Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಅತ್ಯಂತ ಒಳ್ಳೆ ಮನುಷ್ಯ; “ಗೆಳೆಯ”ನನ್ನು ಹೊಗಳಿದ ಡೊನಾಲ್ಡ್ ಟ್ರಂಪ್

ಪಾಕಿಸ್ತಾನದ ಬೆದರಿಕೆಗಳ ವಿರುದ್ಧ ಭಾರತಕ್ಕೆ ಸಹಾಯ ಮಾಡಲು ತಾನು ಮುಂದಾಗಿದ್ದೇನೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ಫ್ರೆಂಡ್ ಎಂದು ಕರೆದಿರುವ ಡೊನಾಲ್ಡ್ ಟ್ರಂಪ್, 2019ರಲ್ಲಿ ಹೂಸ್ಟನ್‌ನಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಭಾಗವಹಿಸಿದ್ದ ಹೌಡಿ ಮೋದಿ ಕಾರ್ಯಕ್ರಮವನ್ನು ನೆನಪಿಸಿಕೊಂಡಿದ್ದಾರೆ.

ಮೋದಿ ಅತ್ಯಂತ ಒಳ್ಳೆ ಮನುಷ್ಯ; ಗೆಳೆಯನನ್ನು ಹೊಗಳಿದ ಡೊನಾಲ್ಡ್ ಟ್ರಂಪ್
ನರೇಂದ್ರ ಮೋದಿ - ಡೊನಾಲ್ಡ್ ಟ್ರಂಪ್
Follow us
ಸುಷ್ಮಾ ಚಕ್ರೆ
|

Updated on:Oct 09, 2024 | 10:37 PM

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಮುಂಬರುವ ಅಮೆರಿಕ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಉತ್ತಮ “ಸ್ನೇಹಿತ” ಮತ್ತು “ಒಳ್ಳೆಯ ಮನುಷ್ಯ” ಎಂದು ಕರೆದಿದ್ದಾರೆ. ಫ್ಲಾಗ್ರಾಂಟ್ ಪಾಡ್‌ಕ್ಯಾಸ್ಟ್​ನಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಭಾರತದ ಮೋದಿ ನನ್ನ ಸ್ನೇಹಿತ ಮತ್ತು ಒಳ್ಳೆಯ ಮನುಷ್ಯ. ಅವರು ಪ್ರಧಾನಿಯಾಗಿ ನೇಮಕಗೊಳ್ಳುವ ಮೊದಲು ಭಾರತವು ತುಂಬಾ ಅಸ್ಥಿರವಾಗಿತ್ತು. ಹೊರನೋಟಕ್ಕೆ ಅವರು ನಿಮ್ಮ ತಂದೆಯಂತೆ ಆಪ್ತರಾಗಿ ಕಾಣುತ್ತಾರೆ. ಅವರು ಉತ್ತಮ ಮನುಷ್ಯ” ಎಂದು ಟ್ರಂಪ್ ಹೇಳಿದ್ದಾರೆ.

2019ರಲ್ಲಿ ಅಮೆರಿಕದ ಹೂಸ್ಟನ್‌ನಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಭಾಗವಹಿಸಿದ್ದ ಹೌಡಿ ಮೋದಿ ಮೆಗಾ ಕಾರ್ಯಕ್ರಮವನ್ನು ಟ್ರಂಪ್ ಪ್ರೀತಿಯಿಂದ ನೆನಪಿಸಿಕೊಂಡರು. “ಅವರು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮವನ್ನು ಮಾಡಿದರು. ಅಂದು ನಾನು ಮತ್ತು ಅವರು ಇಬ್ಬರೂ ವೇದಿಕೆಯ ಮೇಲೆ ಹೋದೆವು. ಅದು ಬಹಳ ಸುಂದರವಾದ ಕಾರ್ಯಕ್ರಮವಾಗಿತ್ತು. ಅಲ್ಲಿ 80,000 ಭಾರತೀಯರು ಸೇರಿದ್ದರು. ಇಂದು ನಾನು ಅಧ್ಯಕ್ಷನಲ್ಲದೆ ಇರಬಹುದು, ನಾನು ಆಗಿನಂತೆ ಜನರ ನಡುವೆ ಹೋಗಿ ಕೈ ಬೀಸಲು ಸಾಧ್ಯವಾಗದಿರಬಹುದು. ಆದರೆ, ಇಂದಿಗೂ ನಾವಿಬ್ಬರೂ ಉತ್ತಮ ಸಂಬಂಧವನ್ನು ಹೊಂದಿದ್ದೇವೆ” ಎಂದು ಟ್ರಂಪ್ ಹೇಳಿದರು.

ಇದನ್ನೂ ಓದಿ: ವಿಕಸಿತ ಭಾರತದ ಗುರಿ ಸಾಕಾರಗೊಳ್ಳುವವರೆಗೂ ವಿಶ್ರಮಿಸುವುದಿಲ್ಲ; 23 ವರ್ಷಗಳ ಪಯಣ ನೆನಪಿಸಿಕೊಂಡ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಟೆಕ್ಸಾಸ್‌ನಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಅವರು ಭಯೋತ್ಪಾದನೆ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಿದ್ದರು. ತಮ್ಮ ಕೆಲಸ ಮತ್ತು ಸಾಧನೆಗಳಿಗಾಗಿ ಪರಸ್ಪರ ಶ್ಲಾಘಿಸಿದ್ದರು. ಇಷ್ಟೇ ಅಲ್ಲ, ಪ್ರಧಾನಿ ಮೋದಿ ಅವರು ಟ್ರಂಪ್ ಅವರ 2020ರ ಮರುಚುನಾವಣೆಗೆ ಬೆಂಬಲವನ್ನು ಘೋಷಿಸಿದ್ದರು ಮತ್ತು ‘ಅಬ್ಕಿ ಬಾರ್, ಟ್ರಂಪ್ ಸರ್ಕಾರ್’ ಎಂದು ಘೋಷಿಸಿದ್ದರು.

ಇದನ್ನೂ ಓದಿ: ‘ಹರಿಯಾಣದ ಗೆಲುವು ದೇಶಾದ್ಯಂತ ಪ್ರತಿಧ್ವನಿಸಲಿದೆ’; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು

ಕಳೆದ ತಿಂಗಳು ಕೂಡ ಭಾರತ-ಅಮೆರಿಕ ಸಂಬಂಧದ ಬಗ್ಗೆ ಮಾತನಾಡುವಾಗ, ಡೊನಾಲ್ಡ್ ಟ್ರಂಪ್ ಅವರು ಯುನೈಟೆಡ್ ಸ್ಟೇಟ್ಸ್‌ಗೆ ಮೋದಿ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವುದಾಗಿ ಹೇಳಿದ್ದರು. ಆದರೆ, ಆ ಭೇಟಿ ಸಾಧ್ಯವಾಗಲಿಲ್ಲ. ಮೋದಿ ಅವರು ಅದ್ಭುತ. ನನ್ನ ಪ್ರಕಾರ, ಅದ್ಭುತ ವ್ಯಕ್ತಿ. ನಮ್ಮ ಜಗತ್ತಿನಲ್ಲಿ ಬಹಳಷ್ಟು ನಾಯಕರು ಅದ್ಭುತರಾಗಿದ್ದಾರೆ ಎಂದು ಅವರು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Wed, 9 October 24