Cyber Crime: ಹೊಸ ಮೊಬೈಲ್​ಗೆ ಸಿಮ್​ ಹಾಕಿದ್ದೇ ತಡ ಟೆಕ್ಕಿ ಬ್ಯಾಂಕ್​ ಖಾತೆಯಲ್ಲಿದ್ದ 2 ಕೋಟಿ ರೂ. ಮಾಯ

ಬೆಂಗಳೂರಿನಲ್ಲಿ ಸೈಬರ್​ ಕ್ರೈಂ ಪ್ರಕರಣಗಳು ದಿನದಿನಕ್ಕೆ ಹೆಚ್ಚುತ್ತಿವೆ. ಸೈಬರ್​ ವಂಚಕರು ಹೊಸ ಹೊಸ ಮಾರ್ಗಗಳ ಮುಖಾಂತರ ವಂಚನೆ ಮಾಡುತ್ತಿದ್ದಾರೆ. ಬೆಂಗಳೂರಿನ ಟೆಕ್ಕಿ‌ಯೊಬ್ಬರು ಸೈಬರ್​ ವಂಚಕರ ಬಲೆಗೆ ಬಿದ್ದು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಟೆಕ್ಕಿ ಸೈಬರ್​ ವಂಚಕರ ಬಲೆಗೆ ಬಿದ್ದಿದ್ದು ಹೇಗೆ? ಇಲ್ಲಿದೆ ವಿವರ

Cyber Crime: ಹೊಸ ಮೊಬೈಲ್​ಗೆ ಸಿಮ್​ ಹಾಕಿದ್ದೇ ತಡ ಟೆಕ್ಕಿ ಬ್ಯಾಂಕ್​ ಖಾತೆಯಲ್ಲಿದ್ದ 2 ಕೋಟಿ ರೂ. ಮಾಯ
ಸೈಬರ್​ ಕ್ರೈಂ
Follow us
Prajwal Kumar NY
| Updated By: ವಿವೇಕ ಬಿರಾದಾರ

Updated on:Jan 19, 2025 | 10:50 AM

ಬೆಂಗಳೂರು, ಜನವರಿ 19: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸೈಬರ್​ ಕ್ರೈಂ (Cyber Crime) ಪ್ರಕರಣಗಳು ದಿನದಿನಕ್ಕೆ ಹೆಚ್ಚುತ್ತಿವೆ. ಸೈಬರ್​ ವಂಚಕರು ಹೊಸ ಹೊಸ ಮಾರ್ಗಗಳ ಮುಖಾಂತರ ವಂಚನೆ ಮಾಡುತ್ತಿದ್ದಾರೆ. ಬೆಂಗಳೂರಿನ ಟೆಕ್ಕಿ‌ಯೊಬ್ಬರಿಗೆ ಹೊಸ ಮೊಬೈಲ್ ಕಳಿಸಿ, ಅದರ ಮೂಲಕ ಸೈಬರ್ ವಂಚಕರು 2.80 ಕೋಟಿ ರೂ. ದೋಚಿದ್ದಾರೆ. ಇದು ಸೈಬರ್ ಕ್ರೈಂ ಖದೀಮರ ಹೊಸ ಪ್ಲಾನ್ ಆಗಿದೆ.

ಬೆಂಗಳೂರಿನ ಟೆಕ್ಕಿಯೊಬ್ಬರ ವಿಳಾಸಕ್ಕೆ ಸೈಬರ್​ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಎಂದು ಮೊಬೈಲ್ ಕಳುಹಿಸಿದ್ದರು. ಗಿಫ್ಟ್​​ ಸ್ವೀಕರಿಸಿದ ಟೆಕ್ಕಿ ಸಿಮ್​ನ್ನು ಮೊಬೈಲ್​​ನಲ್ಲಿ ಹಾಕಿದ್ದಾರೆ. ಸಿಮ್​ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಅನ್ನು ಸೈಬರ್​ ಖದೀಮರು ತಮ್ಮ ಖಾತೆಗೆ ಜಮಾವಣೆ ಮಡಿಕೊಂಡಿದ್ದಾರೆ.

ಇದನ್ನೂ ಓದಿ: ಸೈಬರ್​ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು

ಟೆಕ್ಕಿಯ ಬ್ಯಾಂಕ್​ ಡೀಟೇಲ್ಸ್​ ಸಿಕ್ಕಿದ್ದು ಹೇಗೆ?

ಸೈಬರ್​ ವಂಚಕರು ಮೊಬೈಲ್​ನಲ್ಲಿ ಮೊದಲೇ ಕೆಲವು ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿದ್ದರು. ಟೆಕ್ಕಿ ಮೊಬೈಲ್​ಗೆ ಸಿಮ್​ ಹಾಕುತ್ತಿದ್ದಂತೆ, ಹಲವು ಸಂದೇಶಗಳು ಬಂದಿವೆ. ಈ ಮೊಬೈಲ್​ಗೆ ಬರುವ ಸಂದೇಶಗಳು ಮತ್ತು ಒಟಿಪಿಗಳು ತಮಗೂ ಬರುವಂತೆ ವಂಚಕರು ಸೆಟ್ ಮಾಡಿದ್ದರು. ಸಂದೇಶಗಳು ಮತ್ತು ಒಟಿಪಿ ಮೂಲಕ ಟೆಕ್ಕಿಯ ಬ್ಯಾಂಕ್​ ಖಾತೆ ಮಾಹಿತಿ ಪಡೆದಿದ್ದಾರೆ.

ನಂತರ ಟೆಕ್ಕಿಯ ಬ್ಯಾಂಕ್ ಅಕೌಂಟ್ ಸೇರಿ ಎಲ್ಲವನ್ನು ಪರಿಶೀಲಿಸಿದ್ದಾರೆ. ಕೊನೆಗೆ ಬ್ಯಾಂಕ್ ಎಫ್​ಡಿಯಲ್ಲಿ ಇಟ್ಟಿದ್ದ 2.80 ರೂ. ಅನ್ನು ಖದೀಮರು ಎಗರಿಸಿದ್ದಾರೆ. ವೈಟ್​ಫೀಲ್ಡ್ ಸೆನ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 ಕೋಟಿ ವಂಚಿಸಿದ್ದ ಆರೋಪಿಗಳು ಅರೆಸ್ಟ್​

ಮತ್ತೊಂದು ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಟೆಕ್ಕಿಗೆ 11 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ. ಕರಣ್, ತರುಣ್ ನಟಾನಿ, ಧವಲ್ ಷಾ ಬಂಧಿತರು. ವಂಚಕರು ಟೆಕ್ಕಿ ವಿಜಯ್ ಕುಮಾರ್​ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು.

ವಂಚಕರ ಬೆದರಿಕೆಗೆ ಹೆದರಿದ ಟೆಕ್ಕಿ, “ನನ್ನ ಖಾತೆಯಲ್ಲಿ ಕೇವಲ 2 ಲಕ್ಷ ರೂ. ಇದೆ ಕೊಡುತ್ತೇನೆ ಎಂದು ಹೇಳಿದ್ದರು. ಬಳಿಕ ಟೆಕ್ಕಿ, ಸೈಬರ್ ವಂಚಕರು ಹೇಳಿದ್ದ ಅಕೌಂಟ್​ಗೆ 2 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಮತ್ತೆ ಮತ್ತೆ ಹಣಕ್ಕಾಗಿ ಟೆಕ್ಕಿ ವಿಜಯ್ ಕುಮಾರ್​ಗೆ ವಂಚಕರು ಧಮ್ಕಿ ಹಾಕುತ್ತಿದ್ದರು.

ಬಳಿಕ, ಟೆಕ್ಕಿ ವಿಜಯ್ ಕುಮಾರ್ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಅಮೆರಿಕದಲ್ಲಿನ ಷೇರಿನ ಬಗ್ಗೆ ವಂಚಕರಿಗೆ ಮಾಹಿತಿ ನೀಡಿದ್ದರು. ಬಳಿಕ ವಂಚಕರು ಪೊಲೀಸರು, ಕಸ್ಟಮ್ಸ್ ಅಧಿಕಾರಿಗಳು, ಇಡಿ ಅಧಿಕಾರಿಗಳೆಂದು ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಟೆಕ್ಕಿಗೆ ನಿರಂತರ ಕರೆಮಾಡಿ ಬೆದರಿಕೆ ಹಾಕಿದ್ದಾರೆ.

ಇದರಿಂದ ಹೆದರಿದ್ದ ಟೆಕ್ಕಿ ವಿಜಯ್​ ಕುಮಾರ್ ಅಕೌಂಟ್ ನಂಬರ್, ಆಧಾರ್, ಪಾನ್​ಕಾರ್ಡ್ ನಂಬರ್ ನೀಡಿದ್ದನು. ಬಳಿಕ, ವಂಚಕರು ತಾವು ಕಳಿಸುವ ಸರ್ಕಾರಿ ಅಕೌಂಟ್​​ಗೆ ಹಣ ಹಾಕುವಂತೆ ಸೂಚಿಸಿದದಾರೆ. ನಾವು ಹೇಳಿದ ಅಕೌಂಟ್​ಗೆ ಹಣ ಹಾಕಿದರೆ ಸಹಾಯ ಮಾಡುತ್ತೇವೆ ಎಂದಿದ್ದಾರೆ. ಒಟ್ಟು 9 ಖಾತೆಗಳ ನಂಬರ್ ನೀಡಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ತಿಂಗಳ ಕಾಲ ಕಾಡಿದ್ದರು. ಬಳಿಕ ಟೆಕ್ಕಿ ವಿಜಯ್​ ಕುಮಾರ್ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಟೆಕ್ಕಿ ಅಕೌಂಟ್ ಜಾಡು ಹಿಡಿದು ತನಿಖೆ ನಡೆಸಿದ ತನಿಖೆಗೆ ಇಳಿದಾಗ, ಅಲಹಾಬಾದ್​ನ ಒಂದು ಖಾತೆಗೆ 7.5 ಕೋಟಿ ಹೋಗಿರುವುದು ತಿಳಿದಿದೆ.

ಗುಜರಾತ್​ನ ಸೂರತ್ ಚಿನ್ನದ ವ್ಯಾಪಾರಿ ಬಗ್ಗೆ ಮಾಹಿತಿ ಗೊತ್ತಾಗಿದೆ. ಸೂರತ್​ಗೆ ತೆರಳಿದ ಪೊಲೀಸರು ಚಿನ್ನ ವ್ಯಾಪಾರಿ ಹತ್ತಿರ ಮಾಹಿತಿ ಸಂಗ್ರಹಿಸಿದ್ದಾರೆ. ವಂಚಿಸಿದ ಕೋಟಿ ಕೋಟಿ ಹಣದಲ್ಲಿ ಸೈಬರ್​ ವಂಚಕರು ಚಿನ್ನಾಭರಣ ಖರೀದಿಸಿ ಪರಾರಿಯಾಗಿದ್ದರು. ಕೊನೆಗೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:11 am, Sun, 19 January 25

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ