ಇಲಾನ್ ಮಸ್ಕ್ ಸೂಪರ್ ಮ್ಯಾನ್; ಈ ಕೆಲಸ ಮಾಡೋಕೆ ಅವರೊಬ್ರಿಂದ್ಲೇ ಸಾಧ್ಯ: ನಿವಿಡಿಯಾ ಸಿಇಒ ಹೊಗಳಿಕೆ

Nvidia CEO Jensen Huang praises Elon Musk: ಒಂದು ಲಕ್ಷ ಪ್ರಬಲ ಜಿಪಿಯುಗಳ ಕ್ಲಸ್ಟರ್​ನಿಂದ ಇಲಾನ್ ಮಸ್ಕ್ ಅವರ ಎಕ್ಸ್​ಎಐ ತಂಡ ತಯಾರಿಸುವ ಸೂಪರ್ ಕಂಪ್ಯೂಟರ್ ಬಗ್ಗೆ ನಿವಿಡಿಯಾ ಸಿಇಒ ಬೆರಗಾಗಿದ್ದಾರೆ. ಈ ಭೂಮಿಯಲ್ಲಿರುವ ಅತ್ಯಂತ ಶಕ್ತಿಶಾಲಿ ಸೂಪರ್​ಕಂಪ್ಯೂಟರ್ ಇದು. ಒಂದು ಸಹಜ ಸೂಪರ್ ಕಂಪ್ಯೂಟರ್ ತಯಾರಿಸಲು ನಾಲ್ಕು ವರ್ಷವಾದರೂ ಬೇಕು. ಇವರು ಮೂರೇ ತಿಂಗಳಲ್ಲಿ ಮಾಡಿದ್ದಾರೆ. ಈ ಕೆಲಸವನ್ನು ಮಸ್ಕ್ ಬಿಟ್ಟರೆ ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ ಜೆನ್ಸೆನ್ ಹುವಾಂಗ್.

ಇಲಾನ್ ಮಸ್ಕ್ ಸೂಪರ್ ಮ್ಯಾನ್; ಈ ಕೆಲಸ ಮಾಡೋಕೆ ಅವರೊಬ್ರಿಂದ್ಲೇ ಸಾಧ್ಯ: ನಿವಿಡಿಯಾ ಸಿಇಒ ಹೊಗಳಿಕೆ
ಇಲಾನ್ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2024 | 11:48 AM

ಕ್ಯಾಲಿಫೋರ್ನಿಯಾ, ಅಕ್ಟೋಬರ್ 15: ವಿಶ್ವದ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಅನ್ನು ತೀರಾ ಕಡಿಮೆ ಅವಧಿಯಲ್ಲಿ ನಿರ್ಮಿಸಿದ್ದ ಇಲಾನ್ ಮಸ್ಕ್ ಅವರನ್ನು ನಿವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ (Nvidia CEO Jensen Huang) ಹಾಡಿಹೊಗಳಿದ್ದಾರೆ. ಕೊಲೋಸಸ್ ಹೆಸರಿನ ಸೂಪರ್ ಕಂಪ್ಯೂಟರ್ ಅನ್ನು ಇಲಾನ್ ಮಸ್ಕ್ ನೇತೃತ್ವದಲ್ಲಿ ಎಕ್ಸ್​ಎಐ (xAI) ತಂಡದ ಎಂಜಿನಿಯರುಗಳು ಮೂರು ತಿಂಗಳಲ್ಲಿ ನಿರ್ಮಿಸಿದ್ದರು. ಇದೇ ನಿವಿಡಿಯಾ ಸಂಸ್ಥೆಯ ಒಂದು ಲಕ್ಷ ಜಿಪಿಯುಗಳನ್ನು ಬಳಸಿ ಕೊಲೋಸ್ಸಸ್ (Colossus Super Computer) ಅನ್ನು ತಯಾರಿಸಲಾಗಿತ್ತು.

‘ನನಗೆ ತಿಳಿದಿರುವಂತೆ ಈ ಕಾರ್ಯ ಮಾಡಬಲ್ಲ ಏಕೈಕ ವ್ಯಕ್ತಿ ಆತನೇ. ಎಂಜಿನಿಯರಿಂಗ್, ಕನ್ಸ್​ಟ್ರಕ್ಷನ್ ಹಾಗು ಬೃಹತ್ ಸಿಸ್ಟಮ್​ಗಳ ಬಗ್ಗೆ ಹಾಗೂ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನ ಇಲಾನ್ ಮಸ್ಕ್​ರಂತೆ ಯಾರಿಗೂ ಇಲ್ಲ,’ ಎಂದು ಜೆನ್ಸೆನ್ ಹುವಾಂಗ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಒಂದು ಕ್ಲಸ್ಟರ್ ಆಗಿ ಈ ಕೊಲೋಸ್ಸಸ್ ಈ ಭೂಮಿಯಲ್ಲಿರುವ ಅತಿವೇಗದ ಸೂಪರ್​ಕಂಪ್ಯೂಟರ್ ಎನಿಸುತ್ತದೆ ಎಂಬುದು ನಿವಿಡಿಯಾ ಸಿಇಒ ಅವರ ಅನಿಸಿಕೆ. ಒಂದು ಸೂಪರ್ ಕಂಪ್ಯೂಟರ್ ಅನ್ನು ನಿರ್ಮಿಸಲು ಕನಿಷ್ಠ ನಾಲ್ಕು ವರ್ಷವಾದರೂ ಬೇಕು. ಅದರ ಪ್ಲಾನ್ ನಿರ್ಮಿಸಲೇ ಸಾಮಾನ್ಯವಾಗಿ ಮೂರು ವರ್ಷ ಬೇಕು ಎನ್ನುತ್ತಾರೆ ಹುವಾಂಗ್.

ಇದನ್ನೂ ಓದಿ: 3ಜಿ, 4ಜಿಯಲ್ಲಿ ಹಿಂದುಳಿದಿದ್ದ ಭಾರತ ಈಗ 6ಜಿಯಲ್ಲಿ ಸೂಪರ್​ಫಾಸ್ಟ್; ಜಾಗತಿಕ ದೈತ್ಯ ದೇಶಗಳಿಗೆ ಭಾರತದಿಂದ ಪೈಪೋಟಿ

ಇಲಾನ್ ಮಸ್ಕ್ ಅವರ ಎಕ್ಸ್​ಎಐನ ಎಂಜಿನಿಯರಿಂಗ್, ನೆಟ್ವರ್ಕಿಂಗ್, ಇನ್​ಫ್ರಾಸ್ಟ್ರಕ್ಚರ್ ಮತ್ತು ಸಾಫ್ಟ್​ವೇರ್ ತಂಡಗಳನ್ನು ಅಸಾಮಾನ್ಯ ಎಂದು ಹುವಾಂಗ್ ಬಣ್ಣಿಸಿದ್ದಾರೆ.

ಇಲಾನ್ ಮಸ್ಕ್ ದೂರಗಾಮಿ ಚಿಂತನೆಗಳು…

ಕೆಲ ವರ್ಷಗಳ ಹಿಂದೆ ಇಲಾನ್ ಮಸ್ಕ್ ಅವರನ್ನು ಅನೇಕರು ಹುಚ್ಚ ಎಂದೇ ಕರೆದಿದ್ದರು. ಮಂಗಳ ಗ್ರಹದಲ್ಲಿ ಮಾನವರ ವಸಾಹತು (Human colony) ನಿರ್ಮಿಸುವುದಾಗಿ ದಶಕಗಳ ಹಿಂದೆಯೇ ಹೇಳಿದ್ದರು. ಅದೆಲ್ಲವೂ ಬೊಗಳೆ ಎಂಬುದು ಹಲವರ ಅನಿಸಿಕೆಯಾಗಿತ್ತು. ತಮ್ಮ ಗುರಿಗಿಂತ ಬಹಳ ತಡವಾಗಿಯಾದರೂ ಆ ನಿಟ್ಟಿನಲ್ಲಿ ಮಸ್ಕ್ ಒಂದೊಂದೇ ಹೆಜ್ಜೆ ಇರಿಸುತ್ತಿದ್ದಾರೆ. ಮೊನ್ನೆ ರಾಕೆಟ್ ಬೂಸ್ಟರ್ ಅನ್ನು ಉಡಾಯಿಸಿ ನಂತರ ಅದನ್ನು ವಾಪಸ್ ಭೂಮಿಗೆ ನಿಗದಿತ ಸ್ಥಳಕ್ಕೆ ಇಳಿಸಿದ ಅವರ ಕಾರ್ಯ ಕಂಡು ಇಡೀ ವಿಶ್ವವೇ ಬೆರಗಾಗಿದೆ.

ಇದನ್ನೂ ಓದಿ: ಮೂವರು ಅಮೆರಿಕನ್ ಅರ್ಥಿಕತಜ್ಞರಿಗೆ ಸ್ವೆರಿಜೆಸ್ ರಿಕ್ಸ್​ಬ್ಯಾಂಕ್ ಪ್ರಶಸ್ತಿ; ಇದು ನೊಬೆಲ್ ಬಹುಮಾನಕ್ಕೆ ಸಮ

ಈಗ ಎಕ್ಸ್​ಎಐ ನಿರ್ಮಿಸಿದ ಸೂಪರ್​ಕಂಪ್ಯೂಟರ್ ಅನ್ನು ಗ್ರೋಕ್ (Grok) ಎಂಬ ಚಾಟ್​ಬೋಟ್​ಗ ಬಳಸಲಾಗುತ್ತಿದೆ. ವರದಿಗಳ ಪ್ರಕಾರ, ಇಲಾನ್ ಮಸ್ಕ್ ಅವರು ಆಪ್ಟಿಮಸ್ ಎಂಬ ಮಾನವಾಕಾರದ ರೋಬೋಗೆ ಕೃತಕ ಬುದ್ಧಿಮತ್ತೆ ತುಂಬಲು ಈ ಸೂಪರ್ ಕಂಪ್ಯೂಟರ್ ಶಕ್ತಿಯನ್ನು ಬಳಸುತ್ತಿದ್ದಾರೆ. ಈ ರೋಬೋವನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ