ವಾಟ್ಸಾಪ್, ಇನ್ಸ್​ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಟೀಮ್​ನಿಂದ ಉದ್ಯೋಗಿಗಳ ಲೇ ಆಫ್

Meta layoff latest: ಫೇಸ್​ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾದ ಮಾಲೀಕ ಸಂಸ್ಥೆಯಾದ ಮೆಟಾ ಹೊಸ ಸುತ್ತಿನ ಲೇ ಆಫ್ ನಡೆಸುತ್ತಿದೆ. ಅದರ ವಾಟ್ಸಾಪ್, ಇನ್ಸ್​​ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಮೊದಲಾದ ತಂಡಗಳಿಂದ ಒಂದಷ್ಟು ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ ಎಂದು ದಿ ವರ್ಜ್ ವರದಿಯಲ್ಲಿ ಹೇಳಲಾಗಿದೆ. ಆಂತರಿಕವಾಗಿ ಕೆಲಸದ ಸ್ಥಳಾಂತರ, ಹುದ್ದೆ ಬದಲಾವಣೆ ಇತ್ಯಾದಿ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ.

ವಾಟ್ಸಾಪ್, ಇನ್ಸ್​ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಟೀಮ್​ನಿಂದ ಉದ್ಯೋಗಿಗಳ ಲೇ ಆಫ್
ಮೆಟಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 17, 2024 | 12:10 PM

ನವದೆಹಲಿ, ಅಕ್ಟೋಬರ್ 17: ಮೆಟಾ ಸಂಸ್ಥೆ ಈಗ ಹೊಸ ಸುತ್ತಿನ ಲೇ ಆಫ್ ಆರಂಭಿಸಿದೆ. ನಿನ್ನೆ ದಿ ವರ್ಜ್​ನಲ್ಲಿ ಪ್ರಕಟವಾದ ವರದಿ ಪ್ರಕಾರ ವಾಟ್ಸಾಪ್, ಇನ್ಸ್​ಟಾಗ್ರಾಮ್, ರಿಯಾಲಿಟಿ ಲ್ಯಾಬ್ಸ್ ಸೇರಿದಂತೆ ಮೆಟಾದ ವಿವಿಧ ವಿಭಾಗಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ದೂರಗಾಮಿ ಕಾರ್ಯತಂತ್ರದ ಭಾಗವಾಗಿ ಮೆಟಾ ಸಂಸ್ಥೆ ಈ ಕ್ರಮ ತೆಗೆದುಕೊಳ್ಳುತ್ತಿದೆ. ಮೆಟಾದಿಂದ ಲೇ ಆಫ್ ಮಾತ್ರವಲ್ಲ, ವಿವಿಧ ತಂಡಗಳೊಳಗೆ ಸ್ಥಾನ ಬದಲಾವಣೆ, ಸ್ಥಳ ಬದಲಾವಣೆಗಳನ್ನೂ ಮಾಡಲಾಗುತ್ತಿದೆ.

ಕೆಲ ತಂಡಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ. ಕೆಲ ಉದ್ಯೋಗಿಗಳ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಒಂದು ಹುದ್ದೆ ಅನಗತ್ಯ ಎನಿಸಿದರೆ ಆ ಹುದ್ದೆಯಲ್ಲಿರುವವರಿಗೆ ಪರ್ಯಾಯ ಅವಕಾಶಗಳನ್ನು ಒದಗಿಸಲು ಆದ್ಯತೆ ಕೊಡಲಾತ್ತದೆ. ಪರ್ಯಾಯ ಸಿಕ್ಕದೇ ಹೋದ ಸಂದರ್ಭದಲ್ಲಿ ಮಾತ್ರವೇ ಆ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಭಾರತವನ್ನು ಮಟ್ಟಹಾಕಲು ಚೀನಾದ ಜಲಾಸ್ತ್ರ? ವಿಶ್ವದ ಅತಿದೊಡ್ಡ ಹೈಡ್ರೊಪವರ್ ಪ್ರಾಜೆಕ್ಟ್ ಆದ್ರೆ ಏನು ಗತಿ?

ಒಟ್ಟಾರೆ ಲೇ ಆಫ್ ಆಗಿರುವ ಉದ್ಯೋಗಿಗಳ ಸಂಖ್ಯೆ ಎಷ್ಟು ಎಂಬ ಮಾಹಿತಿ ತಿಳಿದುಬಂದಿಲ್ಲ. ದಿ ವರ್ಜ್ ವರದಿ ಪ್ರಕಾರ ಸಣ್ಣ ಪ್ರಮಾಣದಲ್ಲಿ ಲೇ ಆಫ್ ಮಾಡಲಾಗುತ್ತಿದೆ. ಕೆಲ ನೂರುಗಳ ಸಂಖ್ಯೆಯಲ್ಲಿ ಕೆಲಸ ಹೋಗುತ್ತಿರುವ ಸಾಧ್ಯತೆ ಇದೆ.

2022ರ ನವೆಂಬರ್​ನಲ್ಲಿ ಮೆಟಾ ಸಂಸ್ಥೆ ಬರೋಬ್ಬರಿ 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಸಂಸ್ಥೆಯ ಕ್ಷಮತೆ ಹೆಚ್ಚಿಸಲು ಈ ದೊಡ್ಡ ಸರ್ಜರಿ ನಡೆಸಲಾಗಿತ್ತೆನ್ನಲಾಗಿದೆ. ಆ ಬಳಿಕ ಕೆಲ ಹಂತಗಳಲ್ಲಿ ಸಣ್ಣ ಪುಟ್ಟ ಮಟ್ಟದಲ್ಲಿ ಲೇ ಆಫ್ ನಡೆಸಲಾಗುತ್ತಿದೆ. ಅದು ಕಂಪನಿಯ ದೂರಗಾಮಿ ಕಾರ್ಯತಂತ್ರದ ಭಾಗವಾಗಿ ತೆಗೆದುಕೊಳ್ಳಲಾಗುತ್ತಿರುವ ಕ್ರಮ.

ಇದನ್ನೂ ಓದಿ: ಭಾರತದಲ್ಲಿ 6 ತಿಂಗಳಲ್ಲಿ ಒಂದು ಕೋಟಿ ದ್ವಿಚಕ್ರ ವಾಹನಗಳ ಮಾರಾಟ; ಹೀರೋ vs ಹೊಂಡಾ ಬಿಗ್ ಫೈಟ್

ಎರಡು ವರ್ಷದ ಹಿಂದೆ ಈ ದೊಡ್ಡ ಲೇ ಆಫ್ ಕ್ರಮದ ಬಳಿಕ ಷೇರು ಮಾರುಕಟ್ಟೆಯಲ್ಲಿ ಮೆಟಾಗೆ ಬೇಡಿಕೆ ಹೆಚ್ಚಾಗಿದೆ. ಈ ಒಂದು ವರ್ಷದಲ್ಲಿ ಮೆಟಾದ ಷೇರು ಮೌಲ್ಯ ಶೇ. 60ಕ್ಕಿಂತ ಹೆಚ್ಚಳ ಆಗಿದೆ. ಇತ್ತೀಚೆಗೆ ಮೆಟಾದ ಆದಾಯ ಮತ್ತು ಲಾಭದ ವರದಿ ಕೂಡ ಸಕಾರಾತ್ಮಕವಾಗಿದೆ. ಎರಡನೆ ಕ್ವಾರ್ಟರ್​ನಲ್ಲಿ (ಏಪ್ರಿಲ್​ನಿಂದ ಜೂನ್) ನಿರೀಕ್ಷೆ ಮೀರಿದ ಆದಾಯವನ್ನು ಮೆಟಾ ಪಡೆದಿದೆ. ಮೂರನೆ ಕ್ವಾರ್ಟರ್​ಗೂ ತನ್ನ ಆದಾಯದ ಬಗ್ಗೆ ಮೆಟಾ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಇದು ಮೆಟಾ ಷೇರುಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ