ಮೂವರು ಅಮೆರಿಕನ್ ಅರ್ಥಿಕತಜ್ಞರಿಗೆ ಸ್ವೆರಿಜೆಸ್ ರಿಕ್ಸ್​ಬ್ಯಾಂಕ್ ಪ್ರಶಸ್ತಿ; ಇದು ನೊಬೆಲ್ ಬಹುಮಾನಕ್ಕೆ ಸಮ

Three US economists get Nobel prize 2024: ಡೆರೋನ್ ಅಸಿಮೊಗ್ಲು, ಸೈಮನ್ ಜಾನ್ಸನ್, ಜೇಮ್ಸ್ ರಾಬಿನ್ಸನ್ ಎಂಬ ಅಮೆರಿಕನ್ ಆರ್ಥಿಕ ವಿಜ್ಞಾನಿಗಳಿಗೆ 2024ರ ಸಾಲಿನ ಸ್ವೆರಿಜೆಸ್ ರಿಕ್ಸ್​ಬ್ಯಾಂಕ್ ಬಹುಮಾನ ದೊರಕಿದೆ. ಆರ್ಥಿಕ ವಿಜ್ಞಾನ ಕ್ಷೇತ್ರದ ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿಗೆ ನೊಬೆಲ್ ಫೌಂಡೇಶನ್​ನ ಅನುಮೋದನೆ ಇದೆ. ಈ ಕಾರಣಕ್ಕೆ ಇದನ್ನು ಪರೋಕ್ಷವಾಗಿ ನೊಬೆಲ್ ಬಹುಮಾನ ಎಂದೂ ಪರಿಗಣಿಸಲಾಗುತ್ತದೆ.

ಮೂವರು ಅಮೆರಿಕನ್ ಅರ್ಥಿಕತಜ್ಞರಿಗೆ ಸ್ವೆರಿಜೆಸ್ ರಿಕ್ಸ್​ಬ್ಯಾಂಕ್ ಪ್ರಶಸ್ತಿ; ಇದು ನೊಬೆಲ್ ಬಹುಮಾನಕ್ಕೆ ಸಮ
ನೊಬೆಲ್ ಪಾರಿತೋಷಕ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 14, 2024 | 4:59 PM

ಸ್ಟಾಕ್​ಹಾಮ್, ಸ್ವೀಡನ್, ಅಕ್ಟೋಬರ್ 14: ಅಮೆರಿಕದ ಆರ್ಥಿಕ ತಜ್ಞರಾದ ಡೆರೋನ್ ಅಸಿಮೋಗ್ಲು (Daron Asimoglu), ಸಿಮೋನ್ ಜಾನ್ಸನ್ (Simon Johnson) ಮತ್ತು ಜೇಮ್ಸ್ ಎ ರಾಬಿನ್ಸನ್ (James Robinson) ಅವರಿಗೆ 2024ರ ಸಾಲಿನ ಸ್ವೆರಿಜೆಸ್ ರಿಕ್ಸ್​ಬ್ಯಾಂಕ್ (Sveriges Riksbank) ಪ್ರಶಸ್ತಿ ಸಿಕ್ಕಿದೆ. ಇದು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೂ ಕರೆಯಲ್ಪಡುತ್ತದೆ. ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೆರಿಜೆಸ್ ರಿಕ್ಸ್​ಬ್ಯಾಂಕ್​ನಿಂದ ನೀಡಲಾಗುವ ಪ್ರಶಸ್ತಿ ಇದಾಗಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಅಮೆರಿಕದ ಮೂವರು ಆರ್ಥಿಕ ತಜ್ಞರು, ಸಾಮಾಜಿಕ ಸಂಸ್ಥೆಗಳು ಹೇಗೆ ರಚನೆ ಆಗುತ್ತವೆ, ಹಾಗೂ ಅವುಗಳಿಂದ ಪ್ರಗತಿ ಮೇಲೆ ಏನು ಪರಿಣಾಮ ಎಂಬುದನ್ನು ತಮ್ಮ ಅಧ್ಯಯನಗಳಿಂದ ವಿವರಿಸಿದ್ದಾರೆ. ಇವರ ಈ ಸಾಧನೆಗಾಗಿ ನೊಬೆಲ್ ಪುರಸ್ಕಾರ ಲಭಿಸಿದೆ.

ಆಲ್ಫ್ರೆಡ್ ನೊಬೆಲ್ ಎಂಬ ಸ್ವೀಡಿಶ್ ವಿಜ್ಞಾನಿ ಮತ್ತು ಉದ್ಯಮಿಯ ಸಾವಿನ ನಂತರ ಅವರ ಅಭಿಲಾಷೆಯಂತೆ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಈ ಐದು ವಿಭಾಗಗಳಲ್ಲಿ ಸಾಧಕರಿಗೆ ನೊಬೆಲ್ ಬಹುಮಾನ ನೀಡುತ್ತಾ ಬರಲಾಗಿದೆ. ಆದರೆ, ಸ್ವೀಡನ್​ನ ಸ್ವೆರಿಗೆಸ್ ರಿಕ್ಸ್​ಬ್ಯಾಂಕ್ 1969ರಿಂದ ಆರ್ಥಿಕ ವಿಜ್ಞಾನ ವಿಭಾಗದಲ್ಲೂ ಪ್ರಶಸ್ತಿ ನೀಡುತ್ತಿದೆ. ಇದಕ್ಕೆ ನೊಬೆಲ್ ಫೌಂಡೇಶನ್​ನ ಅನುಮೋದನೆ ಇದೆಯಾದ್ದರಿಂದ ನೊಬೆಲ್ ಬಹುಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದು ಅಧಿಕೃತ ನೊಬೆಲ್ ಪುರಸ್ಕಾರ ಎನಿಸುವುದಿಲ್ಲ.

ಇದನ್ನೂ ಓದಿ: Nobel Peace Prize 2024: ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಶಾಂತಿ ನೊಬೆಲ್​​ ಪ್ರಶಸ್ತಿ

2024ರ ಸಾಲಿನ ಎಕನಾಮಿಕ್ಸ್ ನೊಬೆಲ್ ಬಹುಮಾನ ಪಡೆದ ಡಾರೋನ್ ಅಸೆಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ರಾಬಿನ್ಸನ್ ಈ ಮೂವರೂ ಕೂಡ ಅಮೆರಿಕನ್ ಆರ್ಥಿಕತಜ್ಞರಾಗಿದ್ದಾರೆ. ಡೆರನ್ ಮತ್ತು ಸಿಮೋನ್ ಜಾನ್ಸನ್ ಅವರು ಮೆಸಾಚುಸೆಟ್ಸ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧಕರಾಗಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಅವರು ಚಿಕಾಗೋ ಯೂನಿವರ್ಸಿಟಿಯಲ್ಲಿ ರಿಸರ್ಚ್ ನಡೆಸುತ್ತಾರೆ.

ಯಾಕೆ ಕೆಲ ದೇಶಗಳು ಶ್ರೀಮಂತವಾಗಿವೆ ಎಂಬ ಪ್ರಶ್ನೆಗೆ ಉತ್ತರ…

ವಿವಿಧ ದೇಶಗಳ ನಡುವೆ ಶ್ರೀಮಂತಿಕೆಯಲ್ಲಿ ಯಾಕೆ ದೊಡ್ಡ ಅಂತರ ಇದೆ ಎನ್ನುವ ಪ್ರಶ್ನೆ ಇಟ್ಟುಕೊಂಡು ಈ ಮೂವರು ಆರ್ಥಿಕ ತಜ್ಞರು ಸಂಶೋಧನೆ ನಡೆಸಿದ್ದಾರೆ. ಸಾಮಾಜಿಕ ಸಂಸ್ಥೆಗಳ ರಚನೆಯ ಸ್ವರೂಪ ಮತ್ತು ಅವುಗಳಿಂದ ಆರ್ಥಿಕ ಬೆಳವಣಿಗೆಯ ಮೇಲಾಗುವ ಪರಿಣಾಮ, ಇವುಗಳನ್ನು ವಿವರಿಸುತ್ತಾ ಇವರು ಒಂದು ಚೌಕಟ್ಟನ್ನು ಪ್ರಸ್ತುಪಡಿಸಿದ್ದಾರೆ.

ಒಂದು ದೇಶದ ಸಮೃದ್ಧಿಗೆ ಸಾಮಾಜಿಕ ಸಂಸ್ಥೆಗಳ ಮಹತ್ವ ಏನು ಎಂಬುದನ್ನು ಅವರು ಮೂರು ಪ್ರಮುಖ ಅಂಶಗಳಲ್ಲಿ ವಿವರಿಸಿದ್ದಾರೆ. ಸಮಾಜದಲ್ಲಿ ಸಂಪನ್ಮೂಲಗಳು ಹೇಗೆ ನಿಯೋಜನೆ ಆಗುತ್ತವೆ. ಅವುಗಳನ್ನು ನಿರ್ಧರಿಸುವ ಅಧಿಕಾರ ಯಾರಿಗೆ ಇರುತ್ತದೆ ಎನ್ನುವುದು ಮೊದಲ ಅಂಶ. ಜನಸಮುದಾಯದವರು ಒಗ್ಗೂಡಿ, ಆಡಳಿತಾರೂಢ ವರ್ಗಕ್ಕೆ ಸೆಡ್ಡು ಹೊಡೆಯುವ ಅಧಿಕಾರ ಬಳಸುವುದು ಎರಡನೇ ಅಂಶ.

ಇದನ್ನೂ ಓದಿ: ರಸಾಯನಶಾಸ್ತ್ರದಲ್ಲಿ ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್, ಜಾನ್ ಎಂ. ಜಂಪರ್​​ಗೆ ನೊಬೆಲ್ ಪ್ರಶಸ್ತಿ

ಮೂರನೇ ಅಂಶವೆಂದರೆ, ಅಧಿಕಾರ ಅನುಭವಿಸುವ ಮೇಲ್ಮಟ್ಟದ ಜನರು ಸಂಪನ್ಮೂಲ ಹಂಚಿಕೆಯ ಅಧಿಕಾರವನ್ನು ಜನಸಾಮಾನ್ಯರಿಗೆ ಒಪ್ಪಿಸುವ ಅನಿವಾರ್ಯ ಸ್ಥಿತಿ ಬರುವುದು. ಈ ಮೇಲಿನ ಮೂರು ಅಂಶಗಳು ಒಂದು ದೇಶದ ಸಮೃದ್ಧತೆಯ ಮೇಲೆ ಪರಿಣಾಮ ಬೀರಬಲ್ಲುದು ಎನ್ನುವ ಥಿಯರಿಯನ್ನು ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ಎ ರಾಬಿನ್ಸನ್ ಅವರು ತಮ್ಮ ಅಧ್ಯಯನದಲ್ಲಿ ನಿರೂಪಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Mon, 14 October 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ