ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶ ಶೇ. 14ರಷ್ಟು ಹೆಚ್ಚಳ; ಬೆಂಗಳೂರಿನಲ್ಲೇ ಹೆಚ್ಚು ಪೋಸ್ಟಿಂಗ್ಸ್
Cybersecurity job openings in India: ಸೈಬರ್ಸೆಕ್ಯೂರಿಟಿ ಪರಿಣಿತರಿಗೆ ಉದ್ಯೋಗಾವಕಾಶ ಹೆಚ್ಚುತ್ತಿದೆ. ಒಂದು ವರ್ಷದಲ್ಲಿ ಸೈಬರ್ಸೆಕ್ಯೂರಿಟಿ ಹುದ್ದೆಗಳ ಪೋಸ್ಟಿಂಗ್ನಲ್ಲಿ ಶೇ. 14ರಷ್ಟು ಹೆಚ್ಚಾಗಿದೆ. ಈ ಲಿಸ್ಟಿಂಗ್ನಲ್ಲಿ ಸಿಂಹಪಾಲು ಬೆಂಗಳೂರಿನದ್ದಾಗಿದೆ. ಇದರ ಶೇ. 10ರಷ್ಟು ಕೆಲಸಗಳು ಬೆಂಗಳೂರಿನಲ್ಲಿವೆ.
ಬೆಂಗಳೂರು, ಅಕ್ಟೋಬರ್ 17: ಸೈಬರ್ ಸೆಕ್ಯೂರಿಟಿ ಪರಿಣಿತರಿಗೆ ಬೇಡಿಕೆ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ ಸೈಬರ್ ಸೆಕ್ಯೂರಿಟಿ ಸ್ಥಾನಗಳಿಗೆ ಜಾಬ್ ಪೋಸ್ಟಿಂಗ್ಗಳು ಶೇ. 14ರಷ್ಟು ಹೆಚ್ಚಿವೆ ಎಂದು ಇಂಡೀಡ್ ಇಂಡಿಯಾ ಎಂಬ ಜಾಬ್ ಪ್ಲಾಟ್ಫಾರ್ಮ್ನ ವರದಿಯೊಂದು ಹೇಳಿದೆ. ಇದರ ಪ್ರಕಾರ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಇದರ ಜಾಬ್ ಓಪನಿಂಗ್ಸ್ ಹೆಚ್ಚಿದೆ.
ಒಂದು ವರ್ಷದಲ್ಲಿ ಲಿಸ್ಟ್ ಆಗಿರುವ ಹೆಚ್ಚುವರಿ ಜಾಬ್ ಓಪನಿಂಗ್ನಲ್ಲಿ ಬೆಂಗಳೂರಿನಲ್ಲೇ ಶೇ. 10ರಷ್ಟಿದೆ. ದೆಹಲಿ, ಹೈದರಾಬಾದ್ ಮತ್ತು ಮುಂಬೈ ನಂತರ ಸ್ಥಾನದಲ್ಲಿವೆ. ವರ್ಕ್ ಫ್ರಂ ಹೋಮ್ ಅವಕಾಶ ಇರುವ ಸೈಬರ್ ಸೆಕ್ಯೂರಿಟಿ ಕೆಲಸಗಳ ಪ್ರಮಾಣವೂ ಸಾಕಷ್ಟಿದೆ.
‘ಆನ್ಲೈನ್ನಲ್ಲೇ ನಮ್ಮ ಕಾಲಕ್ಷೇಪ ಹೆಚ್ಚಾಗಿರುವುದರಿಂದ ವೈಯಕ್ತಿಕ ಡಾಟಾ ಸುರಕ್ಷತೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ದತ್ತಾಂಶವನ್ನು ಸುರಕ್ಷಿತವಾಗಿರಿಸಲು ಕಂಪನಿಗಳು ಗಮನ ಕೊಡುತ್ತಿವೆ. ಈ ಕಾರಣಕ್ಕೆ ಸೈಬರ್ ಸೆಕ್ಯೂರಿಟಿ ತಜ್ಞರಿಗೆ ಬೇಡಿಕೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸಾಕಷ್ಟು ವೇಗವಾಗಿ ಹೆಚ್ಚುತ್ತಿದೆ,’ ಎಂದು ಇಂಡೀಡ್ ಇಂಡಿಯಾ ಸಂಸ್ಥೆಯ ಸೇಲ್ಸ್ ಮುಖ್ಯಸ್ಥ ಶಶಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಐಟಿ ಸೆಕ್ಟರ್ನಲ್ಲಿ ಭರ್ಜರಿ ಉದ್ಯೋಗಾವಕಾಶ; ಎಐ, ಎಂಎಲ್, ಡೇಟಾ ಸೈನ್ಸ್ ಇತ್ಯಾದಿ ಕಲಿತವರಿಗೆ ಒಳ್ಳೆಯ ಬೇಡಿಕೆ
ಬೆಂಗಳೂರಿನಲ್ಲಿ ಹೆಚ್ಚು ಸೈಬರ್ ಸೆಕ್ಯೂರಿಟಿ ಕೆಲಸ ಇರುವುದು ಯಾಕೆ?
ಕಳೆದ ಒಂದು ವರ್ಷದಲ್ಲಿ ಆಫರ್ ಮಾಡಲಾಗಿರುವ ಸೈಬರ್ ಸೆಕ್ಯೂರಿಟಿ ಉದ್ಯೋಗಗಳು ಹೆಚ್ಚಾಗಿ ಬೆಂಗಳೂರಿನಲ್ಲೇ ಇರುವುದು. ಬೆಂಗಳೂರು ಭಾರತದ ಸಿಲಿಕಾನ್ ಸಿಟಿಯಾಗಿದ್ದು ಇಲ್ಲಿ ದೇಶದ ಪ್ರಮುಖ ಐಟಿ ಕಂಪನಿಗಳು, ಸ್ಟಾರ್ಟಪ್ಗಳು, ಜಾಗತಿಕ ಸಂಸ್ಥೆಗಳು ನೆಲಸಿವೆ.
ಈ ಸಂಸ್ಥೆಗಳ ಡಿಜಿಟಲ್ ಆಪರೇಶನ್ಸ್ ಹೆಚ್ಚುತ್ತಿದೆ. ಪರಿಣಾಮವಾಗಿ ಸೈಬರ್ ಸೆಕ್ಯೂರಿಟಿ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತಿವೆ. ಹೀಗಾಗಿ, ಸೈಬರ್ ಸೆಕ್ಯೂರಿಟಿ ತಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ.
ಕಾರ್ಪೊರೇಟ್ ಹಬ್ ಆಗಿರುವ ದೆಹಲಿಯಲ್ಲಿ ಬಹಳಷ್ಟು ಬಹುರಾಷ್ಟ್ರೀಯ ಕಂಪನಿಗಳಿವೆ. ಹಲವು ಪ್ರಮುಖ ಸರ್ಕಾರಿ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ರಾಷ್ಟ್ರರಾಜಧಾನಿಯಲ್ಲಿ ಇದ್ದು, ಅಲ್ಲಿಯೂ ಬಹಳಷ್ಟು ಸೈಬರ್ ಸೆಕ್ಯೂರಿಟಿ ತಜ್ಞರಿಗೆ ಹೆಚ್ಚಿನ ಕೆಲಸದ ಅವಕಾಶ ಇದೆ. ಇನ್ನು, ಹೈದರಾಬಾದ್ ನಗರ ಕೂಡ ಬಹಳಷ್ಟು ತಂತ್ರಜ್ಞಾನ ಕಂಪನಿಗಳಿಗೆ ತವರಾಗಿದೆ.
ಸೈಬರ್ ಸೆಕ್ಯೂರಿಟಿ ಕೆಲಸಕ್ಕೆ ಬೇಕಾದ ಪ್ರಮುಖ ಪರಿಣಿತಿಗಳು…
- ಕಮ್ಯೂನಿಕೇಶನ್ ಸ್ಕಿಲ್
- ಇನ್ಫಾರ್ಮೇಶನ್ ಸೆಕ್ಯೂರಿಟಿ
- ಫೈರ್ವಾಲ್
- ಅಜುರೆ
- ಎಡಬ್ಲ್ಯುಎಸ್
ಇದನ್ನೂ ಓದಿ: ವಾಟ್ಸಾಪ್, ಇನ್ಸ್ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಟೀಮ್ನಿಂದ ಉದ್ಯೋಗಿಗಳ ಲೇ ಆಫ್
ಅಜುರೆ, ಎಡಬ್ಲ್ಯುಎಸ್ ಇವೆಲ್ಲವೂ ಕ್ಲೌಡ್ ಕಂಪ್ಯೂಟಿಂಗ್ ಕೌಶಲ್ಯಗಳಾಗಿವೆ. ಅಜುರೆಯನ್ನು ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದೆ. ಎಡಬ್ಲ್ಯುಎಸ್ ಅಮೇಜಾನ್ನಿಂದ ನೀಡಲಾಗುವ ಕ್ಲೌಡ್ ಕಂಪ್ಯೂಟಿಂಗ್ ಸರ್ವಿಸ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Thu, 17 October 24