AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್​ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು

ಮುಂಬೈ ಮೂಲದ ಸೈಬರ್ ವಂಚಕರು ಬೆಂಗಳೂರಿನ 83 ವರ್ಷದ ವೃದ್ಧೆಯಿಂದ 1.24 ಕೋಟಿ ರೂಪಾಯಿ ದೋಚಿದ್ದಾರೆ. ಸಿಬಿಐ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಮನಿ ಲ್ಯಾಂಡರಿಂಗ್ ಆರೋಪದ ಬೆದರಿಕೆ ಹಾಕಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ವೃದ್ಧೆ ಹಂತಹಂತವಾಗಿ ಹಣ ವರ್ಗಾಯಿಸಿದ್ದು, ನಂತರ ವಂಚನೆ ಅರಿತು ದೂರು ನೀಡಿದ್ದಾರೆ. ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ಧಾರವಾಡದ ವ್ಯಕ್ತಿಯೊಬ್ಬರು 3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಸೈಬರ್​ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Dec 17, 2024 | 9:44 AM

Share

ಬೆಂಗಳೂರು, ಡಿಸೆಂಬರ್​ 17: ಮುಂಬೈ (Mumbai) ಮೂಲದ ಸೈಬರ್​ ವಂಚಕರು (Cyber Crime) ಸಿಬಿಐ ಪೊಲೀಸರ (CBI Police) ಹೆಸರಿನಲ್ಲಿ ಬೆಂಗಳೂರಿನ 83 ವರ್ಷದ ವೃದ್ದೆಗೆ 1 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿಗಳು, “ನಿಮ್ಮ ಮತ್ತೊಂದು ದೂರವಾಣಿ ಸಂಖ್ಯೆಯಿಂದ ಮನಿ ಲ್ಯಾಂಡರಿಂಗ್ ನಡೆಯುತ್ತಿದೆ. ನಿಮ್ಮ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿದೆ ಎಂದು ವೃದ್ಧೆಗೆ ಬೆದರಿಕೆ ಹಾಕಿದ್ದಾರೆ.

ಬಳಿಕ, ಆರೋಪಿಗಳು ವೃದ್ಧೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಬೆದರಿಕೆಗೆ ಹೆದರಿದ ವೃದ್ಧೆ ಆರೋಪಿಗಳ ಖಾತೆ ಹಂತ ಹಂತವಾಗಿ 32 ಲಕ್ಷ ರೂ., 50 ರೂ. ಲಕ್ಷ, 32 ಲಕ್ಷ ರೂ., 10 ಲಕ್ಷ ರೂ. ಒಟ್ಟು 1.24 ಕೋಟಿ ರೂ. ಸೈಬರ್ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಹಣ ಖಾತೆಗೆ ಜೆಮೆಯಾದ ಬಳಿಕ ಆರೋಪಿಗಳು ಮತ್ತೆ ಸಂಪರ್ಕಿಸಿದ ಹಿನ್ನೆಲೆಯಲ್ಲಿ ವೃದ್ಧೆ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ, ವಂಚನೆಗೆ ಒಳಗಾಗಿರುವುದು ತಿಳಿದುಕೊಡಿದ್ದಾರೆ. ನಂತರ, ಘಟನೆ ನಡೆದು ಎರಡು ತಿಂಗಳ ಬಳಿಕ ವೃದ್ಧೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ವೃದ್ಧೆ ನೀಡಿದ ದೂರಿನ ಆಧಾರದ ಮೇಲೆ ಸೈಬರ್​ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಬಂತು APK ಫೈಲ್: ಆ್ಯಪ್ ಇನ್​ಸ್ಟಾಲ್ ಆಗುತ್ತಿದ್ದಂತೇ ಮೊಬೈಲ್ ಹ್ಯಾಕ್, 1.5 ಲಕ್ಷ ರೂ. ಮಾಯ

ಕಳೆದ ತಿಂಗಳಷ್ಟೇ ಇದೇ ರೀತಿಯಾಗಿ ಸೈಬರ್​ ಕ್ರೈಂ ನಡೆದಿತ್ತು. ವಂಚಕರು ವೃದ್ದೆಯೊಬ್ಬರಿಂದ 10 ಲಕ್ಷ ಹಣ ಸುಲಿಗೆ ಮಾಡಿದ್ದರು.

ಪೊಲೀಸ್​ ಹೆಸರಿನಲ್ಲಿ ವಿಡಿಯೋ ಕಾಲ್​​ ಮಾಡಿ ​ವಂಚನೆ

ಸೈಬರ್​ ವಂಚಕರು ವಿಡಿಯೋ ಕರೆ ಮಾಡಿ ಹೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿತ್ತು. ರಮೇಶ್​ ನೂಲ್ವಿ ಹಣ ಕಳೆದುಕೊಂಡಿದ್ದ ವ್ಯಕ್ತಿ. ಪೊಲೀಸ್ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ರಮೇಶ್​ ನೂಲ್ವಿ ಎಂಬುವರಿಗೆ ವಿಡಿಯೋ ಕರೆ ಮಾಡಿದ್ದನು. ಆತ ಪೊಲೀಸ್ ಠಾಣೆಯಲ್ಲಿ ಕುಳಿತು ಮಾತನಾಡುತ್ತಿರುವಂತೆ ಠಾಣೆಯ ಸೆಟ್ ಕೂಡ ಇತ್ತು. ನಿಮ್ಮ ಮೇಲೆ ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಸಾಗಾಣಿಕೆ ಕೇಸು ದಾಖಲಾಗಿದ್ದು, ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ ಎಂದು ಹೇಳಿದ್ದನು. ಅಲ್ಲದೇ, ನೀವು ಕೂಡಲೇ ಮುಂಬೈ ಕ್ರೈಂ ಬ್ರ್ಯಾಂಚ್​ಗೆ ಹಾಜರಾಗಬೇಕು ಅಂತ ರಮೇಶ್​ ಅವರಿಗೆ ಹೇಳಿದ್ದನು. ಅಲ್ಲದೇ, ನಕಲಿ ವಾರೆಂಟ್ ಪ್ರತಿಯನ್ನು ಕೂಡ ಕಳಿಸಿದ್ದನು.

ಇದನ್ನು ನೋಡಿದ ರಮೇಶ ಭಯಗೊಂಡು, ಆರೋಪಿ ಕೇಳಿದ ಖಾತೆಗೆ 3 ಲಕ್ಷ ರೂ. ಕೂಡಲೇ ವರ್ಗಾವಣೆ ಮಾಡಿದ್ದರು. ಬಳಿಕ, ರಮೇಶ್​ ಅವರಿಗೆ ಇವರೆಲ್ಲ ನಕಲಿ ಅಧಿಕಾರಿಗಳು ಎಂಬುವುದು ಗೊತ್ತಾಗಿತ್ತು. ಕೂಡಲೇ ಧಾರವಾಡದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂಥ ಮೋಸಕ್ಕೆ ಬಲಿಯಾಗಬೇಡಿ ಅಂತ ಧಾರವಾಡ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಮನವಿ ಮಾಡಿದ್ದರು.

ವರದಿ:- ಪ್ರದೀಪ್​

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ರಾಜ್ಯದ ಒಂದೆಡೆ ವರುಣಾರ್ಭಟ; ಇನ್ನೊಂದೆಡೆ ಮುಂಗಾರಿನ ಮುನಿಸು!
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು