ಭಾರತದಲ್ಲಿ 6 ತಿಂಗಳಲ್ಲಿ ಒಂದು ಕೋಟಿ ದ್ವಿಚಕ್ರ ವಾಹನಗಳ ಮಾರಾಟ; ಹೀರೋ vs ಹೊಂಡಾ ಬಿಗ್ ಫೈಟ್
List of bikes, scooters sold in 25FY H1: ಭಾರತದಲ್ಲಿ 2024ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ದ್ವಿಚಕ್ರ ವಾಹನಗಳ ಮಾರಾಟವಾಗಿದೆ. ಭಾರತದ ಆಟೊಮೊಬೈಲ್ ಇತಿಹಾಸದಲ್ಲೇ ಆರು ತಿಂಗಳಲ್ಲಿ ಅತಿಹೆಚ್ಚು ದ್ವಿಚಕ್ರ ಮಾರಾಟದಲ್ಲಿ ಇದು ಮೂರನೇ ಅತಿದೊಡ್ಡ ಸಂಖ್ಯೆಯಾಗಿದೆ. 2018-19ರ ಮೊದಲಾರ್ಧದಲ್ಲಿ 1.15 ಕೋಟಿ ಟೂ-ವೀಲರ್ಗಳು ಸೇಲ್ ಆಗಿದ್ದು ಇನ್ನೂ ದಾಖಲೆಯಾಗಿ ಇದೆ.
ನವದೆಹಲಿ, ಅಕ್ಟೋಬರ್ 15: ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಮತ್ತೆ ಮಿಂಚಿನ ವೇಗದಲ್ಲಿ ಹೆಚ್ಚುತ್ತಿದೆ. ಈ ಹಣಕಾಸು ವರ್ಷದ ಮೊದಲಾರ್ಧವಾಗಿರುವ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ಭಾರತದಲ್ಲಿ ಮಾರಾಟವಾದ ಒಟ್ಟು ದ್ವಿಚಕ್ರ ವಾಹನಗಳ ಸಂಖ್ಯೆ ಒಂದು ಕೋಟಿ ದಾಟಿದೆ. ಕೋವಿಡ್ ಬಳಿಕ ಈ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು. 2017-18ರ ಮೊದಲಾರ್ಧದಲ್ಲಿ 1.05 ಕೋಟಿ ದ್ವಿಚಕ್ರ ವಾಹನಗಳು ಸೇಲ್ ಆಗಿದ್ದವು. ಅದರ ನಂತರದ ವರ್ಷದಲ್ಲಿ ದಾಖಲೆಯ 1.15 ಕೋಟಿ ಟೂ-ವೀಲರ್ಗಳ ಮಾರಾಟವಾಗಿತ್ತು. ಆರು ವರ್ಷದ ಬಳಿಕ ಈಗ ಮೊದಲ ಬಾರಿಗೆ ಒಂದು ಕೋಟಿ ಮೈಲಿಗಲ್ಲು ದಾಟಲಾಗಿದೆ.
ಈ ಆರು ತಿಂಗಳಲ್ಲಿ ಮಾರಾಟವಾಗಿರುವ 1.01 ಕೋಟಿ ದ್ವಿಚಕ್ರ ವಾಹನದಲ್ಲಿ ಬೈಕುಗಳ ಪ್ರಮಾಣ 64 ಲಕ್ಷ ಇದೆ. ಸ್ಕೂಟರ್ನದ್ದು ಸುಮಾರು 35 ಲಕ್ಷದಷ್ಟಿದೆ. 2.60 ಮೊಪೆಡ್ಗಳ ಮಾರಾಟವಾಗಿದೆ.
ಬೈಕ್ನಲ್ಲಿ ಹೀರೋ ಸಂಸ್ಥೆ ಕಿಂಗ್ ಎನಿಸಿದೆ. 27 ಲಕ್ಷಕ್ಕೂ ಹೆಚ್ಚು ಹೀರೋ ಬೈಕ್ಗಳು ಮಾರಾಟವಾಗಿವೆ. ಹೊಂಡಾ, ಬಜಾಜ್ ಟಾಪ್-3ನಲ್ಲಿವೆ. ಸ್ಕೂಟರ್ನಲ್ಲಿ ಹೊಂಡಾ ಸಂಸ್ಥೆಯೇ ಅಗ್ರಜ ಎನಿಸಿದೆ. ಟಿವಿಎಸ್, ಸುಜುಕಿ ನಂತರದ ಸ್ಥಾನದಲ್ಲಿವೆ.
ಇದನ್ನೂ ಓದಿ: ಡ್ರೈವರ್ ಇರುವ ಕಾರಿಗಿಂತಲೂ ಇದು 20 ಪಟ್ಟು ಸೇಫ್? ಸೈಬರ್ಕ್ಯಾಬ್ ಅನಾವರಣಗೊಳಿಸಿದ ಇಲಾನ್ ಮಸ್ಕ್; ಬೆಲೆ 30,000 ಮಾತ್ರ
ಒಟ್ಟಾರೆ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತು ಹೊಂಡಾ ಮಧ್ಯೆ ಹೆಚ್ಚಿನ ಅಂತರವಿಲ್ಲ. ಅಗ್ರಸ್ಥಾನದಲ್ಲಿರುವ ಹೀರೋ ಸಂಸ್ಥೆ ಹೊಂಡಾಗಿಂತ ಕೆಲವೇ ಸಾವಿರ ಸಂಖ್ಯೆಯ ವ್ಯತ್ಯಾಸ ಹೊಂದಿದೆ. ಟಿವಿಎಸ್, ಬಜಾಜ್ ಮತ್ತು ಸುಜುಕಿ ಟಾಪ್-5ನಲ್ಲಿರುವ ಇತರ ಕಂಪನಿಗಳಾಗಿವೆ.
2024 ಏಪ್ರಿಲ್ನಿಂದ ಸೆಪ್ಟೆಂಬರ್ನಲ್ಲಿ ದ್ವಿಚಕ್ರ ವಾಹನಗಳ ಮಾರಾಟ
ಸೇಲ್ ಆದ ಒಟ್ಟು ದ್ವಿಚಕ್ರ ವಾಹನಗಳು: 1,01,64,980
- ಮೋಟಾರ್ ಸೈಕಲ್ (ಬೈಕ್): 64,07,887
- ಸ್ಕೂಟರ್: 34,97,300
- ಮೊಪೆಡ್: 2,59,793
ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಾರಾಟವಾದ ಬೈಕುಗಳು
ಸೇಲ್ ಆದ ಒಟ್ಟು ಬೈಕ್ಗಳು: 64,07,887
- ಹೀರೋ ಮೋಟೋಕಾರ್ಪ್: 27,57,911
- ಹೊಂಡಾ ಇಂಡಿಯಾ: 12,97,659
- ಬಜಾಜ್ ಆಟೊ: 10,91,357
- ಟಿವಿಎಸ್ ಮೋಟಾರ್: 6,27,028
- ರಾಯಲ್ ಎನ್ಫೀಲ್ಡ್: 4,10,843
- ಯಮಾಹ ಇಂಡಿಯಾ: 2,07,103
- ಸುಜುಕಿ ಮೋಟಾರ್ಸೈಕಲ್ಸ್: 11,249
- ಪಿಯಾಜಿಯೋ: 2,071
- ಕವಾಸಕಿ: 2,012
- ಟ್ರಯಂಫ್ ಮೋಟಾರ್ಸೈಕಲ್ಸ್: 654
ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಾರಾಟವಾದ ಸ್ಕೂಟರ್ಗಳು
ಸೇಲ್ ಆದ ಒಟ್ಟು ಸ್ಕೂಟರ್ಗಳು: 34,97,300
- ಹೊಂಡಾ ಇಂಡಿಯಾ: 15,83,760
- ಟಿವಿಎಸ್ ಮೋಟಾರ್: 8,53,963
- ಸುಜುಕಿ ಮೋಟಾರ್ಸೈಕಲ್: 5,05,281
- ಹೀರೋ ಮೋಟೋಕಾರ್ಪ್: 1,82,755
- ಯಮಾಹ ಇಂಡಿಯಾ: 1,61,462
- ಬಜಾಜ್ ಆಟೊ: 1,27,941
- ಏದರ್ ಎನರ್ಜಿ: 64,718
- ಪಿಯಾಜಿಯೋ: 16,100
- ಒಕಿನಾವ ಆಟೊಟೆಕ್: 1,320
ಇದನ್ನೂ ಓದಿ: ಭಾರತದ ಮೊದಲ ಬುಲೆಟ್ ಟ್ರೈನು ನಿರ್ಮಾಣ ಬೆಂಗಳೂರಿನಲ್ಲಿ; ಬೆಮೆಲ್ ಸಂಸ್ಥೆಗೆ ಗುತ್ತಿಗೆ
ಅತಿಹೆಚ್ಚು ದ್ವಿಚಕ್ರ ಮಾರಾಟ ಮಾಡಿದ ಟಾಪ್ 5 ಕಂಪನಿಗಳು
- ಹೀರೋ ಮೋಟೋಕಾರ್ಪ್: 29,40,666
- ಹೊಂಡಾ ಇಂಡಿಯಾ: 28,81,419
- ಟಿವಿಎಸ್ ಮೋಟಾರ್: 14,80,991
- ಬಜಾಜ್ ಆಟೊ: 12,19,298
- ಸುಜುಕಿ: 5,16,530
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ