ಕಾಣೆಯಾಗಿದ್ದ ಮಹಿಳೆಯ ಅವಶೇಷಗಳು ಶಾರ್ಕ್ ಹೊಟ್ಟೆಯಲ್ಲಿ ಪತ್ತೆ

ಕಳೆದ ತಿಂಗಳು ಸೆ. 26ರಂದು 68 ವರ್ಷದ ಮಹಿಳೆ ಕೊಲೀನ್ ಮೊನ್‌ಫೋರ್ ತನ್ನ ಸ್ನೇಹಿತರೊಂದಿಗೆ ಇಂಡೋನೇಷ್ಯಾದ ಬೀಚ್​ಗೆ ಹೋಗಿದ್ದರು. ನೀರಿಗೆ ಧುಮುಕುವ ವೇಳೆ ಜೋರಾದ ಅಲೆಗಳ ರಭಸಕ್ಕೆ ಮಹಿಳೆ ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಸ್ನೇಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ರಕ್ಷಣಾ ತಂಡ ಮಹಿಳೆಗಾಗಿ ಹುಡುಕಾಟ ನಡೆಸಿದರೂ ಕೂಡ ಮಹಿಳೆ ಪತ್ತೆಯಾಗಿರಲ್ಲಿಲ್ಲ.

ಕಾಣೆಯಾಗಿದ್ದ ಮಹಿಳೆಯ ಅವಶೇಷಗಳು ಶಾರ್ಕ್ ಹೊಟ್ಟೆಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
Follow us
ಅಕ್ಷತಾ ವರ್ಕಾಡಿ
|

Updated on:Oct 09, 2024 | 4:25 PM

ಇಂಡೋನೇಷ್ಯಾ: ಕುಟುಂಬದೊಂದಿಗೆ ಬೀಚ್​ನಲ್ಲಿ ವಾರಾಂತ್ಯ ಕಳೆಯಲು ಹೋಗಿದ್ದ ಮಹಿಳೆಯೊಬ್ಬಳು ಏಕಾಏಕಿ ನಾಪತ್ತೆಯಾಗಿದ್ದು, ಇದೀಗ ನಾಪತ್ತೆಯಾಗಿದ್ದ ಮಹಿಳೆ ಅನಿರೀಕ್ಷಿತವಾಗಿ ಪತ್ತೆಯಾಗಿದ್ದಾಳೆ. ಮೀನುಗಾರರ ಬಲೆಗೆ ಬೃಹತ್ ಶಾರ್ಕ್ ಸಿಕ್ಕಿಬಿದ್ದಿದ್ದು, ಶಾರ್ಕ್ ಹೊಟ್ಟೆಯಲ್ಲಿ ಮಹಿಳೆಯ ತೊಟ್ಟಿದ್ದ ಈಜುಡುಗೆ​​ ಜೊತೆಗೆ ಆಕೆಯ ಅವಶೇಷಗಳು ಪತ್ತೆಯಾಗಿವೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಕಳೆದ ತಿಂಗಳು ಸೆಪ್ಟೆಂಬರ್ 26ರಂದು 68 ವರ್ಷದ ಅಮೆರಿಕದ ಮಹಿಳೆ ಕೊಲೀನ್ ಮೊನ್‌ಫೋರ್ ತನ್ನ ಸ್ನೇಹಿತರೊಂದಿಗೆ ಇಂಡೋನೇಷ್ಯಾದ ಬೀಚ್​ಗೆ ಹೋಗಿದ್ದರು. ಮಹಿಳೆ ನೀರಿಗೆ ಧುಮುಕುವ ವೇಳೆ ಜೋರಾದ ಅಲೆಗಳ ರಭಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮಾನ್‌ಫೋರ್ ನಾಪತ್ತೆಯಾದಾಗ, ಸ್ನೇಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ರಕ್ಷಣಾ ತಂಡ ಕೊಲೀನ್ ಮಾನ್‌ಫೋರ್‌ಗಾಗಿ ಹುಡುಕಾಟ ಆರಂಭಿಸಿದೆ. ಹಾಗೆ ಒಂದು ವಾರ ಕಳೆದಿದೆ. ಅಂತಿಮವಾಗಿ ಶಾರ್ಕ್ ಹೊಟ್ಟೆಯಲ್ಲಿ ಅವಳ ಅವಶೇಷಗಳು ಪತ್ತೆಯಾಗಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ಗರ್ಬಾ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಖ್ಯಾತ ಕಲಾವಿದ ಸಾವು

ಟಿಮೋರ್-ಲೆಸ್ಟೆಯಲ್ಲಿ ಮೀನುಗಾರರ ಬಲೆಗೆ ಬೃಹತ್ ಶಾರ್ಕ್ ಸಿಕ್ಕಿಬಿದ್ದಿದ್ದು, ಸೆರೆಹಿಡಿದ ಶಾರ್ಕ್‌ನ ಹೊಟ್ಟೆಯೊಳಗೆ ಮಾನವ ಅವಶೇಷಗಳು ಕಂಡುಬಂದಿತ್ತು. ಇದಲ್ಲದೇ ಈಜುಡುಗೆ ಕೂಡ ಇರುವುದು ಗಮನಕ್ಕೆ ಬಂದಿದೆ. ಡೈವಿಂಗ್ ಮಾಡುವಾಗ ಕೊಲೀನ್ ಮೊನ್‌ಫೋರ್ ಧರಿಸಿದ ಉಡುಗೆ ಇದೇ ಎಂದು ತಿಳಿದಿದೆ. ಅಧಿಕಾರಿಗಳು ಇಂಡೋನೇಷಿಯನ್ ಕೋಸ್ಟ್ ಗಾರ್ಡ್ ಅನ್ನು ಸಂಪರ್ಕಿಸಿ, ಕಾಣೆಯಾದ ಕಾಲಿನ್ ಮಾನ್‌ಫೋರ್‌ನ ಸಂಬಂಧಿಕರು ಮತ್ತು ಸ್ನೇಹಿತರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಆದರೆ, ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ತನಿಖೆ ಮುಂದುವರಿದಿದೆ ಎನ್ನಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:23 pm, Wed, 9 October 24