AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡ ಹೆಮ್ಮೆ; ಭಾರತದ ಮೊದಲ ಬುಲೆಟ್ ಟ್ರೈನು ನಿರ್ಮಾಣ ಬೆಂಗಳೂರಿನಲ್ಲಿ; ಬೆಮೆಲ್ ಸಂಸ್ಥೆಗೆ ಗುತ್ತಿಗೆ

BEML to build India's first bullet train: ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಸಂಸ್ಥೆಗೆ ಎರಡು ಬುಲೆಟ್ ಟ್ರೈನುಗಳ ನಿರ್ಮಾಣಕ್ಕೆ ಗುತ್ತಿಗೆ ಸಿಕ್ಕಿದೆ. ತಲಾ ಎಂಟು ಬೋಗಿಗಳಿರುವ ಎರಡು ಹೈಸ್ಪೀಡ್ ಟ್ರೈನುಗಳ ವಿನ್ಯಾಸ, ತಯಾರಿಕೆ ಮತ್ತು ನಿಯೋಜನೆಗೊಳಿಸಲು 866 ಕೋಟಿ ರೂಗೆ ಬೆಮೆಲ್ ಗುತ್ತಿಗೆ ಪಡೆದಿದೆ. 2026ರ ಅಂತ್ಯಕ್ಕೆ ಇವುಗಳನ್ನು ರೈಲ್ವೆ ಇಲಾಖೆಗೆ ಒಪ್ಪಿಸಬೇಕಿದೆ.

ಕರುನಾಡ ಹೆಮ್ಮೆ; ಭಾರತದ ಮೊದಲ ಬುಲೆಟ್ ಟ್ರೈನು ನಿರ್ಮಾಣ ಬೆಂಗಳೂರಿನಲ್ಲಿ; ಬೆಮೆಲ್ ಸಂಸ್ಥೆಗೆ ಗುತ್ತಿಗೆ
ಬುಲೆಟ್ ಟ್ರೈನ್
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk|

Updated on:Oct 16, 2024 | 11:37 AM

Share

ಬೆಂಗಳೂರು, ಅಕ್ಟೋಬರ್ 16: ಸರ್ಕಾರಿ ಸ್ವಾಮ್ಯದ ಬೆಮೆಲ್ ಸಂಸ್ಥೆಗೆ ಬುಲೆಟ್ ಟ್ರೈನ್ ತಯಾರಿಸುವ ಮಹತ್ವದ ಗುತ್ತಿಗೆ ಸಿಕ್ಕಿದೆ. ವರದಿ ಪ್ರಕಾರ ಬೆಮೆಲ್ ಎರಡು ಹೈಸ್ಪೀಡ್ ಟ್ರೈನ್​ಗಳನ್ನು ತಯಾರಿಸಿಕೊಡಲಿದೆ. ಇದು 866.87 ಕೋಟಿ ರೂ ಮೊತ್ತದ ಗುತ್ತಿಗೆಯಾಗಿದೆ. ಟ್ರೈನ್​ನ ವಿನ್ಯಾಸ, ತಯಾರಿಕೆ ಮತ್ತು ಅಳವಡಿಕೆಯ ಕಾರ್ಯವನ್ನು ಬೆಮೆಲ್ ಮಾಡಲಿದೆ. ದೇಶೀಯವಾಗಿ ನಿರ್ಮಾಣವಾಗಲಿರುವ ಭಾರತದ ಮೊದಲ ಬುಲೆಟ್ ರೈಲು ಇದಾಗಲಿದೆ.

ಬೆಂಗಳೂರಿನಲ್ಲಿ ಮುಖ್ಯಕಚೇರಿ ಮತ್ತು ಕಾರ್ಖಾನೆಗಳನ್ನು ಹೊಂದಿರುವ ಬೆಮೆಲ್, ಸಿಲಿಕಾನ್ ಸಿಟಿಯಲ್ಲೇ ಟ್ರೈನ್​ಸೆಟ್​ಗಳನ್ನು ನಿರ್ಮಿಸಲಿದೆ. 2026ರ ಕೊನೆಯಲ್ಲಿ ಇವುಗಳನ್ನು ರೈಲ್ವೆ ಇಲಾಖೆಗೆ ಒಪ್ಪಿಸುವ ಹೊಣೆ ಇದೆ. ಭಾರತದಲ್ಲಿ ನಿರ್ಮಾಣವಾಗಿರುವ ವಂದೇ ಭಾರತ್ ರೈಲು ಕೂಡ ಹೈಸ್ಪೀಡ್ ಆಗಿದೆಯಾದರೂ ಅದು ಬುಲೆಟ್ ಟ್ರೈನ್ ವರ್ಗೀಕರಣಕ್ಕೆ ಬರುವುದಿಲ್ಲ. ಗಂಟೆಗೆ 250 ಕಿಮೀಗೂ ಹೆಚ್ಚು ವೇಗದಲ್ಲಿ ಹೋಗುವ ರೈಲುಗಳನ್ನು ಬುಲೆಟ್ ಟ್ರೈನ್ ಎಂದು ಪರಿಗಣಿಸಲಾಗುತ್ತದೆ. ಬೆಮೆಲ್​ನಿಂದ ನಿರ್ಮಾಣವಾಗಲಿರುವ ಹೈಸ್ಪೀಡ್ ಟ್ರೈನು 280 ಕಿಮೀ ವೇಗ ಹೊಂದಿರಲಿದೆ.

ಇದನ್ನೂ ಓದಿ: ಐದು ವರ್ಷದಲ್ಲಿ 5,00,000 ಉದ್ಯೋಗ ಸೃಷ್ಟಿಸಲಿದ್ದೇವೆ: ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್

ಜಪಾನ್ ಬುಲೆಟ್ ಟ್ರೈನ್​ಗಿಂತಲೂ ಬೆಮೆಲ್​ನದ್ದು ಬೆಲೆ ಕಡಿಮೆ

ಅಹ್ಮದಾಬಾದ್ ಮತ್ತು ಮುಂಬೈ ನಡುವೆ ಹೈಸ್ಪೀಡ್ ರೈಲು ನೆಟ್ವರ್ಕ್ ನಿರ್ಮಿಸಲಾಗುತ್ತಿದೆ. ಇದು 2027ಕ್ಕೆ ಮುಗಿಯುವ ನಿರೀಕ್ಷೆ ಇದೆ. ಈ ಮಾರ್ಗಕ್ಕೆ ಜಪಾನ್​ನ ಬುಲೆಟ್ ಟ್ರೈನ್ ಅನ್ನು ಓಡಿಸುವ ಇರಾದೆ ರೈಲ್ವೆ ಇಲಾಖೆಯದ್ದಾಗಿತ್ತು. ಆದರೆ, ಒಂದು ಬುಲೆಟ್ ಟ್ರೈನ್ ಬೋಗಿಗೆ 46 ಕೋಟಿ ರೂನಂತೆ ಜಪಾನೀ ಕಂಪನಿಗಳು ಬೆಲೆ ಹೇಳಿದ್ದವು. ಬೆಮೆಲ್ ಸಂಸ್ಥೆ ಪ್ರತೀ ಕೋಚ್​ಗೆ 27.86 ಕೋಟಿ ರೂನಂತೆ ಬುಲೆಟ್ ಟ್ರೈನ್ ಅನ್ನು ನಿರ್ಮಿಸಲಿದೆ.

ಇದನ್ನೂ ಓದಿ: ಚೀನಾದ ಶ್ರೀಮಂತರಿಗೆ ಹೆಚ್ಚಲಿರುವ ತೆರಿಗೆ ಸಂಕಟ; ಬೊಕ್ಕಸವೂ ತುಂಬೀತು, ಸಂಪತ್ತೂ ಮರುಹಂಚಿಕೆಯಾದೀತು

ಜಪಾನೀ ಕಂಪನಿಗಳು ಬುಲೆಟ್ ಟ್ರೈನುಗಳ ನಿರ್ಮಾಣದಲ್ಲಿ ಅನುಭವ ಹೊಂದಿವೆ. ಉತ್ಕೃಷ್ಟ ಗುಣಮಟ್ಟದ ರೈಲುಗಳನ್ನು ಜಪಾನೀಯರು ನಿರ್ಮಿಸುತ್ತಾರೆ. ಮುಂಬೈ-ಅಹ್ಮದಾಬಾದ್ ನಡುವಿನ ಹೈಸ್ಪೀಡ್ ರೈಲಿನಲ್ಲಿ ಜಪಾನ್​ನ ಶಿಂಕಾನ್​ಸೆನ್ ಇ5 ಸೀರೀಸ್​ನ ಬುಲೆಟ್ ಟ್ರೈನುಗಳನ್ನು ಅಳವಡಿಸಲು ನಿರ್ಧರಿಸಲಾಗಿತ್ತು. ಇವುಗಳ ಟಾಪ್ ಸ್ಪೀಡ್ 320 ಕಿಮೀ ಇದೆ. ಅಧಿಕ ಬೆಲೆ ಕಾರಣ ಜಪಾನ್ ಜೊತೆಗಿನ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಈಗ ಬೆಮೆಲ್ ಸಂಸ್ಥೆ ಕಡಿಮೆ ಬೆಲೆಗೆ ಟ್ರೈನುಗಳನ್ನು ನಿರ್ಮಿಸುತ್ತಿರುವುದರಿಂದ ಶಿಂಕಾನ್​ಸೆನ್ ಬುಲೆಟ್ ಟ್ರೈನುಗಳು ಭಾರತಕ್ಕೆ ಬರುವುದು ಅನುಮಾನ. ಮುಂಬೈ ಅಹ್ಮದಾಬಾದ್ ಮಾರ್ಗಕ್ಕೆ ಬೆಮೆಲ್​ನ ಬುಲೆಟ್ ಟ್ರೈನುಗಳೇ ಸಂಚರಿಸುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:26 am, Wed, 16 October 24

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ