International Museum Day 2022 : ಬೀದರಿನ ಕೋಟೆ ಕಂದಕದಿಂದ ಹಿಮಾಲಯದತನಕ ವಾಜೇಂದ್ರ ಮ್ಯೂಸಿಯಂ ಪಯಣ

Museum Culture : ಡೆಹ್ರಾಡೂನಿನ ಇನ್​ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಸಂಸ್ಥೆಗೆ ಸೇರಿದೆ. ಅಲ್ಲಿಯ ವಿಜ್ಞಾನಿಗಳು ಹಿಮಾಲಯಕ್ಕೆ ಸಂಶೋಧನೆಗೆಂದು ತೆರಳಿದಾಗ ಮಿನರಲ್ಸ್, ಕಲ್ಲು, ಮಣ್ಣು, ಪಳೆಯುಳಿಕೆ, ಸಾಲಿಗ್ರಾಮ ತರುತ್ತಿದ್ದರು. ಪ್ರೊ. ವಾಡಿಯಾ ಅವರಿಗೆ ಯಾಕೆ ಒಂದು ಮ್ಯೂಸಿಯಂ ಮಾಡಬಾರದು ಎನ್ನಿಸಿತು.

International Museum Day 2022 : ಬೀದರಿನ ಕೋಟೆ ಕಂದಕದಿಂದ ಹಿಮಾಲಯದತನಕ ವಾಜೇಂದ್ರ ಮ್ಯೂಸಿಯಂ ಪಯಣ
ಪ್ರಾಚ್ಯವಸ್ತು ಸಂರಕ್ಷಕ ವಾಜೇಂದ್ರ ಜೋಶಿ.
Follow us
ಶ್ರೀದೇವಿ ಕಳಸದ
|

Updated on:May 18, 2022 | 2:33 PM

International Museum Day 2022 : ಈಗಿನಷ್ಟು ಸೌಕರ್ಯಗಳು ನಮ್ಮ ಕಾಲದ ಬಾಲ್ಯ-ಹರೆಯಕ್ಕೆ ಇರಲಿಲ್ಲ. ಓದಬೇಕು ಅಂದರೆ ಏಕಾಂತ ಬೇಕಾಗುತ್ತಿತ್ತು. ಸಾಕಷ್ಟು ಬೆಳಕು, ಗಾಳಿ, ಶಾಂತ ವಾತಾವರಣ ಬೇಕಾಗುತ್ತಿತ್ತು. ಹಾಗಾಗಿ ನಾನು ಮನೆಬಿಟ್ಟು ಬೀದರಿನ ಐತಿಹಾಸಿಕ ಕೋಟೆಯೊಳಗೆ ಬಂದು ಕೂರುತ್ತಿದ್ದೆ. ಒಂದೊಂದು ದಿನ ಒಂದೊಂದು ಜಾಗದಲ್ಲಿ ಕುಳಿತು ಆ ಪರಿಸರ, ಪರಿಣಾಮವನ್ನು ಅನುಭವಿಸುವುದು. ಓದಿನ ಮಧ್ಯೆ ಆ ಕೋಟೆಯೊಳಗಿನ ಕಲಾತ್ಮಕ ಕೆತ್ತನೆ, ವಾಸ್ತುಕಲ್ಪನೆ ಎಲ್ಲ ಗಮನಿಸುವುದು, ತೀರಾ ಬೇಸರವಾದರೆ ಕೋಟೆಯ ಸುತ್ತಲೂ ಇರುವ ಆಳ ಕಂದಕಗಳನ್ನು ನೋಡುತ್ತ ನಿಲ್ಲುವುದು. ಇದೆಲ್ಲ ನಡೆಯುತ್ತಿರುವಾಗಲೇ ಪರೀಕ್ಷೆಗಳು ಮುಗಿದು ಆ ಆಳ ಕಂದಕಗಳು ಕರೆಯುತ್ತಿದ್ದವು. ಆಸಕ್ತ ಸ್ನೇಹಿತರೊಂದಿಗೆ ಕಂದಕ ಇಳಿದು ಅವಶೇಷಗಳನ್ನು ಹುಡುಕುವ ಹುಚ್ಚುಸಾಹಸಕ್ಕಿಳಿಯುವುದು. ನೆಲ ಗೆಬರಿದಾಗ ಪ್ಲಾಸ್ಟರ್ ಆಫ್ ಪ್ಯಾರೀಸ್​ನಿಂದ ಮಾಡಿದ ಬಣ್ಣಬಣ್ಣದ ಕಲಾಕೃತಿಗಳ ತುಣುಕುಗಳು, ಇನ್ನೂ ಏನೇನೋ ದಿನಬಳಕೆಯ ಚಿಕ್ಕಪುಟ್ಟ ವಸ್ತುಗಳು ಸಿಗುತ್ತಿದ್ದವು. ಅವುಗಳನ್ನೆಲ್ಲ ತಂದಿಟ್ಟು ಸಂಗ್ರಹಿಸಿಕೊಳ್ಳುತ್ತ ಹೋದೆ. ಆ ಹುಚ್ಚು ನನ್ನನ್ನು ದಿಕ್ಕಿನಲ್ಲಿಯೇ ವೃತ್ತಿಜೀವನದಲ್ಲಿಯೂ ಅವಕಾಶ ಒದಗುವಂತೆ ಮಾಡಿತು. ವಾಜೇಂದ್ರ ಜೋಶಿ, ಪ್ರಾಚ್ಯವಸ್ತು ಸಂರಕ್ಷಕ, ಬೆಂಗಳೂರು

ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಓದಲು ಹೋದೆ. ಇತಿಹಾಸದ ವಿಭಾಗದಲ್ಲಿ ಶಿಲ್ಪಗಳನ್ನು, ಶಿಲಾಲೇಖನಗಳನ್ನು ನೋಡಿ ಪ್ರಾಚ್ಯವಸ್ತುಗಳ ಬಗ್ಗೆ ಆಸಕ್ತಿ ಮೂಡಲಾರಂಭಿಸಿತು. ಕನ್ನಡ ವಿಭಾಗದ ಮ್ಯೂಸಿಯಂ ನೋಡಿದಮೇಲೆ ಶಿಲಾಲೇಖನಗಳನ್ನು ಓದಲೇಬೇಕು ಅಂತ ತೀರ್ಮಾನ ಮಾಡಿದೆ. ಮುಂದೆ ಶಿವಮೊಗ್ಗದ ಜಿಲ್ಲಾ ಲೈಬ್ರರಿಯಲ್ಲಿ ಅಸಿಸ್ಟೆಂಟ್ ಲೈಬ್ರರಿಯನ್ ಆಗಿ ಸೇರಿದೆ. ಆಗ ಲೈಬ್ರರಿ ಮತ್ತು ಮ್ಯೂಸಿಯಂ ಒಂದೇ ಜಾಗದಲ್ಲಿದ್ದವು. ಆಗ ನನ್ನ ಮ್ಯೂಸಿಯಂನ ಆಸಕ್ತಿಗೆ ಇಂಬು ದೊರೀತು. ಒಂದು ಮ್ಯೂಸಿಯಂ ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎನ್ನುವುದನ್ನು ಅದರಲ್ಲಿ ಒಳಗೊಂಡು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತಾ ಹೋಯಿತು.

ಮುಂದೆ ಬೆಂಗಳೂರಿನ ಐಐಎಂ ಗೆ ಸೇರಿದಾಗ ಅಲ್ಲಿಯ ನಿರ್ದೇಶಕರು ಪ್ರಾಣಿಪ್ರಿಯರು. ಅವರು ಎತ್ತಿನ ಬಂಡಿಗಳ ಬಗ್ಗೆ ಸಂಶೋಧನೆ ಶುರು ಮಾಡಿದರು. ದೇಶವನ್ನೆಲ್ಲಾ ಸುತ್ತಾಡಿ ವಿವಿಧ ರೀತಿಯ ಚಕ್ಕಡಿಗಳ ಮಾದರಿಗಳನ್ನು ಬೆಂಗಳೂರಿನಲ್ಲಿ ಸಂಗ್ರಹಿಸಿಟ್ಟರು. ಮನುಷ್ಯನ ಆಸಕ್ತಿ ಒಂದೊಂದು ರೀತಿ. ಆದರೆ ಅವಕ್ಕೊಂದು ವ್ಯವಸ್ಥಿತ ರೂಪು ಕೊಟ್ಟಾಗ ಬೇರೆಯದೇ ಆಯಾಮ ಪಡೆಯುತ್ತದೆ ಎನ್ನುವುದಕ್ಕೆ ಮ್ಯೂಸಿಯಂ ಪರಿಕಲ್ಪನೆಯೇ ಉದಾಹರಣೆ. ಈ ಚಕ್ಕಡಿ ಕುರಿತು ನಡೆದ ಸಂಶೋಧನೆಯಲ್ಲಿ ನಾನು ಡಾಕ್ಯುಮೆಂಟೇಶನ್ ಕೆಲಸ ನಿರ್ವಹಿಸಿದೆ.

ಇದನ್ನೂ ಓದಿ
Image
World AIDS Vaccine Day 2022 : ವೇಷ ಮರೆಸಿಕೊಂಡು ಓಡಾಡುವ ಏಡ್ಸ್ ಎಂಬ ಕಳ್ಳನಿಗೆ ಲಸಿಕೆ ಕಂಡುಹಿಡಿಯುವುದು ಸುಲಭವೆ?
Image
National Dengue Day: ಡೆಂಗ್ಯೂ ಜ್ವರದಿಂದ ಪಾರಾಗಲು ಏನು ತಿನ್ನಬೇಕು? ಯಾವ ಡಯಟ್ ಪ್ಲಾನ್ ಅನುಸರಿಸಬೇಕು?
Image
Dr. Veena Shanteshwar : ತಾನು ಲೋಕವಿರೋಧಿ ಆಗುತ್ತೇನೆ ಎಂದು ಗೊತ್ತಿದ್ದೂ ವೀಣಾ ಇಂಥ ಪ್ರಯೋಗ ನಡೆಸಿದರು
Image
Hopscotch : ಅಮಾರೈಟ್? : ಅಗಾ ಬಿಲ್ಲೆ ಎಸೆದಾಯ್ತು! ಇಂದಿನಿಂದ ಭವ್ಯಾ ನವೀನ ಅಂಕಣ ಆರಂಭ

ಇದನ್ನೂ ಓದಿ : ಹುಟ್ಟೂರಲ್ಲಿ ಮಣ್ಣಿನ ಮಗನಿಗೆ ಮ್ಯೂಸಿಯಂ -ಎಚ್ ಡಿ ದೇವೇಗೌಡರ ಮ್ಯೂಸಿಯಂನಲ್ಲಿ ಏನೆಲ್ಲಾ ಇರಲಿದೆ, ವಿವರ ಇಲ್ಲಿದೆ

ನಂತರ ಡೆಹ್ರಾಡೂನಿನ ಇನ್​ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಸಂಸ್ಥೆಗೆ ಸೇರಿದೆ. ಅಲ್ಲಿಯ ವಿಜ್ಞಾನಿಗಳು ಹಿಮಾಲಯಕ್ಕೆ ಸಂಶೋಧನೆಗೆಂದು ತೆರಳುತ್ತಿದ್ದರು. ಮಿನರಲ್ಸ್, ಕಲ್ಲು, ಮಣ್ಣು, ಪಳೆಯುಳಿಕೆ, ಸಾಲಿಗ್ರಾಮ ಹೀಗೆ ಅನೇಕ ವಸ್ತುಗಳನ್ನು ತೆಗೆದುಕೊಂಡು ಬರುತ್ತಿದ್ದರು. ಜಿಯಾಲಾಜಿಸ್ಟ್ ಆಗಿದ್ದ ಪ್ರೊ. ವಾಡಿಯಾ ಅವರಿಗೆ ಯಾಕೆ ಒಂದು ಮ್ಯೂಸಿಯಂ ಮಾಡಬಾರದು ಎಂದೆನಿಸಿತು. ಕುತೂಹಲದಿಂದ ಇದೆಲ್ಲವನ್ನೂ ನೋಡುವ, ಒಳಗೊಳ್ಳುವ ಭಾಗ್ಯ ದೊರೆಯಿತು.

ನಂತರ ದೆಹಲಿಗೆ ಬಂದೆ. ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ ಟೆಕ್ನಾಲಜಿ ಅಂಡ್​ ಡೆವಲಪ್​ ಮೆಂಟ್ ಸ್ಟಡೀಸ್ ನಲ್ಲಿದ್ದಾಗ, ಮೀನುಗಾರಿಕೆ ಮತ್ತು ಹಳೆಯ ಬೋಟ್​ಗಳ ಕುರಿತು ಸಂಶೋಧನೆ ನಡೆಯುತ್ತಿತ್ತು. ಆ ತಂಡ ಕೊಲ್ಕತ್ತೆಯ ಕರಾವಳಿ ಪ್ರದೇಶದಿಂದ ಸಂಗ್ರಹಿಸಿ ತರುತ್ತಿದ್ದ ಈ ಸಂಬಂಧಿ ಹಳೆಯವ ವಸ್ತುಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ನೋಡನೋಡುತ್ತಲೇ ಬೋಟ್ ಮ್ಯೂಸಿಯಂ ತಳೆಯಿತು. ಜೊತೆಗೆ ಕೈಗಾರಿಕೆ, ಕುಲುಮೆಗಳು, ಲೋಹದ ಪ್ರಕ್ರಿಯೆ ಬಗ್ಗೆ ನನಗೆ ಅತೀವ ಆಸಕ್ತಿ ಇತ್ತು. ಅದಕ್ಕೆ ಸಂಬಂಧಿಸಿದ ಮಾಡೆಲ್​ಗಳನ್ನು ಸ್ಥಾಪಿಸುವುದಾಗಲಿ, ಆರ್ಕೈವ್ಸ್ ಸೃಷ್ಟಿ ಮಾಡುವುದಾಗಲಿ ಬಹಳ ಆಸಕ್ತಿಕರ ವಿಷಯ. ವಿಜ್ಞಾನಿಗಳು, ಗಣಿತಜ್ಞರು ಅವರ ವಸ್ತುಗಳು, ಲೇಖನಗಳು, ಕಚ್ಚಾ ಪ್ರತಿಗಳು ಪರಿಕರಗಳನ್ನು ಸಂರಕ್ಷಿಸುವ ಕೆಲಸವನ್ನು ನನಗೆ ವಹಿಸಿದರು. ಆದರೆ ನನಗಾಗ ಆರ್ಕೈವಲ್ ಸೈನ್ಸ್ ಕುರಿತು ಮಾಹಿತಿ ಇರಲಿಲ್ಲ. ನಂತರ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಮ್ಯೂಸಿಯಾಲಜಿ ಹಿಸ್ಟರಿ ಆಫ್ ಆರ್ಟ್ ಅಂಡ್ ಕಾನ್ಸರ್ವೇಷನ್ ಆಫ್ ಕಲ್ಚರಲ್ ಪ್ರಾಪರ್ಟೀಸ್ ಸಂಸ್ಥೆಯಲ್ಲಿ ಆರ್ಕೈವಲ್ ಟ್ರೇನಿಂಗ್​ಗೆ ಸೇರಿದೆ. ಕಲೆಯ ಸಂರಕ್ಷಣೆ ಕುರಿತು ತರಬೇತಿ ಪಡೆದುಕೊಂಡೆ. ಜೊತೆಗೆ ಸಾಮಗ್ರಿ, ಕಟ್ಟಡ ಸಂರಕ್ಷಣೆ ಕುರಿತೂ. ನ್ಯಾಷನಲ್ ಮ್ಯೂಸಿಯಂನಲ್ಲಿ ಎಂಎ ಇನ್ ಕಾನ್ಸರ್ವೇಷನ್ ಆಫ್ ಕಲ್ಚರಲ್ ಪ್ರಾಪರ್ಟಿ ಓದುವಾಗ ಪ್ರತೀ ದಿನ ಬರುವ ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಒದಗುತ್ತಿತ್ತು. ಅವರು ಒಂದೊಂದೇ ವಸ್ತುವನ್ನೂ ಕುತೂಹಲದಿಂದ ನೋಡುವಾಗ ಬಹಳ ಖುಷಿಯಾಗುತ್ತಿತ್ತು. ಇಂಥ ಒಳ್ಳೆಯ ಕ್ಷೇತ್ರದಲ್ಲಿಯೂ ಕೆಲಸ ಮಾಡಲ ಅವಕಾಶ ಒದಗಿದರೂ ನೇರವಾಗಿ ಕೆಲಸ ಮಾಡಲು ಅವಕಾಶ ಸಿಗಲಿಲ್ಲ. ಆರ್ಕೈವ್​ನಲ್ಲಿ ಸಂರಕ್ಷಣೆ ಮಾಡಲು ಮಾತ್ರ ಸಾಧ್ಯವಾಯಿತು.

ಇದನ್ನೂ ಓದಿ : International Museum Day 2022 : ನಮಗೆಂಥ ಮ್ಯೂಸಿಯಂ ಬೇಕಿದೆ?

ಹಿಂದೆ ಗುಲ್ಬರ್ಗಾ ಜಿಲ್ಲೆಯ ಸನ್ನತಿಯಲ್ಲಿ ಬೌದ್ಧ ಸ್ತೂಪಗಳು 70ರ ದಶಕದಲ್ಲಿ ಸಿಕ್ಕಿದ್ದವು. ಅಶೋಕನ ಶಾಸನಗಳಿವೆ ಆದರೆ ಬೌದ್ಧ ಸ್ತೂಪಗಳು ನಮ್ಮ ಕರ್ನಾಟಕದಲ್ಲಿ ಅಪರೂಪವೇ. ಭೀಮಾ ನದಿ ತೀರದಲ್ಲಿ ಸಿಕ್ಕ ಸ್ತೂಪವನ್ನು ನೋಡಿದ್ದು ಮರೆಯಲಾರದ ಅನುಭವ. ಈಗಲೂ ಐತಿಹಾಸಿಕ ಸ್ಥಳಗಳಲ್ಲಿ ಉತ್ಖನನ ನಡೆದಾಗ ಭೇಟಿ ನೀಡುತ್ತೇನೆ.

ರಾಷ್ಟ್ರಪ್ರತಿಗಳ ಭವನದಲ್ಲಿ 3/4 ಇಂಚಿನ ಹುಡುಗಿಯ ಲೋಹದಮೂರ್ತಿ. ಅದು ಹರಪ್ಪ ಮೊಹಂಜೊದಾರೊ ಕಾಲದ್ದು. ಇನ್ನೊಂದು ಮೂರ್ತಿ ಪಾಕಿಸ್ತಾನಕ್ಕೆ ಹಂಚಿಹೋಯಿತು. ಹಾಗೆಯೇ ಸಿಂಧು ನದಿಯ ವರ್ತಕನ ಮೂರ್ತಿ ಇದೆ, ಕಲ್ಲಿನದು. ಅವನು ಹಾಕಿಕೊಂಡಿರುವ ಶೆಲ್ಲೆ ಮೇಲಿನ ಡಿಸೈನ್ ನೋಡಿದರೆ, ಟೆಕ್ಸ್ಟ್​ಟೈಲ್ ಎಷ್ಟು ಮುಂದುವರಿದಿತ್ತು ಆಗ ಅಂತ ಗೊತ್ತಾಗುತ್ತದೆ. ಇವೆಲ್ಲ ವಿಷಯ ತಿಳಿಯಬೇಕೆಂದರೆ ಪ್ರತಿಯೊಬ್ಬರೂ ಮ್ಯೂಸಿಯಂಗೆ ಭೇಟಿ ನೀಡುವ ಮನಸ್ಥಿತಿ ಉಳಿಸಿಕೊಳ್ಳಬೇಕು. ವಸ್ತುಗಳನ್ನು ಕಣ್ಣಿಂದ ನೋಡಿದಾಗ ಶಾಶ್ವತವಾಗಿ ನಮ್ಮ ಮನಸ್ಸಿನಲ್ಲಿ ಉಳಿಯುತ್ತವೆ. ಇಂದು ವಿದ್ಯಾರ್ಥಿಗಳಿಗೆ ಮ್ಯೂಸಿಯಂ ವಿದ್ಯಾಕೇಂದ್ರಗಳೇ.

ಅಹಮದಾಬಾದ್​ನಲ್ಲಿ ಕ್ಯಾಲಿಕೋ ಕಂಪೆನಿ ಅಭಿವೃದ್ಧಿಪಡಿಸಿದ ಟೆಕ್ಸ್​ಟೈಲ್​ ಮ್ಯೂಸಿಯಂ, ದೆಹಲಿಯ ಮ್ಯೂಸಿಕಲ್ ಇನ್​ಸ್ಟ್ರುಮೆಂಟ್ ಮ್ಯೂಸಿಯಂ, ಪುಣೆಯಲ್ಲಿ ಅಡಕತ್ತರಿಗಳದ್ದೆ ಒಂದು ಮ್ಯೂಸಿಯಂ ಇದೆ. ತಮಿಳುನಾಡಿನಲ್ಲಿ ಹಳ್ಳಿಯಲ್ಲಿ ಸೈನ್ಸ್ ಮ್ಯೂಸಿಯಂ ಇದೆ. ಇಷ್ಟೆಲ್ಲ ಇದ್ದರೂ ನಮ್ಮ ದೇಶದಲ್ಲಿ ಜನಸಾಮಾನ್ಯರಿಗೆ ಮ್ಯೂಸಿಯಂ ಪ್ರವೇಶ ಅಷ್ಟು ಸುಲಭವಾಗಿ ಸಿಗದು. ಕೇವಲ ವಿದ್ಯಾರ್ಥಿಗಳಿಗಷ್ಟೇ ಪ್ರವೇಶವಿದೆ. ಮೊದಲು ಗೈಡ್​ಗಳು ವಿವರಿಸುತ್ತಿದ್ದರು. ಈಗ ವಾಕಿಟಾಕಿ ಮೂಲಕ ಡಿಸ್ಕ್ರಿಪ್ಷನ್ ಕೇಳಬಹುದು. ಲೇಸರ್ ಲೈಟಿಂಗ್, ವರ್ಚುವಲ್ ಮ್ಯೂಸಿಯಂ ಶುರುವಾಗಿವೆ. ಪ್ಯಾರೀಸ್ ಮ್ಯೂಸಿಯಂ ಇಲ್ಲಿಯೇ ನೋಡಬಹುದು, ವಾಕ್ ಇನ್ ಸ್ಟೈಲ್​ನಲ್ಲಿ. ಹೀಗೆ ಹೊಸ ಬೆಳವಣಿಗೆಗಳೊಂದಿಗೆ ಹೊಸ ಜನಾಂಗ ಹೆಜ್ಜೆ ಹಾಕುತ್ತಿದೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 1:58 pm, Wed, 18 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ