಲಿ ಓದಲಿ ಎಂದು ಆತನ ತಂದೆ-ತಾಯಿ ಪುಣೆಯಲ್ಲಿನ ಚಿಕ್ಕಮ್ಮನ ಮನೆಗೆ ಕಳುಹಿಸಿದರು. ನಾಥೂರಾಮ್‌ ತನ್ನ ಶಾಲಾದಿನಗಳಲ್ಲಿ ಗಾಂಧಿಯವರನ್ನು ಬಹಳ ಗೌರವಿಸುತ್ತಿದ್ದನು. ಆದರೆ ಮುಂದಿನ ದಿನಗಳಲ್ಲಿ ಅವರ ಮಾರ್ಗ ಬದಲಾಯಿತು. ಅದು 1930ರಲ್ಲಿ ನಾಥೂರಾಮ್‌ರ ತಂದೆಯವರಿಗೆ ರತ್ನಾಗಿರಿ ಎಂಬ ಪಟ್ಟಣಕ್ಕೆ ವರ್ಗವಾಯಿತು. ಅಲ್ಲಿ ತನ್ನ ತಂದೆತಾಯಿಗಳೊಂದಿಗೆ ವಾಸಿಸುತ್ತಿರುವಾಗ ಬಾಲಕ ನಾಥೂರಾಮರಿಗೆ ಹಿಂದುತ್ವ ಸಿದ್ಧಾಂತ ಪ್ರತಿಪಾದಕರಾದ ವೀರ್‌ ಸಾವರ್ಕರ್‌‌ರ ಪರಿಚಯವಾಯಿತು. ಇಬ್ಬರ ನಡುವೆ ಅಗಾದವಾದ ಸ್ನೇಹವು ಬೆಳೆಯಿತು. ಇದು ಹಿಂದುತ್ವದ ಪರ ಒಲವು ತೋರಲು ಕಾರಣವಾಯಿತೆನ್ನಬುಹುದು.

ಇದನ್ನೂ ಓದಿ
Image
Gokak Falls : ನಮ್ಮ ಕಾಯುವಿಕೆ ಮೊಬೈಲ್ ಚಾರ್ಜ್ ಆಗುವವರೆಗೆ, ನಮ್ಮ ಹುಡುಕಾಟ ಸಿಗದ ನೆಟ್​ವರ್ಕ್​ಗಾಗಿ
Image
International Museum Day 2022 : ಬೀದರಿನ ಕೋಟೆ ಕಂದಕದಿಂದ ಹಿಮಾಲಯದತನಕ ವಾಜೇಂದ್ರ ಮ್ಯೂಸಿಯಂ ಪಯಣ
Image
World AIDS Vaccine Day 2022 : ವೇಷ ಮರೆಸಿಕೊಂಡು ಓಡಾಡುವ ಏಡ್ಸ್ ಎಂಬ ಕಳ್ಳನಿಗೆ ಲಸಿಕೆ ಕಂಡುಹಿಡಿಯುವುದು ಸುಲಭವೆ?
Image
International Museum Day 2022 : ನಮಗೆಂಥ ಮ್ಯೂಸಿಯಂ ಬೇಕಿದೆ?

ಸಾವರ್ಕರ್‌‌ರಿಂದ (Savrkar) ಪ್ರಭಾವಿತರಾದ ನಾಥೂರಾಮ್ ಹಿಂದೂ ಮಹಾಸಭಾದ ಕಾರ್ಯಕರ್ತನಾದರು. ನಾಥುರಾಮ ಹಿಂದೂ ಮಹಾಸಭಾದಲ್ಲಿದ್ದುಕೊಂಡು (Hindu Mhasabha) ಮರಾಠಿ ಭಾಷೆಯಲ್ಲಿ “ಅಗ್ರಣಿ” ಎಂಬ ವೃತ್ತಪತ್ರಿಕೆಯನ್ನು ಆರಂಭಿಸಿದರು. ಮುಂದೆ ಅವರು ಅಗ್ರಣಿ ಹೆಸರನ್ನು ಬದಲಾಯಿಸಿ ಹಿಂದೂ ರಾಷ್ಟ್ರ ಎಂದು ನಾಮಕರಣ ಮಾಡಿದರು. ಹಿಂದೂ ಮಹಾಸಭಾವು ಮೊದಲಿಗೆ ಗಾಂಧಿಜಿಯವರ ಬ್ರಿಟಿಷ್‌ ಸರ್ಕಾರದ ವಿರುದ್ಧದ ನಾಗರಿಕ ಅಸಹಕಾರ ಚಳುವಳಿಯನ್ನು ಬೆಂಬಲಿಸಿತ್ತು. ಆದರೆ ಮುಂದೆ ಇದು ಬದಲಾಯಿತು. ವೈಚಾರಿಕ ಕಾರಣದಿಂದ ಹಿಂದೂ ಮಹಾಸಭಾ ಮತ್ತು ನಾಥುರಾಮ ಗೋಡ್ಸೆ ಗಾಂಧಿಜಿಯವರನ್ನು ವಿರೋಧಿಸಲು ಪ್ರಾರಂಭಿಸಿದರು. ಕಾರಣ ಮುಸಲ್ಮಾನರನ್ನು ಸಂತುಷ್ಟಗೊಳಿಸುವ ಪ್ರಯತ್ನದಲ್ಲಿ ಗಾಂಧಿಯವರು ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆಂಬ ಕಾರಣದಿಂದ ಗೋಡ್ಸೆ ಹಾಗೂ ಆತನ ಮಾರ್ಗದರ್ಶಕರು ಗಾಂಧಿಯವರ ಪ್ರತಿಪಾದನೆಗಳ ವಿರೋಧಕರಾದರು. ಹಾಗೇ ಅಪ್ಪಟ ಹಿಂದುವಾದಿಯಾದರು.

ಗಾಂಧಿ ಹತ್ಯೆ

ನಾಥೂರಾಮ್ ಗಾಂಧಿಜಿಯವರ ಅಹಿಂಸೆಯ ಪ್ರತಿಪಾದನೆಯನ್ನು ವಿರೋಧಿಸುತ್ತಿದ್ದರು. ಅವರ ಪ್ರಕಾರ ಹಿಂದೂಗಳು ತಮ್ಮ ಸ್ವರಕ್ಷಣೆಗೆ ನಡೆಸಲು ಬೇಕಾದ ಹೋರಾಟಕ್ಕೆ ಅಗತ್ಯವಾದ ಸಂಕಲ್ಪಶಕ್ತಿಯನ್ನೇ ಕಳೆದುಕೊಳ್ಳುವ ಹಾಗೆ ಮಾಡಿ ಅವರನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಿಬಿಡುತ್ತವೆ ಗಾಂಧಿಜಿಯವರ ಚಿಂತನೆಗಳು ಹೀಗಾಗಿ ಗಾಂಧಿಜಿಯವರನ್ನು ವಿರೋಧಿಸುತ್ತಿದ್ದರು. ಗಾಂಧಿಜಿಯವರನ್ನು ಹತ್ಯೆ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಅವರಿಗಿದ್ದ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿತ್ತು ಎನ್ನಲಾಗಿದೆ. ಆದರೆ ಅವರು ರಾಷ್ಟ್ರಪ್ರೇಮಿಯೂ ಆಗಿದ್ದರು. ಈ ಕಾರಣದಿಂದ ನಾಥೂರಾಮ್ ಜನವರಿ 30, 1948ರಂದು ಸಂಜೆ ಸಮಯದಲ್ಲಿ ಗಾಂಧಿಜಿಯವರ ಪ್ರಾರ್ಥನಾ ಮಂದಿರಕ್ಕೆ ಹೋದರು. ಅಲ್ಲಿ ಗಾಂಧಿಜಿಯವರ ತೀರ ಸನಿಹದಲ್ಲಿ ನಿಂತುಕೊಂಡು, ಅವರಿಗೆ ೩೮ ಬೆರೆಟ್ಟಾ ಅರೆ-ಸ್ವಯಂಚಾಲಿತ ಪಿಸ್ತೂಲಿನಿಂದ ಮೂರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದರು. ಗುಂಡು ಹಾರಿಸಿದ ನಂತರ ನಾಥೂರಾಮ್ ಗೋಡ್ಸೆ ಓಡಲೂ ಪ್ರಯತ್ನಿಸಲಿಲ್ಲ. ಅಲ್ಲೇ ಇದ್ದ ಪೊಲೀಸರು ಅವರನ್ನು ಬಂಧಿಸಿದರು.

ವಿಚಾರಣೆ ಹಾಗೂ ಗಲ್ಲುಶಿಕ್ಷೆ ಜಾರಿ

ಮೋಹನದಾಸ ಗಾಂಧಿಯವರ ಹತ್ಯೆಯ ನಂತರ ಅವರ ವಿಚಾರಣೆಯನ್ನು ಮೇ ೨೭, ೧೯೪೮ರಂದು ಆರಂಭಿಸಲಾಯಿತು. ವಿಚಾರಣೆಯ ಸಮಯದಲ್ಲಿ ಅವರು ಆರೋಪದ ವಿರುದ್ಧ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಬದಲಾಗಿ ಮುಕ್ತವಾಗಿಯೇ ಗಾಂಧಿಜಿಯವರನ್ನು ಕೊಲ್ಲಲು ತನಗಿರುವ ಕಾರಣಗಳ ಕುರಿತು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯ ನವೆಂಬರ್‌‌ ೮, ೧೯೪೯ರಂದು, ಗೋಡ್ಸೆಗೆ ಮರಣದಂಡನೆ ವಿಧಿಸಿತು.

ನಾಥೂರಾಮ್ ಗೋಡ್ಸೆ ಅವರ ಈ ಹಿನ್ನಲೆ ತಿಳಿದ ಮೇಲೆ ಅವರು ಗಾಂಧಿಜಿಯವರನ್ನು ಹತ್ಯೆ ಮಾಡಲು ಏನು ಕಾರಣ ಎಂಬುವುದು ತಿಳಿಯುತ್ತದೆ. ಇಂದು ನಾಥೂರಾಮ್ ಗೋಡ್ಸೆ ಜನ್ಮದಿನ ಎಂದು ಈ ಲೇಖನ ಬರೆಯುವ ಉದ್ದೇಶ ನಮಗಿಲ್ಲ. ಆದರೆ ಒಬ್ಬ ರಾಷ್ಟ್ರದ ಮಹಾನ್ ನಾಯಕನನ್ನು ಹತ್ಯೆ ಮಾಡಿದಕ್ಕೆ ಕಾರಣ ಏನು ಎಂಬುವುದು ತಿಳಿಸುವ ಪ್ರಯತ್ನ ಅಷ್ಟೇ. ಅವರ ಜನ್ಮದಿನವನ್ನು ಆಚರಿಸುತ್ತಿಲ್ಲ ಬದಲಿಗೆ ಒಬ್ಬ ಮಾಹನ್ ರಾಷ್ಟ್ರ ನಾಯಕನನ್ನು ಯಾತಕ್ಕಾಗಿ ಕಳೆದುಕೊಂಡಿದ್ದೇವೆ ಮತ್ತು ನಾಥೂರಾಮ್ ಗೋಡ್ಸೆ ಗಾಂಧಿಜಿ ಅವರನ್ನು ಹತ್ಯೆ ಮಾಡಲು ಕಾರಣ ಏನು ಎಂಬುದು ತಿಳಿಸಲು ಬರೆದಿದ್ದೇವೆ ಅಷ್ಟೇ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ