Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸಾಯನಶಾಸ್ತ್ರದಲ್ಲಿ ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್, ಜಾನ್ ಎಂ. ಜಂಪರ್​​ಗೆ ನೊಬೆಲ್ ಪ್ರಶಸ್ತಿ

ಮೂರು ಜನರಿಗೆ 2024ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ. ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್​​ಗೆ ಭವಿಷ್ಯದಲ್ಲಿ ಪ್ರೋಟೀನ್ ರಚನೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಎಲ್ಲಾ ಪ್ರೋಟೀನ್‌ಗಳ ರಚನೆಯಲ್ಲಿ ಹಸ್ಸಾಬಿಸ್ ಮತ್ತು ಜಂಪರ್ ಕೃತಕ ಬುದ್ಧಿಮತ್ತೆಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಇನ್ನು ಡೇವಿಡ್ ಬೇಕರ್ ಬಿಲ್ಡಿಂಗ್ ಬ್ಲಾಕ್‌ಗಳನ್ನು ಹೇಗೆ ಕರಗತ ಮಾಡಿಕೊಳ್ಳುವುದು ಮತ್ತು ಸಂಪೂರ್ಣವಾಗಿ ಹೊಸ ಪ್ರೋಟೀನ್‌ ಹೇಗೆ ಉತ್ಪಾದಿಸುವ ಬಗ್ಗೆ ಅಧ್ಯಯನವನ್ನು ನಡೆಸಿದ್ದಾರೆ.

ರಸಾಯನಶಾಸ್ತ್ರದಲ್ಲಿ ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್, ಜಾನ್ ಎಂ. ಜಂಪರ್​​ಗೆ ನೊಬೆಲ್ ಪ್ರಶಸ್ತಿ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 10, 2024 | 2:15 PM

ಡೇವಿಡ್ ಬೇಕರ್ , ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ 2024ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿದೆ. ಡೇವಿಡ್ ಬೇಕರ್ ಅವರಿಗೆ ಕಂಪ್ಯೂಟೇಶನಲ್ ಪ್ರೊಟೀನ್ ವಿನ್ಯಾಸಕ್ಕೆ ಹಾಗೂ ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ ಭವಿಷ್ಯದಲ್ಲಿ ಪ್ರೋಟೀನ್ ರಚನೆಯ ಈ ನೊಬೆಲ್​​ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಪ್ರೋಟೀನ್‌ ರಹಸ್ಯಗಳನ್ನು ತಿಳಿಸುವ ಬಗ್ಗೆ ಈ ಅಧ್ಯಯನ ಹೇಳುತ್ತದೆ.

ಎಲ್ಲಾ ಪ್ರೋಟೀನ್‌ಗಳ ರಚನೆಯಲ್ಲಿ ಹಸ್ಸಾಬಿಸ್ ಮತ್ತು ಜಂಪರ್ ಕೃತಕ ಬುದ್ಧಿಮತ್ತೆಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಇನ್ನು ಡೇವಿಡ್ ಬೇಕರ್ ಬಿಲ್ಡಿಂಗ್ ಬ್ಲಾಕ್‌ಗಳನ್ನು ಹೇಗೆ ಕರಗತ ಮಾಡಿಕೊಳ್ಳುವುದು ಮತ್ತು ಸಂಪೂರ್ಣವಾಗಿ ಹೊಸ ಪ್ರೋಟೀನ್‌ ಹೇಗೆ ಉತ್ಪಾದಿಸುವ ಬಗ್ಗೆ ಅಧ್ಯಯನವನ್ನು ನಡೆಸಿದ್ದಾರೆ. ನ್ಯಾನೊವಸ್ತುಗಳು, ಉದ್ದೇಶಿತ ಔಷಧಗಳು, ಲಸಿಕೆಗಳ ಹೆಚ್ಚು ತ್ವರಿತ ಅಭಿವೃದ್ಧಿ, ಕನಿಷ್ಠ ಸಂವೇದಕಗಳು ಮತ್ತು ಹಸಿರು ರಾಸಾಯನಿಕ ಉದ್ಯಮಕ್ಕೆ ಹಾಗೂ ಮಾನವಕುಲದ ಹೆಚ್ಚಿನ ಪ್ರಯೋಜನಕ್ಕಾಗಿ ಇದನ್ನು ಬಳಸಿಕೊಳ್ಳಿದ್ದೇವೆ ಎಂದು ಹೇಳಿದ್ದಾರೆ.

ಬೇಕರ್ ಸಿಯಾಟಲ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಸಾಬಿಸ್ ಮತ್ತು ಜಂಪರ್ ಇಬ್ಬರೂ ಲಂಡನ್‌ನಲ್ಲಿರುವ ಗೂಗಲ್ ಡೀಪ್‌ಮೈಂಡ್‌ನಲ್ಲಿ ಕೆಲಸ ಮಾಡುತ್ತಾರೆ. ಕಳೆದ ವರ್ಷ, ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಮೌಂಗಿ ಬವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್‌ ಅವರಿಗೆ ನೀಡಲಾಗಿತ್ತು. ಇನ್ನು ಈ ನೊಬೆಲ್​​​ ಪ್ರಶಸ್ತಿಯಲ್ಲಿ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (USD 1 ಮಿಲಿಯನ್) ನ ನಗದು ಪ್ರಶಸ್ತಿ ನೀಡಲಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ