Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ವರ್ಷದಲ್ಲಿ 5,00,000 ಉದ್ಯೋಗ ಸೃಷ್ಟಿಸಲಿದ್ದೇವೆ: ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್

Indian Foundation for Quality Management first edition: ಭಾರತ ಮುಂದುವರಿದ ದೇಶವಾಗಬೇಕಾದರೆ ಸಾಕಷ್ಟು ಉದ್ಯೋಗಗಳ ಸೃಷ್ಟಿಯಾಗಬೇಕು. ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗದೇ ಈ ವಿಕಸಿತ ಭಾರತದ ಗುರಿ ಈಡೇರುವುದಿಲ್ಲ. ಈ ಕ್ಷೇತ್ರದಲ್ಲಿ ಒಂದು ನೇರ ಉದ್ಯೋಗಕ್ಕೆ 10 ಪರೋಕ್ಷ ಉದ್ಯೋಗಗಳು ತಯಾರಾಗುತ್ತವೆ ಎಂದು ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಹೇಳಿದ್ದಾರೆ.

ಐದು ವರ್ಷದಲ್ಲಿ 5,00,000 ಉದ್ಯೋಗ ಸೃಷ್ಟಿಸಲಿದ್ದೇವೆ: ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್
ಎನ್ ಚಂದ್ರಶೇಖರನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2024 | 6:26 PM

ನವದೆಹಲಿ, ಅಕ್ಟೋಬರ್ 15: ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಐದು ವರ್ಷದಲ್ಲಿ ಐದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಟಾಟಾ ಗ್ರೂಪ್ ಯೋಜಿಸಿದೆ ಎಂದು ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಹೇಳಿದ್ದಾರೆ. ಇಂದು ಮಂಗಳವಾರ ಇಂಡಿಯನ್ ಫೌಂಡೇಶನ್ ಫಾರ್ ಕ್ವಾಲಿಟಿ ಮ್ಯಾನೇಜ್ಮೆಂಟ್ (ಐಎಫ್​ಕ್ಯುಎಂ) ಸಂಸ್ಥೆಯ ಮೊದಲ ಅವೃತ್ತಿಯ ಅಧಿವೇಶನದಲ್ಲಿ ಮಾತನಾಡಿದ ಚಂದ್ರಶೇಖರನ್, ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಗಳನ್ನು ಸೃಷ್ಟಿಸದೇ ವಿಕಸಿತ ಭಾರತದ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

‘ಮ್ಯಾನುಫ್ಯಾಕ್ಚರಿಂಗ್​ನಿಂದ ಬಹಳ ದೊಡ್ಡ ಅವಕಾಶ ಸಿಕ್ಕಿದೆ. ಈ ಸೆಕ್ಟರ್​ನಲ್ಲಿ ಉದ್ಯೋಗ ಸೃಷ್ಟಿಸದೇ ವಿಕಸಿತ ಭಾರತದ ಗುರಿ ಸಾಧಿಸಲು ಆಗುವುದಿಲ್ಲ. ಪ್ರತೀ ತಿಂಗಳು 10 ಲಕ್ಷ ಜನರು ಉದ್ಯೋಗ ಕ್ಷೇತ್ರಕ್ಕೆ ಅಡಿ ಇಡುತ್ತಿದ್ದಾರೆ ಎಂಬುದು ನಮಗೆಲ್ಲಾ ಗೊತ್ತಿರುವುದೇ. ಹೀಗಾಗಿ, 10 ಕೋಟಿ ಉದ್ಯೋಗ ಸೃಷ್ಟಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ: ಚೀನಾದ ಶ್ರೀಮಂತರಿಗೆ ಹೆಚ್ಚಲಿರುವ ತೆರಿಗೆ ಸಂಕಟ; ಬೊಕ್ಕಸವೂ ತುಂಬೀತು, ಸಂಪತ್ತೂ ಮರುಹಂಚಿಕೆಯಾದೀತು

‘ಸೆಮಿಕಂಡಕ್ಟರ್​ನಂತಹ ಕ್ಷೇತ್ರವಾದರೆ ನೀವು ಒಂದು ನೇರ ಉದ್ಯೋಗ ಸೃಷ್ಟಿಸಿದರೆ 8ರಿಂದ 10 ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಗಳು ಹಲವು ಪಟ್ಟು ಹೆಚ್ಚುವರಿ ಉದ್ಯೋಗಗಳಿಗೆ ಎಡೆ ಮಾಡಿಕೊಡುತ್ತವೆ’ ಎಂದು ಟಾಟಾ ಸನ್ಸ್ ಛೇರ್ಮನ್ ಆಗಿರುವ ಅವರು ಅಭಿಪ್ರಾಯಪಟ್ಟಿದ್ದಾರೆ.

ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸಂಚಲನ ಕಾಣುತ್ತಿದೆ. ಸರ್ಕಾರ ಒತ್ತು ಕೊಡುತ್ತಿದೆ. ಒಂದು ಗ್ರೂಪ್ ಸಂಸ್ಥೆಯಾಗಿ ಪ್ರಾಜೆಕ್ಟ್​​ಗಳನ್ನು ಅಚ್ಚರಿಯ ವೇಗದಲ್ಲಿ ಆರಂಭಿಸಲು ಸಾಧ್ಯವಾಗಿದೆ. ಸೆಮಿಕಂಡಕ್ಟರ್, ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್, ಅಸೆಂಬ್ಲಿಂಗ್, ಎಲೆಕ್ಟ್ರಿವ್ ವಾಹನಗಳು, ಬ್ಯಾಟರಿ ಹಾಗು ಸಂಬಂಧಿತ ಉದ್ಯಮಗಳಲ್ಲಿ ನಾವು ಮಾಡಿರುವ ಹೂಡಿಕೆಯಿಂದ ಮುಂದಿನ ಐದು ವರ್ಷದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿಸಬಹುದು ಎಂದು ಚಂದ್ರಶೇಖರನ್ ಹೇಳಿದ್ದಾರೆ.

ಇದನ್ನೂ ಓದಿ: ಜಿಯೋಭಾರತ್ ಸರಣಿಯ ಎರಡು ಫೋನ್ ಬಿಡುಗಡೆ; ಬೆಲೆ 1,099 ರೂ; ರೀಚಾರ್ಜ್ ಪ್ಲಾನ್ 123 ರೂ ಮಾತ್ರ

ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಳನ್ನು ಸೃಷ್ಟಿಸಲು ಕನಿಷ್ಠ 500ರಿಂದ 1,000 ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳಾದರೂ ಸ್ಥಾಪನೆಯಾಗುವುದು ಅಗತ್ಯ ಎಂಬ ವಿಚಾರವನ್ನೂ ಟಾಟಾ ಸನ್ಸ್ ಮುಖ್ಯಸ್ಥರು ಪ್ರಸ್ತಾಪಿಸಿದ್ದಾರೆ.

ಈ ಕಾರ್ಯಕ್ರಮ ಆಯೋಜಿಸಿದ ಐಎಫ್​ಕ್ಯೂಎಂ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಉದ್ಯಮ ವಲಯದಲ್ಲಿ ಗುಣಮಟ್ಟ ಮತ್ತು ಕ್ರಿಯಾಶೀಲತೆ (ಇನ್ನೋವೇಶನ್) ಹೆಚ್ಚಿಸಲು ನೆರವಾಗಲೆಂದು ಸ್ಥಾಪಿಸಲಾಗಿದೆ. ಟಾಟಾ ಗ್ರೂಪ್, ಟಿವಿಎಸ್, ಭಾರತ್ ಫೋರ್ಜ್ ಸೇರಿದಂತೆ ಏಳು ಭಾರತೀಯ ಕಂಪನಿಗಳು ಸೇರಿ ಈ ವರ್ಷ ಐಎಫ್​ಕ್ಯುಎಂ ಅನ್ನು ಆರಂಭಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ