ಸಾಮಾನ್ಯ ಬಳಕೆಯ 11 ಔಷಧಗಳ ಗರಿಷ್ಠ ಬೆಲೆ ಹೆಚ್ಚಿಸಿದ ಸರ್ಕಾರ; ಯಾವುವು ಈ ಔಷಧಗಳು?

Ceiling price of 11 scheduled drug formulation rised: ಎಂಟು ಔಷಧಗಳ 11 ಔಷಧ ಸಂಯೋಜನೆಗಳ ಸೀಲಿಂಗ್ ಪ್ರೈಸ್ ಅನ್ನು ಹೆಚ್ಚಿಸಲು ಎನ್​ಪಿಪಿಎ ಅನುಮೋದನೆ ನೀಡಿದೆ. ಸಾಲ್ಬುಟಮಾಲ್, ಬೆಂಜೈಲ್ ಪೆನಿಸಿಲಿನ್, ರೆಸ್ಪಿರೇಟರ್ ಇತ್ಯಾದಿ ವಿವಿಧ ಔಷಧಗಳು ಇದರಲ್ಲಿವೆ. ಔಷಧ ತಯಾರಿಕೆ ವೆಚ್ಚ ಹೆಚ್ಚಿರುವ ಕಾರಣಕ್ಕೆ ಗರಿಷ್ಠ ಬೆಲೆಯನ್ನು ಏರಿಸುವಂತೆ ಔಷಧ ಕಂಪನಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸಾಮಾನ್ಯ ಬಳಕೆಯ 11 ಔಷಧಗಳ ಗರಿಷ್ಠ ಬೆಲೆ ಹೆಚ್ಚಿಸಿದ ಸರ್ಕಾರ; ಯಾವುವು ಈ ಔಷಧಗಳು?
ಔಷಧ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2024 | 4:49 PM

ನವದೆಹಲಿ, ಅಕ್ಟೋಬರ್ 15: ಔಷಧ ತಯಾರಿಕೆಯ ವೆಚ್ಚ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲ ಔಷಧಗಳ ಸೀಲಿಂಗ್ ಪ್ರೈಸ್ ಅಥವಾ ಗರಿಷ್ಠ ಬೆಲೆ ಮಟ್ಟವನ್ನು ಹೆಚ್ಚಿಸಿದೆ. ಎಂಟು ಔಷಧಗಳ 11 ಔಷಧ ಸಂಯೋಜನೆಗಳ ಗರಿಷ್ಠ ಬೆಲೆಯನ್ನು ಶೇ. 50ರಷ್ಟು ಹೆಚ್ಚಿಸುವ ನಿರ್ಧಾರಕ್ಕೆ ರಾಷ್ಟ್ರೀಯ ಔಷಧ ಬೆಲೆ ನಿರ್ಧಾರ ಪ್ರಾಧಿಕಾರ (ಎನ್​ಪಿಪಿಎ- ನ್ಯಾಷನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ) ಅನುಮೋದನೆ ನೀಡಿದೆ.

ಔಷಧ ತಯಾರಿಕೆಯಲ್ಲಿ ಬಳಸಲಾಗುವ ಮೂಲ ಸಾಮಗ್ರಿಗಳಾದ ಎಪಿಐಗಳ ವೆಚ್ಚ ಹೆಚ್ಚಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ವಿನಿಮಯ ದರದಲ್ಲಿ ವ್ಯತ್ಯಯವಾಗಿದೆ. ಇವೇ ಮುಂತಾದ ಕಾರಣಕ್ಕೆ ಔಷಧಗಳ ತಯಾರಿಕೆ ವ್ಯವಹಾರ ಲಾಭದಾಯಕವಾಗಿ ಉಳಿದಿಲ್ಲ. ಈ ಔಷಧಗಳ ಉತ್ಪಾದನೆಯನ್ನೇ ನಿಲ್ಲಿಸಬೇಕಾಗಬಹುದು ಎಂದು ಔಷಧ ಉತ್ಪಾದಕರು ಎನ್​ಪಿಪಿಎ ಬಳಿ ಹಲವು ಬಾರಿ ಆತಂಕ ತೋಡಿಕೊಂಡಿದ್ದವು.

ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ

ಅಗತ್ಯ ಇರುವ ಔಷಧಗಳು ಕಡಿಮೆ ಬೆಲೆಗೆ ಲಭ್ಯ ಇರುವುದು ಮತ್ತು ಅದೇ ವೇಳೆ ಅವುಗಳ ಉತ್ಪಾದನೆಯೇ ನಿಲ್ಲುವ ಮಟ್ಟಕ್ಕೆ ಬೆಲೆ ಕಡಿಮೆ ಇರದಿರುವುದು, ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎನ್​ಪಿಪಿಎ ಸಂಸ್ಥೆಯು ಔಷಧಗಳ ಸೀಲಿಂಗ್ ಪ್ರೈಸ್ ನಿರ್ಧಾರ ಮಾಡುತ್ತದೆ.

ಶೇ. 50ರಷ್ಟು ಗರಿಷ್ಠ ಬೆಲೆ ಹೆಚ್ಚಳ ಕಂಡಿರುವ 11 ಔಷಧ ಸಂಯೋಜನೆಗಳಿವು…

  1. ಬೆಂಜೈಲ್ ಪೆನಿಸಿಲಿನ್ ಐಯು ಇಂಜೆಕ್ಷನ್
  2. ಆಟ್ರೋಪೈನ್ ಇಂಜೆಕ್ಷನ್ ಒಂದು ಎಂಎಲ್​ಗೆ 0.6 ಎಂಎಲ್.
  3. ಸ್ಟ್ರೆಪ್ಟೋಮೈಸಿನ್ ಔಡರ್ 750 ಎಂಜಿ
  4. ಸ್ಟ್ರೆಪ್ಟೋಮೈಸಿನ್ ಔಡರ್ 1000 ಎಂಜಿ
  5. ಸಾಲ್​ಬುಟಮಾಲ್ ಟ್ಯಾಬ್ಲೆಟ್ 2 ಎಂಜಿ
  6. ಸಾಲ್​ಬುಟಮಾಲ್ ಟ್ಯಾಬ್ಲೆಟ್ 4 ಎಂಜಿ
  7. ರೆಸ್ಪಿರೇಟರ್ ಸಲ್ಯೂಶನ್ 5ಎಂಜಿ
  8. ಪಿಲೋಕಾರ್ಪೈನ್ 2ಪರ್ಸೆಂಟ್ ಡ್ರಾಪ್ಸ್
  9. ಸೆಫಡ್ರಾಕ್ಸಿಲ್ ಟ್ಯಾಬ್ಲೆಟ್ 500 ಎಂಜಿ
  10. ಡೆಸ್​ಫೆರಿಆಕ್ಸಮೈನ್ 500 ಎಂಜಿ
  11. ಲಿಥಿಯಮ್ ಟ್ಯಾಬ್ಲೆಟ್ 300ಎಂಜಿ

ಇದನ್ನೂ ಓದಿ: ಇಲಾನ್ ಮಸ್ಕ್ ಸೂಪರ್ ಮ್ಯಾನ್; ಈ ಕೆಲಸ ಮಾಡೋಕೆ ಅವರೊಬ್ರಿಂದ್ಲೇ ಸಾಧ್ಯ: ನಿವಿಡಿಯಾ ಸಿಇಒ ಹೊಗಳಿಕೆ

ಈ ಔಷಧಗಳು ಬಹಳ ಸಾಮಾನ್ಯವಾಗಿ ಬಳಕೆಯಲ್ಲಿವೆ. ಇವುಗಳ ಬೆಲೆಯೂ ಕಡಿಮೆ ಇರುತ್ತವೆ. ಆಸ್ತಮಾ, ತಲಸೆಮಿಯಾ, ಟಿಬಿ, ಮಾನಸಿಕ ಅಸ್ವಸ್ಥತೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಈ ಔಷಧಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಬಹಳ ಅಗತ್ಯವಾಗಿರುವ ಔಷಧಗಳೂ ಆಗಿರುವುದರಿಂದ ಬೆಲೆ ಮಿತಿಮೀರಿ ಹೋಗದಂತೆ ನಿಯಮಂತ್ರಿಸಲು ಪ್ರಾಧಿಕಾರವು ಸೀಲಿಂಗ್ ಪ್ರೈಸ್ ನಿಗದಿ ಮಾಡುತ್ತದೆ. ಈ ಮಿತಿಗಿಂತ ಹೆಚ್ಚು ಬೆಲೆಗೆ ಈ ಔಷಧಗಳನ್ನು ಮಾರುವಂತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ